Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru: ಆದಿ ಮೇಲೆ ಕುಪಿತಗೊಂಡ ಅಖಿಲಾಂಡೇಶ್ವರಿ
ಪ್ರೀತಮ್ ನನ್ನು ಅಮ್ಮನ ಕೆಂಗಣ್ಣಿನಿಂದ ಉಳಿಸಲು ಆದಿ ಕಠೋರವಾದ ನಿರ್ಧಾರ ತೆಗೆದುಕೊಂಡು ಹೆತ್ತ ಅಮ್ಮನನ್ನೆ ಎದುರು ಹಾಕಿಕೊಂಡು ಆಸ್ತಿಯಲ್ಲಿ ಭಾಗ ಕೇಳುತ್ತಾನೆ. ಇದನ್ನು ಕೇಳಿದ ಅಖಿಲಾಂಡೇಶ್ವರಿಗೆ ಶಾಕ್ ಆಗುತ್ತದೆ. ತನ್ನ ಮಗ ದೇವಾಲಯದಲ್ಲಿ ಎಲ್ಲರ ಮುಂದೆ ಆಸ್ತಿಯಲ್ಲಿ ಭಾಗ ಕೇಳುತ್ತಿದ್ದಾನ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಜತೆಗೆ ಆಕೆಗೆ ಬಹಳ ನೋವು ಕೂಡ ಆಗುತ್ತದೆ. ಅಣ್ಣನ ಈ ನಿರ್ಧಾರ ಕಂಡು ಪ್ರೀತಮ್ ಕಂಗಾಲಾಗುತ್ತನೆ. ಇನ್ನೇನು ಸಮಸ್ಯೆ ಬಗೆಹರಿಸಬಹುದು ಅಂದುಕೊಂಡಿದ್ದೆವು ಆದರೆ ಇದೀಗ ಏನಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಇನ್ನು ವೇದಿಕೆಗೆ ಬಂದ ಆದಿ ನನಗೆ ಆಸ್ತಿ ಪಾಲು ಬೇಕು ನಮ್ಮ ಸಂಸಾರದಲ್ಲಿ ಭಿನ್ನ ಅಭಿಪ್ರಾಯ ಇದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮನೆ ಮಂದಿ ಹಾಗೂ ಊರಿನವರು ಶಾಕ್ ಆಗುತ್ತಾರೆ. ಆದಿಯನ್ನು ರಘು ಸಮಾಧಾನ ಪಡಿಸಲು ಬಂದರೂ ಆತ ಮಾತ ಯಾವುದಕ್ಕೂ ಜಗ್ಗಲಿಲ್ಲ. ಇದನ್ನು ನೋಡಿದ ಅರುಂಧತಿಗೆ ಸಹ ಶಾಕ್ ಆಗುತ್ತದೆ.
ಆಕೆ ಅಣ್ಣನನ್ನು ನೋಡಿ ಸಣ್ಣಗೆ ನಗೆ ಬೀರುತ್ತಲೇ ಇರುತ್ತಾಳೆ. ಈ ವೇಳೆ ಆ ಊರಿನ ಮುಖಂಡರು ಏನೇ ಇರಲಿ ಅಖಿಲ ಅವರನ್ನೇ ಇಪ್ಪತೈದನೆಯ ಧರ್ಮಧಿಕಾರಿ ಅಧಿಕಾರ ಸ್ವೀಕಾರ ಮಾಡೋಣ ಎಂದಾಗ ಸ್ವತಃ ಅಖಿಲಾಂಡೇಶ್ವರಿ ಬೇಡ ಎಂದು ಹೇಳುತ್ತಾರೆ. ಮನಸಿಲ್ಲದ ಮನಸಿನಲ್ಲಿ ಅರುಂಧತಿಗೆ ಈ ಅಧಿಕಾರ ಕೊಡಲಾಗುತ್ತದೆ. ಆದಿ ಅರುಂಧತಿ ಬೆನ್ನ ಹಿಂದೆ ನಿಲ್ಲುತ್ತಾನೆ. ಇದನ್ನು ನೋಡಿದ ಅಖಿಲಗೆ ಬಹಳ ಕೋಪ ಬರುತ್ತದೆ.

ಕೋಪದಿಂದ ಮನೆಗೆ ಬಂದ ಅಖಿಲ
ಕೋಪದಲ್ಲಿ ಮನೆಗೆ ಬರುವ ಅಖಿಲಳನ್ನ್ನು ನೋಡಿದ ಮೋನಿಕಾ ಏನಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಖಿಲಳನ್ನು ಹಿಂಬಾಲಿಸಿಕೊಂಡು ಆಕೆಯ ಗಂಡ ಬರುತ್ತಾರೆ ಹಾಗೂ ಸಮಾಧಾನ ಮಾಡುತ್ತಾರೆ. ಆದರೆ ಅಖಿಲ ಮಾತ್ರ ಸಮಾಧಾನಗೊಳ್ಳದೆ ಇರುತ್ತಾಳೆ. ರಘು ಮೋನಿಕಳನ್ನು ಕರೆದು ಸ್ವಲ್ಪ ಹೊತ್ತು ರೂಮ್‌ನಲ್ಲಿ ಇರುವಂತೆ ಹೇಳುತ್ತಾನೆ. ಇನ್ನು ಆದಿ ಪಾರು ಅಲ್ಲಿಗೆ ಬರುತ್ತಾರೆ. ರಘು ಆದಿಗೆ ಬುದ್ದಿ ಹೇಳುತ್ತಾರೆ.

ಆದಿಯ ಬಳಿ ಮಾತನಾಡಲು ಕರೆದುಕೊಂಡು ಹೋದ ಅಖಿಲ
ಈ ವೇಳೆ ಅಖಿಲ ನಾನು ನಿನ್ನ ಬಳಿ ಮಾತನಾಡಬೇಕು ಎಂದು ಹೇಳಿ ಹೋಗುತ್ತಾಳೆ. ಆದಿ ಆಕೆಯ ಹಿಂದೆ ಹೋಗುತ್ತಾನೆ. ಪಾರು ಬಳಿ ರಘು ಕೆಲ ಪ್ರಶ್ನೆಗಳನ್ನು ಕೇಳುತ್ತಾನೆ. ಆದರೆ ಪಾರು ಬಳಿ ಏನು ಉತ್ತರ ಇರುವುದಿಲ್ಲ. ಇದನ್ನೆಲ್ಲ ನೋಡಿದ ರಘುಗೆ ತಲೆ ಚಿಟ್ಟು ಹಿಡಿಯುತ್ತದೆ. ಅಮ್ಮನ ಬಳಿಗ ಬಂದ ಆದಿಗೆ ಅಖಿಲಾಂಡೇಶ್ವರಿ ಏನಾಯಿತು ಆದಿ ಎಂದು ಕೇಳುತ್ತಾರೆ. ಬಳಿಕ ದುಃಖ ಭರಿತರಾಗಿ ಆದಿ ಬಳಿ ನೀನು ನಾನು ಹೆತ್ತ ಮಗ, ನೀನೇನು ನಿನ್ನ ಮನಸ್ಸನ್ನು ನಾನು ಬಲ್ಲೆ, ಹೂವಿನ ಮನಸ್ಸಿನವರ ನೀನು, ಅಮ್ಮನ ಮನಸ್ಸಿಗೆ ವಿಷ ಹಾಕುವುದಿಲ್ಲ ಕೂಡ, ನಿಜವಾಗಲೂ ಆಸ್ತಿಯಲ್ಲಿ ಭಾಗ ಕೇಳುತ್ತಾ ಇರುವುದು ನೀನೇನಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಕೂಡ ಅಮ್ಮನ ಮಾತಿಗೆ ಕರಗದೆ ನಾನೇ ನನಗೆ ಆಸ್ತಿಯಲ್ಲಿ ಭಾಗ ಬೇಕು ಎಂದು ಕೇಳಿದೆ ಎಂದು ಹೇಳುತ್ತಾನೆ.

ಆನಂದದಿಂದ ತೇಲಾಡುತ್ತಾ ಇರುವ ಅರುಂಧತಿ
ಇನ್ನು ಅರುಂಧತಿ ಮನೆಗೆ ಬಂದು ಬಹಳ ಖುಷಿ ಪಡುತ್ತಾಳೆ. ನನಗೆ 25ನೇ ಧರ್ಮಾಧಿಕಾರಿ ಪಟ್ಟ ಸಿಗುತ್ತದೆ ಎಂದು ಊಹಿಸಿರಲಿಲ್ಲ, ಆದರೆ ಇದೀಗ ನನ್ನ ಪಾಲಾಗಿದೆ ಎಂದಾಗ ರಾಣಾ 25ನೇ ಧರ್ಮಾಧಿಕಾರಿ ಪಟ್ಟ ಏರುತ್ತಿರುವ ಶ್ರೀಮತಿ ಅರುಂಧತಿ ಅವರಿಗೆ ಅಭಿನಂದನೆಗಳು ಎಂದು ಹೇಳುತ್ತಾನೆ. ಇದನ್ನು ಕೇಳಿದ ಅರುಂಧತಿಗೆ ಬಹಳ ಖುಷಿ ಆಗುತ್ತದೆ. ಇದು ಕನಸು ಅಥವಾ ನನಸೋ ತಿಳಿಯುತ್ತಿಲ್ಲ ಎಂದುಕೊಳ್ಳುತ್ತಾಳೆ. ಬಳಿಕ ಆದಿ ವರ್ತನೆ ಹೀಗೆ ಯಾಕೆ ಆಗಿದೆ ಎನ್ನುವ ಬಲವಾದ ಅನುಮಾನ ಇವರಲ್ಲಿ ಮೂಡುತ್ತದೆ. ಇನ್ನು ರಘು ಪಾರು ಬಳಿ ಯಾಕೆ ಹೀಗೆ ಆದ ಅಖಿಲಗೆ ಇಷ್ಟು ನೋವಾಗಲು ಕಾರಣ ಆಸ್ತಿಯಲ್ಲಿ ಪಾಲು ಕೇಳಿದ್ದು ಅಲ್ಲ ಆ ಅರುಂಧತಿಯ ಹಿಂದೆ ಹೋಗಿ ನಿಂತುಕೊಂಡ ಅಲ್ವಾ ಅದಕ್ಕೆ ಬಹಳ ಬೇಸರ ಆಗಿದೆ ಎಂದು ಪಾರು ಬಳಿ ಬೇಸರ ವ್ಯಕ್ತಪಡಿಸುತ್ತಾನೆ.