Neenadhe Naa: ಕೊನೆಗೂ ವಿಕ್ರಂ ಜತೆ ಸೇರಿದ ವೇದಾ; ಲಕ್ಕಿ ತಂತ್ರದಿಂದ ವಿಕ್ರಂ - ವೇದಾ ಒಂದಾಗುತ್ತಾರಾ?
ನೀನಾದೆ ನಾ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ವಿಕ್ರಂ ಮನೆಗೆ ವಿಕ್ರಂ ಅಜ್ಜಿ ಲಕ್ಕಿ ಬಂದಿದ್ದಾರೆ ಅವರನ್ನು ನೋಡಿದರೆ ವಿಕ್ರಮನ ತಂದೆಗೆ ಭಯ.. ಯಾರು ಏನೇ ತಪ್ಪು ಮಾಡಿದರೂ ವಿಕ್ರಂ ಅಜ್ಜಿ ಧ್ವನಿ ಏರಿಸಿ ಕೇಳುವವರು ಆದ ಕಾರಣ ವಿಕ್ರಂ ಅಜ್ಜಿ ಲಕ್ಕಿ ಎಂದರೆ ಎಲ್ಲರಿಗೂ ಬಹಳ ಭಯ ಎಂದರೆ ತಪ್ಪಾಗಲಾರದು. ಇದೀಗ ವಿಕ್ರಂ ತಾಯಿ ವೇದಾ ಳನ್ನು ನೋಡಿ ಇದ್ಯರಿದು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.
ಆದರೆ ವೇದಾ ಮಾತ್ರ ಲಕ್ಕಿಯನ್ನು ಕಂಡು ಯಾರು ಎಂದೇ ಗೊತ್ತಿಲ್ಲದ ಹಾಗೆ ಇರುತ್ತಾಳೆ.. ವೇದಾ ಮನೆಯವರಿಗೆ ಹೊಸ ಪರಿಚಯ.. ಅಜ್ಜಿಗಂತು ಆಕೆಯ ಪರಿಚಯವೇ ಇಲ್ಲ. ಲಕ್ಕಿ ಮೆತ್ತಗೆ ವೇದಾ ಬಳಿ ಬಂದು ನೀನು ಯಾರು ಎಂದಾಗ ವಿಕ್ರಂ ಕಡೆ ಕೈ ತೋರಿಸಿ ಅವರ ಹೆಂಡತಿ ಎಂದು ಹೇಳುತ್ತಾಳೆ. ಇದನ್ನು ನೋಡಿದ ವಿಕ್ರಂ ಗೆ ಎನು ಹೇಳಬೇಕು ಎಂದು ತೋಚದೇ ತಟಸ್ಥ ವಾಗಿ ನಿಂತು ಬಿಡುತ್ತಾನೆ.

ಇನ್ನೂ ಆತನ ಮೆತ್ತಗೆ ಅಜ್ಜಿ ಬಳಿಗೆ ಬಂದು ಈಕೆ ನನ್ನ ಹೆಂಡತಿ ವೇದಾ.. ಎಂದಾಗ ಅಜ್ಜಿ ಜೋರಾಗಿ ಕೇಳುತ್ತಾರೆ ಎನು ಈಕೆಯನ್ನು ಎತ್ತಾಕಿಕೊಂಡು ಬಂದು ಮದುವೆ ಆದಿಯ ಹೇಗೆ ಎಂದಾಗ ಬೆಚ್ಚಿ ಬಿದ್ದ ವಿಕ್ರಂ ಇಲ್ಲ ಅಜ್ಜಿ ಅವಳನ್ನು ಪ್ರೀತಿಸಿ ಮದುವೆ ಆದೆ ಎಂದು ಸುಳ್ಳು ಬಿಡುತ್ತಾನೆ. ಅಜ್ಜಿ ವಿಕ್ರಂ ಮದುವೆ ಆಗಿದ್ದ ವಿಚಾರ ತಿಳಿದು ಬಹಳ ಖುಷಿ ಪಟ್ಟಿದ್ದಾರೆ. ಇನ್ನೂ ವೇದಾ ಹಾಗೂ ಲಕ್ಕಿ ಎಲ್ಲರೂ ವೇದಾ ಮನೆಗೆ ಹೋಗಿ ಖುಷಿಯಿಂದ ಎಲ್ಲರ ಜೊತೆ ಮಾತನಾಡಿಸಿ ಬರುತ್ತಾರೆ.
ವೇದಾ ಹಾಗೂ ವಿಕ್ರಂ ಬೇರೆ ಬೇರೆ ಮಲಗುತ್ತ ಇರುತ್ತಾರೆ. ಅಜ್ಜಿ ಮನೆಯ ಒಳಗೆ ಬರಬೇಕಾದರೆ ಮನೆಯ ಹಾಲ್ ನಲ್ಲಿ ವೇದ ಮಲಗಿ ಇರುತ್ತಾಳೆ . ಇದನ್ನು ನೋಡಿದ ಅಜ್ಜಿಗೆ ಬಹಳ ಅನುಮಾನ ಕಾಡುತ್ತದೆ. ಯಾಕೆ ವೇದಾ ಹಾಗೂ ವಿಕ್ರಂ ಬೇರೆ ಬೇರೆ ಮಲಗುತ್ತಿದ್ದಾರೆ ಎನು ಕಾರಣ ಎಂದುಕೊಂಡು ಇರುವಾಗ ವೇದಾ ನ ಮೆತ್ತಗೆ ಎದ್ದೇಳಿದುತ್ತಾರೆ .. ಲಕ್ಕಿ ವೇದಾ ನ ವೇದಾ ವೇದಾ ಎಂದು ಕರೆದು ನಿದ್ದೆಯಿಂದ ಎದ್ದೇಳಿಸುತ್ತಾರೆ. ನಿದ್ದೆಯಿಂದ ಮೆತ್ತಗೆ ಎದ್ದ ವೇದಾ ಅಜ್ಜಿಯನ್ನು ಕಂಡು ಕೊಂಚ ಶಾಕ್ ಆಗುತ್ತಾಳೆ .
ಅಜ್ಜಿ ಎಂದು ಕರೆಯುತ್ತಾಳೆ ಆಗ ಲಕ್ಕಿ ಹೇಳುತ್ತಾರೆ ಡಾರ್ಲಿಂಗ್ ನೀನು ಯಾಕೆ ಇಲ್ಲಿ ಮಲಗಿದ್ದಿಯ ಎಂದು ಪ್ರಶ್ನೆ ಮಾಡಿದಾಗ ವೇದಾ ಗೆ ಮಾತ್ರ ಎನು ಹೇಳಬೇಕು ತಿಳಿಯದೇ ಅದು ಅದು ಎಂದು ತುದಲುತ್ತ ಇರುತ್ತಾಳೆ. ಇನ್ನೂ ವೇದಾ ನನ್ನು ವಿಕ್ರಂ ರೂಮಿ ಕರೆದುಕೊಂಡು ಬಂದ ಅಜ್ಜಿ ವಿಕ್ರಂ ಎಂದು ಜೋರಾಗಿ ಕರೆಯುತ್ತಾರೆ .. ಅಜ್ಜಿ ಆರ್ಭಟ ಮಾಡುವುದನ್ನು ನೋಡಿದ ವಿಕ್ರಂ ಕೊಂಚ ಶಾಕ್ ಆಗಿ ಇದ್ದು ಕುಳಿತುಕೊಂಡು ಇರುತ್ತಾನೆ
ಅಜ್ಜಿ ಮೆತ್ತಗೆ ವಿಕ್ರಂ ಬಳಿ ಬಂದು ಎನು ವಿಕ್ರಂ ನಿಮ್ಮದಿಬ್ಬರದ್ದು ಲವ್ ಮ್ಯಾರೇಜ್ ಅಲ್ವಾ ಹಾಗಾದರೆ ನೀವು ಯಾಕೆ ಬೇರೆ ಮಲಾಗುತ್ತ ಇದ್ದೀರಿ.. ಎಂದು ಕೇಳಿದಾಗ ವಿಕ್ರಂ ತಬ್ಬಿಬ್ಬಾಗಿ ಇರುತ್ತಾನೆ. ವೇದಾ ಹಾಗೂ ವಿಕ್ರಂ ನನ್ನು ಲಕ್ಕಿ ಅಜ್ಜಿ ಆದಷ್ಟು ಹತ್ತಿರ ಮಾಡಲು ನೀಡುತ್ತಿದ್ದಾರೆ ಆದರೆ ವಿಕ್ರಂ ಮಾತ್ರ ಅದ್ಯಾಕೋ ಮನಸ್ಸು ಮಾಡುತ್ತಿಲ್ಲ ಇದೀಗ ವೇದನನ್ನ ವಿಕ್ರಂ ರೂಮ್ ನಲ್ಲಿ ಮಲಗುವಂತೆ ಸೂಚನೆ ನೀಡಿದ್ದಾಳೆ. ಇದನ್ನು ಕೇಳಿದ ವಿಕ್ರಂ ಮೊದಲು ವೇದಾ ಎಂದರು ಆ ಬಳಿಕ ಅಜ್ಜಿ ಮಾತಿಗೆ ತುಟಿಕ್ ಪಿಟಿಕ್ ಎನ್ನದೆ ಒಪ್ಪಿಕೊಳ್ಳುತ್ತಾನೆ


Click it and Unblock the Notifications











