Paaru: ಅಮ್ಮನ ಮಾತನ್ನು ಲೆಕ್ಕಿಸದ ಆದಿ; ಪಾರುವನ್ನು ಆಟ ಆಡಿಸುತ್ತಾ ಇರುವವರು ಸಿಕ್ಕಿ ಬೀಳ್ತಾರಾ?

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಅಖಿಲಾಂಡೇಶ್ವರಿ ತನ್ನ ಮಗನಿಗೆ ಕೆಲಸ ನೀಡಲು ಮುಂದಾಗಿದ್ದಾರೆ. ಅಖಿಲ ತನ್ನ ಮಗನೊಂದಿಗೆ ಬಹಳ ಖುಷಿಯಿಂದ ಕಾಲ ಕಳೆಯ ಬೇಕು ಮೊಮ್ಮಕ್ಕಳೊಂದಿಗೆ ಬಹಳ ಖುಷಿಯಿಂದ ಇರಬೇಕು ಎನ್ನುವುದು ಆಸೆ ವ್ಯಕ್ತಪಡಿಸಿದ್ದಾಳೆ.
ಇನ್ನು ಈ ವಿಚಾರವನ್ನು ಅಖಿಲ ತನ್ನ ಗಂಡನ ಬಳಿ ಹೇಳಿಕೊಂಡಿರುತ್ತಾಳೆ. ಇದನ್ನು ಕೇಳಿದ ರಘು ಸಂತಸದಿಂದ ಇರುತ್ತಾನೆ. ಈ ವಿಚಾರವನ್ನು ಆದಿ ಬಳಿ ಹೇಳಬೇಕು ಎಂದು ಬರುತ್ತಾನೆ. ರಘು ಆದಿ ಬಳಿ ಬಂದು ಬಹಳ ಖುಷಿಯಿಂದ ಆದಿ ಇನ್ನು ಮೇಲೆ ನೀನು ನನ್ನ ಆಫೀಸಿನಲ್ಲಿ ಬಂದು ದುಡಿಯಬಹುದು, ಅಖಿಲ ನಿನಗೆ ಕೆಲಸ ಕೊಡುತ್ತೇನೆ ಎಂದು ಹೇಳಿದ್ದಾಳೆ, ನೋಡು ನಿನ್ನ ತಾಯಿಗೆ ಕೂಡ ನಿನ್ನ ಕಷ್ಟ ನೋಡಲು ಸಾಧ್ಯ ಆಗಿಲ್ಲ ಅನ್ನಿಸುತ್ತದೆ ಅದಕ್ಕೆ ಅವಳು ನಿನಗೆ ಕೆಲಸ ನೀಡುತ್ತಾ ಇದ್ದಾಳೆ ಎನ್ನುತ್ತಾನೆ.
ಇನ್ನು ಮುಂದೆ ನೀನು ಕೈ ತುಂಬಾ ಹಣ ಸಂಪಾದನೆ ಮಾಡಬಹುದು ಎಂದು ಹೇಳಿದಾಗ ಹನುಮಂತುಗೆ ಬಹಳ ಖುಷಿ ಆಗುತ್ತದೆ. ಆ ಖುಷಿಯನ್ನು ಆದಿ ಪಾರು ಭಗ್ನ ಮಾಡಿ ಬಿಡುತ್ತಾರೆ. ಆದಿ ನೇರವಾಗಿ ತಾನು ಆ ಕೆಲಸಕ್ಕೆ ಹೋಗುವುದು ಇಲ್ಲ ಅಪ್ಪ ನಾನು ದುಡಿದು ಹಣ ಸಂಪಾದನೆ ಮಾಡುತ್ತೇನೆ ಎಂದು ಬಹಳ ನೋವಿನಿಂದ ಹೇಳುತ್ತಾನೆ.
ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಮ್ಮತ ಇದೆ ನಾವಿಬ್ಬರೂ ಸೇರಿ ತೆಗೆದುಕೊಳ್ಳುವ ನಿರ್ಧಾರ ಇದು ಎಂದು ಪಾರು ಸಹ ಹೇಳುತ್ತಾಳೆ. ಇದನ್ನು ಕೇಳಿದ ಹನುಮಂತು ಪಾರು ಮೇಲೆ ಕೈ ಮಾಡಲು ಬರುತ್ತಾನೆ. ಆದರೆ ಇದನ್ನು ನೋಡಿದ ರಘು ಹನುಮಂತುಗೆ ಬಯ್ಯುತ್ತಾನೆ. ಗರ್ಭಿಣಿ ಮಗಳ ಮೇಲೆ ಈ ರೀತಿ ಕೈ ಎತ್ತಲು ನಾಚಿಕೆ ಆಗುವುದಿಲ್ಲವೇ ಎಂದಾಗ ಹನುಮಂತು ಸುಮ್ಮನೆ ಇರುತ್ತಾನೆ. ಇದನ್ನೆಲ್ಲ ದೂರದಿಂದ ನೋಡುತ್ತಾ ಅನುಷ್ಕ ನಗುತ್ತಾ ಇರುತ್ತಾಳೆ
ರಘು ನೇರವಾಗಿ ಮನೆಗೆ ಹೋಗುತ್ತಾನೆ. ದಾಮಿನಿ ರಘು ಮುಖ ನೋಡಿಯೇ ಆದಿ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಅನ್ನಿಸುತ್ತದೆ ಎಂದು ಹೇಳುತ್ತ ಇರುತ್ತಾಳೆ. ಇನ್ನು ಸಪ್ಪಗೆ ಮುಖ ಮಾಡುತ್ತಾ ಅಖಿಲ ಬಳಿ ಬಂದ ರಘು ಅಖಿಲ ಆದಿ ಈ ಕೆಲಸ ಬೇಡವೆಂದು ಹೇಳಿದ ಎಂದಾಗ ಅಖಿಲಗೆ ನೋವಾಗುತ್ತದೆ. ಮನದಲ್ಲಿ ಏನೋ ತಳಮಳ ಪಾರ್ವತಿ ಆದಿ ನಿರ್ಧಾರ ಮಾಡಿದ್ದಾರೆ ಅನ್ನಿಸುತ್ತದೆ. ನಾನು ಅವರ ಹತ್ತಿರ ಹೋಗದೆ ಇರಲು ಈ ರೀತಿ ಮಾಡುತ್ತಾ ಇದ್ದಾರೆ ಎಂದು ಅಂದುಕೊಂಡಿರುತ್ತಾಳೆ.
ಆದರೆ ರಘು ಆದಿ ಈ ಮಾತು ನನ್ನಲ್ಲಿ ಹೇಳಿದಾಗ ಬಹಳ ನೋವಿನಿಂದ ಹೇಳಿದ, ಆದಿ ಪಾರ್ವತಿಯನ್ನು ಯಾರೋ ಬೇಕು ಎಂದು ಆಟ ಆಡಿಸುತ್ತಾ ಇದ್ದಾರೆ ಅವರನ್ನು ಇಕ್ಕಟ್ಟಿಗೆ ಸಿಳುಕಿಸುತ್ತ ಇದ್ದಾರೆ. ಅವತ್ತು ನಿನ್ನ ಪಾರ್ವತಿ ಬಾಯಿಗೆ ಬಂದ ಹಾಗೆ ಬೈದು ಬಿಟ್ಟಿದ್ದಳು ಇದರ ಹಿಂದೆ ಕೂಡ ಬೇರೆ ಇದೆ ಎಂದು ಹೇಳಿ ಹೋಗುತ್ತಾನೆ. ಇದನ್ನೆಲ್ಲ ಕೇಳಿದ ಅಖಿಲಗೆ ಬಹಳ ಗಾಬರಿ ಆಗುತ್ತದೆ. ಮನೆಯಲ್ಲಿ ಇರುವ ಎಲ್ಲ ಸಿಸಿಟಿವಿ ಫೋಟೆಜ್ ತೆಗೆದು ನೋಡುತ್ತಾರೆ. ರಾಣಾನ ಕುತಂತ್ರ ದಿಂದ ಇಷ್ಟೆಲ್ಲ ನಡೆಯಲು ಸಾಧ್ಯ ಎಂದು ಹೇಳಿ ಆತನನ್ನು ಏನಾದರು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.


Click it and Unblock the Notifications











