ಆತ್ಮಹತ್ಯೆಗೆ ಮುಂದಾದ ರಾಹುಲ್: ಏನು ಮಾಡುತ್ತಾಳೆ ಸರಸು

By ಪೂರ್ವ

ನಂಬರ್ ಒನ್ ಸೊಸೆ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ರಾಹುಲ್ ಒತ್ತಡಕ್ಕೆ ಸಿಲುಕಿದ ಕಾರಣ ಈಗ ಸರಸು ಸಹ ಒತ್ತಡಕ್ಕೆ ಸಿಲುಕಿದ್ದಾಳೆ. ಇದೀಗ ರಾಹುಲ್ ಕುತ್ತಿಗೆಗೆ ಚಾಕುವನ್ನು ಕುತ್ತಿಗೆಗೆ ಹಿಡಿಯುತ್ತಾನೆ ಇದನ್ನು ನೋಡಿದ ಸರಸು ಬೇಡ ರಾಹುಲ್ ಅವರೇ ಇದೇನಿದು ಹುಚ್ಚಾಟ ಚಾಕು ಕೆಳಗಿಳಿಸಿ ಎಂದಾಗ ರಾಹುಲ್ ನಿನ್ನ ಮಾತುಗಳಿಗಿಂತ ಇದೇನು ದೊಡ್ಡದಲ್ಲ. ನೀನೇ ನನ್ನ ಸರಸು ಅಂತ ನನಗೆ ಮಾತ್ರ ಅಲ್ಲ ಅದು ನಿನಗೂ ಗೊತ್ತು ಎನ್ನುತ್ತಾನೆ.

''ನೀನು ಹುಟ್ಟಿದ ದಿನ ಇವತ್ತು ಈ ಮನೆಯಲ್ಲಿ ಇರೋರಿಗೆ ಪ್ರಪಂಚದಲ್ಲಿ ಇರೋರಿಗೆ ಗೊತ್ತಾಗಬೇಕು ಅಂದುಕೊಂಡೆ ಆದರೆ ನೀನು ಅದನ್ನ ಒಪ್ಪಿಕೊಳ್ಳಲಾಗದೆ ಅದನ್ನು ನೀನು ನನ್ನ ಮೂರ್ಖನನ್ನಾಗಿ ಮಾಡಿದೆ. ಸುಳ್ಳಿನಿಂದ ತಪ್ಪಿಸಿಕೊಳ್ಳುತ್ತಿದ್ದಿಯಾ. ಅದಕ್ಕೆ ಸರಸು ರಾಹುಲ್ ಅವರೇ ನನ್ನ ಮಾತು ಕೇಳಿ ಬೇಡ ರಾಹುಲ್ ಅವರೇ ಎಂದಾಗ ರಾಹುಲ್ ನನ್ನ ಪ್ರೀತಿ ನಿನಗೆ ಲೆಕ್ಕಾ ಇಲ್ಲದ ಮೇಲೆ ನಾನು ಇದ್ದರೆ ಏಷ್ಟು..ಹೋದರೆ ಎಷ್ಟು ಎಂದು ಹೇಳುತ್ತಾನೆ.

ಸರಸು ಯಜಮಾನರೆ ಬೇಡ ಎಂದು ಜೋರಾಗಿ ಹೇಳುತ್ತಾಳೆ ಬಳಿಕ ಮನೆಯವರೆಲ್ಲರೂ ಬೇಡ ರಾಹುಲ್ ಎಂದು ಹೇಳಿದಾಗ ರಾಹುಲ್ ಹೇಳುತ್ತಾನೆ ಪ್ಲೀಸ್ ಯಾರು ಹತ್ತಿರ ಬರಬೇಡಿ ಹತ್ರ ಬಂದರೆ ಈಗಲೇ ಕತ್ತು ಕುಯ್ದುಕೊಳ್ಳುತ್ತೆನೆ ಎಂದು ಹೇಳುತ್ತಾರೆ ಅದಕ್ಕೆ ಎಲ್ಲರೂ ದೂರ ಸರಿಯುತ್ತಾರೆ.

ಬಳಿಕ ಮಾತು ಮುಂದುವರಿಸುತ್ತಾ, ''ನನಗೆ ಮಾತು ಬೇಕು. ನನಗೆ ನಿಜ ಬೇಕು, ಹನ್ನೆರಡು ಆಗೋಕೆ ಇನ್ನೂ ಒಂದು ನಿಮಿಷ ಮಾತ್ರ ಬಾಕಿ ಇದೆ. ನಿಜ ಹೇಳಿದರೆ ಬದುಕುತ್ತೇನೆ ಇಲ್ಲವಾದರೆ ನಂಬಿಕೆ ಜೊತೇನೆ ನನ್ನ ಪ್ರಾಣ ಬಿಟ್ಟು ಬಿಡುತ್ತೇನೆ. ಸರಸು ಹೇಳುತ್ತಾಳೆ ರಾಹುಲ್ ಅವರೇ ಹೀಗೆಲ್ಲಾ ಮಾತನಾಡಬೇಡಿ ಮಾವ ನೀವಾದರೂ ಹೇಳಿ ಮಾವ ಎಂದು ಕಣ್ಣೀರು ಸುರಿಸುತ್ತಾಳೆ.

Kannada serial No.1 sose written updated on 23th July

ತೇಜನ್ನ, ನವ್ಯಮ್ಮ ಎಂದು ಜೋರಾಗಿ ಕರೆಯುತ್ತಾಳೆ. ಆಗ ಸರಸು ಗೆ ವಾಗ್ದೇವಿ ಹಾಕಿರೋ ಕಂಡೀಷನ್ ನೆನಪಾಗುತ್ತದೆ. ಮೂರು ಮಡಿಕೆ ಗಳು ಒಡೆದು ಹೋದರೆ ಸರಸು ಮನೆಯಿಂದಲೇ ಆಚೆ ಹೋಗಬೇಕಾದ ದುಸ್ಥಿತಿ ಎದುರಾಗುತ್ತದೆ. ರಾಹುಲ್ ಕತ್ತು ಕೊಯ್ದು ಕೊಳ್ಳಬೇಕಾದರೆ ಮನೆಯವರೆಲ್ಲರೂ ಬೇಡ ಬೇಡ ಎಂದರು ಕೇಳಿಸಿಕೊಳ್ಳಲು ಇಲ್ಲ. ಬಳಿಕ ದೈರ್ಯ ಮಾಡಿ ನಾನೇ ನಿಮ್ಮ ಸರಸು ಎಂದು ಸರಸು ಹೇಳೆ ಬಿಟ್ಟಳು. ಇದನ್ನು ಕೇಳಿದ ಮನೆಯವರಿಗೆ ಖುಷಿಯಲ್ಲಿ ತಡೆಯಲಾಗುವುದಿಲ್ಲ. ಬಳಿಕ ರಾಹುಲ್ ಕೈಯಿಂದ ಚಾಕುವನ್ನು ಬಿಸಾಡುತ್ತಾಳೆ. ಇನ್ನೂ ಏನೆಲ್ಲಾ ಆಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial No.1 sose written updated on 23th July. know more about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X