ಅರಸನ ಕೋಟೆಯಲ್ಲಿ ಸಂಭ್ರಮ; ತಾನು ಗರ್ಭಿಣಿ ಎನ್ನುವ ವಿಚಾರ ಹೇಳುತ್ತಾಳಾ ಪಾರು?

By Poorva

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಗೆದ್ದಿದೆ. ಇದೀಗ ಪ್ರೀತಮ್ ದುಬೈಗೆ ಹೋಗುವ ತರಾತುರಿಯಲ್ಲಿದ್ದಾನೆ. ಪ್ರೀತಮ್ ಮನೆಯಿಂದ ಹೊರ ಬಂದು ಹೆಂಡತಿಯ ಬಳಿ ಅತ್ತಿಗೆ ಬಳಿ ನಾನು ದುಬೈಗೆ ಹೊರಟೆ ಎಂದು ಹೇಳಲು ಹರಸಾಹಸ ಪಡುತ್ತಿರುವುದನ್ನು ಹೇಳುತ್ತಾನೆ. ಬಳಿಕ ಜೋರಾಗಿ ಕಿರುಚಿ ಸಾವಿತ್ರಕ್ಕ ನಾನು ದುಬೈಗೆ ಹೊರಟೆ.. ಎಂದು ಹೇಳಿದಾಗ ಮನೆಯ ಒಳಗಿದ್ದ ಪಾರು ಹೊರಗೆ ಬಂದು ಪ್ರೀತಮ್ ನನ್ನು ನೋಡಿದಾಗ ಪ್ರೀತಮ್ ಹಾಗೂ ಜನನಿ ಗೆ ಖುಷಿ ಆಗುತ್ತದೆ.

ಆದರೆ ಪ್ರೀತಮ್ ನನ್ನು ನೋಡಿ ಪಾರು ಮುಖ ತಿರುಗಿಸುತ್ತಾಳೆ. ಇದನ್ನು ನೋಡಿದ ಪ್ರೀತಮ್ ಗೆ ಬೇಸರ ಆಗುತ್ತದೆ. ಪ್ರೀತಮ್ ಕೂಗು ಕೇಳಿಸಿಕೊಂಡ ಅಖಿಲಾಂಡೇಶ್ವರಿ ಇವತ್ತು ನೀನು ದುಬೈಗೆ ಹೋಗುತ್ತ ಇರುವುದು ಎಲ್ಲರಿಗೂ ತಿಳಿದಿದೆ ಆದರೆ ನೀನು ಯಾಕೆ ಕಿರುಚಿ ಹೇಳುತ್ತ ಇದ್ದೀಯಾ ಎಂದು ಸುತ್ತ ನೋಡಿದಾಗ ಪಾರು ನಿಂತಿರುತ್ತಾಳೆ. ಅದೇ ಹೊತ್ತಿಗೆ ಕೆಲಸ ಹುಡುಕಿ ಹೊರಟ ಆದಿ ಬರಿಗೈಯಲ್ಲಿ ವಾಪಸ್ ಬರುತ್ತಾನೆ. ಇದನ್ನು ನೋಡಿದ ಪಾರು ಗಂಡನಿಗೆ ಏನಾದರು ಮಾಡಿ ಕೊಡೋಣ ಎಂದು ಒಳ ಹೋಗುತ್ತಾಳೆ.

ಇತ್ತ ಪ್ರೀತಮ್ ಅಣ್ಣನ ಮುಖ ನೋಡಿ ನಾನು ಬರುತ್ತೇನೆ ಅಮ್ಮ ಎಂದು ಹೇಳಿದಾಗ ಪ್ಲೈಟ್ ಗೆ ಟೈಮ್ ಆಯಿತು ಹೋಗಿ ಬಾ ಎಂದು ಜೋರಾಗಿ ಹೇಳುತ್ತಾಳೆ. ಇನ್ನು ಪ್ರೀತಮ್ ಆದಿಯನ್ನು ನೋಡಿ ಹೋದ ಕೆಲಸ ಏನಾಯಿತು ಆಯಿತಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ಆದಿ ಇಲ್ಲ ಎಂದು ತಲೆ ಅಲ್ಲಾಡಿಸಿ ದುಃಖದಿಂದ ಮನೆಗೆ ಹೋಗುತ್ತಾನೆ. ಇನ್ನು ಮನೆಗೆ ಬಂದು ಸೋಫಾದ ಮೇಲೆ ಕುಳಿತುಕೊಳ್ಳುತ್ತಾನೆ. ಯಾವತ್ತೂ ಆಸೆ ಪಡದ ಹೆಂಡತಿ ಇವತ್ತ್ತುಗಂಡನಿಗೆ ಕೆಲಸ ಸಿಗಲಿ ಎಂದು ಬೇಡಿಕೊಳ್ಳಲು ಕಾರಣ ಏನು ಎಂದೆಲ್ಲ ಕೇಳಿದರು ಪಾರು ಮಾತ್ರ ಸುಮ್ಮನೆ ಹಾಗೇನೂ ಇಲ್ಲ ಎಂದೆಲ್ಲ ಹೇಳುತ್ತಾಳೆ.

ಪಾರು ಬಾಯಿಬಿಡಿಸಲು ಹರಸಾಹಸ ಪಟ್ಟ ಆದಿ

ಪಾರು ಬಾಯಿಬಿಡಿಸಲು ಹರಸಾಹಸ ಪಟ್ಟ ಆದಿ

ಆದರೆ ಆದಿ ಮಾತ್ರ ಪಾರು ಬಾಯಿ ಬಿಡಿಸಲು ಹರಸಾಹಸ ಮಾಡುತ್ತಾ ಇದ್ದಾನೆ. ಮನೆಗೆ ಬಂದ ಗಣಿ ಅಕ್ಕನ ಬಳಿ ಅಕ್ಕ ಅರಸನ ಕೋಟೆಗೆ ಡಾಕ್ಟರ್ ಬಂದಿದ್ದಾರೆ, ಯಾಕೆ ಏನೂ ಎಂದು ಗೊತ್ತಿಲ್ಲ ಎಂದಾಗ ಪಾರು ಗಾಬರಿಯಿಂದ ತೆರಳುತ್ತಾಳೆ. ಆದರೆ ಅಖಿಲ ಮಾತಿನ ಹಾಗೆ ಮನೆಯ ಒಳಗೆ ಹೋಗದೇ ಅಲ್ಲಿಯೇ ನಿಲ್ಲುತ್ತಾಳೆ. ಆ ಸಮಯಕ್ಕೆ ಅಲ್ಲಿಗೆ ರಘು ಬರುತ್ತಾನೆ. ಮನೆಯಲ್ಲಿ ಯಾರಿಗೆ ಹುಷಾರಿಲ್ಲ, ಯಾಕೆ ಡಾಕ್ಟರ್ ಬಂದಿದ್ದಾರೆ ಎಂದು ಪಾರು ತರಾತುರಿಯಲ್ಲಿ ಕೇಳುತ್ತಾಳೆ. ಇದನ್ನು ಕೇಳಿದ ರಘು ಹೇಳಬೇಕು ಎಂದುಕೊಂಡಾಗ ಅಲ್ಲಿಗೆ ದಾಮಿನಿ ಅಖಿಲ ಇಬ್ಬರು ಬರುತ್ತಾರೆ. ದಾಮಿನಿ ಹೊರಗೆ ನಿಂತಿದ್ದ ಪಾರ್ವತಿಗೆ ಬಯ್ಯುತ್ತಲೇ ಇರುತ್ತಾಳೆ. ಯಾಕೆ ಇಲ್ಲಿಗೆ ಬಂದಿದ್ದೀಯಾ ಯಾರಾದರೂ ಬದುಕಿದ್ದಾರ ಅಥವಾ ಸತ್ತಿದ್ದಾರ ಎಂದು ನೋಡಲು ಬಂದ್ಯಾ ಎಂದು ಹೇಳಿದಾಗ ಪಾರ್ವತಿ ಮೆತ್ತಗೆ ಮನೆಗೆ ಡಾಕ್ಟರ್ ಬಂದಿದ್ದಾರೆ ಎಂದು ತಿಳಿಯಿತು ಎನ್ನುತ್ತಾಳೆ.

ಅರಸನಕೋಟೆ ಮನೆಗೆ ಓಡಿ ಬಂದ ಪಾರು

ಅರಸನಕೋಟೆ ಮನೆಗೆ ಓಡಿ ಬಂದ ಪಾರು

ಯಾಕೆ ಏನು ಎಂದು ತಿಳಿಯದೇ ಓಡಿ ಬಂದೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಖಿಲಗೆ ಬಹಳ ಕೋಪ ಬರುತ್ತದೆ. ಆದರೆ ಅದನ್ನು ತೊರ್ಪಡಿಸಿಕೊಳ್ಳದೆ ಸುಮ್ಮನೆ ಇರುತ್ತಾಳೆ. ಇನ್ನು ಜನನಿಯ ಹೆಲ್ತ್ ಚೆಕ್ ಮಾಡಿದ ಡಾಕ್ಟರ್ ಬಂದು ಜನನಿ ಅವರು ತಾಯಿ ಆಗುತ್ತಾ ಇದ್ದಾರೆ ಎಂದು ಹೇಳಿ ಖುಷಿ ಪಡುತ್ತಾರೆ. ಇದನ್ನು ಕೇಳಿದ ಅಖಿಲಗೆ ಬಹಳ ಖುಷಿ ಆಗುತ್ತದೆ ರೂಮ್ ನಿಂದ ಹೊರ ಬಂದ ಜನನಿಯನ್ನು ಅಖಿಲ ಬಾಚಿ ತಬ್ಬಿಕೊಳ್ಳುತ್ತ ಇರುತ್ತಾರೆ. ಇದನ್ನು ಕೇಳಿಸಿಕೊಂಡ ಪಾರು ಬಹಳ ಖುಷಿ ಪಡುತ್ತಾಳೆ.

ಪಾರು ಖುಷಿಗೆ ಕಾರಣ ಏನು?

ಪಾರು ಖುಷಿಗೆ ಕಾರಣ ಏನು?

ಇದನ್ನೆಲ್ಲ ನೋಡಿದ ದಾಮಿನಿ ಮನದಲ್ಲಿ ಅಕ್ಕನಿಗಿಂತ ತಂಗಿ ಬೇಗ ತಾಯಿ ಆಗಿದ್ದಾಳೆ, ಪಾರ್ವತಿಗೆ ಹೊಟ್ಟೆ ಉರಿಯುತ್ತ ಇರಬೇಕು, ಹಾಗೆ ಆಗಬೇಕು ಅವಳಿಗೆ ಎಂದೆಲ್ಲ ಹೇಳುತ್ತ ಇರುತ್ತಾಳೆ. ಇನ್ನು ಪಾರ್ವತಿ ಮಾತ್ರ ಬಹಳ ಖುಷಿ ಪಡುತ್ತಾಳೆ.. ಅರಸನ ಕೋಟೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಜನನಿ ಹೊಟ್ಟೆಯಲ್ಲಿ ಅರಸನ ಕೋಟೆಯ ವಾರಸುದಾರ ಬೆಳೆಯುತ್ತಾ ಇದ್ದಾನೆ. ಆದರೆ ಪಾರ್ವತಿ ತಾನು ಗರ್ಭಿಣಿ ಎನ್ನುವ ವಿಚಾರವನ್ನು ಎಲ್ಲರೆದುರು ಹೇಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial paaru written update on 1st February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X