Neenadhe Na: ವಿಕ್ರಂ ಇನ್ನೊಂದು ಮದುವೆ ಆಗುವುದನ್ನು ತಡೆಯುತ್ತಾಳಾ ವೇದಾ?

By Poorva

ವಿಕ್ರಂಗೆ ವೇದಾಳನ್ನು ಮರೆಯಲು ಸಾಧ್ಯವಿಲ್ಲ. ವೇದಾ ಇಲ್ಲದೆ ವಿಕ್ರಂ ಇಲ್ಲ. ಆದರೆ ಜಯಾಳ ಹುಚ್ಚು ನಿರ್ಧಾರದಿಂದ ಇವರಿಬ್ಬರೂ ಬೇರೆ ಆಗುವ ಸಂದರ್ಭ ಬಂದಿದೆ. ಯಾಕೆಂದರೆ ಜಯಾಗೆ ವೇದಾ ಮೇಲೆ ಎಷ್ಟೇ ಪ್ರೀತಿ ಇದ್ರು, ಆಕೆ ನಮ್ಮ ಮನೆಯಲ್ಲಿ ಇದ್ದಷ್ಟು ದಿನ ನಮಗೆ ಕೆಡುಕು ಎಂದು ಆಕೆಯನ್ನು ದೂರ ಕಳುಹಿಸುತ್ತಾಳೆ. ಬಳಿಕ ವಿಕ್ರಂಗೆ ಬೇರೆ ಮದುವೆ ಮಾಡಬೇಕು ಅನ್ನೋದು ಆಕೆಯ ಆಲೋಚನೆ.

ಮಗ ಅದಕ್ಕೆ ಒಪ್ಪದ್ದನ್ನು ಕಂಡು ಜಯ ಹಠ ಮಾಡಲು ಶುರು ಮಾಡುತ್ತಾಳೆ. ನಾನು ನೋಡಿದ ಹುಡುಗಿಯನ್ನು ಮದುವೆ ಆಗಬೇಕು ಎಂದು ಜೋರು ಮಾಡುತ್ತಾಳೆ. ಕೊನೆಗೆ ಅನ್ನ, ನೀರು ಬಿಟ್ಟು ಜಯಾ ಆಸ್ಪತ್ರೆ ಪಾಲಾಗುತ್ತಾಳೆ. ಆಸ್ಪತ್ರೆಯಲ್ಲಿ ಜಯ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಾ ನೋಡಿ ಆಕೆಯ ಗಂಡ ವಿಕ್ರಂ ಬಳಿ ಬಂದು ಕೇಳಿಕೊಳ್ಳುತ್ತಾನೆ.

Kannada serial Neenadhe na written update on 13th January

ವಿಕ್ರಂ ನಿನ್ನ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡುತ್ತಾ ಇದ್ದೇನೆ. ದಯವಿಟ್ಟು ಕ್ಷಮಿಸಿ ಬಿಡು ಎಂದು ಹೇಳುತ್ತಾನೆ. ಇದನ್ನು ಕೇಳಿ ವಿಕ್ರಂ, ಅಪ್ಪ ನಾನು ಅಷ್ಟು ಮಾಡದೇ ಇರ್ತೀನಾ? ಅಮ್ಮನಿಗಾಗಿ ನಾನು ಏನು ಮಾಡಲು ರೆಡಿ. ಆದರೆ ನನ್ನಿಂದಾಗಿ ಹುಡುಗಿಯ ಜೀವನ ಹಾಳು ಆಗಬಾರದು. ಅದೇ ನನ್ನ ಕೋರಿಕೆ ಎಂದು ತನ್ನ ಮನದಲ್ಲಿ ಇದ್ದ ನೋವನ್ನು ಹೊರ ಹಾಕುತ್ತಾನೆ. ಇತ್ತ ವೇದಾಳ ತಂದೆ ನಿನಗೆ ವಿಕ್ರಂ ಮೇಲೆ ಏನು ಅಭಿಪ್ರಾಯವಿದೆ ಎಂದು ಪ್ರಶ್ನೆ ಮಾಡಿದಾಗ ಆಕೆಯ ಪ್ರೀತಿಯ ಬಗ್ಗೆ ಹೇಳುತ್ತಾಳೆ.

ವಿಕ್ರಂ ಮದುವೆ ಫಿಕ್ಸ್

ವಿಕ್ರಂಗೆ ಇನ್ನೊಂದು ಮದುವೆ ಫಿಕ್ಸ್ ಆಗಿದೆ. ನಾಳೆಯೇ ವಿಕ್ರಂ ನಿಶ್ಚಿತಾರ್ಥ ಎಂದು ಹೇಳುತ್ತಾರೆ. ಇದನ್ನು ಕೇಳಿದ ವೇದಾ, ವಿಕ್ರಂ ನಿಶ್ಚಿತಾರ್ಥ ಹೇಗೆ ಆಗುತ್ತದೆ ನಾನು ನೋಡುತ್ತೇನೆ ಎನ್ನುತ್ತಾಳೆ. ಇತ್ತ ಜಯಾ ಹುಷಾರಾಗಿ ಮನೆಗೆ ಬರುತ್ತಾಳೆ. ಆ ವೇಳೆ ಅಲ್ಲಿಗೆ ವಿಕ್ರಂ ಮದುವೆ ಆಗುವ ಹುಡುಗಿ ಹಾಗೂ ಆಕೆಯ ತಾಯಿ ಬರುತ್ತಾರೆ. ಜಯ ಆರೋಗ್ಯ ವಿಚಾರಿಸುತ್ತಾರೆ. ಆ ಬಳಿಕ ವಿಕ್ರಂ ಬಳಿ ಹುಡುಗಿ ತಾಯಿ ಮಾತನಾಡುತ್ತಾರೆ.

ಗೆಳೆಯರ ಭೇಟಿಗೆ ಹೊರಟ ವಿಕ್ರಂ

ಅಳಿಯಂದಿರೆ ನಿಮ್ಮ ಮಗಳಿಗೆ ಹುಷಾರು ಇಲ್ಲ ಎನ್ನುವ ವಿಚಾರವನ್ನು ನೀವು ಹೇಳಬೇಕಾಗಿ ಇತ್ತು . ಯಾಕೆ ನೀವು ಹೇಳಲಿಲ್ಲ ಎಂದು ಕೇಳುತ್ತಾಳೆ. ಇದನ್ನು ಕೇಳಿದ ವಿಕ್ರಂ ಸುಮ್ಮನೆ ಇದ್ದ. ವಿಕ್ರಂ ಆತನ ಗೆಳೆಯರನ್ನು ಭೇಟಿ ಆಗಲು ಹೋಗುತ್ತೇನೆ ಎಂದು ಹೇಳಿ ಹೊರಡಲು ಅನುವಾದಾಗ ಹುಡುಗಿ ತಾಯಿ ಕೆಲವೊಂದು ಷರತ್ತು ಹಾಕುತ್ತಾರೆ. ಆದರೆ ಜಯಾ ಇದನ್ನು ವಿಕ್ರಂ ಬಳಿ ಹೇಳಿರುವುದಿಲ್ಲ.

Kannada serial Neenadhe na written update on 13th January

ಆತಂಕಗೊಂಡ ಜಯ

ಇದೀಗ ಹುಡುಗಿಯ ತಾಯಿ, ವಿಕ್ರಂ ಬಳಿ ಕೇಳುತ್ತಾರೆ, ಏನಯ್ಯ ನಾವು ಹಾಕಿದ ಷರತ್ತು ಒಪ್ಪಿಗೆ ಇದೆ ಅಲ್ವಾ? ಎಂದಾಗ ವಿಕ್ರಂಗೆ ಕೊಂಚ ಕನ್ಫ್ಯೂಸ್ ಆಗುತ್ತದೆ. ಆದರೆ ಜಯಾ ಮಾತ್ರ ಏನು ಹೇಳಬೇಕು ಎಂದು ತಿಳಿಯದೇ ಆತಂಕಗೊಳ್ಳುತ್ತಾಳೆ. ಎಲ್ಲಾದರೂ ಷರತ್ತು ಬಗ್ಗೆ ಇನ್ನು ಹೇಳಿಲ್ಲ ಎಂದು ಹೇಳಿದರೆ ಮದುವೆ ನಿಲ್ಲುತ್ತದೆ ಎಂದು ತೆಪ್ಪಗಾಗುತ್ತಾಳೆ.

More from Filmibeat

English summary
Neenadhe na serial today upadate;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X