Neenadhe Na: ಬೀಗ ಹಾಕಿಕೊಂಡು ಊರಿಗೆ ಹೋದ ಮನೆ ಮಂದಿ, ವಿಕ್ರಂ ವೇದಾ ಮನೆಯೊಳಗೆ ಬಂಧಿ!

By Poorva

ನೀನಾದೆ ನಾ ಧಾರಾವಾಹಿಯಲ್ಲಿ ವೇದಾ ಹಾಗೂ ವಿಕ್ರಂ ಕಿತ್ತಾಡುತ್ತಲೆ ಒಬ್ಬರಿಗೊಬ್ಬರು ಬಹಳ ಹತ್ತಿರ ಆಗುತ್ತಿದ್ದಾರೆ. ದಿನೇ ದಿನೇ ಇವರಿಬ್ಬರ ಜಗಳ ಎಷ್ಟು ಹೆಚ್ಚಾಗುತ್ತದೆಯೋ ಅಷ್ಟೇ ಇವರಿಬ್ಬರ ಬಾಂಧವ್ಯ ಹೆಚ್ಚುತ್ತಾ ಹೋಗುತ್ತಿದೆ. ಸದ್ಯ ವಿಕ್ರಂ, ವೇದಾ ಮೊಬೈಲ್‌ ಅನ್ನು ಬಿಸಾಡಿ ಬಿಡುತ್ತಾನೆ. ಇದನ್ನು ನೋಡಿದ ವೇದಾ ಬಹಳ ಕೋಪದಿಂದ ಆಕೆ ಕೂಡ ಜೋರಾಗಿ ವಿಕ್ರಮ್ ಮೊಬೈಲ್ ಎಸೆದು, ಏನು ಮಾತನಾಡದೆ ಸುಮ್ಮನಿದ್ದಾಳೆ.

ವಿಕ್ರಂ ನನ್ನ ಮೊಬೈಲ್ ಹಾಳಾಗಿ ಹೋಯಿತು ಎಂದು ಬಹಳ ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾನೆ. ಈ ಬಗ್ಗೆ ಇವರಿಬ್ಬರೂ ಮನೆಯವರ ಬಳಿ ಹೇಳೋಣ ಎಂದು ಒಟ್ಟಿಗೆ ಕೆಳಗಿಳಿದು ಬಂದಾಗ ಮನೆಗೆ ಬೀಗ ಹಾಕಿ ಮನೆ ಮಂದಿ ಎಲ್ಲಾ ಊರಿಗೆ ಹೋಗಿರುತ್ತಾರೆ. ಆ ವೇಳೆ ವೇದಾಗೆ ಅತ್ತೆ ಹೇಳಿದ ಮಾತು ನೆನಪಾಗಿ ಬಿಡುತ್ತದೆ.

Kannada serial Neenadhe Na written updated on 1st October

ವಿಕ್ರಂ ಬಳಿ ಇನ್ನೊಂದು ಕೀ ಇದೆ ಎಂದು ಅತ್ತೆ ಹೇಳಿದ್ದನ್ನು ವೇದಾ ನೆನಪು ಮಾಡಿಕೊಂಡು ಹೇಳುತ್ತಾಳೆ .ಇದನ್ನು ಕೇಳಿಸಿಕೊಂಡ ವಿಕ್ರಂ ತನ್ನ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಮೆತ್ತಗೆ ನಾನು ಗಾಡಿಯನ್ನು ಸರ್ವಿಸ್ ಗೆ ಕೊಟ್ಟಿದ್ದೀನಿ ಅದರಲ್ಲಿ ಕೀ ಮರೆತುಬಿಟ್ಟೆ ಈಗ ಎನು ಮಾಡುವುದು ಎಂದು ಯೋಚನೆ ಮಾಡುತ್ತಾನೆ. ಆಗ ವೇದಾ ಮೆತ್ತಗೆ ಹೇಳುತ್ತಾಳೆ ಇನ್ನೇನು ಮಾಡುವುದು ಮನೆಯವರು ಮನೆಗೆ ಬಂದ ಬಳಿಕವಷ್ಟೇ ನಮಗೆ ಮನೆಯಿಂದ ಹೊರಗೆ ಹೋಗಲು ಅವಕಾಶ ಅಷ್ಟರವರೆಗೆ ನಾವು ಇಲ್ಲಿಯೇ ಇರಬೇಕಾಗುತ್ತದೆ ಎಂದು.

ಮನೆಯಲ್ಲಿ ಯಾರೂ ಇಲ್ಲದನ್ನು ಕಂಡು ಶಾಕ್ ಆದ ವಿಕ್ರಂ ವೇದಾ

ಇದನ್ನು ಕೇಳಿಸಿಕೊಂಡ ವಿಕ್ರಂ ಮತ್ತೇನು ಮಾಡುವುದು ಎಂದು ತಿಳಿಯದೇ ಆಯಿತು ಎಂದು ಒಪ್ಪಿಗೆಯನ್ನು ಸೂಚಿಸಿ ಬಿಡುತ್ತಾನೆ. ಇನ್ನೂ ರಾತ್ರಿ ಆದರೂ ಮನೆಯವರು ಬಾರದೆ ಇರುವುದನ್ನು ನೋಡಿದ ವಿಕ್ರಂಗೆ ಏನು ಮಾಡಬೇಕು ಎಂದು ತೋಚದ ಹಾಗೆ ಆಗುತ್ತದೆ. ಆದರೂ ಏನು ಮಾತನಾಡದೆ ಮೆತ್ತಗೆ ಕುಳಿತುಕೊಂಡಿರುತ್ತಾನೆ. ವಿಕ್ರಂ ಸಂಕಟ ನೋಡಿ ವೇದಾಗೆ ಬಹಳ ಖುಷಿ ಆಗುತ್ತಿದೆ.

ಇಬ್ಬರ ನಡುವೆ ಹೆಚ್ಚಾದ ಜಗಳ

ಇನ್ನೂ ವೇದಾ ಮನೆಯಲ್ಲಿ ಅಡುಗೆ ಮಾಡುತ್ತಾಳೆ. ಆ ಬಳಿಕ ವಿಕ್ರಂಗೆ ಅನ್ನ ಸಾಂಬಾರ್ ತೆಗೆದುಕೊಂಡು ಬಂದು ಕೊಡುತ್ತಾಳೆ. ಆದರೆ ವಿಕ್ರಂ ಎನು ಮಾಡಬೇಕು ಎಂದು ತಿಳಿಯದೇ ನನಗೆ ಅನ್ನ ಬೇಡ ಎಂದು ಹೇಳುತ್ತಾನೆ . ಆಗ ವೇದಾ ತಾನೇ ಪ್ಲೇಟ್‌ನಲ್ಲಿ ಇರುವ ಅನ್ನವನ್ನು ಚೆನ್ನಾಗಿ ತಿಂದು ಮಲಗುತ್ತಾಳೆ.

Kannada serial Neenadhe Na written updated on 1st October

ಹೊಟ್ಟೆ ಹಸಿವಿನಿಂದ ಕಂಗಾಲಾದ ವಿಕ್ರಂ

ರಾತ್ರಿ ಹೊಟ್ಟೆ ಹಸಿವಿನಿಂದ ಮಲಗಲು ಆಗದೆ ಮೆತ್ತಗೆ ಎದ್ದು ಕುಳಿತುಕೊಂಡು ಬಿಡುತ್ತಾನೆ. ಇನ್ನೂ ವೇದಾ ಮಾಡಿರುವ ಊಟ ಮಾಡುತ್ತಾನೆ. ಇದನ್ನೆಲ್ಲ ದೂರದಿಂದ ನೋಡಿದ ವೇದಾಗೆ ನಗು ಉಮ್ಮಳಿಸಿ ಬರುತ್ತದೆ.

More from Filmibeat

English summary
Kannada serial ninadena written updated on 1st October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X