Neenadhena: ವಿಕ್ರಂಗೆ ಮತ್ತೆ ಮದುವೆ ಮಾಡಲು ಜಯ ನಿರ್ಧಾರ, ಸುಧಾ ಕಂಡೀಷನ್ ಕೇಳಿ ಜಯ ಶಾಕ್!
ವಿಕ್ರಂ, ವೇದಾ ದೂರ ದೂರ ಆಗಿದ್ದಾರೆ. ಆದರೆ, ಇಬ್ಬರ ಮನದಲ್ಲಿ ಮಾತ್ರ ಪ್ರೀತಿ ತುಂಬಿದೆ. ಮನೆಯವರ ಜಗಳದಲ್ಲಿ ವೇದಾ ತನ್ನ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ವಿಕ್ರಂ ಬಹಳ ಯೋಚನೆ ಮಾಡಿ ಸ್ವ ಇಚ್ಛೆಯಂತೆ ಡೈವೋರ್ಸ್ ಪೇಪರಿಗೆ ಸಹಿ ಹಾಕಿಸಿ ವೇದಾಳನ್ನು ಆಕೆಯ ತವರು ಮನೆಗೆ ಕಳುಹಿಸಿದ್ದಾನೆ. ಆದರೆ ಅದೆಲ್ಲವೂ ವಿಕ್ರಂ ಮನಸಿಗೆ ಮಾತ್ರ ತಿಳಿದಿದೆ.
ಜಯ ಮಾತ್ರ ವೇದಾಳನ್ನ ಮನದಲ್ಲಿ ಪ್ರೀತಿ ಮಾಡುತ್ತಾ ಇದ್ದರು ಅದ್ಯಾವುದನ್ನೂ ಹೊರಗಿನವರಿಗೆ ತೋರಿಸದೆ ಇರುತ್ತಾರೆ. ಆದರೆ ವೇದಾ ಮನೆ ಬಿಟ್ಟು ಹೋದಾಗ ಜಯ ಅತ್ತಷ್ಟು ಬಹುಶಃ ಯಾರೂ ಅಳಲು ಸಾಧ್ಯ ಇಲ್ಲ. ಇಬ್ಬರು ಮನೆಯವರು ಕೂಡ ನೊಂದ ಜೀವಗಳಿಗೆ ಇನ್ನೊಂದು ಮದುವೆ ಮಾಡುವ ತವಕದಲ್ಲಿ ಇದ್ದಾರೆ. ವೇದಾ ಮನೆಯಲ್ಲಿ ವೇದಾ ಜೊತೆ ಒಂದು ಮಾತು ಕೇಳದೆ ಮದುವೆ ಮಾಡಲು ಹೊರಟರೆ, ವಿಕ್ರಂ ಸ್ಥಿತಿ ಕೂಡ ಹಾಗೆಯೇ.

ವಿಕ್ರಂ ಹಾಗೂ ಸಾಕ್ಷಿ ಮದುವೆ ಮಾಡಲು ತುದಿಗಾಲಿನಲ್ಲಿ ಜಯ ಹಾಗೂ ಆಕೆಯ ಗಂಡ ನಿಂತು ಇದ್ದಾರೆ. ಜಯಗೆ ಮಗನ ಮದುವೆ ಬೇಗ ಆದಷ್ಟು ನಿಶ್ಚಿಂತೆಯಿಂದ ಇರಬಹುದು ಎನ್ನುವ ಆಸೆ. ವೇದಾ ನಮ್ಮ ಮನೆಗೆ ತಕ್ಕ ಸೊಸೆ ಅಲ್ಲ ಆಕೆ ಯಾವತ್ತೂ ನಮ್ಮ ಮನೆಯ ಸೊಸೆ ಆಗಲು ಸಾಧ್ಯ ಇಲ್ಲ ಎಂದು ಯೋಚನೆ ಮಾಡಿರುವುದೆ ಮೊದಲಿಗೆ ಜಯ.
ಸಾಕ್ಷಿಯನ್ನು ವಿಕ್ರಂ ಜೊತೆ ಮದುವೆ ಮಾಡಲು ಒಪ್ಪಿದ ಸುಧಾ?
ಜಯ ಮಾತಿಗೆ ಇಲ್ಲ ಎನ್ನದೆ ಮಾರು ಮದುವೆಯಾಗಲು ವಿಕ್ರಂ ಒಪ್ಪಿಕೊಂಡರು ಸಾಕ್ಷಿ ತಂದೆ ತಾಯಿ ಕಂಡೀಷನ್ ಮೇಲೆ ಕಂಡೀಷನ್ ಹಾಕಿದ್ದಾರೆ. ಸಾಕ್ಷಿ ತಾಯಿ ಸುಧಾ ಕಂಡೀಷನ್ ಕೇಳಿ ಜಯ ಬೆಚ್ಚಿ ಬಿದ್ದಿದ್ದಾಳೆ. ಒಂದನೆ ಕಂಡೀಷನ್ ವಿಕ್ರಂ ರೌಡಿಸಂ ಅನ್ನು ಬಿಡಬೇಕು.. ಹಾಗೆಯೇ ಎರಡನೇ ಕಂಡೀಷನ್ ವಿಕ್ರಂ ಸಾಕ್ಷಿನ ಮದುವೆ ಆದ ಬಳಿಕ ನಮ್ಮ ಮನೆಯ ಅಳಿಯ ಆಗಬೇಕು ಎಂದು. ಈ ಎರಡು ಕಂಡೀಷನ್ ಕೇಳಿ ಜಯ ಧಿಗ್ಬ್ರಂತಗೊಂಡಿದ್ದಾರೆ.
ಅಮ್ಮನ ಮಾತಿಗೆ ನಕ್ಕ ವಿಕ್ರಂ
ಸುಧಾ ಮಾತಿಗೆ ಎನು ಮಾಡಬೇಕು ಎಂದು ತಿಳಿಯದೇ ಜಯ ಮೌನವಾಗಿ ಇದ್ದಾಳೆ. ಆ ಬಳಿಕ ವಿಕ್ರಂ ಜೊತೆ ಈ ವಿಚಾರ ಹೇಳಿದಾಗ ವಿಕ್ರಂ ಜೋರಾಗಿ ನಗುತಾನೆ. ಸಾಕ್ಷಿ ಮನೆಗೆ ಹೋದರೆ ಒಂದು ಲೋಟ ಕಾಫಿ ಕುಡಿದು ಬರಬೇಕು ಅದು ಬಿಟ್ಟು ಹೀಗೆಲ್ಲ ನೀವು ಹೆಣ್ಣು ಕೇಳಿದರೆ ಹೀಗೆ ಆಗುವುದು ಎಂದು ನಗುತ್ತಾನೆ.

ವೇದಾಗೆ ಮಾರು ಮದುವೆ ಮಾಡಲು ಹರಸಾಹಸ
ಇನ್ನು ವೇದಾ ಮನೆಯಲ್ಲೂ ಇದೆ ಕಥೆ. ಆಕೆ ಮುಂಚೆ ಮದುವೆ ಆಗಬೇಕು ಎಂದುಕೊಂಡಿದ್ದ ಹುಡುಗ ವೇದಾ ಮನ ಗೆಲ್ಲಲು ಹಾರ ಸಾಹಸ ಪಡುತ್ತಿದ್ದಾನೆ. ಆದರೆ ವೇದಾ ಮನಸ್ಸು ವಿಕ್ರಂ ಜೊತೆ ಇರಬೇಕಾದರೆ ಆತನನ್ನು ಹೇಗೆ ಮದುವೆ ಆಗಲು ಸಾಧ್ಯ.


Click it and Unblock the Notifications











