Paaru: ಮಗುವನ್ನು ಕಳೆದುಕೊಂಡ ಆದಿ ಪಾಡು ಹೇಳತೀರದು; ಆದಿಗೆ ಸಮಾಧಾನ ಮಾಡಿದ ಪಾರು
ಪಾರೂ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪಾರು ತನ್ನ ಮಗುವನ್ನು ಜನನಿಗೆ ಕೊಟ್ಟು ತ್ಯಾಗ ಮಯಿ ಎಂದು ಎನಿಸಿಕೊಂಡಿದ್ದಾಳೆ. ಹೌದು ಪಾರು ತನ್ನ ತಾಯಿಯನ್ನು ತನ್ನ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡಿರುತ್ತಾಳೆ..
ಆದರೆ ಆಕೆಗೆ ಆ ನೋವಿನ ಬಗ್ಗೆ ತಿಳಿದಿದೆ. ಆದರೆ ಜನನಿ ಕೂಡ ಚಿಕ್ಕ ವಯಸ್ಸಿನಿಂದ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಇರುತ್ತಾಳೆ. ಇದೀಗ ಜನನಿ ತಾನು ಹೆತ್ತ ಮಗುವನ್ನೇ ಕಳೆದುಕೊಂಡು ಬಿಟ್ಟಿದ್ದಾಳೆ. ಅನುಷ್ಕ ಕುತಂತ್ರದಿಂದ ಜನನಿ ಮಗು ಸಾವನ್ನಪ್ಪುತ್ತದೇ ಆದರೆ ಪಾರು ಮಾತ್ರ ಜನನಿ ಚೆನ್ನಾಗಿ ಇರಬೇಕು ತನ್ನ ಮಗು ಅರಸನ ಕೋಟೆಯಲ್ಲಿ ಬೆಳೆಯಲಿ ಎಂದು ಜನನಿ ಪಕ್ಕ ತನ್ನ ಮಗುವನ್ನು ಮಲಗಿಸುತ್ತಾಳೆ.

ಇನ್ನು ಸಾವಿತ್ರಮ್ಮ ಕೂಡ ಪಾರು ನೀನು ಮಾಡುತ್ತಿರುವುದು ಸರಿ ಅಲ್ಲ, ಆ ಮಗು ಜನನಿ ಜೊತೆ ಬೆಳೆದರೆ ನಿನ್ನನ್ನು ಅಮ್ಮ ಎಂದು ಕರೆಯುವುದಿಲ್ಲ, ಜನನಿಯನ್ನು ಕರೆಯುತ್ತದೆ ಅಮ್ಮ ಎಂದು ಆಗ ನಿನಗೆ ಬಹಳ ನೋವು ಆಗುತ್ತದೆ ಎಂದಾಗ ಪಾರು ಕಣ್ಣಲ್ಲಿ ನೀರು ಬರುತ್ತದೆ. ಇನ್ನೂ ಆದಿ ಪಾರು ಬಳಿ ಬಂದು ಕುಳಿತು ಕಣ್ಣೀರು ಹಾಕುತ್ತ ಇರುತ್ತಾನೆ. ಪಾರುಗೆ ಇನ್ನು ಮುಂದೆ ತನಗೆ ಮಕ್ಕಳು ಆಗುವುದಿಲ್ಲ ಎಂಬುದು ತಿಳಿದಿಲ್ಲ ಎಂಬ ನೋವನ್ನು ಯಾರ ಜೊತೆಗೂ ಹೇಳಿಕೊಳ್ಳಲಾಗದೆ ಅಳುತ್ತಾ ಇರುತ್ತಾನೆ
ಆ ಬಳಿಕ ಪಾರು ಜೊತೆ ಸಾರಿ ಕೇಳುತ್ತಾನೆ. ನಾನು ನೀನು ಕರೆ ಮಾಡಿದ ವೇಳೆ ಬೇಗ ಬರಬೇಕಿತ್ತು, ನಾನು ಬೇಗ ಬಾರದೆ ಇದ್ದಿದ್ದರಿಂದ ನಮ್ಮ ಮಗುವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದೆವು ಎಂದು ಬಹಳ ಬೇಸರ ಮಾಡಿಕೊಂಡು ಹೇಳುವ ವೇಳೆ ಪಾರು ಮನದಲ್ಲಿ ಯೋಚಿಸತೊಡಗುತ್ತಾಳೆ. ನನ್ನ ಗಂಡ ನನ್ನ ಮಗು ಬಗೆ ಎಷ್ಟೆಲ್ಲ ಕನಸು ಕಟ್ಟಿಕೊಂಡು ಇರುತ್ತಾರೆ, ಆದರೆ ನಾನು ಒಂದು ಮಾತು ಯಜಮಾನರಿಗೆ ಹೇಳದೆ ಮಗುವನ್ನು ಜನನಿಗೆ ಕೊಟ್ಟೆ ನನ್ನ ಕ್ಷಮಿಸಿ ಬಿಡಿ ಎಂದು ಮನದಲ್ಲಿ ಪಾರು ಹೇಳುತ್ತ ಅಳುತ್ತಾ ಇರುತ್ತಾಳೆ. ಇನ್ನು ಅವರೆಲ್ಲ ಬೇರೆ ಕಡೆ ಇರುವಾಗ ಪಾರು ಮಗು ಜನನಿ ರೂಮಿನಲ್ಲಿ ಹಸಿವಿನಿಂದ ಅಳುತ್ತಾ ಇರುತ್ತದೆ. ಇದನ್ನು ಕೇಳಿಸಿಕೊಂಡ ಪಾರುವಿಗೆ ಬಹಳ ನೋವಾಗುತ್ತದೆ..
ಸಾವಿತ್ರಕ್ಕನನ್ನು ಪಕ್ಕ ಕರೆದ ಪಾರು ನನ್ನ ಮಗುವಿಗೆ ಹಸಿವಾಗಿದೆ ಸವಿತ್ರಕ್ಕ ನನ್ನ ಮಗುವನ್ನು ಕರೆದುಕೊಂಡು ಬನ್ನಿ ಎಂದು ಹೇಳಿದಾಗ ಏನು ಮಾಡುವುದು ಎಂದು ತಿಳಿಯದ ಸಾವಿತ್ರಿ ಪಾರು ಮಗುವನ್ನು ಜನನಿ ಬಳಿಯಿಂದ ತೆಗೆದುಕೊಂಡು ಬರುತ್ತಾಳೆ. ಇನ್ನು ಪಾರು ಮಗುವನ್ನು ತೆಗೆದುಕೊಂಡು ಹಾಲು ಕೊಡುತ್ತಾ ಇರುತ್ತಾಳೆ.
ಇನ್ನು ಅಖಿಲ ಮಗು ಯಾಕೆ ಅಳುತ್ತಿದೆ ಎಂದು ಜನನಿ ರೂಮ್ ಗೆ ಹೋಗಿ ನೋಡಿದಾಗ ಮಗು ಅಲ್ಲಿ ಇರದೆ ಇರುವುದನ್ನು ಕಂಡು ಶಾಕ್ ಆಗುತ್ತದೆ. ಇನ್ನು ಮಗು ಬಗ್ಗೆ ನರ್ಸ್ ಬಳಿ ವಿಚಾರಣೆ ಮಾಡಿದಾಗ ಪಾರು ಬಳಿ ಇದೆ ಎಂದು ತಿಳಿಯುತ್ತದೆ. ಆ ವೇಳೆ ಅಖಿಲ ಪಾರು ರೂಮ್ ಗೆ ಹೋಗಿ ಮಗುವನ್ನು ನೋಡಿದ ಪಾರು ಆ ಮಗುವಿಗೆ ಹಾಲು ಕೊಡುತ್ತಾ ಇರುವುದನ್ನು ನೋಡಿದ ಅಖಿಲಗೆ ಕೊಂಚ ಶಾಕ್ ಆಗುತ್ತದೆ.


Click it and Unblock the Notifications











