ಅಖಿಲ ವಿರುದ್ದ ಮಾತನಾಡಿದ ಪಾರು; ಪಾರು ಮೇಲೆ ಕೈ ಎತ್ತಲು ಬಂದ ಹನುಮಂತು!

By Poorva

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ. ಇದೀಗ ಪಾರು ಅಖಿಲಾಂಡೇಶ್ವರಿ ವಿರುದ್ದ ಮಾತನಾಡಿದ್ದಾಳೆ. ರಾಣಾ ಆದಿ ಹಾಗೂ ಪ್ರೀತಮ್ ಕೈಯಿಂದ ತಪ್ಪಿಸಿಕೊಂಡಿದ್ದೆ ತಡ ಇದೀಗ ಅನುಷ್ಕ ಪಾರುವಿಗೆ ಕರೆ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾಳೆ.

ಅಖಿಲಾಂಡೇಶ್ವರಿ ವಿರುದ್ದವಾಗಿ ಮಾತನಾಡಲು ಹೇಳುತ್ತಾಳೆ. ಅನುಷ್ಕ ಅದೇ ರೀತಿ ಅಖಿಲಾಳನ್ನು ಎದುರು ಹಾಕಿಕೊಂಡಿರುತ್ತಾಳೆ. ಅಖಿಲಾಂಡೇಶ್ವರಿ ಎದುರಿಗೆ ಜೋರಾಗಿ ಮಾತನಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಅಖಿಲ ಎಷ್ಟು ಧೈರ್ಯ ನಿನಗೆ ನನ್ನ ಮೇಲೆಯೇ ಈ ರೀತಿ ಆಪಾದನೆ ಮಾಡುತ್ತಾ ಇದ್ದಿಯಾ ಈ ರೀತಿ ಮಾಡುವುದು ಸರಿಯಲ್ಲ ಎಂದೆಲ್ಲ ಜೋರಾಗಿ ಹೇಳುತ್ತಾಳೆ.

Kannada serial Paaru written update on 23rd March

ಇದನ್ನು ಕೇಳಿದ ಪಾರು ಮಾತ್ರ ಅಖಿಲ ವಿರುದ್ಧ ವಾಗ್ವಾದ ಮಾಡುತ್ತಾ ಇರುತ್ತಾಳೆ. ಇನ್ನು ಪಾರು ನೇರವಾಗಿ ಮನೆಗೆ ಬರುತ್ತಾ ಇರುವಾಗ ಆದಿ ಹಾಗೂ ಪ್ರೀತಮ್ ಮನೆಗೆ ಹೇಗೆ ಹೋಗುವುದು ಎಂದೆಲ್ಲ ಪ್ಲಾನ್ ಮಾಡಿಕೊಂಡು ಮಾತನಾಡುತ್ತಾ ಇರುವಾಗ ಪಾರು ಜೋರಾಗಿ ಮನೆಗೆ ಹೋಗಲು ಸಾಧ್ಯ ಇಲ್ಲ ಯಜಮಾನರೇ ಎಂದು ಹೇಳಿದಾಗ ಎಲ್ಲರಿಗೂ ಆಶ್ಚರ್ಯ ಆಗುತ್ತದೆ.

ಇನ್ನು ಪಾರು ಬಳಿ ಯಾಕೆ ಹೀಗೆ ಮಾತನಾಡಿದೆ ಎಂದು ಕೇಳಲು ಪಾರು ನಡೆದ ವಿಚಾರವನ್ನು ಹೇಳುತ್ತಾಳೆ. ಈ ರೀತಿಯೆಲ್ಲ ನಡೆಯಿತು ಎಂದಾಗ ಆದಿಗೆ ನೋವಾದರೂ ಸುಮ್ಮನೆ ಇರುತ್ತಾನೆ. ಆ ಬಳಿಕ ನನಗೆ ಹಾಗೂ ನಿನಗೆ ಮಾತ್ರ ಈ ವಿಚಾರ ತಿಳಿಯಲಿ ಬೇರೆಯವರಿಗೆ ತಿಳಿಯುವುದು ಬೇಡ ಎಂದು ಪ್ರಮಾಣ ಮಾಡಿಸಿಕೊಂಡು ಇರುತ್ತಾರೆ. ಇನ್ನು ರಘುವಿಗೆ ಆದಿ ಕರೆ ಮಾಡುತ್ತಾನೆ.

Kannada serial Paaru written update on 23rd March

ಆದಿ ಪಾರು ಮಾತಿಗೆ ಸಮಾಜಾಯಿಸಿ ನೀಡುತ್ತಾನೆ. ಆಗ ರಘು ಮಾತ್ರ ಆದಿ ಬಳಿ ಕೊಂಚ ಖಾರವಾಗಿ ಪ್ರತಿಕ್ರಿಯೆ ನೀಡುತ್ತಾನೆ. ಇದನ್ನು ನೋಡಿದ ಆದಿ ಇಲ್ಲ ಅಪ್ಪ ಏನೋ ಉದ್ದೇಶ ಇದ್ದೆ ಇದೆ ಅದಕ್ಕಾಗಿ ಪಾರು ಈ ರೀತಿ ನಡೆದುಕೊಂಡು ಇದ್ದಾಳೆ ಎಂದಾಗ ರಘು ಸುಮ್ಮನೆ ಇರುತ್ತಾನೆ. ಈ ವೇಳೆ ಅಖಿಲ ಬರುತ್ತಾಳೆ. ರಘು ಆದಿ ಕರೆಯನ್ನು ಕಟ್ ಮಾಡುತ್ತಾನೆ.

ಅಖಿಲ ಆದಿ ಕರೆ ಮಾಡಿದ ಎಂದಾಗಲೇ ಅಖಿಲಾಂಡೇಶ್ವರಿ ಕೋಪಾಗೊಳ್ಳುತ್ತಾ ಇರುತ್ತಾಳೆ. ಯಾಕೆ ಹೀಗೆಲ್ಲ ಮಾತನಾಡುತ್ತಾ ಇದ್ದೀರಾ ನನಗೆ ಎಷ್ಟು ಅವಮಾನ ಆಗಿದೆ ನೀವು ಇನ್ನೂ ಕೂಡ ಇದೆ ರೀತಿ ಅವರ ಪರವಾಗಿ ಮಾತನಾಡುತ್ತಾ ಇದ್ದರೆ ನನಗೆ ನೋವು ಆಗುತ್ತದೆ ಎಂದು ರಘು ಬಳಿ ತನ್ನ ಅಸಮಾಧಾನ ಹೊರ ಹಾಕುತ್ತ ಇರುತ್ತಾಳೆ.

ಇನ್ನು ಅನುಷ್ಕ ಮಾತ್ರ ತಾನು ಮಾಡಿದ ಕೆಲಸಕ್ಕೆ ಬೀಗುತ್ತಾ ಇರುತ್ತಾಳೆ. ಬಳಿಕ ಅರಸನಕೋಟೆಯನ್ನೆ ಧ್ವಂಸ ಮಾಡುವುದಾಗಿ ಪಣ ತೊಟ್ಟಿದ್ದಾಳೆ. ಇದನ್ನೆಲ್ಲ ನೋಡಿದ ರಾಣಾಗೆ ಬೇರೆ ಚಿಂತೆ ಕಾಡುತ್ತದೆ. ಇನ್ನು ಹನುಮಂತು ಜೋರಾಗಿ ಪಾರು ಪಾರು ಎಂದು ಕರೆಯುತ್ತಾ ಒಳಗೆ ಬಂದು ನೀನು ಮಾಡಿದ ಕೆಲಸಕ್ಕೆ ಅಖಿಲ ಅಮ್ಮ ಬಹಳ ಬೇಸರ ಮಾಡಿಕೊಂಡು ಇದ್ದಾರೆ ಈ ರೀತಿ ಯಾಕೆ ಮಾಡಿದಿರಿ ಎಂದು ಕೇಳುತ್ತಾನೆ.

ಬಳಿಕ ಅಖಿಲ ಅಮ್ಮನಿಗೆ ಎದುರು ಮಾತನಾಡುವಷ್ಟು ಧೈರ್ಯ ನಿನಗೆ ಇದೆಯಾ ಎಂದೆಲ್ಲ ಹೇಳುತ್ತಾನೆ. ಬಳಿಕ ಪಾರು ಕಪಾಳಕ್ಕೆ ಹೊಡೆಯಲು ಹೋಗುತ್ತಾನೆ. ಇದನ್ನು ನೋಡಿದ ಆದಿ ತಡೆಯುತ್ತಾನೆ. ಬಳಿಕ ಹನುಮಂತು ಬಳಿ ನಾವು ಏನೇ ಮಾಡಿದರೂ ಒಂದು ಕಾರಣ ಇರುತ್ತದೆ ಆ ಕಾರಣದಿಂದಾಗಿಯೇ ನಾವು ಈ ರೀತಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದೆಲ್ಲ ಹೇಳುತ್ತಾನೆ. ಆದರೂ ಹನುಮಂತು ಬೇಸರ ಮಾಡಿಕೊಂಡು ಬಳಿಕ ಕೊಂಚ ಸಮಧನಾಗೊಳ್ಳುತ್ತಾನೆ.

More from Filmibeat

English summary
Kannada serial Paaru written update on 23rd March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X