Neenadhena: ಸೊಸೆ ಬಳಿ ಕ್ಷಮೆ ಕೇಳಿದ ಜಯ, ಮುಚ್ಚಿಟ್ಟ ಸತ್ಯ ಕೆದಕುತ್ತಾಳಾ ವೇದಾ ?

By Poorva

ವೇದಾಗೆ ವಿಕ್ರಮ್ ಎಂದರೆ ಬಹಳ ಪ್ರೀತಿ. ಆದರೆ ಜಯ ಅದ್ಯಾರಿಗೋ ಕೊಟ್ಟ ಮಾತಿನಿಂದ ತನ್ನ ಮಗ ಸೊಸೆಯನ್ನು ದೂರ ದೂರ ಮಾಡುವ ಸಂದರ್ಭ ತಂದುಕೊಂಡಿದ್ದಾಳೆ. ಲಕ್ಕಿ ಮನೆಗೆ ಬಂದ ಕಾರಣ ವೇದಾ ಮೆತ್ತಗೆ ವಿಕ್ರಂ ಮನೆಗೆ ಎಂಟ್ರಿ ನೀಡುತ್ತಾಳೆ. ವಿಕ್ರಂ ಹಾಗೂ ಅತ್ತೆಯ ಮನಸ್ಸನ್ನು ಒಲಿಸಲು ಬಹಳ ಪ್ರಯತ್ನ ಪಡುತ್ತಾಳೆ . ಆದರೆ ವೇದಾ ಎಷ್ಟೇ ಪ್ರಯತ್ನ ಪಟ್ಟರೂ ವಿಕ್ರಂ ಮತ್ತೆ ವೇದಾ ದೂರ ಇರುವ ಹಾಗೆ ಆಗುತ್ತದೆ.

ಇನ್ನು ವೇದಾ ಮನೆಯಿಂದ ಹೊರಡುವ ಟೈಮ್ ಬರುತ್ತದೆ. ಆ ಸಮಯದಲ್ಲಿ ವೇದಾ ಬಳಿ ಬಂದ ಜಯ, ವೇದಾ ನೀನು ನನ್ನ ಹತ್ತಿರವೇ ಇರು ಅಥವಾ ದೂರನೆ ಇದ್ದರೂ ನೀನು ನನ್ನ ಮಗಳೆ ಎಂದು ಹೇಳಿ ಜೋರಾಗಿ ಅಳುತ್ತಾಳೆ. ಬಳಿಕ ಕಣ್ಣು ಒರೆಸುತ್ತಾ ಹೇಳುತ್ತಾಳೆ . ತಾಯಿ ಯಾವತ್ತೂ ನಿನಗೆ ಒಳ್ಳೆಯದನ್ನೇ ಬಯಸುತ್ತಾಳೆ. ಅದೃಷ್ಟ ದುರದೃಷ್ಟ ಎಲ್ಲ ಕತ್ತಲೆ ಹಾಗೂ ಬೆಳಕಿನ ಥರ. ಜೀವನದಲ್ಲಿ ಏನಾದರೂ ಆಟ ಆಡುತ್ತಾನೆ ಇರುತ್ತದೆ ಎನ್ನುತ್ತಾಳೆ.

Kannada Serial Neenadhena written update on 27th January

ಸೊಸೆಯ ಬಳಿ ನೋವು ಹೇಳಿಕೊಂಡ ಜಯ

"ಆಗ ನಮ್ಮ ಅದೃಷ್ಟ ಚೆನ್ನಾಗಿ ಇತ್ತು. ನೀನು ನನ್ನ ಮನೆಯ ಸೊಸೆ ಆಗಿ ಬಂದೆ. ನನ್ನ ಮಗನ ಬಗ್ಗೆ ಇದ್ದ ದೊಡ್ಡ ತಲೆನೋವು ದೂರ ಆಯಿತು. ಆತನನ್ನು ನೋಡಿಕೊಳ್ಳಲು ಸೊಸೆ ಬಂದಳು ಎಂದು ಬಹಳ ಖುಷಿ ಪಟ್ಟಿದ್ದೆ" ನಾನು ಎಂದು ಜಯ ಸೊಸೆಯ ಬಳಿ ಹೇಳುತ್ತಾಳೆ. ನಮ್ಮ ಮನೆ ಬೆಳಗೋ ದೇವತೆ ಇಲ್ಲಿಗೆ ಬರುತ್ತಾಳೆ ಎಂದು ಖುಷಿಯಲ್ಲಿ ಇದ್ದೆ. ನಾನು ನಿತ್ಯ ಪೂಜೇ ಮಾಡುತ್ತಾ ಇರುವ ದೇವರು .. ನಿನ್ನನ್ನು ವರದ ರೂಪದಲ್ಲಿ ನೀಡಿದ್ದಾರೆ ಎಂದು ಬಹಳ ಸಂತಸ ಪಟ್ಟಿದ್ದೆ. ದುರದೃಷ್ಟ ಯಾವುದೋ ಒಂದು ರೂಪದಲ್ಲಿ ಬಂದು ನನ್ನನ್ನು ಸಿಕ್ಕಿ ಹಾಕಿಸಿ ಬಿಟ್ಟಿತು ಎಂದು ಅಳುತ್ತಾ ಹೇಳುತ್ತಾಳೆ .

ಹಿರಿಯರು ಹೇಳುತ್ತಾರೆ ಯಾರಿಗಾದರೂ ಮಾತು ಕೊಡೋ ಮುಂಚೆ ನೂರು ಬಾರಿ ಆಲೋಚನೆ ಮಾಡಬೇಕು ಎಂದು ಆದರೆ ಆ ಮಾತು ಸತ್ಯ.. ಎಂದು ಬಾಯಿ ತಪ್ಪಿ ಹೇಳಿದಾಗ ವೇದಾಗೆ ಶಾಕ್ ಆಗುತ್ತದೆ. ವೇದಾ ಹಾಗೂ ಜಯ ಮಾತನಾಡುತ್ತಾ ಇರುವುದನ್ನು ವಿಕ್ರಂ ಕೂಡ ಕೇಳಿಸಿಕೊಂಡು ಇರುತ್ತಾನೆ.

ಅಮ್ಮನ ಮಾತು ಕೇಳಿಸಿಕೊಂಡ ವಿಕ್ರಂ

ವೇದಾ ಅತ್ತೆಯ ಬಳಿ ಪ್ರಶ್ನೆ ಮಾಡುತ್ತಾಳೆ ನಿಮಗೆ ಯಾರು ಏನಾದರು ಹೇಳಿದ್ರಾ.. ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರ ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಜಯ ಎನು ಮಾತನಾಡಬೇಕು ಎಂದು ತಿಳಿಯದೇ ಅದೆಲ್ಲ ಬೇಡ ಇದೀಗ .ಇದೀಗ ಮುಗಿದು ಹೋದ ಅದ್ಯಾಯ ಕೆದಕುವುದು ಬೇಡ. ನಾನು ನಿನಗೆ ನೋವು ಮಾಡಿರುವುದು ನಾನು ಬೇಕು ಅಂತ ಮಾಡಿಲ್ಲ.. ನಾನು ಬಹಳ ಪ್ರೀತಿ ಮಾಡುತ್ತೇನೆ ನಿನ್ನನ್ನು. ಆದರೆ ನಿನಗೆ ಇಷ್ಟು ಕಷ್ಟ ಕೊಟ್ಟುಬಿಟ್ಟಿದ್ದೇನೆ ತಪ್ಪಾಯಿತು ಎಂದು ಬಹಳ ಬೇಸರ ಮಾಡಿಕೊಂಡು, ಬಳಿಕ ವೇದಾ ಬಳಿ ಕ್ಷಮೆ ಕೇಳುತ್ತಾಳೆ.

Kannada Serial Neenadhena written update on 27th January

ಅತ್ತೆ ಮಾತಿಗೆ ಕಣ್ಣೀರು ಹಾಕಿದ ವೇದಾ

ವೇದಾ ಅತ್ತೆಯನ್ನು ಪ್ರಶ್ನೆ ಮಾಡುವ ಮೊದಲೇ ಅಲ್ಲಿಂದ ಜಯ ಅಳುತ್ತಾ ಹೋಗುತ್ತಾಳೆ. ಅಮ್ಮನ ಮಾತು ಕೇಳುತ್ತಿದ್ದ ವಿಕ್ರಂಗೆ ತಿಳಿಯುತ್ತದೆ. ಅಮ್ಮ ಯಾರದ್ದೋ ಮಾತಿಗೆ ಕಡಿವಾಣ ಬಿದ್ದು ಈ ರೀತಿ ನಡೆದುಕೊಂಡು ಇದ್ದಾಳೆ ಎಂದು ಅದು ಯಾರು ಎನ್ನುವ ಪ್ರಶ್ನೆ ಆತನ ತಲೆಯಲ್ಲಿ ಕೊರೆಯುತ್ತ ಇತ್ತು. ಕೊನೆಗೆ ವೇದಾ ರೂಮ್ ನಿಂದಾ ಹೊರಗೆ ಬಂದು ವಿಕ್ರಂ ಬಳಿ ಹೇಳುತ್ತಾಳೆ. ಗುಂಡ ನಾನು ಮನೆ ಬಿಟ್ಟು ಹೋದ ಬಳಿಕ ನಾನು ತಂದಿದ್ದ ಗಿಡಗಳಿಗೆ ನೀರು ಹಾಕಿ ಬೇಳೆಸಿದ್ದಿಯಾ ಥಾಂಕ್ಸ್ ಎಂದು ಹೇಳಿ ನಾನು ಹೊರಡುವ ಸಮಯ ಬಂದಾಯಿತು ನಾನು ಹೋಗುತ್ತೇನೆ ಎಂದು ಹೇಳಿ ಹೊರಡಲು ಅನುವಾಗುತ್ತಾಳೆ.

More from Filmibeat

English summary
Neenadhena serial written update on 27th January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X