Paaru Serial: ಅನುಷ್ಕಾಳ ಕೆಟ್ಟ ದೃಷ್ಟಿ ಪಾರು ಮೇಲೆ; ಮುಂದೆ ಪಾರು ಗತಿ?
ಪಾರು ಬಹಳ ಚಿಂತೆಯಲ್ಲಿ ಕುಳಿತಿರಬೇಕಾದರೆ ಹನುಮಂತು ಬರುತ್ತಾನೆ. ಪಾರುವಿನ ಚಿಂತೆಗೆ ಕಾರಣ ಕೇಳಿದಾಗ ಪಾರು ನನ್ನ ಗಂಡನಿಗೆ ಇವತ್ತಾದರೂ ಒಳ್ಳೆಯ ಕೆಲಸ ಸಿಗಬಹುದು ಎಂದುಕೊಂಡು ಇದ್ದೇನೆ, ಒಳ್ಳೆಯ ಕೆಲಸ ಸಿಕ್ಕಿದರೆ ನಿಮಗೂ ಸ್ವಲ್ಪ ಸಹಾಯ ಆಗುತ್ತದೆ ಎಂದಾಗ ಹನುಮಂತುಗೆ ಬಹಳ ಬೇಸರ ಆಗುತ್ತದೆ. ಚಿಕ್ಕ ವಯಸ್ಸಿನಿಂದಲೂ ಪಾರುವನ್ನ ಬಹಳ ಮುದ್ದಾಗಿ ಸಾಕಿ ಬೆಳೆಸಿರುತ್ತಾರೆ, ಆದರೆ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ತಂದೆ ಕೂಡ ಬೇರೆಯವನು ಆಗಿಬಿಡುತ್ತಾನೆ ಎಂದು ಕೋಪಗೊಳ್ಳುತ್ತ ಇರುತ್ತಾನೆ.
ಇದನ್ನು ನೋಡಿದ ಪಾರು ತಂದೆಯನ್ನು ಸಮಾಧಾನ ಪಡಿಸುತ್ತಾಳೆ. ಇನ್ನು ರಘು ಯೋಚನೆ ಮಾಡುತ್ತಾ ಇರುತ್ತಾನೆ. ಆಗ ಅಲ್ಲಿಗೆ ಬಂದ ಅಖೀಲಾಂಡೇಶ್ವರಿ ಮನೆಗೆ ಬಂದ ದಾದಿ ಜನನಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ, ನಾನು ಇನ್ನೂ ಆಫೀಸ್ ಗೆ ಹೋಗಬೇಕು ಎಂದಾಗ ರಘು ಇಷ್ಟು ವಯಸ್ಸಾದ ಬಳಿಕ ಕೂಡ ಆಫೀಸ್ ಗೆ ಹೋಗಬೇಕಾ ಎಂದು ಹೇಳಿದಾಗ ತನ್ನ ಮಗ ಆದಿಯನ್ನು ನೆನಪು ಮಾಡಿಕೊಳ್ಳುತ್ತಾ ಬೇರೆ ವಿಧಿ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಘು ಸುಮ್ಮನೆ ಇರುತ್ತಾನೆ.

ಅಷ್ಟರಲ್ಲಿ ಅಲ್ಲಿಗೆ ಜಯ ಬರುತ್ತಾಳೆ. ಆಕೆ ನಾಳೆ ಬ್ಯುಸಿನೆಸ್ ಮೀಟಿಂಗ್ ಇದೆ ಅದನ್ನು ಫಿಕ್ಸ್ ಮಾಡಬೇಕಾ ಎಂದು ಕೇಳಲು ಬಂದಾಗ ಅಖಿಲ ಆಯಿತು ಎಂದು ಒಪ್ಪಿಗೆ ನೀಡುತ್ತಾಳೆ. ಅದನ್ನು ಕೇಳಿದ ಜಯ ನಾಳೆ ಯಾವ ಡ್ರೈವರ್ ಅನ್ನು ಕರೆಸಲಿ ಎಂದಾಗ ರಘು ಇಷ್ಟರವರೆಗೆ ಹನುಮಂತು ಸಾರಥಿ ಆಗಿ ಅಖಿಲಳನ್ನು ಕರೆದುಕೊಂಡು ಹೋಗುತ್ತಾನೆ, ಅವರನ್ನು ನಾಳೆ ಕರೆಯಿಸು ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖೀಲಾಂಡೇಶ್ವರಿ ಸುಮ್ಮನೆ ಇರುತ್ತಾನೆ.
ಹನುಮಂತುಗೆ ಕರೆ ಬರುತ್ತದೆ ನಾಳೆ ಅಖೀಲಾಂಡೇಶ್ವರಿ ಆಫೀಸ್ ಹೋಗಬೇಕು, ರೆಡಿ ಆಗಿ ಬನ್ನಿ ಎಂದು ಹೇಳುತ್ತಾರೆ. ಅದನ್ನು ಕೇಳಿ ಹನುಮಂತುಗೆ ಬಹಳ ಖುಷಿ ಆಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಆದಿ ಬರುತ್ತಾನೆ. ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾಗಿ ಇರುತ್ತಾನೆ. ಆ ವೇಳೆ ಪಾರುಗೆ ಅರ್ಥ ಆಗುತ್ತದೆ. ಕೆಲಸ ಸಿಕ್ಕಿಲ್ಲ ಎಂದರೆ ಏನು ತೊಂದರೆ ಇಲ್ಲ, ನಮ್ಮ ತಂದೆಗೆ ಏನು ಕಷ್ಟ ಆಗುವುದಿಲ್ಲ ನೀವು ಚಿಂತೆ ಮಾಡಬೇಡಿ ಎಂದು ಸಮಾಧಾನ ಮಾಡ್ತಾಳೆ.

ಆಗ ಆದಿ ಹನುಮಂತು ಚೆನ್ನಾಗಿ ಟ್ರೈನಿಂಗ್ ಕೊಟ್ಟಿದಾರೆ ಅನ್ನಿಸುತ್ತದೆ ಎಂದೆಲ್ಲ ಹೇಳುತ್ತಾನೆ. ಅದನ್ನು ಕೇಳಿ ಪಾರು ಸುಮ್ಮನೆ ಇರುತ್ತಾಳೆ. ಇನ್ನು ಅನುಷ್ಕ ಮಾತ್ರ ಪಾರುವನ್ನು ಟಾರ್ಗೆಟ್ ಮಾಡಿದ್ದಾಳೆ. ನನ್ನ ಮೊದಲ ಶತ್ರು ಆಕೆ, ನನ್ನ ಜೀವನ ಪಾರ್ವತಿಯಿಂದ ನಾಶ ಆಗಿ ಹೋಯಿತು, ಇನ್ನು ಮೇಲೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ಹಾಗೆಯೇ ಪಾರುವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರುತ್ತ ಇರುತ್ತಾಳೆ.
ಇನ್ನು ಮರುದಿನ ಹನುಮಂತು ಅಖಿಲ ಮನೆಗೆ ಹೋಗುತ್ತಾನೆ. ಆಗ ಅಖೀಲಾಂಡೇಶ್ವರಿ ಪೇಪರ್ ಓದುತ್ತಾ ಇರುತ್ತಾಳೆ. ಹನುಮಂತು ಬಂದು ಅಮ್ಮಾವರೇ ಎಂದು ಕರೆದರೂ ಏನು ರಿಪ್ಲೈ ಬಾರದೆ ಇರುವುದನ್ನು ನೋಡಿದ ಹನುಮಂತು ನನ್ನಿಂದಾಗಿ ನಿಮಗೆ ತುಂಬಾ ನೋವು ಆಗಿದೆ, ಹಾಗಂತ ನನಗೆ ಅದು ತಿಳಿದಿದೆ ಕೂಡ, ಇಷ್ಟಿದ್ದರೂ ನಾನು ಈ ಕೆಲಸದಲ್ಲಿ ಮುಂದುವರೆಯುವುದು ಸರಿ ಇಲ್ಲ ಎಂದು ಕೆಲಸ ಬಿಟ್ಟು ಹೊರಡಲು ಅನುವಾದಾಗ ಅಖಿಲ ಹನುಮಂತುವನ್ನು ಜೋರಾಗಿ ಕರೆಯುತ್ತಾಳೆ. ಆದನ್ನು ನೋಡಿದ ಹನುಮಂತು ನಿಲ್ಲುತ್ತಾನೆ.
ಹನುಮಂತು ಬಳಿ ಬಂದ ಅಖಿಲ ವೀರಯ್ಯ ನನ್ನ ಅಣ್ಣ ಹೇಗೋ ಹನುಮಂತು ನನ್ನ ತಮ್ಮ ಅದು ನಿನಗೆ ಕೂಡ ಗೊತ್ತು, ನೀನು ಅಂದು ಮಾತನಾಡಿದ್ದು ನನಗೆ ಬೇಸರ ತಂದಿದೆ ನಿಜ ಆದರೆ ನಿನ್ನ ಕೆಲಸದಿಂದ ತೆಗೆಯುವಷ್ಟು ಅಲ್ಲ, ಅಷ್ಟು ಸಣ್ಣ ಮನಸ್ಸು ಇಲ್ಲ ಎಂದು ಹೇಳುತ್ತಾಳೆ. ಬಳಿಕ ಆಫೀಸ್ ಗೆ ಹೋಗಲು ತಯಾರಾಗಲು ಹೋಗುತ್ತಾಳೆ. ಇದನ್ನೆಲ್ಲ ನೋಡಿದ ರಘುಗೆ ಕೊಂಚ ನಗು ಬರುತ್ತದೆ.


Click it and Unblock the Notifications











