Paaru: ಕಟುವಾಗಿ ಮಾತನಾಡಿದ ಪಾರ್ವತಿ ಮೇಲೆ ಅನುಮಾನ ವ್ಯಕ್ತ ಪಡಿಸಿದ ದಾಮಿನಿ

By Poorva

ಆದಿ ತನ್ನ ಮೇಲೆ ಗುಂಡು ಹಾರಿಸಿದ್ದು ತನ್ನ ತಾಯಿಯ ಸಂಚು ಎಂದು ಅಮ್ಮನ ಎದುರೇ ಕಠೋರವಾಗಿ ಆಪಾದನೆ ಮಾಡುತ್ತಾನೆ. ಬಳಿಕ ನನಗೆ ಈ ಮನೆಯಲ್ಲಿ ಉಳಿಗಾಲ ಇಲ್ಲ ಹಾಗೆಯೇ ನನ್ನ ಹೆಂಡತಿ ಪಾರುಗೆ ಕೂಡ ಈ ಮನೆಯಲ್ಲಿ ಉಳಿಗಾಲ ಇಲ್ಲ ಅದಕ್ಕಾಗಿ ನಾನು ಆಸ್ತಿಯಲ್ಲಿ ಭಾಗ ಕೇಳುತ್ತಾ ಇದ್ದೇನೆ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಸಾಕು ನಿಲ್ಲಿಸು ಆದಿ ಎಂದು ಜೋರಾಗಿ ಹೇಳುತ್ತಾಳೆ.

ಆ ಬಳಿಕ ಆದಿ ಮಾತು ನಿಲ್ಲಿಸಿ ಮನದಲಿ ಅಮ್ಮನಿಗೆ ಸಿಟ್ಟು ಬಂದದ್ದು ಒಳ್ಳಯದೆ ಆಯಿತು ನಾನು ಇದಕ್ಕಾಗಿಯೇ ಕಾಯುತ್ತಾ ಇದ್ದೆ ಎಂದುಕೊಳ್ಳುತ್ತಾ ಇರುತ್ತಾನೆ. ಕೋಪದಲ್ಲಿ ಅಖಿಲಾಂಡೇಶ್ವರಿ ಇಷ್ಟೆಲ್ಲ ಮಾತನಾಡುವಾಗ ನಾನು ಸುಮ್ಮನೆ ಇದ್ದೆ ಯಾಕೆ ಎಂದರೆ ನೀನು ನನ್ನ ಮಾತಿಗೆ ಬೆಲೆ ಕೋಡುತ್ತಿಯ ಎಂದು ಆದರೆ ಇದೀಗ ನನ್ನ ಮಾತಿಗೆ ಬೆಲೆ ಇಲ್ಲದ ಹಾಗೆ ಆಗಿದೆ, ನಾನು ನಿನ್ನ ಎಲ್ಲಾ ಮಾತನ್ನು ಕೇಳುತ್ತೇನೆ ಎಂದು ನೀನು ಅಂದುಕೊಳ್ಳಬೇಡ ಹಾಗೆ ನಾನು ಇನ್ನೊಂದು ಮಾತು ಆಡಿದರೆ ನಾನು ಸುಮ್ಮನೆ ಇರುವವಳು ಅಲ್ಲ ಎಂದು ಜೋರಾಗಿ ತಾಕೀತು ಮಾಡಿ ಹಾಲ್ ಗೆ ಬರುತ್ತಾಳೆ.

ಅಲ್ಲಿ ಪಾರ್ವತಿಯನ್ನು ನೋಡಿದ ಅಖಿಲ ನೋಡಮ್ಮ ನಿನ್ನ ಗಂಡ ಏನೇನೋ ಮಾತನಾಡುತ್ತಾ ಇದ್ದಾನೆ ಆತನಿಗೆ ಬುದ್ದಿ ಹೇಳಮ್ಮ ಯಾಕೆ ಹೀಗೆ ಮಾಡುತ್ತಾ ಇದ್ದಾನೆ ಎಂದು ಹೇಳುತ್ತಾಳೆ. ಅದಕ್ಕೆ ಪಾರು ಏನೂ ಮಾತನಾಡದೇ ಸುಮ್ಮನೆ ನಿಂತಿರುತ್ತಾಳೆ. ಇದನ್ನು ನೋಡಿದ ಅಖಿಲಾಂಡೇಶ್ವರಿ ಹೇಳಮ್ಮ ಪಾರು ಅಂದಾಗ ಪಾರ್ವತಿ ನನ್ನ ಗಂಡ ಹೇಳಿದರೋ ಅದೇ ನಾನು ಹೇಳುತ್ತಿದ್ದೇನೆ, ಅದನ್ನು ನಾವಿಬ್ಬರೂ ಒಟ್ಟಾಗಿ ನಿರ್ಧಾರ ಮಾಡಿರುವುದು ಎಂದು ಹೇಳಿದಾಗ ಅಖಿಲಾಂಡೇಶ್ವರಿಗೆ ಶಾಕ್ ಆಗುತ್ತದೆ.

ಪಾರ್ವತಿ ನಿರ್ಧಾರ ಕಂಡು ಅಖಿಲ ಶಾಕ್

ಪಾರ್ವತಿ ನಿರ್ಧಾರ ಕಂಡು ಅಖಿಲ ಶಾಕ್

ತನ್ನ ಹಿರಿ ಸೋಸೆಯೆ ಹೀಗೆ ಮಾತನಾಡುತ್ತಾ ಇದ್ದಾಳಲ್ಲ ಎಂದು ಅಖಿಲ ಬೇಸರಕ್ಕೆ ಒಳಗಾಗುತ್ತಾಳೆ. ಬಳಿಕ ತನ್ನ ಗಂಡ ಏನು ಹೇಳುತ್ತಾರೋ ಹಾಗೆ ನಾನು ಇರುವುದು ಕೂಡ ಎಂದು ಪಾರು ಖಡಕ್ ಆಗಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಅಖಿಲ ಪಾರುನಾ ಈ ಮಾತುಗಳನ್ನು ಆಡುತ್ತಿರುವುದು ಎಂದು ಯೋಚಿಸುತ್ತಾ ಅಲ್ಲಿಯೇ ಸೋಫಾ ಮೇಲೆ ಕುಳಿತುಕೊಳ್ಳುತ್ತಾಳೆ.

ಅಖಿಲಗೆ ಸಾಂತ್ವನ ಹೇಳಿದ ರಘು

ಅಖಿಲಗೆ ಸಾಂತ್ವನ ಹೇಳಿದ ರಘು

ಈ ವೇಳೆ ರಘು ಅಖಿಲಾಂಡೇಶ್ವರಿ ಸಾಂತ್ವನ ಹೇಳುತ್ತ ಇರುತ್ತಾನೆ. ಅಲ್ಲಿಗೆ ಬರುವ ದಾಮಿನಿ ಏನಕ್ಕಾ ನಾನು ಅಂದು ಹೇಳಿದಾಗ ನೀವು ನನ್ನ ಮಾತು ಕೇಳಲಿಲ್ಲ, ನಾನು ಹೇಳಲಿಲ್ವ ಇಲ್ಲಿ ಏನೋ ಬೇರೆ ನಡೆಯುತ್ತಾ ಇದೆ ಎಂದು, ಆದಿಗೆ ಯಾವ ಭಾಗ ಕೊಡುತ್ತೀರಾ ನೂರಾರು ಎಕರೆ ಆಸ್ತಿ ಇದೆ ಕಂಪೆನಿಗಳು ಇವೆ, ಇದರಲ್ಲಿ ಆದಿಗೆ ಏನು ಕೊಡುತ್ತೀರಾ, ಯಾವೆಲ್ಲ ಕಂಪನಿ ಕೊಡುತ್ತೀರಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ರಘು ಕೋಪಿಸಿಕೊಂಡು ದಾಮಿನಿ ಮೇಲೆ ಕೈ ಎತ್ತುತ್ತಾರೆ.

ದಾಮಿನಿ ಮೇಲೆ ಕೈ ಎತ್ತಿದ ರಘು

ದಾಮಿನಿ ಮೇಲೆ ಕೈ ಎತ್ತಿದ ರಘು

ಇದನ್ನು ನೋಡಿದ ದಾಮಿನಿ ನೋಡಿ ಬಾವ ನಾನು ಅಂಥ ಮಾತುಗಳನ್ನು ಆಡಿಲ್ಲ, ನಾವು ಕೂಡ ನಿಮ್ಮ ಬಳಿ ಆಸ್ತಿಯಲ್ಲಿ ಭಾಗ ಕೇಳಲಿಲ್ಲ, ನಮಗೂ ಕೂಡ ಈ ಮನೆಯಲ್ಲಿ ನೋವಾಗಿದೆ, ಆದರೆ ನಾವು ಆಸ್ತಿ ಕೇಳುವಷ್ಟು ಸಣ್ಣ ಮನುಷ್ಯರು ಅಲ್ಲ, ಆಸ್ತಿ ಕೇಳುವುದೂ ಇಲ್ಲ ಎಂದಾಗ ರಘು ಸುಮ್ಮನೆ ಇರುತ್ತಾನೆ. ಇನ್ನೂ ದಾಮಿನಿ ಅಖಿಲಗೆ ಅಕ್ಕ ನಾನು ಅಂದೇ ನಿಮಗೆ ಕಿವಿ ಮಾತು ಹೇಳಿದೆ ಏನಾದರು ಎಡವಟ್ಟು ಆಗುತ್ತದೆ, ಪಾರ್ವತಿ ಅಂದು ಆಕೆಯ ಹೆಸರಲ್ಲಿ ರಶೀದಿ ಬರೆಯುವಾಗ ಪ್ರಾಪರ್ಟಿ ತೆಗೆದುಕೊಳ್ಳುವಾಗ ನೆಪದಲ್ಲಿ ನಿಮ್ಮ ಬಳಿ ಕೇಳಿದಾಗ ನಾನೇ ಹೇಳಿದ್ದೇನೆ ಏನೋ ಇಲ್ಲಿ ಮಿಸ್ ಹೊಡೆಯುತ್ತಿದೆ ಎಂದು ಅಂದುಕೊಂಡು ಇರುತ್ತಿದ್ದೆ, ಅದನ್ನು ನಿಮ್ಮ ಬಳಿ ಹೇಳಿದಾಗ ನೀವು ನನಗೆ ಚೆನ್ನಾಗಿ ಬೈದಿರಿ ಎಂದು ಹೇಳುತ್ತಾಳೆ.

ಅಕ್ಕನ ಕಿವಿ ಊದಿದ ದಾಮಿನಿ

ಅಕ್ಕನ ಕಿವಿ ಊದಿದ ದಾಮಿನಿ

ಇದನ್ನು ಕೇಳಿದ ಅಖಿಲ ಸುಮ್ಮನೆ ಇರುತ್ತಾಳೆ. ಬಳಿಕ ರಘು ಆಸ್ಪತ್ರೆ ಬೆಡ್ ಅಲ್ಲಿ ಮಲಗಿರುವ ವೇಳೆ ಮನೆ ಭಾಗ ಆಗಬಾರದು ಎಂದು ರಘು ಅಖಿಲ ಬಳಿ ಭಾಷೆ ತೆಗೆದುಕೊಂಡಿರುತ್ತಾನೆ. ಅಖಿಲ ಆ ಬಗ್ಗೆಯೇ ಚಿಂತೆ ಮಾಡುತ್ತ ಇರುತ್ತಾಳೆ. ಏನು ಮಾಡುವುದು ಎಂದೆಲ್ಲ ಮನದಲ್ಲಿ ಯೋಚಿಸುತ್ತಿರುತ್ತಾಳೆ.. ಆದಿ ಮಾತನ್ನು ಕೇಳಿ ಮನಸನ್ನು ಕೆಡಿಸಿಕೊಂಡಿದ್ದ ಅಖಿಲ ಮಾತ್ರ ಆಸ್ತಿಯಲ್ಲಿ ಪಾಲು ಕೊಡಲು ನಿರ್ಧಾರ ಮಾಡಿದ ಹಾಗೆ ಇಲ್ಲ. ಇನ್ನು ಮುಂದೆ ಎನು ಕಾದು ನೋಡಬೇಕಿದೆ..

More from Filmibeat

English summary
Kannada serial paaru written update on 13th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X