Neenadhe Na: ವೇದಾ ತಂದೆ ಸೇಫ್, ಕೊನೆಗೂ ವಿಕ್ರಂ ಮನೆಯಿಂದ ವೇದಾ ಔಟ್!

ವೇದಾಳನ್ನು ಕಂಡರೆ ಯಾರಿಗೂ ಆಗುತ್ತಿಲ್ಲ. ಎಲ್ಲರಿಗೂ ಕೀಳಾಗಿ ಹೋಗಿದ್ದಾಳೆ. ವೆಂಕಿ ಮಾಡಿದ ಕೆಲಸಕ್ಕೆ ವೇದಾ ಬೆಲೆ ತೆರಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ವೇದಾಗೆ ಬಹಳ ನೋವಾಗುವ ರೀತಿಯಲ್ಲಿ ಮನೆ ಮಂದಿ ನಡೆದುಕೊಂಡರು ವೇದಾ ಮಾವ ಮಾತ್ರ ಎನು ಮಾತನಾಡದೆ ಸುಮ್ಮನೆ ಆಗುತ್ತಾರೆ.

ಜಯ ಕೂಡ ವೇದಾ ಮನೆ ಬಿಟ್ಟು ಹೋದರೆ ನಮಗೆ ಬಹಳ ನೆಮ್ಮದಿ ಎನ್ನುವ ಹಾಗೆ ಪ್ರತಿನಿತ್ಯ ಮಾತನಾಡುತ್ತಾ ಇರುತ್ತಾಳೆ. ಇದರ ಜೊತೆಗೆ ಶೈಲೂ ಕಾಲು ಕೆರೆದುಕೊಂಡು ಜಗಳಕ್ಕೆ ಬಂದು ಬಿಡುತ್ತಾಳೆ. ವೇದಾಗೆ ಮನೆಯಲ್ಲಿ ಪ್ರಾಬ್ಲಂ ಆಗಿದೆ ಎಂದು ಸಣ್ಣ ಕರೆ ಬರುತ್ತದೆ. ಅದಾಗಲೇ ಆಕೆಯ ತಂದೆಯ ಅಪಹರಣ ಆಗಿರುತ್ತದೆ. ಇದನ್ನೆಲ್ಲ ನೋಡಿದ ಆಕೆ ಬಹಳ ಆಘಾತದಿಂದ ಗಂಡನ ಮನೆಗೆ ಬರುತ್ತಾಳೆ.

Kannada Serial Neenadhe Na written update on 24th December

ಆದರೆ ಮನೆ ಮಂದಿಯೆಲ್ಲ ಏನಾಯಿತು ಎಂದು ವಿಚಾರಣೆ ಮಾಡಿದರೆ ಶೈಲೂ ಮಾತ್ರ ಜಗಳ ಆಡುತ್ತಾಳೆ. ವೇದಾ ಬಹಳ ಬೇಸರದಿಂದ ನನಗೆ ನಿಮ್ಮ ಜೊತೆ ಜಗಳ ಆಡಲು ಮೂಡ್ ಇಲ್ಲ ಎಂದು ಹೇಳುತ್ತಾಳೆ. ಆದರೆ ಶೈಲೂ ಕೇಳದೆ ಇದ್ದಾಗ ವಿಷ್ಣು ಶೈಲುವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಮಾತನಾಡಿದಾಗ ಶೈಲೂ ಮರು ಮಾತನಾಡದೆ ಸುಮ್ಮನಾಗುತ್ತಾಳೆ.

ತಂದೆಗಾಗಿ ಅತ್ತ ವೇದಾ

ಇನ್ನು ವೇದಾ ರೂಮ್ ಒಳಗೆ ಹೋಗಿ ಜೋರಾಗಿ ಅಳುತ್ತಾಳೆ. ಆಗಲೇ ವಿಕ್ರಂ ಬರುತ್ತಾನೆ. ಆತನ ಬಳಿ ವಿಚಾರ ಶೇರ್ ಮಾಡಿದಾಗ ವೇದಾಗೆ ಸಹಾಯ ಮಾಡುವುದಾಗಿ ಒಪ್ಪಿಕೊಂಡು ಬಿಡುತ್ತಾನೆ. ಆದರೆ, ಒಂದು ಕಂಡೀಷನ್ ಹಾಕುತ್ತಾನೆ. ಅದೇನೆಂದರೆ ನಿನ್ನ ತಂದೆಯನ್ನು ನಾನು ಕರೆದುಕೊಂಡು ಬರುತ್ತೇನೆ ಇದಾದ ಬಳಿಕ ನೀನು ಮನೆಬಿಟ್ಟು ಹೋಗಬೇಕು ಎಂದು ಹೇಳುತ್ತಾನೆ.

Kannada Serial Neenadhe Na written update on 24th December

ವಿಕ್ರಂ ಮಾತಿಗೆ ಎದುರಾಡದ ವೇದಾ

ಇದನ್ನು ಕೇಳಿದ ವೇದಾ ಆಯಿತು ಎಂದು ಪ್ರಮಾಣ ಮಾಡುತ್ತಾಳೆ. ಹಾಗೆಯೇ ವೇದಾ ಜೋರಾಗಿ ಅಳುತ್ತಾಳೆ . ವಿಕ್ರಮ್ ರೌಡಿಗಳನ್ನು ಟ್ರೆಸ್ ಮಾಡಿ ವೇದಾ ತಂದೆಯನ್ನು ಹುಡುಕಿ ಅವರ ಮನೆಗೆ ಸೇಫ್ ಆಗಿ ಬಿಡುತ್ತಾನೆ. ಇನ್ನು ವಿಕ್ರಂ ಮನೆಗೆ ಬಂದು ವೇದಾ ಬಳಿ ಒಂದು ಪತ್ರಕ್ಕೆ ಸಹಿ ಹಾಕಿಸಿ ಮನೆಯಿಂದ ಹೊರಗೆ ಹೋಗಲು ಹೇಳುತ್ತಾನೆ .

ಕೊಟ್ಟ ಮಾತಿನಂತೆ ನಡೆದುಕೊಂಡ ವೇದಾ

ಕೊಟ್ಟ ಮಾತಿನ ಪ್ರಕಾರವಾಗಿ ವೇದಾ ನಡೆದುಕೊಳ್ಳಲು ಶುರು ಮಾಡುತ್ತಾಳೆ. ವಿಕ್ರಮ್ ಮಾತಿಗೆ ಎದುರಾಡದೆ ಮನೆ ಬಿಟ್ಟು ಹೋಗುತ್ತಾಳೆ . ಇದನ್ನೆಲ್ಲ ನೋಡಿದ ವಿಕ್ರಂ ಮನೆ ಮಂದಿ ಬಹಳ ಬೇಸರ ಪಟ್ಟುಕೊಂಡಿರುತ್ತಾರೆ. ವೇದಾ ಮನೆ ಬಿಟ್ಟು ಹೋಗುತ್ತಾಳೆ ಎಂದು ಜಯ ಕೂಡ ಅಂದುಕೊಂಡು ಇರಲಿಲ್ಲ . ವೇದಾಗೆ ಅತ್ತೆ ಮಾವ ಎಂದರೆ ಬಹಳ ಅಚ್ಚುಮೆಚ್ಚು . ಆದರೆ ಅತ್ತೆ ವೇದಾಗೆ ಬಹಳ ನೋವು ಕೊಟ್ಟರು ಅದು ಯಾವುದಕ್ಕೆ ಕೂಡ ತಲೆ ಕೆಡಿಸಿಕೊಳ್ಳದೆ ವೇದಾ ಇದ್ದಳು. ಆದರೆ ಇದೀಗ ವೇದಾ ಎಲ್ಲರನ್ನೂ ಬಿಟ್ಟು ತವರು ಮನೆಗೆ ಹೋಗಲು ರೆಡಿ ಆಗಿದ್ದಾಳೆ.

More from Filmibeat

English summary
Neenadhe Na serial 24th December update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X