Neenadena: ವೇದಾ ತಿಳಿ ಹೇಳಿದ ಮಾತಿಗೆ ಒಪ್ಪಿ ನಡೆದ ವಿಚಾರ ಹೇಳುತ್ತಾನಾ ವಿಕ್ರಮ್?
ನೀನಾದೆನಾ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಈ ಧಾರವಾಹಿ ನೋಡಲು ಜನರು ಕಾಯುತ್ತಿದ್ದಾರೆ. ನಮ್ಮ ಲಚ್ಚಿ, ರಾಣಿ ಧಾರಾವಾಹಿಗೆ ಪೈಪೋಟಿ ನೀಡುತ್ತಿದೆ ಈ ಧಾರವಾಹಿ. ಇನ್ನು ವಿಕ್ರಂ ಬಹಳ ಜಗಳಗಂಟ ರೌಡಿ ಆದರೆ ಆತನಿಗೆ ಕೂಡ ಒಳ್ಳೆಯ ಮನಸ್ಸಿದೆ ಎಂದು ತೋರಿಸಿಕೊಟ್ಟವಳು ವೇದಾ. ವೇದಾ ವಿದೇಶದಲ್ಲಿ ಓದಿದ ಹುಡುಗಿ ತಂದೆಯ ಪ್ರೀತಿಯ ಮಗಳು.
ವಿಕ್ರಂ ಯಾವುದೋ ಆವೇಶದಲ್ಲಿ ಆಕೆಗೆ ತಾಳಿ ಕಟ್ಟಿ ಬಿಟ್ಟಿದ್ದಾನೆ. ಆದರೆ ವೇದಾ ಅದನ್ನೇ ತನ್ನ ಮದುವೆ ಎಂದುಕೊಂಡು ಬಂದು ಬಹಳ ಕಷ್ಟ ಎದುರಿಸುತ್ತಲೇ ಇರುತ್ತಾಳೆ. ಇದೀಗ ಮನೆಯ ಒಳಗೆ ವಿಕ್ರಂ ತಂದೆ ಕರೆದುಕೊಂಡು ಬರುವಂತೆ ವಿಕ್ರಂ ತಾಯಿಗೆ ಹೇಳಿ ಮನೆಯ ಒಳಗೆ ಇರುವಂತೆ ಸೂಚನೆ ನೀಡಿದ್ದಾರೆ. ವಿಕ್ರಂ ನಿಜ ವೇದಾ ಬೆನ್ನಿಗೆ ಅಂಟಿದ ಬೇತಾಳ ಇದ್ದ ಹಾಗೆ ಆಕೆಯನ್ನು ಬೇತಾಳ ಎಂದು ಕರೆದುಕೊಂಡು ಇರುತ್ತಾನೆ.

ವಿಕ್ರಂ ಏನೇ ತಪ್ಪು ಮಾಡಿದರೂ ವೇದಾ ಆಕೆಗೆ ಇದು ಸರಿ ಅಲ್ಲ ಎಂದು ಬುದ್ದಿ ಮಾತು ಹೇಳುತ್ತಾಳೆ ಇರುತ್ತಾಳೆ. ವಿಕ್ರಂ ಗೆ ಮಾತ್ರ ತಾನು ತಪ್ಪು ಮಾಡುತ್ತಾ ಇದ್ದೇನೆ ಎಂದು ತಿಳಿದರೂ ಇದೆ ಸರಿಯಾದ ದಾರಿ ಎಂದುಕೊಂಡು ತಪ್ಪಿನ ಮೇಲೆ ತಪ್ಪು ಮಾಡುತ್ತಾ ಇರುತ್ತಾನೆ ಆದರೂ ವಿಕ್ರಮ್ ಏನೇ ಮಾಡಿದರೂ ಅದು ಒಳ್ಳೆಯದೇ ಆಗುತ್ತದೆ.
ಇದೀಗ ಮುರಳಿಯಿಂದ ಸಾಕ್ಷಿಯನ್ನು ಬಚಾವ್ ಮಾಡಿದ್ದಾನೆ ವಿಕ್ರಮ್. ಆದರೆ ದೇವಾಲಯದಲ್ಲಿ ನಡೆದ ಘಟನೆಗೆ ವಿಕ್ರಮ್ ಬೇಕೆ ತೆರಳಬೇಕಾಗಿದೆ . ಇನ್ನೂ ರಾತ್ರಿ ವಿಕ್ರಮ್ ತಾಯಿ ವಿಕ್ರಂ ಗೆ ಕಾಯುತ್ತಾ ಇರುತ್ತಾರೆ ಯಾಕೆಂದರೆ ಆತನಿಗೆ ಊಟ ಬಡಿಸಿ ಸಲುವಾಗಿ ಆದರೆ ವೇದಾ ಹೇಳುತ್ತಾಳೆ ಅಮ್ಮ ನೀವು ಹೋಗಿ ಮಲಗಿ ನಾನೇ ಬಡಿಸುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆಕೆ ಕೊಂಚ ನೀರಾಳ ಆಗುತ್ತಾಳೆ.
ಬಳಿಕ ವಿಕ್ರಂ ತಾಯಿ ಮಲಗುತ್ತಾರೆ. ಇನ್ನೂ ಮಧ್ಯರಾತ್ರಿ ತನಕ ವಿಕ್ರಮ್ ಗಾಗಿ ವೇದಾ ಎದ್ದು ಆತನಿಗೇ ಊಟ ಬಡಿಸುತ್ತಾರೆ. ಬಳಿಕ ಆತನಿಗೆ ಆತನ ತಾಯಿ ಮಾಡುತ್ತಿರುವ ಕೆಲಸದ ಬಗ್ಗೆ ಎಲ್ಲಾ ಹೇಳುತ್ತಾಳೆ. ಇದನ್ನು ಕೇಳಿದ ವಿಕ್ರಮ್ ಗೆ ಮಾತ್ರ ಬಹಳ ಬೇಸರ ಆದರೂ ವೇದ ಹೇಳಿದ ಮಾತನ್ನು ಕೇಳುತ್ತಾ ಇರುತ್ತಾನೆ.
ಕೇಳದೆ ಇದ್ದರೆ ವೇದಾ ತಾಳಿಯನ್ನು ತೋರಿಸಿ ಬೇದರಿಸುತ್ತ ಇರುತ್ತಾಳೆ. ವಿಕ್ರಂ ಗೆ ಆಕೆಯ ಕತ್ತಲ್ಲಿ ಇದ್ದ ತಾಳಿಯನ್ನು ನೋಡಿದಾಗ ಬಹಳ ಭಯ ಕೂಡ ಆಗುತ್ತದೆ. ಇನ್ನೂ ಮರುದಿನ ವಿಕ್ರಂ ನನ್ನು ಪಂಚಾಯಿತಿ ಕಟ್ಟೆಯ ಬಳಿ ಕರೆಯುತ್ತಾರೆ. ವಿಕ್ರಂ ವೇದಾ ಸಾಕ್ಷಿ ಅಲ್ಲಿಗೆ ಹಾಜರಾದಗ ವಿಚಾರ ತಿಳಿಯುತ್ತದೆ. ದೇವಾಲಯದ ಹುಂಡಿಯಿಂದ ಹಣ ಕಳುವಾಗಿದೆ ಅನ್ನುವ ವಿಚಾರ.
ಮುರಳಿ ಕೂಡ ವಿಕ್ರಂ ಮೇಲೆ ಆಪಾದನೆ ಮಾಡುತ್ತಾ ಇರುತ್ತಾನೆ ಇನ್ನೂ ರಂಗಪ್ಪ ತಾನು ಕಣ್ಣಾರೆ ಕಂಡೇ ಎಂದು ಸಾಕ್ಷಿ ಹೇಳುತ್ತಾನೆ. ಆಗ ಮಧ್ಯೆ ಬಂದ ವೇದಾ ಎಲ್ಲವನ್ನೂ ವಿಚಾರ ಮಾಡುತ್ತಾಳೆ ಬಳಿಕ ವಿಕ್ರಂ ನನ್ನು ಹತ್ತಿರ ಕರೆದು ಎನು ಆಯಿತು ಎಂಬ ವಿಚಾರವನ್ನು ಕೇಳುತ್ತಾಳೆ. ಆದರೆ ವಿಕ್ರಂ ಬಾಯಿ ಬಿಡದೆ ಇರುವುದನ್ನು ನೋಡಿದ ವೇದಾ ಹೇಳುತ್ತಾಳೆ.
ನಿಮ್ಮ ತಾಯಿಯನ್ನು ನೆನಪು ಮಾಡಿಕೊಳ್ಳಿ. ಅಮ್ಮನಿಗೆ ನೀವು ಕಲ್ಲ ಎಂದು ತಿಳಿದರೆ ಎಷ್ಟು ನೋವು ಆಗುತ್ತದೆ ಎಂಬುವುದನ್ನು ಅರಿತುಕೊಂಡು ಮಾತನಾಡಿ ಎಂದು ಬುದ್ದಿ ಹೇಳುತ್ತಾಳೆ.


Click it and Unblock the Notifications











