Don't Miss!
- News
ಬರಲಿವೆ ಮಿನಿ ವಂದೇ ಭಾರತ್ ರೈಲುಗಳು: ಮೋದಿ ಸರ್ಕಾರದಿಂದ ಮತ್ತೊಂದು ಗಿಫ್ಟ್- ಯಾವ ನಗರಗಳಿಗೆ ಈ ಕೊಡುಗೆ?
- Sports
ICC ODI Team Of 2022: ಐಸಿಸಿ ವರ್ಷದ ಏಕದಿನ ತಂಡಕ್ಕೆ ಅಜಂ ನಾಯಕ; ಇಬ್ಬರು ಭಾರತೀಯರಿಗೆ ಸ್ಥಾನ
- Automobiles
ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Technology
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ?... ಹಾಗಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru: ಮಗನ ಮೇಲೆ ಮುನಿಸಿಕೊಂಡ ಅಖಿಲಾಂಡೇಶ್ವರಿ
ಅಖಿಲಾಂಡೇಶ್ವರಿ ಕೋಪಕ್ಕೆ ಗುರಿ ಆದರೂ ಪಾರು ಹಾಗೂ ಆದಿ ಪ್ರೀತಮ್ ನನ್ನು ಉಳಿಸುವ ಸಲುವಾಗಿ ಆಸ್ತಿಯಲ್ಲಿ ಭಾಗ ಕೇಳಿದರು. ತಾನು ಮಾಡುತ್ತಿರುವ ಕೆಲಸ ಅಮ್ಮನಿಗೆ ಬಹಳ ನೋವು, ಕೋಪ ತಂದಿದೆ ಎಂಬುವುದು ಆದಿಗೆ ತಿಳಿದಿದೆ. ಆದರೆ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾನೆ. ಇನ್ನು ರಘು ಕೂಡ ಏನು ಮಾತನಾಡದೆ ಸುಮ್ಮನೆ ಇದ್ದು ಬಿಡುತ್ತಾನೆ.
ಪಾರು ಹಾಗೂ ಆದಿ ಮನೆ ಬಿಟ್ಟು ಹೋಗುತ್ತಾ ಇರಬೇಕಾದರೆ ಹನುಮಂತು ಬಂದು ತಡೆಯುತ್ತಾನೆ. ದೊಡ್ಡ ಯಜಮಾನರೆ ನೀವು ಎಲ್ಲಿಗೆ ಕೂಡ ಹೋಗುವುದು ಬೇಡ, ಇಲ್ಲಿಯೇ ಇರಿ ಎಂದು ಕೇಳಿಕೊಳ್ಳುತ್ತಾನೆ. ಆದರೆ ಆದಿ ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಬಳಿಕ ಹನುಮಂತು ಇಲ್ಲಿಯೇ ಇರಿ ದೊಡ್ಡ ಯಾಜಮಾನರೆ ಎಲ್ಲಿಗೆ ಕೂಡ ಹೋಗಬೇಡಿ ಐದು ನಿಮಿಷದಲ್ಲಿ ಬರುತ್ತೇನೆ ಎಂದು ಮನೆಯ ಒಳಗೆ ಹೋಗುತ್ತಾನೆ. ಇದನ್ನು ನೋಡಿದ ಆದಿ ಹಾಗೂ ಪಾರುಗೆ ಕೂಡ ಬೇಸರ ಆಗುತ್ತದೆ. ಬಳಿಕ ಅಖಿಲ ಅವರನ್ನು ಕರೆಯುತ್ತಾನೆ.
ಬಳಿಕ ದೊಡ್ಡ ಯಜಮಾನರನ್ನು ಯಾಕೆ ಮನೆಯಿಂದ ಹೊರಗೆ ಕಳುಹಿಸಿದಿರಿ ಅಮ್ಮಾವರೇ, ಹೇಳಿ ಅಮ್ಮಾವರೇ ಅಂತ ತಪ್ಪು ಏನು ಮಾಡಿದ್ದಾರೆ ಅವರು ಎಂದಾಗ ಅಖಿಲ ನಿನ್ನ ದೊಡ್ಡ ಮನುಷ್ಯ ಆಸ್ತಿಯಲ್ಲಿ ಭಾಗ ಕೇಳಿದ ಎನ್ನುತ್ತಾಳೆ. ಕೋಪಗೊಂಡ ಹನುಮಂತು ಅದಕ್ಕೆ ಮನೆಯಿಂದ ಆಚೆ ಹಾಕುವುದಾ ಎಂದು ಹೇಳುತ್ತಾಳೆ. ಅಖಿಲ ಕೂಡ ಸುಮ್ಮನಿರದೆ ಏನು ನಿನ್ನ ಮಾತಿನ ಅರ್ಥ ಆತನ ಮಾತುಗಳನ್ನು ಕೇಳಿಕೊಂಡು ಇಲ್ಲಿಯೇ ಉಳಿಸಿಕೊಳಬೇಕಿತ್ತಾ ಎನ್ನುತ್ತಾರೆ.

ಅಮ್ಮನವರ ಮಾತು ಕೇಳದ ಹನುಮಂತು
ಇದನ್ನು ಕೇಳಿದ ಹನುಮಂತು ಆಸ್ತಿಯಲ್ಲಿ.ಪಾಲು ಕೊಡಲು ಆಗದೆ ಇದ್ದರೆ ಕೊಡಲ್ಲ ಎನ್ನಬೇಕಾಗಿತ್ತು, ಆದರೆ ನೀವು ಈ ರೀತಿ ನಡೆದುಕೊಂಡಿರುವುದು ಮಾತ್ರ ಸರಿ ಇಲ್ಲ, ಅದನ್ನು ಬಿಟ್ಟು ನೀವು ಈ ರೀತಿ ಮಾತನಾಡಿದರೆ ಇದು ಯಾವ ನ್ಯಾಯ, ಹಾಗೆ ಹೇಳುವಾಗ ನಿಮಗೆ ಏನು ಅನ್ನಿಸಲೇ ಇಲ್ವಾ ಎಂದು ಜೋರಾಗಿ ಹೇಳುತ್ತಾನೆ. ಇನ್ನೂ ಮುಂದುವರಿದು ಮಾತನಾಡಿದ ಹನುಮಂತು ನೀವು ಮನೆಯಿಂದ ಹೊರ ಹಾಕಿದಿರಿ, ಆದರೆ ನಾನು ಅವರನ್ನು ಬಿಟ್ಟು ಹಾಕಲ್ಲ, ಅವರನ್ನು ನಾವು ಇರುವ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಆದಿ ಹಾಗೂ ಪಾರು ಬಳಿ ಹೋಗುತ್ತಾನೆ.

ತಂದೆಯ ನಡೆ ನೋಡಿ ಖುಷಿಪಟ್ಟ ಪಾರು
ಅಲ್ಲಿ ಪಾರು ಆದಿ ನಿಂತಿರುತ್ತಾರೆ. ಹನುಮಂತು ಅವರ ಬಳಿ ಬಂದು ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಬನ್ನಿ ಎಂದು ಕರೆದಾಗ ಆದಿಗೆ ಏನು ಹೇಳಬೇಕೋ ತಿಳಿಯದಾಗಿ ಹೋಗುತ್ತದೆ. ಇನ್ನು ಮೋನಿಕಾ ಅರುಂಧತಿಗೆ ಕರೆ ಮಾಡಿ ಒಂದು ಗುಡ್ ನ್ಯೂಸ್ ಇದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅರುಂಧತಿ ಏನಪ್ಪಾ ಎಂದುಕೊಳ್ಳುತ್ತಾ ಕೇಳುತ್ತಾ ಇರುತ್ತಾಳೆ. ಆ ವೇಳೆ ಅರುಂಧತಿ ಬಳಿ ಮೋನಿಕಾ ಇವತ್ತು ಆದಿ ಪಾರು ಇಬ್ಬರು ಮನೆ ಬಿಟ್ಟು ಹೋದರು ಎಂದು ನಡೆದ ಘಟನೆಯನ್ನೆಲ್ಲಾ ಅರುಂಧತಿ ಬಳಿ ಖುಷಿಯಿಂದ ಹೇಳಿಕೊಳ್ಳುತ್ತಾಳೆ.

ಮೋನಿಕಾಗೆ ಬುದ್ದಿ ಹೇಳುತ್ತಿರುವ ಜನನಿ
ಇನ್ನು ಜನನಿ ಅಲ್ಲಿಗೆ ಬಂದು ಮೋನಿಕಾ ಹುಟ್ಟಡಗಿಸುವ ಎಲ್ಲಾ ಪ್ರಯತ್ನ ಮಾಡುತ್ತ ಇದ್ದಾಳೆ. ನಿನ್ನ ಗಂಡ ನಮಗೆ ಸಿಕ್ಕಿದ್ದಾನೆ ಎಂದು ಜನನಿ ಹೇಳಿದಾಗ ಮೋನಿಕಾ ಯಾರ್ಯಾರೋ ನನ್ನ ಗಂಡ ಎಂದು ಹೇಳಿದರೆ ನಾನು ಒಪ್ಪಿಕೊಳ್ಳಲ್ಲ ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಸುಳ್ಳು ಹೇಳುತ್ತಾಳೆ. ಇದನ್ನು ಕೇಳಿದ ಜನನಿ ಆಗ ಪ್ರೀತಮ್ ಆಕೆಗೆ ಗಂಡನ ಬಗ್ಗೆ ಹೇಳಿದುದರ ಬಗ್ಗೆ ನೆನಪು ಮಾಡಿಸುತ್ತಾನೆ.

ಗಂಡನ ಫೋಟೋ ನೋಡಿ ಮೋನಿಕಾ ಶಾಕ್
ಇದನ್ನು ಕೇಳಿದ ಮೋನಿಕಾ ಇಲ್ಲ ಪ್ರೀತು ನಾನು ನಿನಗೆ ಸುಳ್ಳು ಹೇಳಿದೆ, ಮದುವೆ ಆಗಿಲ್ಲ ಎಂದು ಹೇಳುತ್ತಾಳೆ. ಆಗ ಜನನಿ ಫೋಟೋ ತೋರಿಸಿ ಮತ್ತೆ ಇದು ಯಾರು ಎಂದು ಕೇಳುತ್ತಾಳೆ. ಆ ಫೋಟೋ ನೋಡಿದ ಕೂಡಲೇ ಮೋನಿಕಾಗೆ ಶಾಕ್ ಆಗುತ್ತದೆ. ಆ ವೇಳೆ ಮೋನಿಕಾ ಸಿಕ್ಕಿ ಬೀಳುತ್ತಾಳೆ. ಇದನ್ನೆಲ್ಲ ನೋಡಿದ ಜನನಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ, ಜೋರಾಗಿ ಬಯ್ಯುತ್ತ ಇರುತ್ತಾಳೆ.. ಪ್ರೀತಮ್ ನನ್ನು ನಿನ್ನ ಗಂಡನಿಗೆ ಬ್ಲಾಕ್ ಮೇಲ್ ಮಾಡಿದ ಹಾಗೆ ಮಾಡುತ್ತಾ ಇದ್ದೀಯಾ ಅಲ್ವಾ ನಿನಗೆ ನಾಚಿಕೆ ಆಗಲ್ವಾ ಎಂದು ಜೋರಾಗಿ ಬಯ್ಯುತ್ತಲೆ ಇರುತ್ತಾಳೆ. ಆದರೆ ಮೋನಿಕ ತನ್ನನ್ನು ಕ್ಷಮಿಸುವಂತೆ ಹೇಳುತ್ತಾಳೆ. ಆದರೆ ಜನನಿ ಯಾವುದಕ್ಕೂ ಏನನ್ನು ಕೇಳದೆ ಸರಿಯಾಗಿ ಬಯ್ಯುತ್ತಾ ಇರುತ್ತಾಳೆ. ಆದರೆ ಪ್ರೀತಮ್ ಇನ್ನಾದರೂ ಒಳ್ಳೆಯ ಬುದ್ದಿ ಕಲಿತು ಗಂಡನ ಜೊತೆ ಬಾಳುವಂತೆ ಬುದ್ದಿ ಹೇಳುತ್ತಾನೆ.