For Quick Alerts
  ALLOW NOTIFICATIONS  
  For Daily Alerts

  ಸಾವಿರ ಸಂಚಿಕೆ ಪೂರೈಸಿದ 'ಪಾರು': ಧಾರಾವಾಹಿಯ ಮುಂದಿನ ಟ್ವಿಸ್ಟ್‌ ಏನು..?

  By ಪ್ರಿಯಾ ದೊರೆ
  |

  ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಸದಾ ಹೊಸತನ್ನು ನೀಡುತ್ತಿರುತ್ತಾರೆ. ಹೊಸ ಬಗೆಯ ರಿಯಾಲಿಟಿ ಶೋಗಳು, ಹೊಸ ಕಥೆ ಹಾಗೂ ಹೊಸ ಮುಖಗಳಿರುವ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುತ್ತದೆ. ಹೀಗೆ ಹೊಸ ನಾಯಕಿಯೊಂದಿಗೆ ಬಂದದ್ದೇ 'ಪಾರು' ಧಾರಾವಾಹಿ.

  ವಿನಯಾ ಪ್ರಸಾದ್, ಎಸ್. ನಾರಾಯಣ್‌ರಂತಹ ದೊಡ್ಡ ಕಲಾವಿದರು ಇರುವ ಧಾರಾವಾಹಿ 'ಪಾರು'. ಆರಂಭದಿಂದಲೂ 'ಪಾರು' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಪಾರು ಅಭಿನಯ ಹಾಗೂ ಆಕೆಯ ಕಷ್ಟಗಳನ್ನು ಕಂಡು ಕಥೆಯಲ್ಲಿ ವೀಕ್ಷಕರು ಬೆರತು ಹೋಗಿದ್ದಾರೆ.

  ಬೆಟ್ಟದ ಹೂ: ಹೂವಿಯನ್ನು ಕೊಲ್ಲಲು ಹೋಗಿದ್ದ ಮಾಲಿನಿ ಪ್ರಾಣ ಕಾಪಾಡಿದ್ದು ಯಾರು?

  ಪಾರು, ವಿನಯಾ ಪ್ರಸಾದ್, ಸಿತಾರಾ, ಎಸ್. ನಾರಾಯಣ್, ಮೋಕ್ಷಿತಾ ಪೈ ಶರತ್, ಪವಿತ್ರಾ ಬಿ ನಾಯಕ್‌, ಸಿದ್ದು ಮೂಲಿಮನಿ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಧಾರಾವಾಹಿ ಮೂಡಿ ಬರುತ್ತಿದೆ. ಅಂತೂ ಇಂತೂ 'ಪಾರು' ಧಾರಾವಾಹಿ ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ.

   ಮಗಳಂತಿದ್ದ ಪಾರು ಈಗ ಸೊಸೆಯಾಗಿದ್ದಾಳೆ

  ಮಗಳಂತಿದ್ದ ಪಾರು ಈಗ ಸೊಸೆಯಾಗಿದ್ದಾಳೆ

  ಅಡುಗೆ ಕೆಲಸ ಮಾಡಿಕೊಂಡು ಮನೆ ಮಂದಿಯನ್ನೆಲ್ಲಾ ಮೆಚ್ಚಿಕೊಳ್ಳುವಂತೆ 'ಪಾರು' ನಡೆದುಕೊಳ್ಳುತ್ತಿದ್ದಳು. ಸದಾ ಇತರರ ಒಳಿತನ್ನೇ ಆಕೆ ಬಯಸುತ್ತಿದ್ದಳು. ತನಗೆ ಯಾರು ಏನೇ ಅನ್ಯಾಯ ಮಾಡಿದರೂ ಲೆಕ್ಕಿಸದೆ ಅರಸನಕೋಟೆಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದಳು. ಪಾರು ನಡೆ-ನುಡಿ ಮೆಚ್ಚಿಕೊಂಡಿದ್ದ ಅಖಿಲಾಂಡೇಶ್ವರಿ, ಆಕೆಯನ್ನು ತನ್ನ ಮಗಳಂತೆ ನೋಡುತ್ತಿದ್ದಳು. ಆದರೆ ಪಾರು ಹಾಗೂ ಆದಿತ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಾರ ಅಖಿಲಾಂಡೇಶ್ವರಿಗೆ ತಿಳಿದಾಗ ಮತ್ತೆ ಪಾರು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಯ್ತು.

   ದೇವಿಯಂತೆ ಕಂಗೊಳಿಸುವ ವಿನಯಾ ಪ್ರಸಾದ್‌

  ದೇವಿಯಂತೆ ಕಂಗೊಳಿಸುವ ವಿನಯಾ ಪ್ರಸಾದ್‌

  ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರವನ್ನು ನಟಿ ವಿನಯಾ ಪ್ರಸಾದ್‌ ಅವರು ನಿರ್ವಹಿಸುತ್ತಿದ್ದಾರೆ. ದೊಡ್ಡ ಮನೆತನದ ಸೊಸೆಯಾಗಿರುವ ಅಖಿಲಾಂಡೇಶ್ವರಿ ಸದಾ ಅಲಂಕಾರಗೊಂಡಿರುತ್ತಾರೆ. ಅಖಿಲಾಂಡೇಶ್ವರಿ ಉಡುವ ಸೀರೆ, ಧರಿಸುವ ಒಡವೆಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ಅಖಿಲಾಂಡೇಶ್ವರಿಯ ಮಾತು, ನಡೆ ಎಲ್ಲವೂ ಅಸಂಖ್ಯಾತ ಮಹಿಳಾ ವೀಕ್ಷಕರನ್ನು ಆಕರ್ಷಿಸಿದೆ.

   ವಿಭಿನ್ನವಾಗಿ ಮೂಡಿಬರುತ್ತಿರುವ ಧಾರಾವಾಹಿ

  ವಿಭಿನ್ನವಾಗಿ ಮೂಡಿಬರುತ್ತಿರುವ ಧಾರಾವಾಹಿ

  'ಪಾರು' ಧಾರಾವಾಹಿ ಇತರೆ ಧಾರಾವಾಹಿಗಳಿಗಿಂತಲೂ ಕೊಂಚ ವಿಭಿನ್ನವಾಗಿದೆ. ಈಗಾಗಲೇ ಸೂಪರ್ ಹಿಟ್ ಆಗಿದ್ದು, ಮೊದಲಿನಿಂದಲೂ ಈ ಸೀರಿಯಲ್‌ ತನ್ನ ಅದ್ಧೂರಿತನವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ. ಅಖಿಲಾಂಡೇಶ್ವರಿಯ ಭವ್ಯ ಬಂಗಲೆ, ಯಾವುದೇ ಹಬ್ಬ, ಮದುವೆಗಳಾದರೆ ಅದಕ್ಕೆ ಅದ್ಧೂರಿ ಸೆಟ್ ಮತ್ತು ಧಾರಾವಾಹಿಗೆ ಬೇಕಾದ ಸಿರಿವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ. ಈ ಧಾರಾವಾಹಿಯ ಸಿರಿವಂತಿಕೆಯನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.

   ಮುಂದಿನ ಕಥೆ ಹೇಗಿರಬಹುದು..?

  ಮುಂದಿನ ಕಥೆ ಹೇಗಿರಬಹುದು..?

  ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ 'ಪಾರು' ಧಾರಾವಾಹಿ ನಿರ್ಮಾಣವಾಗುತ್ತಿದೆ. ಸೋಮವಾರದಿಂದ- ಶುಕ್ರವಾರದವರೆಗೂ ಪ್ರತಿದಿನ ಪ್ರಸಾರವಾಗುತ್ತದೆ. ಇದರ ಸಮಯವನ್ನು ಬದಲಾಯಿಸಿದಾಗಲೂ ಜನ ಧಾರಾವಾಹಿಯನ್ನು ನೋಡುವುದನ್ನು ನಿಲ್ಲಿಸಿರಲಿಲ್ಲ. ಇದೀಗ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದೆ. ಪ್ರೀತಿ, ಸ್ನೇಹ , ಕಾಳಜಿ, ಒಳ್ಳೆಯತನ ಗುಣಗಳಿಂದ ಕೂಡಿರುವ ಈ ಧಾರಾವಾಹಿಯನ್ನು ವೀಕ್ಷಕರು ಇಷ್ಟಪಟ್ಟು ನೋಡುತ್ತಾರೆ. ಇಷ್ಟು ದಿನ ಪಾರು, ಆದಿತ್ಯನ ಪ್ರೀತಿ, ಅಖಿಲಾಂಡೇಶ್ವರಿ ಪಾರುಳನ್ನು ಸೊಸೆಯಾಗಿ ಒಪ್ಪಿಕೊಂಡ ಬಗ್ಗೆ ಕಥೆ ಸಾಗುತ್ತಿತ್ತು. ಆದರೆ ಇನ್ಮುಂದೆ ಕಥೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದೇ ಕುತೂಹಲಕಾರಿ ವಿಚಾರ. ಧಾರಾವಾಹಿಯಲ್ಲಿ ಹೊಸ ಕಥೆ ಹೆಣೆಯುವ ಸಲುವಾಗಿ ಮತ್ತೊಂದು ಪಾತ್ರ ಎಂಟ್ರಿಯಾಗುತ್ತಾ.? ಇಲ್ಲ ಬೇರೆ ಯಾವ ರೀತಿಯಲ್ಲಿ ಈ ಧಾರಾವಾಹಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

  English summary
  paru serial has been completed thousand episodes. Next serial twist builded curiosity.
  Monday, October 3, 2022, 18:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X