Neenadhena ; ವಿಕ್ರಮ್, ವೇದಾ ಜೋಡಿ ಅಭಿಮಾನಿಗಳಿಗೆ ಮಾಡಿದೆ ಮೋಡಿ

By ಪೂರ್ವ

ವೇದಾಗೆ ತಾನು ಸಾಯುತ್ತೇನೆ ಎನ್ನುವ ಭಯಕ್ಕಿಂತ ಹೆಚ್ಚಾಗಿ ತನ್ನ ಗಂಡ ನಾನು ಸತ್ತ ಬಳಿಕ ಹೇಗೆ ಜೀವನ ನಡೆಸುತ್ತಾನೆ ಎನ್ನುವುದು ಆಕೆಯ ಚಿಂತೆ. ಮನೆಯಲ್ಲಿ ಅದೆಷ್ಟೋ ಕದನ ಆದ ಬಳಿಕ ವೇದಾ ವಿಕ್ರಂ ಮದುವೆ ನಡೆಯುತ್ತದೆ. ಆದರೆ ಮದುವೆ ಆದ ಬಳಿಕವೂ ಅವರು ನೆಮ್ಮದಿಯಾಗಿ ಜೀವನ ಸಾಗಿಸಿದವರು ಅಲ್ಲ. ಎಲ್ಲರ ಹತ್ತಿರವೇ ಇರುತ್ತಾರೆ ಆದರೆ ಮನೆ ಮಂದಿಯಿಂದ ದೂರವಾಗಿ ಬಿಡುತ್ತಾರೆ.

ವೇದಾ ಮಾವನಿಗೆ ಮಾತ್ರ ವಿಕ್ರಂ ಕಂಡರೆ ಆಗುವುದಿಲ್ಲ. ಆತ ಎಷ್ಟು ಹೊತ್ತಿಗೆ ಕೂಡ ನಾಯಕರೇ ಎಂದೆಲ್ಲ ಆತನ ಹಿಂದೆಯೇ ಓಡಿಕೊಂಡು ಹೋಗುತ್ತಾನೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ನಾಯಕ ಕರೆದರೆ ಅದೆಲ್ಲವನ್ನೂ ಬಿಟ್ಟು ಎದ್ದು ಹೋಗುತ್ತಾರೆ. ಈ ವಿಚಾರ ವಿಕ್ರಂ ತಂದೆಗೆ ಬಹಳ ನೋವು ನೀಡುತ್ತದೆ. ಮಗನನ್ನು ಹೇಗಾದರೂ ಮಾಡಿ ಬದಲಾಯಿಸಬೇಕು. ಇಲ್ಲವಾದರೆ ಅವರಿಬ್ಬರೂ ಕೂಡ ಚೆನ್ನಾಗಿ ಇರಲು ಸಾಧ್ಯ ಇಲ್ಲ ಎನ್ನುವುದು ವೇದಾ ಮಾವ ಅಭಿಪ್ರಾಯ. ಇತ್ತ ಜಯ ತನ್ನ ಮಗ ವೇದಾ ಜೊತೆ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗಲಿ ಎನ್ನುವುದು ಆಸೆ.

kannada-serial-neenadhena-written-11th-may

ವೇದನ ಹಾಗೆ ಗುಣ ಇರುವ ಹುಡುಗಿ ನಿನಗೆ ಸಿಕ್ಕಿದ್ದೇ ಪುಣ್ಯ ಎಂದು ಜಯ ಒತ್ತಿ ಒತ್ತಿ ಹೇಳುತ್ತಾಳೆ. ಇತ್ತೀಚಿನ ದಿನಗಳಲ್ಲಿ ಜಯನ ಬಳಿ ವೇದಾ ಒಗಟಾಗಿ ಮಾತನಾಡುತ್ತಾಳೆ. ಆದರೆ ವೇದಾ ಮಾತು ಯಾರಿಗೂ ಕೂಡ ಅರ್ಥ ಆಗುವುದಿಲ್ಲ. ಆದರೆ ವೇದಾ ಮಾತ್ರ ಆ ನಾಯಕನಿಂದ ನೀನು ದೂರ ಇರಬೇಕು ಇಲ್ಲವಾದರೆ ನಿನ್ನ ಬದುಕು ನಾಶವಾಗಿ ಹೋಗುತ್ತದೆ. ನಿನ್ನನ್ನು ನಂಬಿದ ಕುಟುಂಬ ಇದೆ. ನೀನು ಅವರ ಜೊತೆ ಒಬ್ಬನಾಗಿ ಬದುಕಬೇಕು ಎಂದೆಲ್ಲ ಗಿಣಿಗೆ ಹೇಳಿದ ಹಾಗೆ ಹೇಳುತ್ತಾಳೆ. ಆದರೆ ಅದ್ಯಾವುದನ್ನೂ ಕೇಳಲು ವಿಕ್ರಂ ರೆಡಿ ಇಲ್ಲ. ಇದೆಲ್ಲ ಹೇಳುವ ಮುಂಚೆಯೇ ವಿಕ್ರಂ ಹೇಳುತ್ತಾನೆ. ಬೇತಾಳ ನೀನು ಇದನ್ನು ನನಗೆ ಹೇಳಬೇಡ ಎಂದು ಹೇಳುತ್ತಾನೆ.

ವೇದಾ ಜೊತೆ ಮಾತಿಗಿಳಿದ ವಿಕ್ರಂ

ಇನ್ನೂ ವೇದಾ ಮಾತ್ರ ಕೊನೆಯದಾಗಿ ನದಿಯ ದಂಡೆಯ ಬಳಿ ವಿಕ್ರಂ ಜೊತೆ ಬರುತ್ತಾಳೆ. ವಿಕ್ರಂ ಜೊತೆ ಬೈಕ್ ನಲ್ಲಿ ಬರಬೇಕಾದರೆ ಆತನನ್ನು ಬಿಗಿಯಾಗಿ ತಬ್ಬಿಕೊಂಡು ಬಿಡುತ್ತಾಳೆ. ಇನ್ನೂ ನದಿಯ ಬಳಿ ಆತನ ಜೊತೆ ಕೊನೆಯದಾಗಿ ಮಾತನಾಡುತ್ತಾಳೆ. ಗುಂಡ ಇನ್ನೂ ಮೇಲೆ ನಿನ್ನ ಜೀವನದಲ್ಲಿ ನಾನು ಇರುವುದು ಇಲ್ಲ. ನೀನು ಹೇಗೆ ಜೀವನ ಸಾಗಿಸುತ್ತಿಯಾ ಗೊತ್ತಿಲ್ಲ ಎಂದಾಗ ವಿಕ್ರಂ ಹೇಳುತ್ತಾನೆ ಯಾಕೆ ವೇದಾ ನೀನು ಆ ರೀತಿ ಹೆಳುತ್ತಿದ್ದಿಯಾ ನಾವು ಇಬ್ಬರು ಮದುವೆ ಆಗಿದ್ದು ಯಾವ ಕಾರಣಕ್ಕಾಗಿ ಈ ರೀತಿ ಮಾತನಾಡಿದರೆ ಹೇಗೆ ನೀನು ಎಂದು ಹೇಳಿದಾಗ ವೇದಾ ಗೆ ಎನು ಹೇಳಬೇಕು ತಿಳಿಯದಾಗುತ್ತದೆ.

kannada-serial-neenadhena-written-11th-may

ವಿಕ್ರಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ವೇದಾ

ಹಾಗೆಯೇ ವೇದಾ ವಿಕ್ರಂ ಬಳಿ ಹೇಳುತ್ತಾಳೆ, ನೀನು ಮಾವ ಅತ್ತೆಯನ್ನು ಚೆನ್ನಾಗಿ ನೋಡಿಕೋ ಗಂಡ. ಅವರಿಗೆ ನೀನೆಂದರೆ ಪಂಚ ಪ್ರಾಣ ಎಂದು ಹೇಳುತ್ತಾಳೆ. ಆಗಲೇ ವಿಕ್ರಂಗೆ ನಾಯಕ ಕರೆ ಮಾಡುತ್ತಾರೆ. ಆತ ನಾಯಕನ ಬಳಿ ಮಾತನಾಡಲು ಹೋದಾಗ ವೇದಾ ಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾರೆ. ಇನ್ನೂ ಜಯ ಗೆ ವೇದಾ ಇನ್ನೂ ಮೇಲೆ ನಮ್ಮ ಜೊತೆ ಇರುವುದು ಇಲ್ಲ ಎನ್ನುವ ಲೆಟರ್ ಕೈ ಸೇರಿದೆ ಅಕೆ ಗೆ ಎನು ಮಾಡಬೇಕು ತಿಳಿಯದಾಗುತ್ತದೆ. ವಿಕ್ರಂ ಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸುವುದು ಇಲ್ಲ.

ವೇದಾ ಬರೆದ ಲೆಟರ್ ಓದಿ ಕುಸಿದು ಬಿದ್ದ ಜಯ

ಕೊನೆಗೆ ಅದು ಹೇಗೋ ರಿಸೀವ್ ಮಾಡಿ ಮಾತನಾಡಿದಾಗ ವೇದಾ ಇನ್ನೂ ಮುಂದೆ ನಮ್ಮ ಜೊತೆ ಇರುವುದಿಲ್ಲ ಎನ್ನುವ ವಿಚಾರ ವಿಕ್ರಂ ಗೆ ತಿಳಿಯುತ್ತದೆ. ಆದರೆ ವೇದಾ ಬದುಕಬೇಕು ಆಕೆ ಸಾಯಬಾರದು ಎನ್ನುವುದು ವೀಕ್ಷಕರ ಮನದಾಳದ ಆಸೆ. ವೇದಾ ಹಾಗೂ ವಿಕ್ರಂ ಜೋಡಿ ನೋಡಿದ ಅಭಿಮಾನಿಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದವು. ಇದೀಗ ವೇದಾ ಇನ್ನೂ ಮೇಲೆ ಇರುವುದಿಲ್ಲ ಎಂದು ತಿಳಿದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
kannada serial neenadhena written 11th may ವೇದಾಗೆ ತಾನು ಸಾಯುತ್ತೇನೆ ಎನ್ನುವ ಭಯಕ್ಕಿಂತ ಹೆಚ್ಚಾಗಿ ತನ್ನ ಗಂಡ ನಾನು ಸತ್ತ ಬಳಿಕ ಹೇಗೆ ಜೀವನ ನಡೆಸುತ್ತಾನೆ ಎನ್ನುವುದುf ಆಕೆಯ ಚಿಂತೆ. ಮನೆಯಲ್ಲಿ ಅದೆಷ್ಟೋ ಕದನ ಆದ ಬಳಿಕ ವೇದಾ ವಿಕ್ರಂ ಮದುವೆ ನಡೆಯುತ್ತದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X