ಆದಿ ಬಳಿ ನಿಜ ವಿಚಾರ ಹೇಳ್ತಾಳಾ ಪಾರು? ಪಾರು ಮುಚ್ಚಿಟ್ಟಿದ್ದ ಸತ್ಯ ಆದಿಗೆ ಗೊತ್ತಾಯ್ತಾ?

By Poorva

ಇದೀಗ ಪಾರು ಹಾಗೂ ಆದಿ ಹನುಮಂತು ಮನೆಯಲ್ಲಿ ಇದ್ದಾರೆ. ಆದರೆ ರಘುಗೆ ಮಾತ್ರ ತನ್ನ ಮಗ ಸೊಸೆಯದ್ದೆ ನೆನಪು. ಊಟಕ್ಕೂ ಬಾರದೇ ಮಗನ ರೂಮ್ ನಲ್ಲಿ ಫೋಟೋ ನೋಡುತ್ತಾ ಇರುತ್ತಾನೆ. ಆ ವೇಳೆ ಅಲ್ಲಿಗೆ ಬಂದ ಅಖೀಲಾಂಡೇಶ್ವರಿ ರಘುವನ್ನು ಸಮಾಧಾನ ಮಾಡಿ ಊಟಕ್ಕೆ ಕರೆದುಕೊಂಡು ಬರುತ್ತಾರೆ. ಆ ಬಳಿಕ ಎಲ್ಲರೂ ಊಟ ಮಾಡಿ ಮಲಗುತ್ತಾರೆ. ಈ ವೇಳೆ ಹನುಮಂತು ಪಾರು ಆದಿಗೆ ಊಟ ಬಡಿಸಲು ಹೋದಾಗ ಆದಿ ನನಗೆ ಹೊಟ್ಟೆ ಹಸಿವು ಇಲ್ಲ, ನೀವು ಊಟ ಮಾಡಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಹನುಮಂತು ನಿಮ್ಮ ತಾಯಿ ತಂದೆ ಎಲ್ಲರೂ ಊಟ ಮಾಡಿದರು, ನನಗೆ ತಿಳಿದಿದೆ ನೀವು ಆ ಕಾರಣಕ್ಕೆ ಊಟ ಬೇಡ ಎಂದು ಹೇಳುತ್ತ ಇರುವುದು, ಅವರೆಲ್ಲ ಆಗಲೇ ಊಟ ಮಾಡಿದರು ನೀವು ಊಟ ಮಾಡಿ ಎಂದು ಹೇಳಿ ಒತ್ತಾಯ ಪೂರ್ವಕವಾಗಿ ಊಟ ಮಾಡಿಸುತ್ತಾನೆ. ಬೆಳಗೆದ್ದು ರಘು ಹಾಗೂ ಅಖಿಲ ರೂಮ್ ನಿಂದಾ ಹೊರ ಬರಬೇಕಾದರೆ ಜನನಿ ರಂಗೋಲಿ ಹಾಕುತ್ತಾಳೆ.

ಜನನಿ ರಂಗೋಲಿ ಹಾಕುತ್ತ ಇರುವುದನ್ನು ನೋಡಿದ ಅಖಿಲ ಬಹಳ ಚೆನ್ನಾಗಿ ರಂಗೋಲಿ ಹಾಕುತ್ತಿಯ ಎಂದು ಹೇಳಿದಾಗ ಜನನಿ ನನಗೆ ಪಾರ್ವತಿ ಅವರಿಗಿಂತ ಚೆನ್ನಾಗಿ ಹಾಕಲು ಗೊತ್ತಿಲ್ಲ ಎಂದು ಹೇಳುತ್ತಾರಳೆ. ಇದನ್ನು ಕೇಳಿದ ಅಖಿಲ ಸುಮ್ಮನೆ ಆಗುತ್ತಾಳೆ. ಈ ವೇಳೆ ರಘು ಅಖಿಲ ಬಳಿ ಯಾಕೆ ಅಖಿಲ ಏನಾಯಿತು ಪಾರ್ವತಿ ನೆನಪು ಆಯಿತಾ ಎಂದು ಕೇಳುತ್ತಾನೆ. ಅಖಿಲ ಹೆಂಡತಿ ಆದವಳು ಗಂಡನಿಗೆ ಬುದ್ದಿ ಮಾತು ಹೇಳಬೇಕು, ತಪ್ಪು ಮಾಡಿದಾಗ ತಿದ್ದಬೇಕು, ಆದರೆ ಗಂಡ ಮಾಡಿದ್ದೆ ಸರಿ ಎಂದು ವಾದ ಮಾಡುವುದು ನನಗೆ ಸರಿ ಎನಿಸಲಿಲ್ಲ, ಅಂಥವರ ಬಗ್ಗೆ ನನಗೆ ಏನು ನೆನಪು ಆಗುವುದಿಲ್ಲ ಎಂದಾಗ ರಘು ಸುಮ್ಮನೆ ಆಗುತ್ತಾನೆ.

ಪಾರುವನ್ನು ನೋಡಿ ಖುಷಿಪಟ್ಟ ಹನುಮಂತು

ಪಾರುವನ್ನು ನೋಡಿ ಖುಷಿಪಟ್ಟ ಹನುಮಂತು

ಅತ್ತ ಪಾರು ಹನುಮಂತು ಮನೆ ಮುಂದೆ ರಂಗೋಲಿ ಹಾಕುತ್ತಾ ಇರುತ್ತಾಳೆ. ಆ ವೇಳೆ ಹನುಮಂತು ಪಾರುವಾನ್ನು ನೋಡುತ್ತಾ ಇರುತ್ತಾನೆ. ಪಾರು ಅಪ್ಪನನ್ನು ನೋಡಿ ಅಪ್ಪ ಎಂದು ಕರೆಯುತ್ತಾಳೆ.. ಇದನ್ನು ನೋಡಿದ ಹನುಮಂತು ಖುಷಿಯಲ್ಲಿ ನಾನು ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ.. ಪಾರು ರಂಗೋಲಿ ಹಾಕುವುದರಲ್ಲಿ ಮಗ್ನಳಾಗಿರುತ್ತಾಳೆ. ಮಗಳು ಮನೆಗೆ ಬಂದಾಗಿನಿಂದ ಮನೆಯ ವಾತಾವರಣವೆ ಬದಲಾಗಿಬಿಟ್ಟಿದೆ.

ತುಳಸಿಗೆ ಪೂಜೆ ಮಾಡಿದ ಪಾರು

ತುಳಸಿಗೆ ಪೂಜೆ ಮಾಡಿದ ಪಾರು

ತುಳಸಿಗೆ ಪೂಜೆ ಮಾಡುತ್ತಿದ್ದ ಪಾರುವನ್ನ ನೋಡಿದ ಹನುಮಂತು ಹಾಗೂ ಆದಿ ಖುಷಿ ಪಡುತ್ತಾರೆ. ಇನ್ನು ಮನೆಯ ಒಳಗೆ ಹೋದ ಪಾರು ಮನದಲ್ಲಿ ನಾನು ಗರ್ಭಿಣಿ ಎಂಬ ವಿಚಾರ ಗಂಡನ ಬಳಿ ಹೇಳಿದರೆ ಅವರ ಮನಸು ಕೊಂಚ ನಿರಾಳ ಆಗಬಹುದು ಎಂದುಕೊಂಡು ಆದಿ ಬಳಿ ನಿಜ ವಿಚಾರ ಹೇಳಲು ಹೋದಾಗ ಆದಿ ನೂರಾರು ತಲೆನೋವನಲ್ಲಿ ಇರುತ್ತಾನೆ.

ಆದಿ ಮಾತಿಗೆ ಸಾಥ್ ಕೊಟ್ಟ ಪಾರು

ಆದಿ ಮಾತಿಗೆ ಸಾಥ್ ಕೊಟ್ಟ ಪಾರು

ಮಾವ ನಮ್ಮನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ, ಆದರೆ ನಾವು ಅವರಿಗೆ ಹೊರೆ ಆಗಬಾರದು, ನನ್ನ ಬಳಿ ದುಡ್ಡು ಸ್ವಲ್ಪ ಇದೆ, ಅಷ್ಟೇ ಇನ್ನೂ ನಾನು ದುಡಿದು ತಿನ್ನಬೇಕು ಎಂದು ಹೇಳಿದಾಗ ಪಾರ್ವತಿ ಹೇಳ ಹೊರಟ ನಿಜ ವಿಚಾರವನ್ನು ಮುಚ್ಚಿ ಇಡುತ್ತಾಳೆ. ನಾನು ಗರ್ಭಿಣಿ ಎಂದು ಈಗ ಹೇಳಿದರೆ ಸರಿ ಅಲ್ಲ, ಇದರಿಂದ ಇನ್ನೂ ಅವರಿಗೆ ಕಷ್ಟನೇ ಎಂದುಕೊಂಡು ಸುಮ್ಮನೆ ಆಗುತ್ತಾಳೆ. ಇನ್ನು ಆಕೆಯ ತಮ್ಮ ಬಂದು ಪರಂಗಿ ಹಣ್ಣು ತಿನ್ನುವಂತೆ ಒತ್ತಾಯ ಮಾಡುತ್ತಾನೆ. ಪರಂಗಿ ಹಣ್ಣನ್ನು ನೋಡಿದ ಪಾರು ನನಗೆ ಈಗ ಇಷ್ಟ ಇಲ್ಲ ನಾನು ತಿನ್ನುವುದಿಲ್ಲ ಎಂದು ಹೇಳುತ್ತಾನೆ. ಆದರೆ ಪಾರು ತಮ್ಮ ತಿನ್ನಲೇಬೇಕು ಎಂದು ಹಠ ಮಾಡುತ್ತಾ ಇರುತ್ತಾನೆ. ಇನ್ನು ಆದಿ ಪಾರು ನೋಡಿ ಯಾಕೆ ಪರಂಗಿ ತಿನ್ನುತ್ತಿಲ್ಲ, ನಿನಗೆ ಇಷ್ಟ ಇಲ್ವಾ ಎಂದೆಲ್ಲ ಹೇಳಿ ತಿನ್ನಿಸಲು ಬರುತ್ತಾನೆ. ಆದರೆ ಪಾರು ಅದನ್ನು ತಿನ್ನುತ್ತಾಳ ಅಥವಾ ನಿಜ ವಿಚಾರ ಹೇಳುತ್ತಾಳ ಕಾದು ನೋಡಬೇಕಿದೆ.

More from Filmibeat

English summary
Kannada serial Paaru written update on 25th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X