Paaru: ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಮಾಡಿದ ಆದಿ ಪ್ರೀತಮ್: ರಾಣಾನನ್ನು ಕಾಪಾಡುವರಾರು?
ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಕುತೂಹಲಕಾರಿಯಾಗಿದೆ. ಇದೀಗ ವಿದೇಶಕ್ಕೆ ಹೋಗಿದ್ದ ಪ್ರೀತಮ್ ಮನೆಗೆ ಬಂದಿದ್ದಾನೆ. ಹಾಗೆಯೇ ಭರ್ಜರಿ ಆಗಿ ಪ್ರೀತಂನನ್ನು ಮನೆಗೆ ಬರ ಮಾಡಿಕೊಂಡಿದ್ದಾರೆ. ಅಖಿಲಾಂಡೇಶ್ವರಿ ತನ್ನ ಮಗ ಬಂದ ಖುಷಿಯಲ್ಲಿ ಕೈ ಕಾಲು ಆಡದೆ ಹೋಗುತ್ತದೆ. ಅಖಿಲಾಂಡೇಶ್ವರಿ ಅರುಂಧತಿ ಸತ್ತು ಹೋದ ಬಗ್ಗೆ ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಂಗೆ ಹಾಲು ಕುಡಿದಷ್ಟು ಖುಷಿ ಆಗುತ್ತದೆ. ತನ್ನ ಕಷ್ಟ ಕಾಲ ಇಲ್ಲಿಗೆ ಅಂತ್ಯ ಆಯಿತು ಎಂದೆಲ್ಲ ಮನದಲ್ಲಿ ಎಂದುಕೊಂಡು ಖುಷಿ ಪಡುತ್ತಾರೆ..
ಇನ್ನು ಅತ್ತಿಗೆ ಅಣ್ಣನನ್ನು ಮನೆಗೆ ಕರೆದುಕೊಂಡು ಬರೋಣ ಎಂದಾಗ ಅಖಿಲಾಂಡೇಶ್ವರಿ ಕುಪಿತಾಗೊಳ್ಳುತ್ತಾಳೆ. ಇದನ್ನು ಕಂಡ ಪ್ರೀತಮ್ ಸುಮ್ಮನಾಗುತ್ತಾನೆ. ಇನ್ನು ಜನನಿ ಬಳಿ ನಡೆದ ವಿಚಾರ ಹೇಳುತ್ತಾನೆ. ಅರುಂಧತಿ ನನ್ನ ಜೀವನದಲ್ಲಿ ಎಷ್ಟೆಲ್ಲ ಆಟ ಆಡಿದ್ದಾಳೆ, ಎಷ್ಟುಕಷ್ಟ ಕೊಟ್ಟಿದ್ದಾಳೆ, ಆದರೆ ಅದೆಲ್ಲವನ್ನೂ ದೇವರು ನೋಡಿ ಸರಿಯಾದ ಶಿಕ್ಷೆ ಕೊಟ್ಟ, ಅರುಂಧತಿ ಸತ್ತು ಹೋದಳು ಎನ್ನುತ್ತಾನೆ. ಆದರೆ ಆಕೆಯ ಅಣ್ಣ ರಾಣಾ ಬದುಕಿರುವುದು ಪ್ರೀತಂಗೆ ಆಪತ್ತು.

ಪ್ರೀತಂಗೆ ರಾಣಾನನ್ನು ಹೇಗಾದರೂ ಮಾಡಿ ಕೊನೆಗಾಣಿಸಬೇಕು ಎಂಬುವುದು ಆಸೆ. ಆದರೆ ಅದು ಆಗುವ ವಿಷಯ ಅಲ್ಲ ಎಂಬುವುದು ತಿಳಿದಿತ್ತು ಜನನಿ ಬಳಿ ಈ ಎಲ್ಲಾ ವಿಚಾರ ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನು ಆದಿ ಬಳಿ ಬಂದ ಪ್ರೀತಮ್ ತನ್ನ ಮನದಲ್ಲಿ ಇದ್ದ ದುಃಖ ಹೊರ ಹಾಕುತ್ತಾನೆ. ಆದಿ ಬಳಿ ಪ್ರೀತಮ್ ನೀವು ನನ್ನ ಬಳಿ ಮಾತ್ರ ಹೀಗೆ ಯಾಕೆ ಆಡುತ್ತಾ ಇದ್ದೀರಾ ಅದೇ ಜನನಿ ಬಳಿ ಎಲ್ಲಾ ಚೆನ್ನಾಗಿ ಮಾತನಾಡುತ್ತಿರ ಎನ್ನುತ್ತಾನೆ.
ಪ್ರೀತಮ್ ನಿನ್ನ ಜೊತೆ ಮಾತನಾಡಿದರೆ ಎಲ್ಲಿ ಸತ್ಯ ಬಾಯಿ ಬಿಡುತ್ತಿಯಾ ಎಂದು ಮಾತನಾಡುತ್ತಿಲ್ಲ ಎಂದು ಆದಿ ಮನದಲ್ಲಿ ಹೇಳುತ್ತಾನೆ . ಇನ್ನು ಪ್ರೀತಮ್ ಅರುಂಧತಿ ಸತ್ತು ಹೋಗಿರುವ ವಿಚಾರದ ಬಗ್ಗೆ ಆದಿ ಬಳಿ ಹೇಳುತ್ತಾನೆ. ಆ ಬಳಿಕ ಏನೆಲ್ಲ ಮಾಡಿದರು ಅದರ ಬಗ್ಗೆ ಹೇಳುತ್ತ ಇರುತ್ತಾನೆ. ಪಾರು ಆತ್ತಿಗೆಯ ಮೇಲೆ ರೇಗುವ ಹಾಗೆ ಮಾಡಿದ್ದು ಅವರು ಎಂದೆಲ್ಲ ನಡೆದ ವಿಚಾರ ಹೇಳುತ್ತಾನೆ.
ಇದನ್ನು ಕೇಳಿದ ಆದಿ ಮಾತ್ರ ಅಕ್ಷರಶಃ ತಬ್ಬಿಬ್ಬಾಗುತ್ತಾನೆ. ಈ ವಿಚಾರಕ್ಕಾಗಿಯೇ ಆದಿ ಪಾರು ಮನೆ ಬಿಟ್ಟು ಬಂದಿದ್ದು ಎಂಬ ವಿಚಾರ ತಿಳಿದ ಪ್ರೀತಮ್ ಮಾತ್ರ ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಇನ್ನು ಇದಕ್ಕೆಲ್ಲ ಕಾರಣ ರಾಣಾನ ಕುಮ್ಮಕ್ಕಿನಿಂದ ಅರುಂಧತಿ ಈ ರೀತಿ ಮಾಡಲು ಸಾಧ್ಯ, ಅರುಂಧತಿ ಸತ್ತು ಹೋದಳು ಆದರೆ ರಾಣಾ ಇನ್ನೂ ಸತ್ತು ಹೋಗಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆದಿ ಸುಮ್ಮನೆ ಆಗದೆ ರಾಣಾ ಎಲ್ಲಿದ್ದಾನೆ ಅಲ್ಲಿಗೆ ಹುಡುಕಿಕೊಂಡು ಹೋಗುತ್ತಾನೆ.

ಅದನ್ನು ನೋಡಿದ ಪಾರು ಜನನಿ ಸ್ತಬ್ಧರಾಗಿ ನಿಂತು ಬಿಡುತ್ತಾರೆ. ಇನ್ನು ಅನುಷ್ಕ ಹಾಗೂ ರಾಣಾ ತಿಂಡಿ ವಿಚಾರವಾಗಿ ಮಾತನಾಡುತ್ತಾ ಇರುವಾಗ ಕಾಲಿಂಗ್ ಬೆಲ್ ಸದ್ದು ಆಗುತ್ತದೆ. ತಿಂಡಿ ತಂದವರು ಇರಬೇಕು ಎಂದುಕೊಂಡು ರಾಣ ಬಾಗಿಲು ತೆಗೆದು ನೋಡಿದರೆ ಅಲ್ಲಿ ಆದಿ ಪ್ರೀತಮ್ ನಿಂತುರುತ್ತಾರೆ. ಬಳಿಕ ರಾಣನಿಗೆ ಸರಿಯಾಗಿ ಗೂಸಾ ನೀಡುತ್ತಾರೆ. ರಾಣಾನಿಗೆ ಸರಿಯಾಗಿ ಪೆಟ್ಟು ಬೀಳುತ್ತ ಇದ್ದ ಹಾಗೆಯೇ ಅನುಷ್ಕ ಅಡಗಿ ಕುಳಿತುಕೊಳ್ಳತ್ತಾಳೆ. ರಾಣನನ್ನು ಕೊಲ್ಲುವ ಮಟ್ಟಕ್ಕೆ ಆದಿ ಹೋದಾಗ ಪ್ರೀತಂ ಆದಿಯನ್ನು ತಡೆಯುತ್ತಾನೆ.
ಆದಿ ಪಾರುಗೆ ಎಲ್ಲಾ ಡ್ರೆಸ್ ಪ್ಯಾಕ್ ಮಾಡಿಕೋ ಎಂದೆಲ್ಲ ಹೇಳಿದಾಗ ಪಾರು ರಾಣಾನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಡಿ ಅಖಿಲ ಅಮ್ಮನ ಮುಂದೆ ಆತನ ಬಂಡವಾಳ ಬಯಲು ಮಾಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿ ರಾಣಾನನ್ನು ಅರಸನ ಕೋಟೆಗೆ ಎಳೆದು ತರುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











