ಕಿಡ್ನಾಪ್ ಆದ ರಘು; ವಿಡಿಯೋ ಕಾಲ್ ಮೂಲಕ ಅಖಿಲಾಂಡೇಶ್ವರಿಯನ್ನು ನಡುಗಿಸಿದ ಅನುಷ್ಕಾ
ಪಾರು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಅಖಿಲಾಂಡೇಶ್ವರಿ ರತ್ನವೇಣಿ ಬಳಿ ಮಾತನಾಡುತ್ತಾ ಇರುತ್ತಾರೆ. ರತ್ನ ವೇಣಿಗೆ ಪಾರು ಅಂದರೆ ಇಷ್ಟ ಇಲ್ಲದೇ ಇರುವುದು ಅಖಿಲಾಂಡೇಶ್ವರಿ ಗೆ ತಿಳಿದಿದೆ.
ಆದರೂ ಪಾರು ಬಗ್ಗೆ ಹೀಗೆಲ್ಲ ತಪ್ಪಾಗಿ ಅಂದುಕೊಳ್ಳಬೇಡಿ.. ಆಕೆಗೆ ನೋವು ಆಗುವ ಹಾಗೆ ಮಾತನಾಡಲು ಬೇಡಿ ಎಂದು ಹೇಳಿದಾಗ ರತ್ನ ವೇಣಿ ಮಾತ್ರ ಅದೆಲ್ಲವನ್ನೂ ಕೇಳಿಸಿಕೊಂಡು ಕೊಂಚ ಭಯ ಪಡುತ್ತಾಳೆ ಬಳಿಕ ಎನು ಇಲ್ಲವೆಂಬಂತೆ ತಲೆ ಆಡಿಸುತ್ತಲೇ ಇರುತ್ತಾಳೆ ಇನ್ನೂ ಪಾರು ಕೆಫೆಯಲ್ಲಿ ಕೆಲಸ ಮಾಡುತ್ತಾ ಇರುವಾಗ ಸಂಗೀತಾ ಗಂಡ ಪಾರು ಬಳಿ ಬಂದು ಹೇಳುತ್ತಾನೆ.

ನಮ್ಮ ಕೆಫೆ ಇದೀಗ ಬಹಳ ಉತ್ತುಂಗಕ್ಕೆ ಏರುತ್ತಿದೆ ನನಗೆ ಬಹಳ ಖುಷಿ ಆಗುತ್ತಿದೆ. ನಿಮ್ಮಿಂದ ನಮ್ಮ ಕೆಫೆಗೆ ಜನಗಳು ಹೆಚ್ಚಾಗಿ ಬರುತ್ತಿದ್ದಾರೆ . ನಿಮ್ಮ ಕಾಲಿನ ಗುಣ ಬಹಳ ಚೆನ್ನಾಗಿ ಇದೆ ಎಂದು ಹೇಳುತ್ತಾರೆ. ಆಗ ಪಾರು ಮಾತ್ರ ರತ್ನ ವೇಣಿ ಹೇಳಿರುವ ಮಾತುಗಳನ್ನು ನೆನಪು ಮಾಡಿಕೊಂಡು ಇರುತ್ತಾರೆ. ಇನ್ನೂ ಅಷ್ಟರಲ್ಲಿ ಅನುಷ್ಕ ಕೆಫೆ ಗೆ ಬರುತ್ತಾಳೆ.
ಮೊದಲಿಗೆ ಬೇರೆಯವರು ಎಂದು ಲೈಟ್ ಆಗಿ ತೆಗೆದುಕೊಂಡ ಪಾರು ಅನುಷ್ಕಳನ್ನು ಸರಿಯಾಗಿ ನೋಡಿ ಶಾಕ್ ಆಗುತ್ತಾಳೆ ಅನುಷ್ಕ ಲಾಯರ್ ನನ್ನು ಮೀಟ್ ಆಗಲು ಕೆಫೆಗೆ ಬಂದು ಇರುತ್ತಾಳೆ. ಇನ್ನೂ ಅನುಷ್ಕ ಲಾಯರ್ ಬಳಿ ಮಾತನಾಡುತ್ತಾ ಇರುತ್ತಾಳೆ . ನನ್ನ ಮಾವ ರಾಣ ನನ್ನು ಹೇಗಾದರೂ ಮಾಡಿ ಜೈಲಿನಿಂದ ಬಿಡಿಸಲೆ ಬೇಕು ಅದಕ್ಕೆ ನನಗೆ ನಿಮ್ಮ ಸಹಾಯ ಬೇಕಿದೆ ..
ನೀವು ಅಖಿಲಾಂಡೇಶ್ವರಿ ವಿರುದ್ದ ಫೈಟ್ ಮಾಡಬೇಕಾಗುತ್ತದೆ. ಎಂದು ಹೇಳುತ್ತ ಇರುವುದನ್ನು ಪಾರು ಕೇಳಿಸಿಕೊಳ್ಳುತ್ತಾ ಇರುತ್ತಾಳೆ . ಇನ್ನೂ ಇದನ್ನು ಆದಿಗೆ ಹೇಳಲೇಬೇಕು ಎಂದುಕೊಂಡು ಆದಿಗೆ ಪಾರು ಕರೆ ಮಾಡುತ್ತಾಳೆ. ಆದಿ ಬಳಿ ಅನುಷ್ಕ ಬದುಕಿರುವ ವಿಚಾರವನ್ನು ಪಾರು ಹೇಳಿದಾಗ ಆದಿ ಗೆ ಶಾಕ್ ಆಗುತ್ತದೆ.
ಇನ್ನೂ ಆದಿ ಪಾರು ಬಳಿ.ಆಕೆಗೆ ಕೇಳಿಸುವುದು ಬೇಡ ನೀನು ಮಾತನಾಡುವುದು ಮನೆಗೆ ಬಾ ಮಾತನಾಡೋಣ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ. ಇನ್ನೂ ಪಾರುವನ್ನು ನೋಡಿದ ಅನುಷ್ಕ ಮಾತ್ರ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ. ಪಾರುವನ್ನೂ ನೋಡಿ ಅಲ್ಲಿಂದ ಮೆತ್ತಗೆ ಮನೆಗೆ ಹೋಗುತ್ತಾಳೆ.
ಇನ್ನೂ ಮನೆಗೆ ಬಂದ ಪಾರು ಗಂಡನ ಬಳಿ ಬಹಳ ಶಾಕ್ ನಿಂದಾ ಮಾತನಾಡುತ್ತಾ ಇರುವಾಗ ಹನುಮಂತು ಗೆ ಕೂಡ ಬಹಳ ಶಾಕ್ ಆಗುತ್ತದೆ. ಎನು ಮಾಡುವುದು ಎಂದು ತಿಳಿಯದೇ ಸಮ್ಮನೆ ನಿಂತು ಇರುವ ಪರುವನ್ನು ಕಂಡು ಹನುಮಂತು ಹೇಳುತ್ತಾನೆ ಅನುಷ್ಕ ಬದುಕಿರುವ ವಿಚಾರವನ್ನು ಅಖಿಲ ಮೇಡಂ ಗೆ ಹೇಳುವಂತೆ ಹೇಳುತ್ತಾ ಇರುತ್ತಾನೆ. ಇನ್ನೂ ಅಖಿಲ ಗೆ ಒಂದು ಕಾಲ್ ಬರುತ್ತದೆ ಅದರಲ್ಲಿ ರಘು ವಾನ್ನು ಯಾರೋ ಕಿಡ್ನಾಪ್ ಮಾಡಿದ ಹಾಗೆ ಬಾಯಿಗೆ ಪಟ್ಟಿ ಕಟ್ಟಿ ಕುರ್ಚಿ ಕುಳ್ಳಿರಿಸಿದ ಹಾಗೆ ಇದ್ದಿದ್ದನ್ನು ಕಂಡು ಬಹಳ ಭಯ ಪಟ್ಟುಕೊಂಡು ಇರುತ್ತಾರೆ.


Click it and Unblock the Notifications











