ವಾಗ್ದೇವಿಗೆ ಅತ್ತೆ ಕಾಟ, ಪದ್ದುವಿನ ಹುಡುಕಾಟ ಸರಸುಗೆ ಪೀಕಲಾಟ!

By ಪೂರ್ವ

'ನಂಬರ್ ಒನ್ ಸೊಸೆ' ಧಾರಾವಾಹಿ ದಿನೇ ದಿನೇ ಖ್ಯಾತಿ ಪಡೆಯುತ್ತಿದೆ. ಮಧ್ಯಾಹ್ನದ 1 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗತ್ತಿರುವ ಧಾರಾವಾಹಿಯನ್ನು ಹೆಚ್ಚು ಹೆಚ್ಚು ಜನ ವೀಕ್ಷಿಸುತ್ತಿದ್ದಾರೆ. ಇದೀಗ ವಾಗ್ದೇವಿ ಮನೆಗೆ ವಾಗ್ದೇವಿಯ ಅತ್ತೆ ಆಗಮಿಸಿದ್ದಾರೆ. ಅತ್ತೆಯನ್ನು ಕಂಡು ವಾಗ್ದೇವಿಯು ಭಯ ಭೀತರಾಗಿದ್ದಾರೆ.

ಇನ್ನೂ ಬಂದ ಕೂಡಲೇ ಊಟಕ್ಕೆ ಬರುತ್ತಾರೆ ವಾಗ್ದೇವಿ ಅತ್ತೆ. ಅಲ್ಲಿದ್ದ ಊಟ ನೋಡಿದ ಅವರು ಚೀ ಚಿ ಇದೆಂತ ಊಟ ನನಗೆ ಬೇಡ ಈ ಊಟ. ವಾಗ್ದೇವಿ ನನಗೆ ನಿನ್ನ ಕೈ ಇಂದ ಮಾಡಿದ ಅಡಿಗೆ ತಿನ್ನಬೇಕೆಂದು ಬಂದಿರುವುದು ಇದೆಲ್ಲ ಏನು ನಿನ್ನ ಅಡಿಗೆ ಎಂದೆಲ್ಲ ಬಯ್ಯುತ್ತಾಳೆ ಅತ್ತೆ. ಏನು ಮಾಡುತ್ತೀಯಾ ಅಥವಾ ನಾನೇ ಮಾಡಲಾ ಎಂದು ಹೇಳುತ್ತಾಳೆ ಅದಕ್ಕೆ ವಾಗ್ದೇವಿ ಮಾಡುತ್ತೇನೆ ಅತ್ತೆ ಎಂದು ಹೇಳುತ್ತಾಳೆ.

ಬಳಿಕ ಸರಸು ಎಲ್ಲಾ ಅಡುಗೆ ಮಾಡಿ ವಾಗ್ದೇವಿಯೆ ಅಡಿಗೆ ಮಾಡಿರುವುದು ಎಂದು ಬಿಂಬಿಸಿ ಅತ್ತೆಗೆ ಖುಷಿಪಡುತ್ತಾರೆ. ಸರಸು ವಾಗ್ದೇವಿ ಮನಸನ್ನು ಸಂತಸ ಗೊಳಿಸಿದ್ದಾರೆ. ಇತ್ತ ವಾಗ್ದೇವಿ ತನ್ನ ಅತ್ತೆಯ ಬಳಿಯಲ್ಲಿ ಅತ್ತೆ ನಾನು ಮೀಟಿಂಗ್ ಸಲುವಾಗಿ ಸಿಂಗಾಪುರಕ್ಕೆ ಹೋಗಬೇಕಾಗಿದೆ. ಎನ್ನುತ್ತಾಳೆ ಆಗ ಅತ್ತೆ, ನಾನು ಇರುವರೆಗು ನೀನು ಎಲ್ಲಿಗೂ ಹೋಗಬಾರದು ಎಂದು ಹೇಳುತ್ತಾರೆ.

ಇದನ್ನು ಕೇಳಿದ ವಾಗ್ದೇವಿ ಅತ್ತೆ ನೀನು ಏಷ್ಟು ದಿನಗಳ ಕಾಲ ಇರ್ತಿಯಾ ಅಂದಾಗ ಅತ್ತೆ ಹೇಳುತ್ತಾರೆ. ಏನೇ ನಾನು ಇವಾಗ್ಲೆ ಹೋಗಬೇಕಾ ಎಂದಾಗ ನಾನೆಲ್ಲಿ ಹಾಗೆ ಹೇಳಿದೆ ಅತ್ತೆ ಎನ್ನುತ್ತಾಳೆ ವಾಗ್ದೇವಿ. ಅದಕ್ಕೆ ವಾಗ್ದೇವಿ ಗಂಡ, ''ಛೇ ಛೇ ನಿಮ್ಮ ಚಿನ್ನಮ್ಮ ಹಾಗೆಲ್ಲ ಹೇಳೋದಿಲ್ಲ. ನೀವು ಒಂದು ವರುಷ ಇಲ್ಲಿ ಇದ್ರು ಎನು ಅನ್ನಲ್ಲ'' ಅಂದಾಗ ವಾಗ್ದೇವಿಯ ಮನದಲ್ಲಿ ಕೋಪ ಉಕ್ಕುತ್ತದೆ. ಎಲ್ಲರ ಊಟ ಮುಗಿದ ಬಳಿಕ ಸರಸು ಬಳಿಗೆ ಬಂದ ವಾಗ್ದೇವಿ ನನ್ನ ಅತ್ತೆ ಮುಂದೆ ನನ್ನನ್ನು ತಲೆ ತಗ್ಗಿಸಿದೆ ಇರುವ ಹಾಗೆ ಮಾಡಿದ್ದಕ್ಕೆ ನಿನ್ನ ಅಡಿಗೆಯಿಂದ ಅವರನ್ನು ಇಂಪ್ರೆಸ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಸರಸುಗೆ ಹೇಳುತ್ತಾರೆ.

ಪದ್ದುವಿನ ಹುಡುಕಾಟ

ಪದ್ದುವಿನ ಹುಡುಕಾಟ

ರಾಹುಲ್ ಬಂದು ಏ ಪದ್ದು ಎಂದು ಕರೆದಾಗ ಎನು ಬಾವ ಯಾವಾಗ ನೋಡಿದ್ರೂ ಗೋಳು ಹೊಯ್ದು ಕೊಳ್ಳುತ್ತಿಯಾ ಅಲ್ವಾ ನನಗೆ ಮಾವಿನ ಕಾಯಿ ಅಂದ್ರೆ ತುಂಬಾ ಇಷ್ಟ ಕಿತ್ತು ಕೊಡಬಹೂದಲ್ವಾ ನನ್ನ ಕೈಗೆ ಸಿಕ್ತಾನೆ ಇಲ್ಲ. ಎಂದಾಗ ರಾಹುಲ್ ಹೇಳುತ್ತಾನೆ ಸರಿ ಪದ್ದು ನಾನು ಟ್ರೈ ಮಾಡುತ್ತೇನೆ ಎಂದು ಮಾವಿನ ಕಾಯಿಗೆ ಕಲ್ಲು ಎಸೆಯುತ್ತಾನೆ. ಇದನ್ನು ನೋಡಿದ ಸರಸು ಗೆ ಕೋಪ ಬರುತ್ತದೆ. ಜಗತ್ತಲ್ಲಿ ಇವಳಿಗೆ ಬೇರೆ ಹುಡುಗರೇ ಇಲ್ಲ ಅನ್ನೋ ಹಾಗೆ ನನ್ನ ಗಂಡನ ಮೇಲೆ ಬಿದ್ದಿದೆ ಅಲ್ವಾ ಇವಳ ಕಣ್ಣು ಮನದಲ್ಲಿಯೇ ಎಂದುಕೊಳ್ಳುತ್ತಾರೆ. ಇನ್ನೂ ರಾಹುಲ್ ಪದ್ದು ಮುಖ ನೋಡಿ ಹೇಳುತ್ತಾನೆ ಸಾರಿ ಪದ್ದು ನನ್ನ ಕೈಗು ಸಿಗುತ್ತಿಲ್ಲ ಅದು ಹಾಗಾಂದಾಗ ಪದ್ದು ಹೇಳುತ್ತಾಳೆ ಆದರೆ ಏನಂತೆ ನನ್ನ ಎತ್ತಿಕೊ ನಾನು ಕಿತ್ತುಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಎತ್ತಿಕೊಳ್ಳಲು ಹಿಂದೇಟು ಹಾಕುವ ರಾಹುಲ್

ಎತ್ತಿಕೊಳ್ಳಲು ಹಿಂದೇಟು ಹಾಕುವ ರಾಹುಲ್

ಅದಕ್ಕೆ ರಾಹುಲ್ ವಾಟ್, ನಾನು ನಿನ್ನನ್ನು ಎತ್ತಿಕೊಳ್ಳಬೇಕಾ ಎಂದಾಗ ಪದ್ದು ಹಾ ಎನ್ನುತ್ತಾಳೆ. ಇದನ್ನು ನೋಡಿದ ಸರಸುಗೆ ಕೋಪ ಬರುತ್ತದೆ. ನಾನು ಎತ್ತಿಕೊಳ್ಳಲು ಆಗುವುದಿಲ್ಲ ಬೇಕಿದ್ರೆ ಮಾರ್ಕೆಟ್ ಗೆ ಹೋಗಿ ತಂದು ಕೊಡುತ್ತೇನೆ ಎನ್ನುತ್ತಾನೆ ಅದಕ್ಕೆ ಪದ್ದು ಪ್ಲೀಸ್ ಬಾವ ಒಂದೇ ಒಂದು ಕಾಯಿ ಕಿತ್ತುಕೊಂಡು ಹೋಗಿ ಬಿಡುತ್ತೇನೆ ಪ್ಲೀಸ್ ಬಾವ ಎಂದಾಗ ರಾಹುಲ್ ಹೇಳುತ್ತಾನೆ ಸರಿ ನೀನು ಬಿಡಲ್ಲ ಬಿಡು. ಎಂದು ಪದ್ದುವನ್ನು ಎತ್ತಿಕೊಳ್ಳುವ ವೇಳೆ ರಾಹುಲ್ ಅವರೇ ಎಂದು ಸರಸು ಜೋರಾಗಿ ಕರೆಯುತ್ತಾರೆ.

ರಾಹುಲ್ ಅನ್ನು ತಡೆದ ಸರಸು

ರಾಹುಲ್ ಅನ್ನು ತಡೆದ ಸರಸು

ಇದನ್ನು ಕೇಳಿಸಿಕೊಂಡ ರಾಹುಲ್ ಸರಸು ಮುಖ ನೋಡುತ್ತಾನೆ. ಆಗ ಸರಸು ಸುಮ್ಮನೆ ಮುಖದಲ್ಲಿ ನಗು ತರಿಸಿಕೊಳ್ಳುತ್ತಾಳೆ. ಆಗ ರಾಹುಲ್ ಎನು ಭಾಷಿಣಿ ಎಂದಾಗ ಪದ್ದು ಹೇಳುತ್ತಾಳೆ ಎನು ಇಲ್ಲಿಗೆ ಬಂದಿದ್ದು ಎಂದು ಕೇಳಿದಾಗ ಹೇಳುತ್ತಾಳೆ. ಏನಿಲ್ಲ ನೀವಿಬ್ಬರೂ ಎನು ಮಾಡುತ್ತಿದ್ದೀರಿ ಅಂತ ನೋಡಿಕೊಂಡು ಹೋಗೋಣ ಅಂತ ಬಂದೆ ಎಂದು ಹೇಳುತ್ತಾಳೆ ಭಾಷಿಣಿ. ಅದಕ್ಕೆ ಪದ್ದು ಹೇಳುತ್ತಾಳೆ ಮಾವಿನ ಕಾಯಿ ಕಿತ್ತುಕೊಳ್ಳಲು ಮಾವ ಸಹಾಯ ಮಾಡುತ್ತಿದ್ದಾನೆ ಎಂದು ಹೇಳಿದಾಗ ಸರಸು ಹೇಳುತ್ತಾಳೆ ಇರು ಪದ್ಮಾವತಿ ನಾನು ಪ್ರಯತ್ನ ಮಾಡುತ್ತೀನಿ ಎಂದು ಮಾವಿನ ಕಾಯಿ ಕೊಯ್ಯಲು ಪ್ರಯತ್ನ ಮಾಡುತ್ತಾರೆ.

ಪದ್ದುವನ್ನು ಎತ್ತಿಕೊಳ್ಳುವ ಸರಸು

ಪದ್ದುವನ್ನು ಎತ್ತಿಕೊಳ್ಳುವ ಸರಸು

ಆದರೆ ಸರಸು ಕೈಯಲ್ಲಿ ಆಗಲೇ ಇಲ್ಲ. ಇದನ್ನು ನೋಡಿದ ಪದ್ದು ಹೇಳುತ್ತಾಳೆ ಅದಕ್ಕೆ ರಾಹುಲ್ ಮಾವನ ಎತ್ತಿಕೊಳ್ಳಕೆ ಹೇಳಿದ್ದು ಅಂತ ಹೇಳುತ್ತಾಳೆ. ಅದಕ್ಕೆ ಸರಸು ಹೇಳುತ್ತಾಳೆ ನಾನೇ ಎತ್ತಿಕೊಳ್ಳುತ್ತೇನೆ ಎಂದು. ಆಗ ರಾಹುಲ್ ಆಶ್ಚರ್ಯ ದಿಂದ ನೀನಾ ಎಂದು ಕೇಳಿದಾಗ ಸರಸು ಕೋಪದಿಂದ ಮತ್ಯಾರು ನೀವಾ ಎಂದು ಹೇಳುತ್ತಾಳೆ. ಇದನ್ನು ಕಂಡ ರಾಹುಲ್ ಗೆ ಅರ್ಥವಾಗುತ್ತದೆ. ಸರಿ ನೀವು ಈ ಕಡೆ ಬನ್ನಿ. ಎಂದು ರಾಹುಲ್ ಅನ್ನು ಆ ಕಡೆ ಸರಿಸಿ ಪದ್ದುವನ್ನೂ ಎತ್ತಿಕೊಳ್ಳುತ್ತಾಳೆ ಇದನ್ನು ನೋಡಿದ ರಾಹುಲ್ ಗೆ ನಗು ಬರುತ್ತದೆ. ಆದರೆ ಇದನ್ನು ನೋಡಿದ ರಾಹುಲ್ ಗೆ ಕೋಪ ಸಹ ಬರುತ್ತದೆ. ಕೊನೆಗೂ ಪದ್ಮಿನಿ ಮಾವಿನ ಕಾಯಿಯನ್ನು ಕೊಯ್ಯುತ್ತಾಳೆ. ಸರಿ ಪದ್ಮಿನಿ ಹಾಗಾದ್ರೆ ಇನ್ನೂ ನಡಿ ಎಂದು ಹೇಳಿ ಸರಸು ಅಲ್ಲಿಂದ ಪದ್ಮಿನಿಯನ್ನು ಕರೆದುಕೊಂಡು ಹೋಗುತ್ತಾಳೆ. ಇದನ್ನು ನೋಡಿದ ರಾಹುಲ್ ಗೆ ದಿನ ಕಳೆದ ಹಾಗೆ ಇವಳೇ ನನ್ನ ಸರಸು ಎನ್ನುವ ನಂಬಿಕೆ ಹೆಚ್ಚಾಗುತ್ತಿದೆ. ಆ ನಿಜಾನಾ ನಿನಾಗೆ ನೀನು ಒಪ್ಪಿಕೊಳ್ಳುವ ವರೆಗೂ ಕಾಯುತ್ತೇನೆ ಎಂದು ಮನದಲ್ಲಿಯೇ ರಾಹುಲ್ ಹೇಳಿಕೊಳ್ಳುತ್ತಾನೆ.

English summary
Kannada serial Number one sose written updated on 2st July.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X