Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru: ಅಖಿಲಾಂಡೇಶ್ವರಿ ಧರ್ಮಾಧಿಕಾರಿ ಪಟ್ಟ ಏರಲು ಮಗನೇ ಅಡ್ಡಿ!
ದೇವಾಲಯದ ಬಳಿ ಬಂದ ಅರುಂಧತಿ ಅಖಿಲಾಂಡೇಶ್ವರಿ ಅಧಿಕಾರ ಸ್ವೀಕಾರ ಮಾಡದ ಹಾಗೆ ಮಾಡಲು ಹೊಂಚು ಹಾಕುತ್ತ ಇರುತ್ತಾಳೆ. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಅರುಂಧತಿ ಅಖಿಲ ಪಟ್ಟ ಏರಬಾರದು ಎಂದು ಜೋರಾಗಿ ಹೇಳಿಕೆ ನೀಡುತ್ತಾಳೆ. ಆದರೆ ಆ ಊರಿನ ಮುಖಂಡರು ಮಾತ್ರ ನಾವು ಅಖಿಲಾಂಡೇಶ್ವರಿ ಅವರನ್ನೇ ಧರ್ಮಾಧಿಕಾರಿ ಆಗಿ ನೇಮಿಸುತ್ತೆವೆ ಎಂದು ಹೇಳುತ್ತಾರೆ.
ಆದರೆ ಆ ವೇಳೆ ಅರುಂಧತಿ ಮಾತ್ರ ಇದು ನನಗೆ ಒಪ್ಪಿಗೆ ಇಲ್ಲ ಇದು ಸರಿ ಅಲ್ಲ. ಇಂದು ಅಖಿಲ ನಾಳೆ ಅವರ ಮಕ್ಕಳು ಈ ಅಧಿಕಾರದ ಗದ್ದುಗೆಗೆ ಏರುತ್ತಾರೆ ಇದು ಸರಿ ಅಲ್ಲ ಎಂದು ಹೇಳುತ್ತಾರಳೆ. ಈ ವೇಳೆ ಆ ಊರಿನ ಜನರೆಲ್ಲ ಅಖಿಲ ಅವರೇ ಧರ್ಮಾಧಿಕಾರಿ ಆಗಲಿ ಎಂದು ಹೇಳುತ್ತ ಇರುತ್ತಾರೆ. ಈ ವೇಳೆ ಊರಿನ ಮುಖಂಡರು ಕೇಳಿಸಿಕೊಂಡ್ರಾ ಎಂದು ಹೇಳುತ್ತಾರೆ.. ಆಗ ಅರುಂಧತಿ ನಾನಂತೂ ಇವರು ಅಧಿಕಾರದಲ್ಲಿ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾಳೆ. ಆ ವೇಳೆ ರಘು ಜೋರಾಗಿ ಅರುಂಧತಿಯನ್ನು ಕರೆಯುತ್ತಾನೆ
ನಮ್ಮ ಮೇಲಿರುವ ಕೋಪಕ್ಕೆ ಈ ರೀತಿ ಮಾತನಾಡುತ್ತಾ ಇದ್ದೀಯಾ ನಿನ್ನ ಬಿಟ್ಟು ಇಲ್ಲಿ ಇರುವವರಲ್ಲಿ ಇಲ್ಲಿ ಒಬ್ಬರು ಹೇಳಲಿ ನೋಡೋಣ, ಸಂಸ್ಕಾರ ಅಂದ್ರೆ ಏನು ಎಂದು ಗೊತ್ತಿಲ್ಲದೆ ಇರುವವರ ಬಳಿ ಅಧಿಕಾರದ ಮಾತು ಕೇಳೋ ಕರ್ಮ ಇಲ್ಲಿ ಯಾರಿಗೂ ಇಲ್ಲ ಎನ್ನುತ್ತಾನೆ. ಇದಕ್ಕೆ ಅರುಂಧತಿ ಜೋರಾಗಿ ರಘು ಎಂದು ಚೀರುತ್ತಾಳೆ. ಆದರೆ ರಘು ಮಾತ್ರ ಕೋಪದಲ್ಲಿ ಕಿರುಚ ಬೇಡ ಎಂದು ಹೇಳಿ ವೇದಿಕೆಗೆ ಬರುತ್ತಾನೆ. ಬಳಿಕ ಮಾತು ಮುಂದುವರಿಸಿದ ರಘು ದ್ವೇಷ ಅನ್ನುವ ಕೆಟ್ಟದನ್ನು ನಿನ್ನ ಮಕ್ಕಳಿಗೆ ಕಲಿಸಿ ಒಬ್ಬಳು ಸಾಯುವ ತರ ಮಾಡಿದೆ ಮತ್ತೊಬ್ಬಳು ಜೈಲಲ್ಲಿ ಇರುವ ಹಾಗೆ ಮಾಡಿದೆ. ಮಕ್ಕಳನ್ನೇ ಸರಿಯಾಗಿ ಬೇಳಸಲಾಗದವಳು ನೀನು, ಇನ್ನು ಸಮಾಜ ಹೇಗೆ ನಡೆಸಿಕೊಂಡು ಹೋಗುತ್ತಿಯಾ ಎಂದು ಹೇಳುತ್ತಾನೆ.

ಪ್ರೀತಮ್ ಯೋಚನೆಯಲ್ಲಿರುವ ಆದಿ
ಆ ವೇಳೆ ಆದಿ ಮಾತ್ರ ಮನದಲ್ಲಿ ಅಮ್ಮ ಯಾವತ್ತಿದ್ದರೂ ನಮ್ಮನ್ನ ಒಳ್ಳೆಯವರ ಹಾಗೆ ನೋಡುತ್ತಾರೆ ಆದರೆ ಈ ಪಟ್ಟಾಭಿಷೇಕ ಮುಗಿತಿದ್ದ ಹಾಗೆ ಪ್ರೀತಮ್ ಏನು ಬೇಕಾದರೂ ಮಾಡಬಹುದು, ಇಲ್ಲ ನಾನು ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದುಕೊಳ್ಳುತ್ತಾನೆ . ಇನ್ನು ಪ್ರೀತಮ್, ಜನನಿ ಹಾಗೂ ಮೋನಿಕಾ ಗಂಡ ಮೋನಿಕಾ ಬಗ್ಗೆನೇ ಮಾತನಾಡುತ್ತಾ ಇದ್ದಾರೆ. ಜನನಿ ಇನ್ನೂ ನಿಮಗೆ ಮೋನಿಕಾ ಮೇಲೆ ಪ್ರೀತಿ ಇದೆಯಾ ಎಂದಾಗ ಮೋನಿಕಾ ಗಂಡ ಹೌದು ಎಂದು ಹೇಳುತ್ತಾನೆ.

ಮೋನಿಕಾ ಬಗ್ಗೆ ಬೇಸರಪಟ್ಟುಕೊಂಡ ಮೋನಿಕಾ ಗಂಡ
ನಾನು ಆಕೆಗೆ ದುಡ್ಡು ಕೊಡುತ್ತಿದ್ದದ್ದು ಭಯಕ್ಕೆ ಅಲ್ಲ ಬದಲಾಗಿ ಪ್ರೀತಿಗೆ. ಎಂದಾಗ ಜನನಿ ಹಾಗಾದರೆ ಅವರು ಬಂದರೆ ಅವರನ್ನು ಕರೆದುಕೊಂಡು ಹೋಗುತ್ತೀರಾ ಎಂದು ಕೇಳುತ್ತಾಳೆ. ಆದ್ರೆ ಮೋನಿಕಾ ಗಂಡ ಅದಕ್ಕೂ ಸಿದ್ಧನಾಗಿ ಬಂದಿರುತ್ತಾನೆ. ಮೋನಿಕಾ ಮಾರ್ಕೆಟ್ ನಲ್ಲಿ ಸಿಕ್ಕ ದಿನನಿಂದ ಇಲ್ಲಿಯವರೆಗೂ ಆಕೆಯನ್ನು ಹುಡುಕುತ್ತಿದ್ದೆ. ನಿಮ್ಮ ಮನೆಯಲ್ಲಿ ಇದ್ದಾಳೆ ಎಂದು ತಿಳಿಯಿತು, ಅದಕ್ಕೆ ನೀವು ಹೊರಗೆ ಬರಲಿ ಅಂತ ಕಾಯುತ್ತಿದ್ದೆ ಎಂದು ಹೇಳುತ್ತಾನೆ. ಆ ವೇಳೆ ಜನನಿ ಇವತ್ತು ನಮ್ಮ ಅತ್ತೆ ಧರ್ಮಾಧಿಕಾರಿ ಪಟ್ಟ ಏರುತ್ತಾ ಇದ್ದಾರೆ ನಾವು ಅಲ್ಲಿಗೆ ಹೋಗಲೇ ಬೇಕು, ಯೋಚನೆ ಮಾಡಬೇಡಿ ನಿಮ್ಮ ಹೆಂಡತಿಯನ್ನು ನಿಮ್ಮ ಜೊತೆ ಕಳುಹಿಸುತ್ತೇವೆ ಎಂದು ಹೇಳಿ ಕಾರ್ಯಕ್ರಮಕ್ಕೆ ಹೋಗುತ್ತಾರೆ.

ದೇವಾಲಯದತ್ತ ಹೊರಟ ಪ್ರೀತಮ್ ಜನನಿ
ಈ ವೇಳೆ ಜನನಿ ಪ್ರೀತಮ್ ಬಳಿ ಕಾರ್ಯಕ್ರಮ ಮುಗಿದ ಕೂಡಲೇ ಇದನ್ನು ಅಕ್ಕ ಬಾವನ ಬಳಿ ಹೇಳೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಕೂಡ ಒಪ್ಪಿಗೆ ಸೂಚಿಸುತ್ತಾನೆ. ಇನ್ನು ಕಾರ್ಯಕ್ರಮಕ್ಕೆ ಪ್ರೀತಮ್ ಜನನಿ ಬರುತ್ತಾರೆ. ಮೊದಲೇ ಭಯದಲ್ಲಿ ಇದ್ದ ಆದಿ ಬಳಿ ಪ್ರೀತಮ್ ಬ್ರೋ ಇವತ್ತು ನಾನು ನಿನಗೆ ಒಳ್ಳೆಯ ವಿಚಾರ ಹೇಳಬೇಕಿದೆ, ಇವತ್ತು ನಮ್ಮ ನಿನ್ನ ಸಮಸ್ಯೆ ಕ್ಲಿಯರ್ ಆಗುತ್ತದೆ ಎಂದು ಖುಷಿಯಿಂದ ಹೇಳುತ್ತಾನೆ. ಇದನ್ನು ಕೇಳಿದ ಕೂಡಲೇ ಆದಿ ಎದ್ದು ನಿಂತು ಆಸ್ತಿಯಲ್ಲಿ ಭಾಗ ಕೇಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.