ಜಗಳ ಮರೆತ ಅಕ್ಕ-ತಂಗಿ: ಯಾಮಿನಿ ಬಗ್ಗೆ ನಿಜ ತಿಳಿದರೆ ಅಖಿಲಾಂಡೆಶ್ವರಿ ಏನು ಮಾಡುತ್ತಾಳೆ?
'ಪಾರು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತದೆ. ಜನನಿ ಬದಲಾಗಿರೋದನ್ನು ನೋಡಿ ಮನೆಯವರಿಗೆ ಆಶ್ಚರ್ಯ ಆಗಿದೆ. ಇನ್ನು ಪಾರು ಏಳುವ ಮುಂಚೆಯೇ ಜನನಿ ಎಲ್ಲಾ ಕೆಲಸ ಮಾಡಿ ಮುಗಿಸುತ್ತಾರೆ. ನಿದ್ದೆಯಿಂದ ಎದ್ದ ಪಾರು ಮನೆಯ ಕೆಲಸ ಮಾಡಲು ಹೋದರೆ ಎಲ್ಲಾ ಕೆಲಸ ಮಾಡಿ ಮುಗಿಸಿರಲಾಗುತ್ತದೆ. ಇದನ್ನು ಕಂಡ ಪಾರುಗೆ ಆಶ್ಚರ್ಯ ಆಗುತ್ತದೆ. ಯಾರು ಮಾಡಿರಬಹುದು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.
ಅಖಿಲಮ್ಮ ಕೆಲಸ ಮಾಡಿರಬಹುದು ಎಂದು ಅಂದುಕೊಳ್ಳುತ್ತಾಳೆ. ಬಳಿಕ ಪಾರು ಅಖಿಲಾಂಡೆಶ್ವರಿ ಬಳಿ ಬರುತ್ತಾಳೆ. ಮಾವ ಪಾರುನ ಗಾಬರಿತನವನ್ನು ನೋಡುತ್ತಾರೆ. ಏನಮ್ಮಾ ಪಾರು ಇಷ್ಟು ಗಾಬರಿಯಿಂದ ಬರುತ್ತಿದ್ದಿಯಾ ಎಂದು ಕೇಳುತ್ತಾರೆ. ಪಾರು ಹೇಳುತ್ತಾಳೆ ಏನು ಇಲ್ಲ ಮಾವ ಎಂದಾಗ ಜನನಿ ಕಾಫಿ ಹಿಡಿದು ಬರುತ್ತಾಳೆ.
ಇದನ್ನು ಗಮನಿಸಿದ ಪಾರುಗೆ ಶಾಕ್ ಆಗುತ್ತದೆ. ಎಲ್ಲರಿಗೂ ಕಾಫಿಯನ್ನು ನೀಡುತ್ತಾಳೆ. ಪಾರ್ವತಿಗೂ ಕಾಫಿ ಕೊಡುತ್ತಾಳೆ. ಜನನಿ ಮಾಡಿದ ಕಾಫಿಯನ್ನು ಸವಿದ ಅಖಿಲಾಂಡೆಶ್ವರಿಗೆ ಬಹಳ ಇಷ್ಟವಾಗತ್ತದೆ. ಆಗ ಪಾರು ಹೇಳುತ್ತಾಳೆ ಅಲ್ಲಾ ಜನನಿ ಅವರೇ ಇದನ್ನು ನೀವು ಯಾಕೆ ಮಾಡಕ್ಕೆ ಹೋದ್ರಿ ಎಂದಾಗ ಜನನಿ ಮತ್ಯಾವಾಗ ನಾನು ಮಾಡೋದು ಎನ್ನುತ್ತಾಳೆ.

ಕಾಫಿ ತಿಂಡಿ ಮಾಡೋದು ನನ್ನ ಕೆಲಸ: ಪಾರು
ಕಾಫಿ ಟೀ ತಿಂಡಿ ಮಾಡೋದು ನನ್ನ ಕೆಲಸ ಎಂದು ಹೇಳುತ್ತಾಳೆ. ಆಗ ಜನನಿ ಹೇಳುತ್ತಾಳೆ ಅದನ್ನೆಲ್ಲಾ ಮಾಡೊಕೆ ನೀವು ಕೆಲಸದವರ ನೀವು ನನ್ನ ಹಾಗೆ ಮನೆ ಸೊಸೆ ಎಂದು ಹೇಳುತ್ತಾಳೆ. ಆಗ ದಾಮಿನಿ ಯೋಚನೆ ಮಾಡುತ್ತಾಳೆ ಛೇ ಏನೋ ಒಂದು ಸ್ಕೆಚ್ ಹಾಕಿದ್ದೆ ಎಲ್ಲಾ ವೆಸ್ಟ್ ಆಗೋಯ್ತು ಎನ್ನುತ್ತಾಳೆ. ಆಗ ಜನನಿ ನೀವು ಈ ಮನೆಯ ಹಿರಿಯ ಸೊಸೆ. ನನಗಿಂತ ಹೆಚ್ಚು ಸ್ಥಾನ ಮಾನ ನಿಮಗೆ ಸಿಗಬೇಕು ಎಂದು ಹೇಳುತ್ತಾಳೆ.

ಕಾಫಿ ತಿಂಡಿ ಮಾಡುವುದಕ್ಕೆ ಅಡ್ಡಿಯಿಲ್ಲ: ಜನನಿ
ಅದಕ್ಕೆ ಪಾರು, ಅಡಿಗೆ ಮಾಡೋದು ಎಲ್ಲ ನನಗೆ ಇಷ್ಟ, ಅದರಿಂದ ನನ್ನ ಸ್ಥಾನಕ್ಕೆ ಧಕ್ಕೆ ಬರಲ್ಲ ಅಂದಾಗ ಜನನಿ ನನಗೂ ಅಷ್ಟೇ ಮನೆಯಲ್ಲಿ ಪೂಜೆ ಮಾಡಿ ಕಾಫಿ ತಿಂಡಿ ತಂದೂಕೊಡುದಕ್ಕೆ ಏನು ನಷ್ಟ ಇಲ್ಲ ಬಹಳ ಖುಷಿ ಆಗುತ್ತೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ಆದಿ, ಪ್ರೀತೂಗೆ ಬಹಳ ಖುಷಿ ಆಗುತ್ತದೆ. ಇತ್ತೀಚೆಗೆ ನಿಮಗೆ ಪೈಪೋಟಿ ಕೊಡಲು ಹೋಗಿ ಸೋತಿದ್ದೆ ಇದೀಗ ಮನಸಾರೆ ನಿಮ್ಮ ಜೊತೆ ಬಾಗಿಯಾಗೋಣಾ ಎಂದುಕೊಂಡಿದ್ದೇನೆ. ಎಂದು ಹೇಳುತ್ತಾಳೆ.

ಅಣ್ಣ-ತಮ್ಮ ಸರಿ ಇದ್ದರೆ ಅಕ್ಕ-ತಂಗಿ ಸರಿ ಇರಬೇಕು
ಬಳಿಕ ಹೇಳುತ್ತಾಳೆ ಪಾರು ಅವರೇ ಕಾಫಿ ಕುಡಿಯಿರಿ. ಎಂದಾಗ ಸಂತೋಷದಿಂದ ಕಾಫಿ ಕುಡಿಯುತ್ತಾಳೆ. ಇತ್ತ ಆದಿ ಹೇಳುತ್ತಾನೆ ಅಕ್ಕ-ತಂಗಿ ಸರಿಹೋಗಿಬಿಟ್ಟಿದ್ದಾರೆ. ಅಣ್ಣಾ ತಮ್ಮ ಸರಿ ಇದ್ದ ಮೇಲೆ ಅಕ್ಕ ತಂಗಿನು ಸರಿ ಆಗಲೇ ಬೇಕು ಎಂದು ಖುಷಿಯಲ್ಲಿ ಹೇಳುತ್ತಾನೆ.

ಪಾರು ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಜನನಿ
ಕೆಲವು ದಿನಗಳಿಂದ ಪಾರು ಹಾಗೂ ಜನನಿ ನಡುವೆ ಶೀಥಲ ಸಮರ ಏರ್ಪಟ್ಟಿತ್ತು. ಪಾರು ವಿರುದ್ಧ ಜನನಿಯನ್ನು ಯಾಮಿನಿ ಎತ್ತಿ ಕಟ್ಟಿದ್ದಳು. ಇದರಿಂದ ಜನನಿ ಪ್ರತಿಯೊಂದನ್ನು ಪಾರುಗೆ ವಿರುದ್ಧವಾಗಿಯೇ ಮಾಡುತ್ತಿದ್ದಳು. ಅದೆ ಸಮಯಕ್ಕೆ ಅಖಿಲಾಂಡೇಶ್ವರಿ ಸಹ ಪಾರುಗೆ ನೀಡಿದ್ದ ಜವಾಬ್ದಾರಿಯಿಂದ ಕೆಳಗೆ ಇಳಿಸಿ, ಜನನಿಯನ್ನು ವಹಿಸಿಕೊಂಡಿದ್ದರು. ಆದರೆ ಈಗ ಜನನಿಯ ವರ್ತನೆಯಲ್ಲಿ ಬದಲಾವಣೆ ಆಗಿದೆ.


Click it and Unblock the Notifications











