Paaru: ಆದಿ ಆಟೋದಲ್ಲಿಯೇ ಆಸ್ಪತ್ರೆಗೆ ಹೊರಟ ಅಖಿಲಾಂಡೇಶ್ವರಿ

By Poorva

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಲ್ಲುತ್ತಿದೆ. ಪಾರು ನೋಡಲು ಆಸ್ಪತ್ರೆಗೆ ಬಂದಿದ್ದ ಅಖೀಲಾಂಡೇಶ್ವರಿ ಕಾರು ಕೆಟ್ಟು ಹೋಗುತ್ತದೆ. ತನ್ನ ಮಗ ಸೊಸೆ ಬರುವ ಮುಂಚೆ ತಾನು ಮತ್ತು ಜನನಿ ಮನೆ ಸೇರಿಕೊಳ್ಳಬೇಕು ಅಂದುಕೊಂಡಿರುತ್ತಾಳೆ. ಆದರೆ ಕಾರು ಹಾಳಾಗಿ ಹೋಗಿರುವುದನ್ನು ಕಂಡ ಅಖಿಲ ರಘುಗೆ ಕರೆ ಮಾಡಿದಾಗ ಆತ ಬೇರೆ ಕಾರು ತೆಗೆದುಕೊಂಡು ನಾನು ಬರುತ್ತೇನೆ ಎಂದು ಹೇಳುತ್ತಾನೆ. ಅಖಿಲ ಮೊಬೈಲ್ ಸ್ವಿಚ್ ಆಫ್ ಮಾಡಿ ರಸ್ತೆ ಬದಿ ಬಂದು ನಿಲ್ಲುತ್ತಾಳೆ

ಆ ವೇಳೆ ಆ ರಸ್ತೆಯಲ್ಲಿ ಹೋಗುತ್ತಿದ್ದ ಪಾರು ಹಾಗೂ ಆದಿ ಅಮ್ಮ ಹಾಗೂ ಜನನಿಯನ್ನು ನೋಡಿ ರಿಕ್ಷಾ ನಿಲ್ಲಿಸಿ ಅವರಿಬ್ಬರನ್ನು ಕರೆಯುತ್ತಾರೆ. ಮೊದಲಿಗೆ ರಿಕ್ಷಾದಲ್ಲಿ ಬರಲು ಅಖೀಲಾಂಡೇಶ್ವರಿ ಇಷ್ಟ ಇಲ್ಲದವರ ಹಾಗೆ ನಡೆದುಕೊಳ್ಳುತ್ತಾಳೆ. ಆ ಬಳಿಕ ಮಗನ ಆಟೋದಲ್ಲಿ ಕುಳಿತು ಆಸ್ಪತ್ರೆಗೆ ತೆರಳುತ್ತಾಳೆ. ಆದಿಗೆ ಒಂದು ಕಡೆ ಬಹಳ ಖುಷಿ ಆದರೆ ಪಾರುಗಂತೂ ಬಹಳ ಖುಷಿ ಹಾಗೂ ಅತ್ತೆ ತನ್ನ ಪಕ್ಕ ಕುಳಿತುಕೊಂಡು ಇದ್ದಾರೆ ಎನ್ನುವ ಭಾವನೆ ಆಕೆಯಲ್ಲಿ ಮೂಡುತ್ತದೆ.

Kannada serial Paaru written update on 11th april

ಆಕೆಯ ಖುಷಿ ಇಮ್ಮಡಿ ಆಗುತ್ತದೆ. ಇತ್ತ ದಾಮಿನಿ ಆಸ್ಪತ್ರೆಗೆ ಬಂದು ಆಕೆ ಗರ್ಭಿಣಿ ಆಗಿದ್ದೇನೆ ಎಂದ ಹೇಳಿ ಚೆಕಪ್ ಮಾಡಿಸಿಕೊಳ್ತಾಳೆ. ಆದರೆ ದಾಮಿನಿ ಗರ್ಭಿಣಿ ಅಲ್ಲ ಎನ್ನುವ ವಿಚಾರವನ್ನು ಆಕೆಯ ಬಳಿ ಡಾಕ್ಟರ್ ಹೇಳಿದರೂ ಅದನ್ನು ನಂಬದ ದಾಮಿನಿ ಹೋದ ಬಾರಿ ಚೆಕಪ್ ಮಾಡುವಾಗ ಗರ್ಭಿಣಿ ಎಂದು ಹೇಳಿದ್ದೀರಿ ಈಗ ಅಲ್ಲ ಎಂದು ಹೇಳುತ್ತ ಇದ್ದೀರಿ ಎಂದಾಗ ರಿಪೋರ್ಟ್ ಅದಲು ಬದಲು ಆಗಿರುವ ಬಗ್ಗೆ ತಿಳಿಯುತ್ತದೆ.

ಇದನ್ನು ಕೇಳಿದ ಡಾಕ್ಟರ್ ರಿಪೋರ್ಟ್ ಅದಲು ಬದಲು ಮಾಡಿದವರ ಮುಖಕ್ಕೆ ಸರಿಯಾಗಿ ಮಂಗಳಾರತಿ ಮಾಡಿ ದಾಮಿನಿ ಬಳಿ ಕ್ಷಮೆ ಕೇಳುತ್ತಾನೆ. ಇನ್ನು ದಾಮಿನಿಗೆ ಬಹಳ ಬೇಸರ ಆಗುತ್ತದೆ. ತನ್ನ ಗಂಡನಿಗೆ ಏನು ಅಂತ ಉತ್ತರ ಹೇಳಲಿ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆಸ್ಪತ್ರೆಯಿಂದ ದಾಮಿನಿ ಹೊರ ಬರುವುದಕ್ಕೂ ಆದಿ ಆಟೋ ಆಸ್ಪತ್ರೆ ಮುಂದೆ ಬರುವುದಕ್ಕೂ ಸರಿ ಆಗುತ್ತದೆ. ಆದಿ ಆಟೋದಿಂದ ಅಖೀಲಾಂಡೇಶ್ವರಿ ಇಳಿದು ಬಂದಿರುವುದನ್ನು ನೋಡಿದ ದಾಮಿನಿಗೆ ಬಹಳ ಶಾಕ್ ಆಗುತ್ತದೆ.

ಇನ್ನು ಅಖಿಲ ಡಾಕ್ಟರ್ ಬಳಿ ಹೋದರೆ ಪಾರು ಮಾತ್ರ ಎದುರು ಕುಳಿತುಕೊಂಡಿರುತ್ತಾಳೆ. ಇನ್ನು ಜನನಿ ಪಾರು ಜೊತೆ ಕುಳಿತು ಮಾತನಾಡುತ್ತಾ ಇರುತ್ತಾಳೆ. ಅಖಿಲ ಡಾಕ್ಟರ್ ಬಳಿ ಮಾತನಾಡಲು ಹೋಗುತ್ತಾಳೆ. ಡಾಕ್ಟರ್ ಕಂಡ ಕೂಡಲೇ ಅಖಿಲಗೆ ಬಹಳ ಖುಷಿ ಆಗುತ್ತದೆ. ಆಕೆ ಬಂದ ಉದ್ದೇಶವನ್ನು ಡಾಕ್ಟರ್ ಬಳಿ ಹೇಳುತ್ತಾಳೆ. ಬಳಿಕ ಡಾಕ್ಟರ್ ಬಳಿ ಬ್ಲಾಂಕ್ ಚೆಕ್ ಅನ್ನು ಕೊಟ್ಟು ನನ್ನ ಹಿರಿ ಸೊಸೆ ಗರ್ಭಿಣಿ ಆಕೆಯ ಮಗು ನಮ್ಮ ಅರಸನಕೋಟೆಯ ಕುಡಿ. ನಮ್ಮಿಬ್ಬರ ವೈರತ್ವದಿಂದ ನಮ್ಮ ಮಗುವಿಗೆ ಯಾವುದೇ ತೊಂದರೆ ಆಗದೆ ಇರಲು ನಾನು ಇದನ್ನ ನೀಡುತ್ತಿದ್ದೇನೆ ದಯವಿಟ್ಟು ನನ್ನ ಸೊಸೆಗೆ ಉತ್ತಮ ಚಿಕಿತ್ಸೆ ನೀಡಿ ಎಂದು ಹೇಳುತ್ತಾಳೆ.

Kannada serial Paaru written update on 11th april

ಡಾಕ್ಟರ್ ಆ ಚೆಕ್ ನೋಡಿ ಒಂದು ವೇಳೆ ಅವರು ಫೀಸ್ ನೀಡಲು ಹೇಳಿದರೆ ಏನು ಮಾಡುವುದು ಎಂದು ಹೇಳಿದಾಗ ಅಖಿಲ ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಉಪಾಯವೊಂದನ್ನು ನೀಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial paaru written updated on 11th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X