Paaru: ಆಸ್ತಿ ಕೇಳಿ ಮನೆಬಿಟ್ಟಿದ್ದ ಆದಿನೇ ಈಗ ಅಖಿಲಾಂಡೇಶ್ವರಿ ಕಾರ್ ಡ್ರೈವರ್!
ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಮುದ ನೀಡಿದೆ. ಇದೀಗ ಅನುಷ್ಕ ರಾಣಾನ ಬಳಿ ಕಾಲ್ ನಲ್ಲಿ ಮಾತನಾಡುತ್ತಾ ಇರುತ್ತಾಳೆ. ಆ ವೇಳೆ ಜೋರಾಗಿ ರಾಣಾ ಎಂದು ಕರೆಯುತ್ತಾಳೆ. ಆ ಬಳಿಕ ಮಾತನಾಡುತ್ತಾ ಹಿಂದುರುಗಿ ನೋಡುವಾಗ ಅಖಿಲ ಹಾಗೂ ರಘು ನಿಂತಿರುವುದನ್ನು ನೋಡಿ ಬೆಚ್ಚಿ ಬೀಳುತ್ತಾಳೆ. ಫೋನ್ ಕಟ್ ಮಾಡುತ್ತಾಳೆ. ಆ ಬಳಿಕ ರಾಣಾ ಎಂದರೆ ಯಾರು ಎಂದು ಅಖಿಲಾಂಡೇಶ್ವರಿ ಕೇಳುತ್ತಾರೆ. ಆಗ ಅನುಷ್ಕ ತೊದಲುತ್ತಾ ಅಖಿಲ ಬಳಿ ಸುಳ್ಳು ಕತೆ ಕಟ್ಟುತ್ತಾಳೆ.
ಇದನ್ನು ನಂಬದ ಅಖಿಲ ಆಕೆಯ ಫೋನ್ ಚೆಕ್ ಮಾಡುತ್ತಾಳೆ. ಅದರಲ್ಲಿ ರಾಣಾ ಎಂಬ ಹೆಸರಿನ ಬದಲು ರಾಣಿ ಎಂದು ಬರೆಯಲಾಗಿತ್ತು. ಇದನ್ನು ಕಂಡ ಅಖಿಲ ಸುಮ್ಮನೆ ಇರುತ್ತಾಳೆ. ಅನುಷ್ಕ ಅಲ್ಲಿಂದ ಮೆತ್ತಗೆ ಯೋಚನೆ ಮಾಡುತ್ತಾ ತೆರಳುತ್ತಾಳೆ. ಅಖಿಲ ನೀನು ಹೇಗೆ ಯೋಚನೆ ಮಾಡುತ್ತೀಯಾ ಅದೆಲ್ಲ ನನಗೆ ತಿಳಿದಿದೆ, ಅದಕ್ಕೆ ರಾಣಾ ಎಂಬ ಬದಲಿಗೆ ರಾಣಿ ಎಂದು ಹೆಸರು ಇಟ್ಟಿದ್ದೇನೆ ಎಂದು ಮನದಲ್ಲೇ ಹೇಳಿಕೊಳ್ಳುತ್ತಾಳೆ. ಇನ್ನು ಅನುಷ್ಕ ಹೋದ ಬಳಿಕ ಅಖಿಲಾಂಡೇಶ್ವರಿ ರಘು ಬಳಿ ರಾಣಾ ಎಂದಾಗ ನನಗೆ ಭಯ ಆಗುತ್ತದೆ ಅರುಂಧತಿ ಸತ್ತು ಹೋಗಿರಬಹುದು ಆದರೆ ಅರುಂಧತಿ ಅಣ್ಣ ರಾಣಾ ಇನ್ನೂ ಇದ್ದಾನೆ ಅಲ್ವಾ ಎಂದು ಹೇಳಿದಾಗ ರಘುಗೆ ಹೌದು ಅನ್ನಿಸುತ್ತದೆ.

ಬಳಿಕ ರಘು ಅಖಿಲಾಂಡೇಶ್ವರಿಗೆ ಸಮಾಧಾನ ಮಾಡಿ ದೇವಾಲಯಕ್ಕೆ ಹೋಗೋಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲ ದೇವಾಲಯಕ್ಕೆ ಹೊರಡುತ್ತಾಳೆ. ಆ ವೇಳೆ ಕಾರಿನ ಬಳಿ ಬಂದ ಅಖಿಲಗೆ ಶಾಕ್ ಕಾದಿತ್ತು. ಇಂತಹ ಒಂದು ಸಂದರ್ಭ ನನಗೆ ಬರುತ್ತೆ ಎಂದು ಅಖಿಲ ಕನಸಿನಲ್ಲೂ ಎನಿಸಿಕೊಂಡು ಇರಲಿಲ್ಲ. ಅಖಿಲಗೆ ಕಾರು ಡ್ರೈವರ್ ಆಗಿ ಬಂದಿರುವುದು ಬೇರೆ ಯಾರೂ ಅಲ್ಲ ಆದಿ. ಆದಿ ಅಖಿಲಗೆ ಡ್ರೈವರ್ ಆಗಿ ಬಂದಿರುವುದನ್ನು ನೋಡಿ ಅಖಿಲಗೆ ಶಾಕ್ ಆಗುತ್ತದೆ.
ರಘು ಅಖಿಲಾಂಡೇಶ್ವರಿಯನ್ನು ಸಮಾಧಾನ ಮಾಡುತ್ತಾನೆ. ಹನುಮಂತುಗೆ ಕೈಗೆ ಏಟು ಆದ ಕಾರಣ ಆದಿಯನ್ನು ಕಳುಹಿಸಿದ್ದಾನೆ ಎನ್ನುತ್ತಾನೆ. ಇನ್ನು ಆದಿ ಮಾತ್ರ ಅಖಿಲಾಂಡೇಶ್ವರಿಯನ್ನು ಮೇಡಂ ಎಂದು ಕರೆಯುವಾಗ ಅಖಿಲಗೆ ನೋವು ಆಗುತ್ತದೆ. ಅಖಿಲ ಏನು ಮಾತನಾಡದೆ ಕಾರು ಹತ್ತಿ ಕುಳಿತುಕೊಳ್ತಾಳೆ. ಇದನ್ನು ನೋಡಿದ ಆದಿ ಕಾರಿನಲ್ಲಿ ಕುಳಿತುಕೊಂಡು ಎಲ್ಲಿಗೆ ಹೋಗಬೇಕು ಎಂದೆಲ್ಲ ಕೇಳಿದಾಗ ರಘು ನಮ್ಮನ್ನು ಮೊದಲು ದೇವಾಲಯಕ್ಕೆ ಕರೆದುಕೊಂಡು ಹೋಗಪ್ಪ ಎಂದು ಹೇಳುತ್ತಾನೆ. ಇನ್ನು ಆದಿ ಡ್ರೈವರ್ ಆಗಿ ಹೋಗಿರುವುದನ್ನು ಕಂಡ ದಾಮಿನಿ ಮೋಹನ್ ಬರುತ್ತಾರೆ.

ಡ್ರೈವರ್ ಆಗಿ ಆದಿ ಯಾಕೆ ಎಂದೆಲ್ಲ ಕೇಳುತ್ತಾರೆ. ಇದನ್ನು ಕೇಳಿದಾಗ ರಘುಗೆ ಎಲ್ಲಿಲ್ಲದ ಕೋಪ ಬರುತ್ತದೆ, ಆದರೂ ದಾಮಿನಿ ಮಾತನ್ನು ಲೆಕ್ಕಿಸದೆ ಆದಿ ಜೊತೆ ಹೋಗುತ್ತಾರೆ. ಇನ್ನು ಆದಿ ಡ್ರೈವರ್ ಆಗಿ ಹೋಗಿದ್ದಕ್ಕೆ ಜನನಿಗೆ ಬಹಳ ಸಿಟ್ಟು ಬರುತ್ತದೆ. ಆಕೆ ಪಾರು ಬಳಿ ಬಂದು ಜಗಳ ಮಾಡುತ್ತಾಳೆ. ಇದನ್ನು ಕಂಡ ಪಾರು ಜನನಿ ಬಳಿ ದಿನವಿಡೀ ಇವತ್ತು ಅಮ್ಮನ ಮುಖ ನೋಡುವ ಭಾಗ್ಯ ಸಿಗುವಾಗ ಯಾಕೆ ಬೇಡ ಎನ್ನಲಿ ಎಂದು ಹೇಳುತ್ತಾಳೆ. ಇದನ್ನು ಕೇಳಿ ಜನನಿ ಕೋಪ ನೋಇರಾಗುತ್ತದೆ. ಆಕೆ ಪಾರು ತಂದೆಯನ್ನು ನೋಡಿದಾಗಲೇ ಗೊತ್ತಾಗಿದ್ದು ಹನುಮಂತು ಕೈಗೆ ಎಟಾಗಿರುವ ವಿಚಾರ. ಈ ಬಗ್ಗೆ ಏನು ಮಾತನಾಡದ ಹನುಮಂತು ಸುಮ್ಮನೆ ನಿಂತಿರುತ್ತಾನೆ..
ಇನ್ನು ಪ್ರೀತಮ್ ನಾಳೆ ಬರುತ್ತಾ ಇದ್ದಾನೆ ಎಂದು ಜನನಿ ಬಹಳ ಖುಷಿ ಪಡುತ್ತಾಳೆ. ಅದನ್ನು ಪಾರು ಬಳಿ ಹೇಳಿ ಖುಷಿ ಹಂಚಿಕೊಂಡು ಇರುತ್ತಾಳೆ. ಇದನ್ನು ನೋಡಿದ ಪಾರುಗೆ ಬಹಳ ಖುಷಿ ಆಗುತ್ತದೆ. ಇನ್ನು ದೇವಾಲಯಕ್ಕೆ ಅಖಿಲಾಂಡೇಶ್ವರಿ ಹೋಗುತ್ತಾರೆ. ಆದಿ ಅಪ್ಪ ಅಮ್ಮನ ಜೊತೆ ಡ್ರೈವರ್ ಆಗಿ ದೇವಾಲಯಕ್ಕೆ ಎಂಟ್ರಿ ಕೊಡ್ತಾನೆ. ಇದನ್ನು ನೋಡಿದ ಅಖಿಲಗೆ ಬಹಳ ಬೇಸರ ಆಗುತ್ತದೆ. ಅಖಿಲ ದೇವರ ಪೂಜೆ ಮಾಡಿಸುವ ವೇಳೆ ಅರ್ಚಕರು ನೀವು ಇವರ ಮಗ ಅಲ್ವಾ ಇದೇನು ಈ ಡ್ರೆಸ್ ನಲ್ಲಿ ಎಂದು ಹೇಳಿದಾಗ ಆದಿ ನಾನು ಡ್ರೈವರ್ ಎಂದು ಹೇಳುತ್ತಾನೆ.


Click it and Unblock the Notifications











