Paaru: ಪಾರು ಮಗುವಿನ ಚಿತ್ರ ಕಣ್ತುಂಬಿಕೊಳ್ಳಬೇಕೆಂಬ ಅಖಿಲ ಆಸೆ ರಘುಗೆ ಅರ್ಥವಾಗುತ್ತಾ?
ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪಾರುವನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆದಿ ಮನಸ್ಸು ಮಾಡಿದ್ದಾನೆ. ತಂದೆಯ ಅಪ್ಪಣೆಯ ಹಾಗೆ ಫ್ಯಾಮಿಲಿ ಡಾಕ್ಟರ್ ಬಳಿ ಹೋಗಲು ಇಬ್ಬರು ರೆಡಿ ಆಗುತ್ತಾರೆ.
ಇನ್ನು ಕೈಯಲ್ಲಿ ಒಂದು ಬಿಡಿಗಾಸು ಇಲ್ಲದ ಆದಿಗೆ ಶರ್ಟ್ ನಲ್ಲಿ ಹಣ ಇರುವುದನ್ನು ಕಂಡು ಕೊಂಚ ಗಲಿ ಬಿಲಿ ಆಗುತ್ತದೆ. ಬಳಿಕ ಆದಿಗೆ ಹನುಮಂತು ಹಣ ಇಟ್ಟಿರುವ ಸತ್ಯ ತಿಳಿಯುತ್ತದೆ. ಹನುಮಂತು ತನ್ನ ಮೊಮ್ಮಕ್ಕಳಿಗಾಗಿ ಏನು ಮಾಡಲು ಹೊರಟಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಇನ್ನು ಪಾರುವನ್ನು ಆಟೋದಲ್ಲಿ ಕೂರಿಸಿಕೊಂಡು ಆದಿ ಹೊರಡುತ್ತಾನೆ. ರಘು ಇಬ್ಬರಿಗಾಗಿ ಕಾಯುತ್ತಾ ನಿಂತಿರುವ ವೇಳೆ ಪ್ರೀತಮ್ ಕೂಡ ಬರುತ್ತಾನೆ.
ಆದಿ ಬಂದ ಬಳಿಕ ತಂದೆ ಹಾಗೂ ಅಣ್ಣ ಇಬ್ಬರ ಆಶಿರ್ವಾದ ತೆಗೆದುಕೊಳ್ಳುತ್ತಾನೆ. ಇನ್ನು ಪಾರುವನ್ನು ನಾನು ಆಸ್ಪತ್ರೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದಾಗ ಆದಿಗೆ ತಮ್ಮನ ಕಾಳಜಿ ಅರ್ಥ ಆಗುತ್ತದೆ. ಆಗ ಆದಿ ಬೇಡ ನಾನೇ ಕರೆದುಕೊಂಡು ಹೋಗುತ್ತೇನೆ. ನೀನು ಆಫೀಸಿಗೆ ಹೋಗಿ ಬಾ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪ್ರೀತಮ್ ಅಲ್ಲಿಂದ ಹೊರಟು ಹೋಗುತ್ತಾನೆ. ಇನ್ನು ಆದಿ ಕೂಡ ಆಸ್ಪತ್ರಗೆ ಹೊರಡಲು ಅನುವಾದಾಗ ರಘು ಆದಿ ಕೈಗೆ ಹಣ ನೀಡುತ್ತಾರೆ.

ಆ ಹಣವನ್ನು ಆದಿ ನಿರಾಕರಿಸಿ ಪಾರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಇನ್ನು ಇದೆಲ್ಲವನ್ನೂ ನೋಡಿದ ಅಖಿಲಗೆ ಬಹಳ ಖುಷಿ ಆಗುತ್ತದೆ. ಇನ್ನು ತಾನು ಆಸ್ಪತ್ರೆಗೆ ಹೊರಟು ಜನನಿಗಾಗಿ ಕಾಯುತ್ತಾ ಇರುತ್ತಾಳೆ. ಜನನಿ ಬಂದ ಕೂಡಲೇ ಆಸ್ಪತ್ರೆಗೆ ಹೊರಡಬೇಕು ಎನ್ನುವಷ್ಟರಲ್ಲಿ ರಘು ಬಂದು ಎಲ್ಲಿಗೆ ಹೋಗುತ್ತಿದ್ದೀರ ಎಂದು ಕೇಳಿದಾಗ ಅಖಿಲ ದೇವಾಲಯಕ್ಕೆ ಹೋಗಿ ಬರುತ್ತೇವೆ ಎಂದು ಸುಳ್ಳು ಹೇಳುತ್ತಾಳೆ.
ರಘು ನಾನು ದೇವಾಲಯಕ್ಕೆ ಬರುತ್ತೇನೆ ಎಂದು ಹೇಳಿದಾಗ ಅಖಿಲಗೆ ತುಂಬಾ ಶಾಕ್ ಆಗುತ್ತದೆ. ರಘು ನೀವು ಬರುವುದು ಬೇಡ ಎಂದಗ ರಘುಗೆ ಕೊಂಚ ಬೇಸರ ಆದರೂ ಬಳಿಕ ಅವರಿಗೆ ಏನೋ ಒಂದು ಸಬೂಬು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಕಾರಿನಲ್ಲಿ ಅಖಿಲ ಜನನಿ ಬಳಿ ನಾನು ದೇವಾಲಯಕ್ಕೆ ಹೋಗುವುದು ಎಂದು ಹೇಳಿದ್ದೇನೆ, ನಾವು ಆಸ್ಪತ್ರೆಗೆ ಹೋಗುವುದು ಎಂದು ಹೇಗೆ ಹೇಳಲಿ ಎಂದು ಯೋಚನೆ ಮಾಡುತ್ತಾ ಇರುವಾಗ ಜನನಿ ಬಳಿ ಕೂಡ ಅಖಿಲ ಸುಳ್ಳು ಹೇಳುತ್ತಾಳೆ.

ಇವತ್ತು ನಾವು ಆಸ್ಪತ್ರೆಗೆ ಹೋಗಬೇಕಾಗಿತ್ತು ಎಂದಾಗ ಜನನಿ ಕೂಡ ಹಾಗೆ ಹೇಳುತ್ತಾಳೆ. ಇವತ್ತು ಆಸ್ಪತ್ರೆಗೆ ಹೋಗಿ ಬರೋಣ ಯಾಕೆ ಭಯ ಪಟ್ಟುಕೊಳ್ಳುವುದು, ನಾಳೆ ದಿನ ದೇವಾಲಯಕ್ಕೆ ಹೋಗೋಣ ಎಂದಾಗ ಅಖಿಲ ಪ್ರಾಬ್ಲಂ ಕ್ಲಿಯರ್ ಆಗೋಯ್ತು. ಇನ್ನೇನು ಆಸ್ಪತ್ರೆ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ಅಖಿಲ ಕಾರು ಕೆಟ್ಟು ಹೋಗುತ್ತದೆ. ಇನ್ನು ದಾಮಿನಿಯನ್ನು ಚೆಕ್ ಮಾಡಿದ ಡಾಕ್ಟರ್ ಪಿತ್ತದ ಔಷಧಿ ನೀಡುತ್ತಾರೆ. ಆ ಕೂಡಲೇ ಡಾಕ್ಟರ್ ಬಳಿ ನಾನು ಗರ್ಭಿಣಿ ಎಂದಾಗ ಡಾಕ್ಟರ್‌ಗೆ ಶಾಕ್ ಆಗುತ್ತದೆ.
ಆಕೆ ಹೋದ ಬಾರಿಯ ರಿಪೋರ್ಟ್ ತರಲು ಹೇಳುತ್ತಾರೆ. ಇನ್ನು ಪಾರುವನ್ನು ನೋಡಿಕೊಂಡು ಆಟೋ ಓಡಿಸುತ್ತಾ ಇದ್ದ ಆದಿ ಮಾತ್ರ ಪಾರುವನ್ನು ನೋಡಿ ಕಳೆದೆ ಹೋಗುತ್ತಾನೆ . ಇನ್ನು ಪಾರು ಮಾತ್ರ ರೋಡ್ ನೋಡಿ ಗಾಡಿ ಓಡಿಸಲು ಹೇಳುತ್ತಾಳೆ. ಇತ್ತ ಅಖಿಲಾಂಡೇಶ್ವರಿ ಪಾರು ಮಗುವಿನ ನಾನು ಸಹ ಆಸ್ಪತ್ರೆಗೆ ಹೋಗಬೇಕು, ಪಾರು ಹೊಟ್ಟೆಲಿ ಬೆಳೆಯುತ್ತಿರುವ ಅಸರನಕೋಟೆಯ ಕುಡಿಯ ಚಿತ್ರವನ್ನು ನಾನು ನೋಡಬೇಕು. ಆದರೆ ಎಲ್ರೂ ಸಹ ನನ್ನಿಂದ ಅದನ್ನು ಮುಚ್ಚಿಡುತ್ತಿದ್ದಾರೆ, ಹೇಗಾದರೂ ಮಾಡಿ ನಾನು ಆಸ್ಪತ್ರೆಗೆ ಹೋಗಬೇಕು, ಪಾರು ಮಗುವಿನ ಚಿತ್ರ್ ನೋಡಬೇಕು, ಅದರ ಹೃದಯದ ಬಡಿತವನ್ನು ನಾನು ಕೇಳಿಸಿಕೊಳ್ಳಬೇಕು ಎಂದು ತನ್ನ ಜತೆ ತಾನೇ ಮಾತನಾಡಿಕೊಳ್ಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











