twitter
    For Quick Alerts
    ALLOW NOTIFICATIONS  
    For Daily Alerts

    ನಂಬರ್ 1 ಸೊಸೆ: ಸ್ಪರ್ಧೆಯಲ್ಲಿ ಗೆಲ್ಲುವರ್ಯಾರು? ಅತ್ತೆನಾ-ಸೊಸೆನಾ?

    By ಪೂರ್ವ
    |

    ವಾಗ್ದೇವಿ ಅವರ ಅತ್ತೆಯ ಎಂಟ್ರಿಯಿಂದ ನಂಬರ್ ವನ್ ಸೊಸೆ ಧಾರಾವಾಹಿಯ ಕುತೂಹಲ ಹೆಚ್ಚಿದೆ. ವಾಗ್ದೇವಿಗೆ ಅತ್ತೆ ಎಂದರೆ ಭಯ, ಚಿನ್ನಮ್ಮ ಎಂದು ಕರೆದರೆ ಸಾಕು ಎಲ್ಲಿ ಇದ್ದರೂ ಓಡಿಕೊಂಡು ಬಂದು ಹಾಜರಾಗುತ್ತಾರೆ. ವಾಗ್ದೇವಿ ಅತ್ತೆ ಹಳೆಕಾಲದ ಸಂಪ್ರದಾಯವನ್ನು ಯಾರು ಮರೆಯಬಾರದು ಎಂದು ಹೇಳಿ ಅನೇಕ ಪಂದ್ಯವನ್ನು ಆಯೋಜಿಸುತ್ತಾರೆ. ಇದು ಹೆಂಗಸರಿಗೆ ಮಾತ್ರ. ಇದೀಗ ಬೆರಣಿ ತಟ್ಟುವ ಕೆಲಸವನ್ನು ಹೆಣ್ಣುಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.

    ಇದೀಗ ಸ್ಪರ್ಧೆ ವಾಗ್ದೇವಿ ಹಾಗೂ ಸರಸ್ವತಿ ಮಧ್ಯೆ ನಡೆಯುತ್ತಿದೆ. ಬೆರಣಿ ತಟ್ಟಲು ಅತ್ತೆ ಸೊಸೆ ತಾ ಮುಂದು ನಾ ಮುಂದು ಎಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ ಹಾಗೆಯೇ ಉತ್ತಮ ಪ್ರದರ್ಶನವನ್ನೂ ನೀಡುತ್ತಾರೆ. ಇದನ್ನು ನೋಡಿದ ಮನೆ ಮಂದಿಗೆ ಖುಷಿಯಾಗುತ್ತದೆ. ಅರ್ಧ ಗಂಟೆ ಆದ ಗಡಿಯಾರ ನಿಲ್ಲಿಸುವಂತೆ ಅತ್ತೆ ಅರುಣ್‌ಗೆ ಹೇಳುತ್ತಾರೆ. ಅದಕ್ಕೆ ವಾಗ್ದೇವಿಯ ಗಂಡ ಆಯ್ತು ಎಂದು ಹೇಳುತ್ತಾರೆ. ಸರಸು ಹಾಗೆ ವಾಗ್ದೇವಿ ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ಬೆರಣಿ ತಟ್ಟುತ್ತಿರುತ್ತಾರೆ.

    ಅರ್ಧಗಂಟೆ ಆದ ಬಳಿಕ ನಿಲ್ಸಿ ಎಂದು ಹೇಳುತ್ತಾರೆ ಅರುಣ್ ಪ್ರಸಾದ್. ಇನ್ನೂ ವಾಗ್ದೇವಿ ನಾನೇ ಗೆದ್ದೆ ಎಂದು ಬೀಗುತ್ತಿದ್ದಾರೆ. ಇತ್ತ ಒಂದು ದಿನದ ಅಧಿಕಾರಕ್ಕೊಸ್ಕರ ಸರಸು ಹಾಗೆ ವಾಗ್ದೇವಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಇದೀಗ ಸರಸು ಹಾಗೆ ವಾಗ್ದೇವಿ ಮಧ್ಯೆ ಕೊನೆಯ ಪಂದ್ಯ ನಡೆಯುತ್ತಿದೆ. ಅತ್ತೆ ಚಿನ್ನಮ್ಮ ಸರಸು ಇಲ್ಲಿ ಬನ್ನಿ ಎಂದು ಕರೆದು ಆಟದ ನಿಯಮ ವಿವರಿಸುತ್ತಾರೆ.

    ನಿಮ್ಮಿಬ್ಬರಿಗೂ ೨೦ ನಿಮಿಷ ಸಮಯ ಇದೆ. ಅಷ್ಟರ ಒಳಗೆ ಮಾವಿನ ಕಾಯಿ, ಮೆಂತೆ, ಬೆಳ್ಳುಳ್ಳಿ, ಖಾರ ಹಾಕಿ ಉಪ್ಪಿನ ಕಾಯಿ ಮಾಡಿ ನನ್ನ ಮುಂದೆ ಇಟ್ಟರೆ ನಾನು ರುಚಿ ನೋಡಿ ವಿಜೇತೆ ಯಾರು ಎಂದು ಪ್ರಕಟ ಮಾಡುತ್ತೇನೆ ಎಂದು ಹೇಳುತ್ತಾರೆ. ಬಳಿಕ ನನ್ನ ಚಿನ್ನಮ್ಮ ಗೆದ್ದರೆ ಗೆಲುವು ಸಮವಾಗುತ್ತದೆ ಸರಸು ಗೆದ್ದರೆ ಏಳು ದಿನಗಳ ಒಡವೆಗಳು, ಒಂದು ದಿನದ ಅಧಿಕಾರ ನಿನ್ನ ಸ್ವಂತವಾಗಿ ಹೋಗಿಬಿಡುತ್ತದೆ' ಎಂದು ಹೇಳುತ್ತಾರೆ ಇದನ್ನು ಕೇಳಿದ ವಾಗ್ದೇವಿ ಮುಖ ದಪ್ಪವಾಗುತ್ತದೆ.

    ಸರಸು ಅನ್ನು ಸೋಲಿಸಲು ಪೈಪೋಟಿ

    ಸರಸು ಅನ್ನು ಸೋಲಿಸಲು ಪೈಪೋಟಿ

    ಆಗ ಪ್ರೀತಿ ಮತ್ತು ವನಜಾ ಇಬ್ಬರು ಗುಸು ಮಾತನಾಡುತ್ತಾ, 'ಆಂಟಿಗೆ ಸಪೋರ್ಟ್ ಮಾಡಿದರು ಮಾಡದೇ ಇದ್ದರೂ ಸರಸುಗೆ ಮಾತ್ರ ಡಿಸ್ಟರ್ಬ್ ಮಾಡಲೇಕು ಎಂದು ಹೇಳುತ್ತಾರೆ. ಇತ್ತ ಅತ್ತೆ ಹೇಳುತ್ತಾರೆ ಏನು ಯೋಚನೆ ಮಾಡುತ್ತಿದ್ದೀರಾ ಇನ್ನೂ ಶುರು ಹಚ್ಚಿಕೊಳ್ಳಿ, ಪದ್ದು ನೀನು ಟೈಮ್ ನೋಡಿಕೋಳ್ಳುವ ಜವಾಬ್ದಾರಿ ಪದ್ದುಗೆ ಕೊಡುತ್ತಾರೆ ಅತ್ತೆ.

    ಉಪ್ಪಿನಕಾಯಿ ಮಾಡಲು ಪೈಪೋಟಿ

    ಉಪ್ಪಿನಕಾಯಿ ಮಾಡಲು ಪೈಪೋಟಿ

    ಇತ್ತ ಸರಸು ಹಾಗೂ ವಾಗ್ದೇವಿ ಮದ್ಯೆ ಪೈಪೋಟಿಯಿಂದ ಮಾವಿನ ಕಾಯಿ ಉಪ್ಪಿನಕಾಯಿ ಮಾಡಲು ಶುರು ಮಾಡುತ್ತಾರೆ. ಇಬ್ಬರಿಗೂ ಮನೆಯವರ ಸಪೋರ್ಟ್ ಸಿಗುತ್ತದೆ. ಇನ್ನೂ ವನಜಾ, ಸರಸುವನ್ನ ಹೇಗಾದರೂ ಮಾಡಿ ಸೋಲಿಸಲೆ ಬೇಕು ಎಂದು ಸರಸು ಬಳಿ ಬಂದು ಹೇಳುತ್ತಿರುತ್ತಾರೆ. ಇನ್ನೂ ಏನಾದರು ತೊಂದರೆ ಮಾಡುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.

    ಅಡುಗೆ ಮಾಡಲು ಹೇಳೆಂದ ಜ್ಞಾನಾಂಬಿಕೆ

    ಅಡುಗೆ ಮಾಡಲು ಹೇಳೆಂದ ಜ್ಞಾನಾಂಬಿಕೆ

    ಜ್ಞಾನಂಬಿಕೆ ಸರಸು ಬಳಿ ಬಂದು ನನಗೆ ಚಿನ್ನಮ್ಮನ ಕೈಯಿಂದ ಹೋಳಿಗೆ ತಿನ್ನಬೇಕು ಎಂದು ಆಸೆಯಾಗುತ್ತದೆ ಹೋಗಿ ಹೇಳು ಎಂದು ಹೇಳುತ್ತಾರೆ. ಅದಕ್ಕೆ ಸರಸು ಸರಿ ಎಂದು ಹೇಳುತ್ತಾಳೆ. ಬಳಿಕ ಅವಳನ್ನ ನಿಲ್ಲಲು ಹೇಳುತ್ತಾಳೆ ನಿಲ್ಲು ಅವಳು ಹೋಳಿಗೆ ಮಾಡುವಾಗ ಯಾರಿಗೂ ಅಡಿಗೆ ಮನೆಗೆ ಹೋಗಲು ಅವಕಾಶ ಇಲ್ಲ ಎಂದು ಎಚ್ಚರಿಸುತ್ತಾರೆ. ಅದಕ್ಕೆ ಸರಸು ಸರಿ ಅಮ್ಮ ಎಂದು ಹೇಳಿ ಹೋಗುತ್ತಾಳೆ.

    ಜ್ಞಾನಾಂಬಿಕೆಗೆ ಸುಳ್ಳು ಹೇಳುವ ಸರಸು

    ಜ್ಞಾನಾಂಬಿಕೆಗೆ ಸುಳ್ಳು ಹೇಳುವ ಸರಸು

    ಆಗ ಪದ್ದು ಹೇಳುತ್ತಾಳೆ ನಾನು ಅಡಿಗೆ ರೂಮ್ ಗೆ ಹೋಗುತ್ತೇನೆ ಅಜ್ಜಿ ಅತ್ತೆ ಹೆಂಗೆ ಅಡಿಗೆ ಮಾಡುತ್ತಾರೆ ನೋಡೋದಿಕ್ಕೆ ಎಂದು ಹೇಳುತ್ತಾಳೆ. ಆಗ ಸರಸು ಹೇಳುತ್ತಾಳೆ ನೀನ್ಯಾಕೆ ಪದ್ದು ನಿಮ್ಮ ಅಜ್ಜಿ ಜೊತೆ ಇಲ್ಲಿಯೇ ಇರು ಎಂದು ಆಗ ಜ್ಞಾನಂಬಿಕೆ ಹೇಳುತ್ತಾಳೆ ಎನು ಅಜ್ಜಿ ಜೊತೆ ನಾ ಇದ್ಯಾಕೆ ದೆವ್ವದ ಮನೇನಾ ಎಂದು ಕೇಳುತ್ತಾಳೆ. ಸರಸು ಹೇಳುತ್ತಾಳೆ ಅತ್ತೆ ಒಳಗೆ ಅಡುಗೆ ಮಾಡುತ್ತಿದ್ದರೆ ನವ್ಯಮ್ಮ ಬರೋದನ್ನು ಸಹಿಸಲ್ಲ ಎಂದಾಗ ಜ್ಞಾನಂಬಿಕೆ ಹೇಳುತ್ತಾಳೆ ಹಾ.. ಅಂದರೆ ನನ್ನ ಹಾಗೆ. ನನಗೂ ಕೂಡ ಅಷ್ಟೇ ನಾನು ಅಡಿಗೆ ಮಾಡಬೇಕಾದರೆ ಪಕ್ಕದಲ್ಲಿ ಯಾರೂ ಇರಬಾರದು. ಆ ಪದ್ದು ನೀನು ಕೂಡ ಹೋಗಬೇಡ ಇಲ್ಲಿಯೇ ಇರು ಎಂದು ಹೇಳುತ್ತಾರೆ. ಬಳಿಕ ಸರಸುವನ್ನು ನೀನು ಹೋಗಮ್ಮ ಎನ್ನುತ್ತಾರೆ. ಇನ್ನೂ ಸರಸು ಅಡುಗೆ ಮಾಡುವುದನ್ನು ಪ್ರೀತಿ ಹಾಗೂ ವನಜಾ ನೋಡುತ್ತಾರೆ. ಬಳಿಕ ಜ್ಞಾನಂಬಿಕೆ ಅವರ ರೂಮ್ ಬಳಿ ಮಾತನಾಡುತ್ತಾರೆ. ಜ್ಞಾನಂಬಿಕೆ ಅಜ್ಜಿಗೆ ಸರಸು ಎನು ಸುಳ್ಳು ಹೇಳುತ್ತಿರುತ್ತಾರೆ. ಆ ಆಯಾಮ್ಮನೆ ಅಡಿಗೆ ಮಾಡುತ್ತಿದ್ದಾಳೆ. ಎಂದು ಹೇಳಿ ಹೋಗುತ್ತಾರೆ. ಇದನ್ನು ಕೇಳಿಸಿಕೊಂಡ ಜ್ಞಾನಂಬಿಕಾ ಕೆಂಡದಂಥ ಕೋಪ ಬರುತ್ತದೆ. ಇನ್ನೂ ಜ್ಞಾನಂಬಿಕೆ ಅಡಿಗೆ ರೂಮ್ ಗೆ ನೋಡಿದಾಗ ಸರಸು ಅಡುಗೆ ಮಾಡುವುದನ್ನು ನೋಡಿ ಕೋಪದಲ್ಲಿ ಇರುತ್ತಾಳೆ. ಇನ್ನೇನು ಆಗುತ್ತದೆ ಎಂದು ಕಾದು ನೋಡಬೇಕಾಗಿದೆ

    English summary
    Kannada serial No.1 sose written updated on 16th July. Know more about the episode.
    Sunday, July 17, 2022, 21:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X