Paaru: ಪಾರು ಕೆಲಸಕ್ಕೆ ಹೋಗುತ್ತಿರುವ ವಿಷಯ ತಿಳಿದು ಕಣ್ಣೀರಿಟ್ಟ ಆದಿ!
ಪಾರು ಧಾರವಾಹಿ ಬಹಳ ಕುತೂಹಲ ಭರಿತವಾಗಿ ಮೂಡಿ ಬರುತ್ತಿದೆ. ಪಾರು ಸಂಗೀತ ಮನೆಗೆ ಕೆಲಸಕ್ಕೆ ಹೋಗುತ್ತಾಳೆ. ಆದರೆ ಮನೆಯ ಬಾಗಿಲು ಹಾಕಿತ್ತು. ಪಾರು ಆಕೆಯ ಮನೆಯ ಯಜಮಾನಿಗೆ ಕರೆ ಮಾಡುತ್ತಾಳೆ. ಆಗ ಸಂಗೀತ ಕಾಲ್ ರಿಸೀವ್ ಮಾಡಿ ಆಟೋದಲ್ಲಿ ಮನೆಗೆ ಬರುತ್ತಾ ಇರುವುದನ್ನು ಹೇಳುತ್ತಾಳೆ.
ಹಾಗೆಯೇ ಮನೆಯ ಕೀ ಎಲ್ಲಿದೆ ಎಂಬುವುದನ್ನು ಪಾರು ಬಳಿ ಹೇಳುತ್ತಾಳೆ. ಆಗ ಪಾರು ಮನೆಯ ಕೀ ತೆಗೆದುಕೊಂಡು ಮನೆಯ ಬಾಗಿಲು ತೆಗೆದು ಕೆಲಸ ಮಾಡುತ್ತಾ ಇರುತ್ತಾಳೆ. ಇನ್ನು ಆಟೋದಲ್ಲಿ ಬರಬೇಕಾದರೆ ಆದಿ ಸಂಗೀತ ಬಳಿ ನನ್ನ ಹೆಂಡತಿ ಕೂಡ ಬಸಿರು ಆಕೆ ಕೂಡ ಮೊನ್ನೆಯಷ್ಟೇ ಸೀಮಂತ ಶಾಸ್ತ್ರ ಮಾಡಿ ಮುಗಿಸಿದ್ದೇವೆ ಆಕೆಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಇರುತ್ತೇವೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಂಗೀತಗೆ ಬಹಳ ಖುಷಿ ಆಗುತ್ತದೆ. ಆಕೆ ಕೂಡ ಬಸರಿ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾಳೆ. ಇನ್ನು ಆದಿ ಸಂಗೀತ ಮನೆ ಮುಂದೆ ಬಂದು ಗಾಡಿ ನಿಲ್ಲಿಸುತ್ತಾನೆ.

ಆದರೆ ಆದಿ ಆಕೆಯ ಕೈಯಿಂದ ಹಣ ತೆಗೆದುಕೊಳ್ಳುವುದಿಲ್ಲ. ಇದನ್ನು ನೋಡಿದ ಸಂಗೀತಾ ಮನೆಯಲ್ಲಿ ಬಸುರಿ ಹೆಂಡತಿ ಇದ್ದಾಳೆ ಅಲ್ವಾ.. ಇನ್ನೂ ತುಂಬಾ ಹಣ ಬೇಕಾಗುತ್ತದೆ .. ನಮ್ಮ ಬಳಿ ಕೊಂಚ ಹಣ ಇದೆ. ನೀವು ಬಡವರಿಗೆ ಈ ಸೇವೆ ಮಾಡುವುದು ಒಳ್ಳೆಯದು ಎಂದು ಹೇಳಿ ಹಣ ಕೊಡುತ್ತಾಳೆ.
ಆಕೆ ಮನೆಗೆ ತೆರಳುವ ವೇಳೆ ಆದಿ ತಡೆದು ಆತನೇ ಲಗೇಜ್ ಹಿಡಿದು ಮನೆ ಒಳಗೆ ತರುತ್ತಾನೆ. ಇನ್ನು ಮನೆಯ ಒಳಗೆ ಬಂದ ಆದಿಯನ್ನು ಸಂಗೀತಾ ಕಾಫಿ ಕುಡಿಯಲು ಹೇಳುತ್ತಾಳೆ. ಕೆಲಸದವರ ಬಳಿ ಕಳುಹಿಸುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಪಾರು ಬಳಿ ಬಂದ ಸಂಗೀತಾ ಆಟೋ ಡ್ರೈವರ್‌ಗೆ ಕಾಫಿ ಮಾಡಲು ಹೇಳುತ್ತಾಳೆ.
ಇದನ್ನು ಕೇಳಿದ ಪಾರು ಆಯಿತು ಎಂದು ಹೇಳಿ ಕಾಫಿ ತೆಗೆದುಕೊಂಡು ಹೋಗಿ ಆದಿಗೆ ಕೊಡುತ್ತಾಳೆ. ಇದನ್ನು ನೋಡಿದ ಆದಿ ಮಾತ್ರ ಶಾಕ್ ಆಗಿ ಹೋಗುತ್ತಾನೆ. ಪಾರು ನೀನು ಏನು ಮಾಡುತ್ತಾ ಇದ್ದೀಯಾ ಇಲ್ಲಿ ಎಂದು ಕೇಳಿದಾಗ ಪಾರುಗೆ ಆದಿಯನ್ನು ನೋಡಿ ಏನು ಹೇಳಬೇಕು ಎಂದು ತಿಳಿಯದೇ ತಬ್ಬಿಬ್ಬಾಗುತ್ತಾಳೆ.
ಪಾರು ಮೌನವಾಗಿ ಇರುವುದನ್ನು ನೋಡಿದ ಆದಿಗೆ ತಿಳಿಯುತ್ತದೆ. ಪಾರು ಇಲ್ಲಿ ಕೆಲಸ ಮಾಡುತ್ತಾ ಇದ್ದಾಳೆ ಎಂದು. ಇದು ತಿಳಿದಾಗ ಬಹಳ ಸಿಟ್ಟು ಮಾಡಿಕೊಳ್ಳುತ್ತಾನೆ. ಒಂದು ಕಡೆ ಬಹಳ ಬೇಸರ. ಇನ್ನೊಂದು ಕಡೆ ಕೋಪ ಎರಡೆರಡು ಒಟ್ಟೊಟ್ಟಿಗೆ ಬರುತ್ತದೆ. ಆಗ ಅಲ್ಲಿಗೆ ಸಂಗೀತಾ ಬರುತ್ತಾಳೆ. ಪಾರು ಏನೆನೆಲ್ಲ ಕೆಲಸ ಮಾಡುತ್ತಾಳೆ ಎಂಬುವುದನ್ನು ಕೇಳುತ್ತಾನೆ. ಇದನ್ನು ಕೇಳಿದ ಸಂಗೀತಾ ಆಕೆ ಏನೇನೆಲ್ಲ ಕೆಲಸ ಮಾಡುತ್ತಾಳೆ ಅದೆಲ್ಲವನ್ನೂ ಹೇಳುತ್ತಾಳೆ. ಇದನ್ನು ಕೇಳಿದ ಪಾರು ಭಯಗೊಂಡು ತತ್ತರಿಸುತ್ತಾಳೆ .
ಸಂಗೀತಾ ಹೇಳಿದ ಮಾತಿಗೆ ಬಹಳ ಬೇಸರಗೊಂಡ ಆದಿ ಅಲ್ಲಿಂದ ಹೋಗುತ್ತಾನೆ. ಇನ್ನು ಪಾರು ಕೆಲಸ ಎಲ್ಲಾ ಮುಗಿಸಿ ಮನೆಗೆ ಹೋಗಬೇಕು ಎಂದುಕೊಂಡ ವೇಳೆ ಆದಿ ಮನೆಯ ಎದುರೇ ಪಾರುಗಾಗಿ ಕಾದು ಕುಳಿತಿದ್ದಾನೆ. ಮುಂದೇನು ಕಾದು ನೋಡಬೇಕಿದೆ


Click it and Unblock the Notifications











