Paaru: ಅಪಾಯದಿಂದ ಪಾರಾದ ಪಾರು; ಕುತಂತ್ರಿ ಅನುಷ್ಕ ಬಂಡವಾಳ ಬಯಲಾಗುತ್ತಾ?

By Poorva

ಪಾರು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಹನುಮಂತು ಕೈ ಮುರಿದುಕೊಂಡ ಹಾಗೆ ಅಭಿನಯ ಮಾಡಲು ತೊಡಗಿದ್ದಾನೆ. ಅದಕ್ಕೆ ಚೆನ್ನಪ್ಪ ಹಾಗೂ ರಘು ಸಾಥ್ ನೀಡುತ್ತಾ ಇದ್ದಾರೆ. ಹೇಗಾದರೂ ಮಾಡಿ ಅಮ್ಮ ಮಗನನ್ನು ಒಟ್ಟು ಮಾಡಬೇಕು ಎಂಬುವುದು ಅವರ ಆಸೆ. ಆದರ ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಇದೀಗ ಹನುಮಂತು ಕೈ ಮುರಿದುಕೊಂಡಿದ್ದೇನೆ ಇನ್ನೂ ಅಖಿಲ ಅಮ್ಮನ ಸಾರಥಿಯಾಗಿ ಆದಿಯನ್ನು ಹೋಗಲು ಹೇಳುತ್ತಾರೆ. ಅದಕ್ಕೆ ಆದಿ ಸರಿ ಎಂದು ಒಪ್ಪಿಗೆಯನ್ನು ಹೇಳುತ್ತಾನೆ.

ಇನ್ನು ಹನುಮಂತು ಮಲಗುವ ವೇಳೆ ಆತನ ಕೈಯನ್ನು ತಲೆಯ ಮೇಲೆ ಇಟ್ಟುಕೊಂಡು ಮಲಗಿಕೊಂಡಿರುತ್ತಾನೆ. ಅದನ್ನು ನೋಡಿದ ಆದಿ ಪಾರುವನ್ನು ಕರೆದು ನೋಡು ನಿಮ್ಮ ತಂದೆ ತಲೆಯ ಕೆಳಗೆ ಕೈ ಇಟ್ಟು ಮಲಗಿದ್ದಾರೆ ಎಂದು ಸರಿಪಡಿಸುತ್ತಾನೆ. ಅದನ್ನು ನೋಡಿ ಬಳಿಕ ಆದಿ ಹನುಮಂತುವನ್ನು ಸರಿಯಾಗಿ ಮಲಗಿಸಿ ಪಾರು ಬಳಿ ಹನುಮಂತುವನ್ನು ನೋಡಿಕೋ ಎಂದು ಹೇಳಿ ಡ್ರೈವರ್ ಹಾಕುವ ಡ್ರೆಸ್ ಅನ್ನು ತೆಗೆದುಕೊಂಡು ಬರಲು ಹೋಗುತ್ತಾನೆ.

Kannada serial Paaru written update on 13th March .

ಇದನ್ನು ನೋಡಿದ ಹನುಮಂತು ಮೆತ್ತಗೆ ಎದ್ದು ಮನದಲ್ಲಿ ಯೋಚನೆ ಮಾಡುತ್ತಾನೆ. ನನ್ನಿಂದಾಗಿ ಇವರಿಗೆ ಎಷ್ಟು ಕಷ್ಟ ಆದರೂ ಇವರಿಬ್ಬರೂ ಚೆನ್ನಾಗಿ ಇರಲಿ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಆದಿ ಹಾಗೂ ರಘು ಪಾರ್ಕ್ ಬಳಿ ಮಾತನಾಡುತ್ತಾ ಇರುತ್ತಾರೆ. ಆದಿ ತಂದೆಯ ಬಳಿ ಸಾರಥಿ ಗೆ ಕೈಗೆ ಏಟಾಗಿದೆ ಎಂದೆಲ್ಲ ಹೇಳಿದಾಗ ರಘು ರೆಸ್ಟ್ ಮಾಡಲಿ ಬಿಡಿ ಎಂದು ಹೇಳುತ್ತಾನೆ.

ಆ ಬಳಿಕ ಅನುಷ್ಕಾ ಪಾರುಗೆ ಕೊಟ್ಟಿರುವ ಮಾತ್ರೆಯನ್ನು ರಘುಗೆ ತೋರಿಸಿ ಅಪ್ಪ ಪಾರುಗೆ ಕೂಡ ಇದುವೇ ಮಾತ್ರೆ ಕೊಡಲು ಸಾಧ್ಯ ಇಲ್ಲ ಯಾಕೆಂದರೆ ಆಕೆಯನ್ನು ಡಾಕ್ಟರ್ ಚೆಕಪ್ ಮಾಡಿ ಏನು ಮಾತ್ರೆ ಕೊಡುತ್ತಾರೋ ಅದನ್ನೇ ಕೊಡಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ, ಈ ಟೈಮ್ ನಲ್ಲಿ ನಾವು ಎಲ್ಲಿಯೂ ಎಡವಬಾರದು ಎಂದು ಹೇಳುತ್ತ ಇರುವಾಗ ಅನುಷ್ಕ ಬರುತ್ತಾಳೆ. ತಂದೆ ಮಗ ಮಾತನಾಡುವುದನ್ನು ಕದ್ದು ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ಆದಿ ಬಳಿ ರಘು ನಾನೇ ಆ ಸಿಸ್ಟರ್ ಬಳಿ ಹೇಳಿದೆ ಆ ಕಾರಣಕ್ಕೆ ಅವರು ಪಾರುಗೆ ಆ ಮಾತ್ರೆ ಕೊಡಲು ಬಂದಿದ್ದರು ಅನ್ನಿಸುತ್ತದೆ, ತೊಂದರೆ ಇಲ್ಲ ಎನ್ನುತ್ತಾನೆ .

ಈ ಮಾತ್ರೆಯನ್ನು ಕೊಡಬಹುದ ಅಥವಾ ಇಲ್ಲವೇ ಎಂಬುದನ್ನು ಡಾಕ್ಟರ್ ಬಳಿ ಕೇಳುತ್ತೇನೆ ಎಂದು ಹೇಳಿದ ಬಳಿಕ ಇವತ್ತು ನಾನೇ ಅಮ್ಮನಿಗೆ ಡ್ರೈವರ್ ಆಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ.. ಇದನ್ನೆಲ್ಲ ನೋಡಿದ ಅನುಷ್ಕಗೆ ಏನು ಹೇಳಬೇಕು ಎಂದು ತಿಳಿಯದೇ ಭಯಾಗೊಳ್ಳುತ್ತ ರಾಣಾಗೆ ಕರೆ ಮಾಡುತ್ತಾಳೆ. ರಾಣಾನ ಮಾತುಗಳನ್ನು ಕೇಳಿ ಅನುಷ್ಕಗೆ ಕೆಂಡದ ಹಾಗೆ ಕೋಪ ಬರುತ್ತದೆ. ಅಮ್ಮನನ್ನು ಕೊಲ್ಲುವುದಕ್ಕಿಕಂತ ನಿನ್ನನೇ ಕೊಂದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಹೇಳುತ್ತಾಳೆ. ಆಗ ರಾಣಾ ಒಂದು ಒಳ್ಳೆಯ ಉಪಾಯವನ್ನು ಆಕೆಗೆ ನೀಡುತ್ತಾನೆ. ಆಕೆ ರಾಣಾ ಏನು ಹೇಳಿದ ಅದನ್ನೇ ಫಾಲೋ ಮಾಡುತ್ತಾಳೆ.

Kannada serial Paaru written update on 13th March .

ಬಳಿಕ ಆದಿ ನಡೆದು ಪಾರು ಬಳಿಗೆ ಹೋಗುತ್ತಾ ಇರಬೇಕಾದರೆ ಅನುಷ್ಕ ಕೊಂಚ ಬೇಗ ಬಂದು ಆದಿಗೆ ಡಿಕ್ಕಿ ಹೊಡೆಯುತ್ತಾಳೆ. ಆಗ ಆದಿ ಕೈಯಿಂದ ಆ ಮಾತ್ರ ಡಬ್ಬ ಕೆಳಗೆ ಬಿದ್ದು ಒಡೆದು ಹೋಗುತ್ತದೆ. ಅದನ್ನು ಕಂಡ ಆದಿಗೆ ಕೊಂಚ ಕೋಪ ಬರುತ್ತದೆ. ನಿಮಗೆ ಮೆತ್ತಗೆ ಬರಲು ಆಗುವುದೇ ಇಲ್ವಾ ಎಂದು ಆದಿ ಹೇಳಿದಾಗ ಅನುಷ್ಕ ತೊದಲುತ್ತಾ ಜನನಿ ಅವರನ್ನು ನೋಡಿಲ್ಲಂದ್ರೆ ಅಖಿಲ ಅಮ್ಮ ಬಯ್ಯುತ್ತಾರೆ, ಪಾರು ಅವರನ್ನು ನೋಡಿಲ್ಲ ಅಂದ್ರೆ ರಘು ಅವರು ಬಯ್ಯುತ್ತಾ ಇರುತ್ತಾರೆ. ಅದಕ್ಕೆ ಅವಸರದಿಂದ ಬಂದೆ ಎಂದು ಹೇಳುತ್ತಾಳೆ.

ಆದರೆ ಆದಿ ನೀವು ಜನನಿ ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಅಮ್ಮನಿಗೆ ಬೇಸರ ಮಾಡಬೇಡಿ ಎಂದು ಹೇಳು ಕಳುಹಿಸುತ್ತಾನೆ. ಇದನ್ನು ಕಂಡ ಅನುಷ್ಕ ಬದುಕಿದೆನೇ ಬಡ ಜೀವ ಎಂದು ಹೋಗುತ್ತಾಳೆ. ಇನ್ನು ಪಾರು ಬಳಿ ಆದಿ ಆ ನರ್ಸ್ ಬಗ್ಗೆ ಅನುಮಾನ ಕೂಡ ಹೊರಹಾಕುತ್ತಾನೆ. ಇನ್ನು ರಘು ಮಾತ್ರ ದೇವರ ಬಳಿ ಬೇಡಿಕೊಂಡು ಇರುತ್ತಾನೆ. ಇವತ್ತು ಆದಿ ನಮ್ಮ ಜೊತೆ ಕಾರಿನಲ್ಲಿ ಬಂದರೆ ಅರ್ಚನೆ ಮಾಡಿಕೊಂಡು ಬರುತ್ತೇವೆ ಎಂದು ಬೇಡಿಕೊಂಡು ಇರುವಾಗ ಅಖಿಲ ಅಲ್ಲಿಗೆ ಬಂದು ಯೋಚನೆ ಮಾಡುತ್ತಾ ಇರುವ ರಘು ಬಗ್ಗೆ ಕೇಳುತ್ತಾನೆ.

ದೇವಾಲಯಕ್ಕೆ ಹೋಗಬೇಕು ಎಂದು ಅನ್ನಿಸುತ್ತಿದೆ ಎಂದು ರಘು ಹೇಳಿದಾಗ ಅಖಿಲ ಗೆ ಖುಷಿ ಆಗುತ್ತದೆ ಬಳಿಕ ರಘು ಹನುಮಂತು ಬಿದ್ದು ಪೆಟ್ ಮಾಡಿಕೊಂಡು ಇರುವ ಬಗ್ಗೆ ಹೇಳುತ್ತಾನೆ. ಆತನ ಇನ್ನೊಬ್ಬ ಡ್ರೈವರ್ ಅನ್ನು ನೇಮಕ ಕೂಡ ಮಾಡಿದ್ದಾನೆ ಎಂದಾಗ ಅಖಿಲ ಗೆ ಖುಷಿ ಆಗುತ್ತದೆ.

More from Filmibeat

English summary
Kannada serial paaru written updated on 13th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X