Neenadhe Na: ಗಂಡನ ವಿರುದ್ಧ ದಿಟ್ಟ ನಿರ್ಧಾರ ತೆಗೆದುಕೊಂಡ ವೇದಾಗೆ ಮಾವನ ಸಾಥ್!
ನೀನಾದೆ ನಾ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ.. ವಿಕ್ರಂ ಇದೀಗ ರಾಜೇಂದ್ರನ ವೈರಿಗಳನ್ನು ಸದೆ ಬಡಿದು ತಾನೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೌದು ವಿಕ್ರಂನ ಇನ್ನೊಂದು ಮುಖವನ್ನು ವೇದಾ ನೋಡಿದ್ದಾಳೆ. ಆತ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗವಾಗಿ ಸದೆ ಬಡಿಯುತ್ತಾ ಇರುತ್ತಾನೆ.
ಇದನ್ನೆಲ್ಲ ನೋಡಿದ ತಾನೇ ಮುಖ್ಯ ಸಾಕ್ಷಿಯಾಗಿ ವಿಕ್ರಂಗೆ ಎದುರು ನಿಲ್ಲುತ್ತಾಳೆ. ವಿಕ್ರಂ ಈ ನಿಟ್ಟಿನಿಂದ ಆಗಲಿ ಸರಿ ಹೋಗಲಿ. ಮನೆಗೆ ಒಳ್ಳೆಯ ಮಗನಾಗಲಿ ಎನ್ನುವುದು ವೇದಾ ಹೆಬ್ಬಯಕೆ ಎಂದರೆ ತಪ್ಪಾಗದು. ಇದನ್ನು ಅರ್ಥ ಮಾಡಿಕೊಳ್ಳದ ಜಯಾ ತನ್ನ ಸೊಸೆಯ ಮುಂದೆ ದರ್ಪದಿಂದ ನನ್ನ ಮಗನನ್ನು ಜೈಲಿನಿಂದ ಬಿಡುಗಡೆಗೊಳಿಸು ಆಕೆಯ ವಿರುದ್ಧ ಯಾವುದೇ ಆಪಾದನೆ ಮಾಡಬೇಡ ಎಂದೆಲ್ಲ ಹೇಳಿದ್ದಾರೆ.

ವೇದಾ ಮಾತ್ರ ಯಾರಿಗೂ ಯಾರನ್ನು ದಂಡಿಸುವ ಶಿಕ್ಷೆ ಕೊಡಿಸುವ ಯಾವುದೆ ಕೆಲಸವನ್ನು ಮಾಡಬಾರದು ಎಂದೆಲ್ಲ ಹೇಳುತ್ತ ಇರುತ್ತಾರೆ.. ಇನ್ನೂ ಶೈಲೂ ಮನೆಗೆ ಬಂದವಳೇ ಬಾವನ ಮೇಲೆ ಇನ್ನೊಂದು ಕೇಸ್ ಆದರೆ ಎನ್‌ಕೌಂಟರ್ ಮಾಡುವುದಾಗಿ ಹೇಳುತ್ತ ಇದ್ದರೂ ಅವರಿಗೆ ಏನು ಶಿಕ್ಷೆ ಬೇಕಾದರೂ ಆಗಬಹುದು ಎಂದು ಹೇಳುತ್ತಾಳೆ.
ಸೊಸೆಯ ಮೇಲೆ ಕೋಪಗೊಂಡ ಜಯಾ
ಇದನ್ನು ಕೇಳಿದ ಜಯಾಗೆ ದಿಕ್ಕೇ ತೋಚದ ಹಾಗೆ ಆಗುತ್ತದೆ. ಆಕಾಶವೇ ಕಳಚಿ ಬಿದ್ದ ಹಾಗೆ ಇದ್ದ ವೇದಾ ಕೈ ಹಿಡಿದು ಎಳೆಯುತ್ತಾ ವೇದಾ ಹೇಗಾದರೂ ಮಾಡಿ ನನ್ನ ಮಗನನ್ನು ಉಳಿಸಿಕೊಡಿ ಯಾಕೆಂದರೆ ಆತ ತಪ್ಪು ಮಾಡಿರಬಹುದು. ನೀನು ಆತನ ವಿರುದ್ದ ಸಾಕ್ಷಿ ಹೇಳದೆ ಇದ್ದರೆ ನಾವು ವಿಕ್ರಂನ ಉಳಿಸಿಕೊಳ್ಳಬಹುದು ಎಂದು ಹೇಳುತ್ತಾಳೆ. ಆದರೆ ವೇದಾ ಮಾತ್ರ ಒಂದು ಮಾತನಾಡುವುದು ಇಲ್ಲ..

ಶೈಲೂ ಮಾತಿಗೂ ಜಗ್ಗದ ವೇದಾ
ಜಯ ವೇದಾ ಬಳಿ ದೇವರ ಸಾಕ್ಷಿಯಾಗಿ ಕೇಳುತ್ತಾಳೆ. ನಿನಗೆ ವಿಕ್ರಂ ಎಂದರೆ ಇಷ್ಟಾನಾ? ಅವನಿಗಾಗಿ ಎನು ಬೇಕಾದರೂ ಮಾಡುತ್ತೀಯಾ, ಆತನ ಮೇಲೆ ಕೋಪ ಮಾಡಿಕೊಂಡು ಇರುತ್ತಿಯಾ. ಆದರೆ ಆತ ಮಾಡಿದ ಕೆಲಸವನ್ನು ಇದೊಂದು ಬಾರಿ ಮನ್ನಿಸು ಹಾಗೆಯೇ ಆತನ ವಿರುದ್ದ ಕೋರ್ಟ್ ನಲ್ಲಿ ಸಾಕ್ಷಿ ಹೇಳಬೇಡ ಯಾಕೆಂದರೆ ಆತನಿಗೆ ಈ ಬಾರಿ ಬಹಳ ದೊಡ್ಡ ಶಿಕ್ಷೆ ಆಗುವ ಸಂಭವವಿದೆ ನನ್ನ ಮಗನನ್ನು ಉಳಿಸಿ ಕೊಡು ಎಂದು ಕೇಳಿಕೊಳ್ಳುತ್ತಾಳೆ.
ಮನೆಯವರ ಒತ್ತಾಯಕ್ಕೆ ಮಣಿಯದ ವೇದಾ
ಇನ್ನೂ ಶೈಲೂ, ಆಗಿದ್ದು ಆಗಲಿ ನನ್ನಿಂದ ನಿಮಗೆ ಹಾಗೂ ವಿಕ್ರಂಗೆ ಏನು ಪ್ರಾಬ್ಲಂ ಆಗುವುದು ಇಲ್ಲ ಎಂದು ಹೇಳು ವೇದಾ ಎಂದು ಹೇಳುತ್ತ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ವೇದಾ ಮಾತ್ರ ಯಾವುದೇ ಮಾತು ಹೇಳದೆ ಸುಮ್ಮನೆ ಇರುತ್ತಾಳೆ. ಇತ್ತ ಮನೆಯವರ ಒತ್ತಾಯಕ್ಕೆ ಮಣಿದ ವೇದಾ ಮಾತ್ರ ಕೊಂಚ ಕೋಪಗೊಂಡು ವಿಕ್ರಂ ಮಾಡಿದ ತಪ್ಪನ್ನು ನಾನು ಯಾವತ್ತೂ ಮನ್ನಿಸುವುದು ಇಲ್ಲ.. ನಾನು ಆತನ ವಿರುದ್ಧ ಸಾಕ್ಷಿ ಹೇಳುತ್ತೇನೆ ಯಾಕೆಂದರೆ ಆತ ತಪ್ಪು ಮಾಡಿದ್ದಾನೆ . ಯಾರಿಗೂ ಯಾರನ್ನು ಶಿಕ್ಷೆ ಕೊಡುವ ಅಧಿಕಾರ ಯಾರಿಗೆ ಯಾರೂ ಕೊಟ್ಟಿಲ್ಲ.. ಎಂದು ಜೋರಾಗಿ ಹೇಳಿದಾಗ ವೇದಾಳ ಮಾವ ವೇದಾಗೆ ಸಪೋರ್ಟ್ ಮಾಡುತ್ತಾರೆ.


Click it and Unblock the Notifications











