Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ತಿ ಕೇಳಲು ಮಗ ಆದಿ ಆಡಿದ ಮಾತಿಗೆ ಶಾಕ್ ಆದ ಅಖಿಲ!
ಮಗ ಆದಿ ಬಳಿ ಅಖಿಲಾಂಡೇಶ್ವರಿ ಮಾತನಾಡುತ್ತಾ ಇರುತ್ತಾಳೆ. ನನ್ನ ಬಳಿ ಆಸ್ತಿ ಕೇಳುತ್ತಿರುವುದು ನೀನೇನಾ ಎಂದು ನಡುಗುವ ಧ್ವನಿಯಲ್ಲಿ ಆದಿ ಬಳಿ ಕೇಳುತ್ತಾ ಇರುತ್ತಾಳೆ ಇದನ್ನು ಕೇಳಿದ ಆದಿ ದರ್ಪದಿಂದ ಹೌದು ಎನ್ನುತ್ತಾನೆ. ಆ ಬಳಿಕ ನನಗೆ ಈ ಮನೆಯಲ್ಲಿ ಬದುಕಲು ಆಗುತ್ತಿಲ್ಲ, ನನ್ನ ಜೀವಕ್ಕೂ ಕುತ್ತ್ತು ಬಂದಿದೆ ಆದ ಕಾರಣ ನನಗೆ ಆಸ್ತಿ ಬೇಕು ಎಂದು ಪಟ್ಟು ಹಿಡಿಯುತ್ತಾನೆ. ಇದನ್ನು ಕೇಳಿದ ಅಖಿಲಗೆ ಶಾಕ್ ಆಗುತ್ತದೆ. ತಾನು ಮುದ್ದು ಮಾಡಿ ಬೆಳೆಸಿದ ಮಗ ಇದೀಗ ಎದೆಯೊಡೆದು ಹೋಗುತ್ತಾ ಇದ್ದಾನೆ ಎಂದು ಬಹಳ ಅಳುತ್ತಾಳೆ.
ಎಲ್ಲರ ಎದುರು ತಾನು ತಲೆ ಎತ್ತದ ಹಾಗೆ ಮಾಡಿಬಿಟ್ಟ ಎಂದು ಮನದಲ್ಲಿ ಕುಗ್ಗಿ ಹೋಗುತ್ತಾಳೆ ಅಖಿಲ. ಆದರೆ ಆದಿ ಮಾತ್ರ ಅಮ್ಮನಿಗೆ ನನ್ನಿಂದ ಎಷ್ಟೇ ನೋವಾದರೂ ಸರಿ ಪ್ರೀತಮ್ ಅಮ್ಮನ ಎದುರು ಎಂದೂ ಕೆಟ್ಟವನು ಆಗುವುದು ಬೇಡ, ಇದರಿಂದ ಆತ ಶಾಶ್ವತವಾಗಿ ದೂರ ಆಗುವ ಎಲ್ಲ ಲಕ್ಷಣ ಕಾಣುತ್ತದೆ ಎಂದುಕೊಳ್ಳುತ್ತಾನೆ. ಇನ್ನು ಪಾರುವನ್ನು ಸೊಸೆ ಆಗಿನಿಂದ ಹಿಡಿದು ಇಲ್ಲಿಯ ತನಕ ಹೇಗೆ ನಡೆಸಿಕೊಂಡು ಬಂದಿರಿ, ಎಷ್ಟು ಅವಮಾನ ಮಾಡಿದ್ದೀರಿ ಎಂದೆಲ್ಲ ಹೇಳುತ್ತಾನೆ. ಆದರೆ ಅದನ್ನು ಕೇಳಿದ ಅಖಿಲಾಂಡೇಶ್ವರಿ ಅದಕ್ಕೆ ಅಲ್ವಾ ನಾನು ಅಷ್ಟೆಲ್ಲ ಕ್ಷಮೆ ಕೇಳಿದ್ದು ಎಂದೆಲ್ಲ ಹೇಳುತ್ತಾಳೆ. ಆದರೆ ಆದಿ ಅಮ್ಮನ ಮಾತನ್ನೇ ಒಪ್ಪಲಿಲ್ಲ. ಆದರೆ ಅಖಿಲ ಎಷ್ಟೇ ಮನವೊಲಿಸುವ ಯತ್ನ ಮಾಡಿದರು ಆದಿ ಮಾತ್ರ ನಾನು ಇಲ್ಲಿ ಇರುವುದಿಲ್ಲ ಎಂದು ಹೇಳುತ್ತಾನೆ..
ಬಳಿಕ ಅಖಿಲ ಮಗನ ಬಳಿ ಗೋಗರೆಯುತ್ತಾಳೆ. ಏನಾಯಿತು ಎಂಬುವುದನ್ನು ಕೇಳುತ್ತಾಳೆ. ಆದರೆ ಆದಿ ಮನದಲ್ಲಿ ಯೋಚನೆ ಮಾಡುತ್ತಾನೆ. ಅಮ್ಮ ಇಷ್ಟೆಲ್ಲ ಗೋಗರೆಯುತ್ತ ಇದ್ದಾಳೆ ಅಲ್ವಾ ನಾನು ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಅನ್ನಿಸುತ್ತಿದೆ ಎಂದು ಹೇಳಿಕೊಳ್ಳುತ್ತಾನೆ. ಬಳಿಕ ಅಖಿಲ ಮಾಡಿದ ಹಿಂದಿನ ಕೆಲವು ತಪ್ಪನ್ನು ಆಕೆ ಮಾಡದ ತಪ್ಪನ್ನು ಆಕೆಯ ಮೇಲೆ ಹೊರಿಸಿ ಬಡುತ್ತಾನೆ ಇದರಿಂದ ಕಂಗಾಲಾದ ಅಖಿಲಗೆ ಏನು ಹೇಳಬೇಕು ತಿಳಿಯದೇ ಅಳುತ್ತಾಳೆ.

ಮರೆಯಲ್ಲಿ ನೋಡುತ್ತಾ ನಿಂತ ಪಾರು
ಅಖಿಲ ತನ್ನ ಮಗ ತನ್ನ ಮಾತು ಕೇಳದೇ ನನ್ನ ಕೈ ಮೀರಿ ಹೋಗುತ್ತಾ ಇದ್ದಾನೆ ಎಂದು ಬೇಸರಪಟ್ಟುಕೊಂಡು ಇರುತ್ತಾಳೆ. ಇದನ್ನು ಮರೆಯಲ್ಲಿ ನೋಡುತ್ತಾ ನಿಂತ ಪಾರ್ವತಿಗೆ ಅಖಿಲ ಗೋಗರೆಯುತ್ತ ಇರುವುದನ್ನು ನೋಡಿ ಬಹಳ ಬೇಸರ ಆಗುತ್ತದೆ. ಇನ್ನು ಅರುಂಧತಿ ರಾಣಾ ಅವರದ್ದು ಒಂದೇ ಸಂಶಯ ಆದಿ ಯಾಕೆ ಆಸ್ತಿಯಲ್ಲಿ ಭಾಗ ಕೇಳಿದ ಅವನ ಮಾತಿನಲ್ಲಿ ಎಷ್ಟೆಲ್ಲ ಕ್ಲಾರಿಟಿ ಇತ್ತು ಅಲ್ವಾ ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇದನ್ನು ನೋಡಿದ ಅಖಿಲ ಶಾಕ್ ಆಗಿದ್ದಳು. ಅವನು ಆಸ್ತಿಯಲ್ಲಿ ಯಾಕೆ ಭಾಗ ಕೇಳಿದ ಗೊತ್ತಿಲ್ಲ, ನನಗೆ ಅರ್ಥ ಆಗುತ್ತಿಲ್ಲ ಎಂದು ರಾಣಾ ಬಳಿ ತನ್ನ ಅನುಮಾನ ವ್ಯಕ್ತಪಡಿಸುತ್ತಾ ಇರುತ್ತಾಳೆ.

ಅನುಮಾನ ವ್ಯಕ್ತ ಪಡಿಸಿದ ರಾಣಾ
ಆ ವೇಳೆ ರಾಣಾ ಕೂಡ ಅದೇ ಹೇಳುತ್ತಾನೆ. ಆದರೆ ರಾಣಾ ನನಗೊಂದು ಅನುಮಾನ ಆತ ಎಂದಿಗೂ ದುಡ್ಡಿಗೆ ಆಸೆ ಪಟ್ಟಿಲ್ಲ, ಅಮ್ಮ ಹಾಕಿದ ಗೆರೆ ದಾಟಿಲ್ಲ ಆದರೂ ಅದು ಹೇಗೆ ಅವನು ಹತ್ತು ಜನರ ಮಧ್ಯೆ ಆಸ್ತಿ ಕೇಳಿದ ಎಂದು ಯೋಚನೆ ಮಾಡುತ್ತಾ ತಲೆಕೆಡಿಸಿಕೊಂಡು ಇರುತ್ತಾನೆ. ಪ್ರೀತಮ್ ಏನಾದರು ಆದಿಗೆ ಹೇಳಿರಬೇಕ ಎಂದೆಲ್ಲ ಯೋಚನೆ ಮಾಡುತ್ತಾನೆ. ಆದರೆ ಇದೆಲ್ಲವನ್ನೂ ಮೋನಿಕಾ ಬಳಿ ಕೇಳಿ ತಿಳಿದುಕೊಳ್ಳುವುದು ಉತ್ತಮ ಎಂದು ಅಂದುಕೊಳ್ಳುತ್ತಾ ಇರುತ್ತಾನೆ. ಇನ್ನು ಆದಿ ಅಮ್ಮನನ್ನೆ ಇಷ್ಟ ಇಲ್ಲ ಎಂದು ಬಿಟ್ಟಿದ್ದಾನೆ. ಆಸ್ತಿಯಲ್ಲಿ ಪಾಲು ಕೇಳಲು ಕಾರಣ ಅಮ್ಮನೇ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಬಹಳ ಬೇಸರಪಟ್ಟುಕೊಂಡು ನಾನು ಎನು ಮಾಡಿದೆ ಎಂದೆಲ್ಲ ಹೇಳುತ್ತ ಇರುತ್ತಾಳೆ.

ತಾಯಿ ಬಾಯಿ ಮುಚ್ಚಿಸಿದ ಆದಿ
ಆದರೆ ಆದಿ ಮಾತ್ರ ಇಲ್ಲಸಲ್ಲದನ್ನು ಹೇಳಿ ತಾಯಿಯ ಬಾಯಿ ಮುಚ್ಚಿಸಿ ಬಿಡುತ್ತಾನೆ. ಇನ್ನು ರಘು ಹೊರಗೆ ಕಾಯುತ್ತಾ ಇರಬೇಕಾದರೆ ಮನೆ ಮಂದಿ ಎಲ್ಲಾ ಓಡಿ ಬರುತ್ತಾರೆ. ಮೋಹನ್ ಬಂದು ಅತ್ತಿಗೆ ಆದಿ.. ಎಂದು ಹೇಳಿದಾಗ ರಘು ಎಲ್ಲಾ ವಿವರವಾಗಿ ಮನೆ ಮಂದಿಗೆ ಹೇಳುತ್ತಾನೆ. ಇನ್ನು ಆದಿ ಮನೆ ಬಿಟ್ಟು ಹೋಗಲು ಅಖಿಲ ಒಪ್ಪುತ್ತಾರಾ ಎಂದು ಕಾದು ನೋಡಬೇಕಿದೆ.