Paaru: ಪಾರುವನ್ನು ಚುಚ್ಚು ಮಾತುಗಳಿಂದ ನಿಂದಿಸಿದ ರತ್ನ ವೇಣಿಗೆ ಚಳಿ ಬಿಡಿಸಿದ ಆದಿ

By ಪೂರ್ವ

ಪಾರು ಧಾರಾವಾಹಿ ಅದ್ಭುತವಾಗಿ ಮೂಡಿಬಂದಿದೆ. ಇದೀಗ ಪಾರು ಹಾಗೂ ಜನನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರುತ್ತಾರೆ. ಆದರೆ ಪಾರು ಕೈಯಲ್ಲಿ ಮಗು ಇರುವುದಿಲ್ಲ. ಜನನಿ ಕೈಯಲ್ಲಿ ಪಾರು ಮಗು ಮಲಗಿರುವುದನ್ನು ಕಂಡು ಪಾರು ಕೊಂಚ ನಿಟ್ಟುಸಿರು ಬಿಡುತ್ತಾಳೆ. ಇನ್ನು ಜನನಿ ಮಾತ್ರ ತನ್ನ ಅಕ್ಕನಿಗೆ ನೋವು ಆಗಬಾರದು ಆಕೆ ಚೆನ್ನಾಗಿ ಇರಬೇಕು ಎಂದು ತನ್ನ ಮಗುವನ್ನು ಪಾರುಗೆ ನೀಡಲು ಬರುತ್ತಾಳೆ.

ಆಗ ಅಲ್ಲಿಯೇ ಇದ್ದ ರತ್ನ ವೇಣಿ ಜನನಿ ನನಗೂ ಮಗುವನ್ನು ಹಿಡಿದುಕೊಂಡು ಹೋಗಬೇಕು ಅನ್ನಿಸುತ್ತದೆ. ಆದರೆ ಏನು ಮಾಡುವುದು ಅರಸನ ಕೋಟೆಯ ಮನೆಯ ಒಳಗೆ ಹೋಗಬೇಕಾದರೆ ನಿನ್ನ ಜೊತೆ ಇದ್ದರೆ ಚೆಂದ .. ಆ ಬಳಿಕ ನವೆ ನಿನ್ನ ಮಗಳ ಜೊತೆ ಆಟ ಆಡುತ್ತ ಇರುತ್ತೇವೆ.

Kannada serial Paaru written update on 1st August

ನೀನೇ ನನಗೆ ನನ್ನ ಮಗು ಕೊಟ್ಟು ಬಿಡು ಎಂದು ಎಂದಾಗ ಪಾರು ಕೊಂಚ ಬೇಸರ ಪಡುತ್ತಾ ಇರುತ್ತಾಳೆ. ನನ್ನ ಮಗುವನ್ನು ನಾನೇ ಪಡೆದುಕೊಳ್ಳಲು ಪರ್ಮಿಷನ್ ಕೇಳಬೇಕು ಎಂದು. ಇನ್ನೂ ಪಾರು ವಿಗೆ ತನ್ನ ಗರ್ಭ ಕೋಶ ತೆದಿರುವ ವಿಚಾರ .. ನನಗೆ ಇನ್ನೂ ಮಕ್ಕಳಾಗುವುದು ಇಲ್ಲ ಎಂಬ ವಿಚಾರ ತಿಳಿದಿದೆ ಆದರೂ ಎನು ಮಾಡಲಾಗದ ಸ್ಥಿತಿಯಲ್ಲಿ ಪಾರು ಇರುತ್ತಾಳೆ.

ಇನ್ನೂ ಪಾರು ತಂದೆಯ ಮನೆಗೆ ಬಂದು ರೆಸ್ಟ್ ತೆಗೆದುಕೊಳ್ಳುತ್ತಾ ಇರುತ್ತಾಳೆ. ತನ್ನ ಮಗು ಎನು ಮಾಡುತ್ತಾ ಇದೆಯೋ ಏನೋ ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ ತನ್ನ ಮಗು ಬದುಕಿದೆ ಎಂದು ಆದಿ ಗೆ ಕೂಡ ಒಂದು ಮಾತು ತಿಳಿಸದೆ ಸುಮ್ಮನೆ ಇರುತ್ತಾಳೆ. ಇನ್ನೂ ಪಾರು ವನ್ನು ನೋಡಲು ರತ್ನ ವೇಣಿ ಕೈಯಲ್ಲಿ ಹಣ್ಣು ಗಳನ್ನು ಇಟ್ಟುಕೊಂಡು ಬರುತ್ತಾಳೆ.

ಇದನ್ನು ನೋಡಿದ ಪಾರು ಒಂದು ಕ್ಷಣ ಸ್ತಬ್ಧ ಆಗುತ್ತಾಳೆ. ಈ ರತ್ನ ವೇಣಿ ಯಾಕಪ್ಪಾ ಬಂದಳು ಎಂದು ಆಲೋಚನೆ ಮಾಡುತ್ತಾ ಇರುವಾಗ ಪಾರು ಮೆತ್ತಗೆ ಹೇಳುತ್ತಾಳೆ ಏನಮ್ಮ ಎಂದಾಗ ಎನು ಪಾರು ಚೆನ್ನಾಗಿ ಇದ್ದೀಯಾ . ಮಗು ಕಳೆದುಕೊಂಡ ನೀನು ಹೇಗಾದರೂ ಚೆನ್ನಾಗಿ ಇರುತ್ತಿಯ ಹೇಳು ಎಂದೆಲ್ಲ ಹೇಳಿ ಪಾರು ಮನಸ್ಸಿಗೆ ಇನ್ನಷ್ಟು ನೋವು ಕೊಡುತ್ತಾಳೆ ಇದೆಲ್ಲವನ್ನೂ ಕೇಳಿಸಿಕೊಂಡ ಆದಿ ಮಾತ್ರ ಜೋರಾಗಿ ರತ್ನ ವೇಣಿ ಎಂದು ಕರೆಯುತ್ತಾನೆ.

ರತ್ನ ವೇಣಿ ಗೆ ಆದಿಯ ಆವೇಶ ಭರಿತ ಧ್ವನಿಯನ್ನು ಕೇಳಿ ಶಾಕ್ ಗೆ ಒಳಗಾಗುತ್ತಾನೆ. ರತ್ನ ವೇಣಿ ಎನು ಮಾತನಾಡದೆ ನಿಂತೆ ಇರುತ್ತಾಳೆ ಆ ವೇಳೆ ಆದಿ ಜೋರಾಗಿ ಹೇಳುತ್ತಾನೆ ನಿಮಗೆ ಅಷ್ಟು ಗೊತ್ತಾಗುವುದು ಇಲ್ವಾ.. ಪಾರು ವಿಗೆ ಸಮಾಧಾನ ಮಾಡಲು ಬಂದಿದ್ದೀರಾ ಅಥವಾ ಇನ್ನಷ್ಟು ನೋವು ನೋಡಲು ಬಂದಿದ್ದೀರಾ ಎಂದು ನನಗೆ ಗೊತ್ತಾಗುತ್ತಿಲ್ಲ.. ಅಷ್ಟು ನಿಮಗೆ ಸಾಂತ್ವನ ಹೇಳಲು ಬಂದಿದ್ದರೆ ಈ ಮಾತುಗಳನ್ನು ನೀವು ಹೇಳುತ್ತ ಇರಲಿಲ್ಲ.. ದಯವಿಟ್ಟು ನೀವು ಇಲ್ಲಿಂದ ಹೊರಡಿ ಎಂದು ಕಠೋರವಾಗಿ ಹೇಳುತ್ತಾನೆ.

ಇನ್ನೂ ಆದಿ ವರ್ತನೆ ಮಾತ್ರ ಆಕೆಗೆ ಚೂರು ಹಿಡಿಸುವುದೆ ಇಲ್ಲ. ಇನ್ನೂ ಜನನಿ ಮಾತ್ರ ತನ್ನ ಮಗುವಿನ ಜೊತೆ ಬಹಳ ಖುಷಿಯಿಂದ ಕಾಲ ಕಳೆಯುತ್ತ ಇರುತ್ತಾಳೆ. ಆದರೆ ಪಾರು ವಿನ ಮಗು ಜನನಿ ಮಡಿಲಿನಲ್ಲಿ ಇರುವುದು ಎಂಬ ವಿಚಾರ ಸಾವಿತ್ರಕ್ಕ ಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ.

More from Filmibeat

English summary
Kannada serial paaru written updated on 1th August.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X