Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರಸನ ಕೋಟೆ ಆಸ್ತಿ ಎರಡು ಭಾಗವಾಗುತ್ತಾ? ಅಮ್ಮನ ಬಳಿ ಆಸ್ತಿ ಕೇಳ್ತಾನಾ ಆದಿ?
ಪ್ರೀತಮ್ ಗಾಗಿ ಆದಿ ಅಮ್ಮನ ವಿರುದ್ದ ನಿಂತುಕೊಳ್ಳಲೆಬೇಕಾಗಿದೆ. ಈ ಬಗ್ಗೆ ಪಾರು ಬಳಿ ಕೂಡ ಹೇಳುತ್ತ ಇರುತ್ತಾನೆ. ಪಾರು ನಾವು ಎಷ್ಟೇ ಕಷ್ಟ ಬಂದರೂ ಆಸ್ತಿಯಲ್ಲಿ ಪಾಲು ಕೇಳಲ ಬೇಕು, ಇವತ್ತು ನಾನು ಪ್ರೀತಮ್ ಮೇಲೆ ಕೈ ಮಾಡಿದರೂ ನನ್ನ ಪರವಾಗಿ ನಿಂತು ಮಾತನಾಡಿದ, ಅಮ್ಮನ ವಿರುದ್ದ ಮಾತನಾಡಲೇ ಬೇಕು ಎಂದಾಗ ಪಾರು ಮಾತ್ರ ಇದು ಅಸಾಧ್ಯ ಎಂದು ಹೇಳುತ್ತಾಳೆ. ಆದಿ ಮನದಲ್ಲಿ ಒಂದೇ ವಿಚಾರ ಮೂಡುತ್ತ ಇರುತ್ತದೆ ನಾವು ಎಲ್ಲರ ಜೊತೆ ಕಠೋರವಾಗಿ ನಡೆದುಕೊಳ್ಳಬೇಕು ಇಲ್ಲವಾದರೆ ನಮ್ಮ ಮನೆಗೆ ಕೆಡುಕು ಆಗುವುದು ಸತ್ಯ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾನೆ.
ಪ್ರೀತಮ್ ಆಸ್ತಿ ಕೇಳುವ ಹಾಗೆ ಯಾರು ಮಾಡುತ್ತಾ ಇದ್ದಾರೆ ಎಂದು ಯೋಚನೆ ಮಾಡುತ್ತಿರುವ ಆದೀಗೆ ಪ್ರೀತಮ್ ಬಾಯಿ ಬಿಡಿಸುವುದು ಬಹಳ ಕಷ್ಟ ಕರ ವಿಚಾರ ಆಗಿರುತ್ತದೆ. ಇನ್ನು ಆದಿ ಮಾತ್ರ ಪಾರು ಬಳಿ ನಾವು ಆಸ್ತಿಯಲ್ಲಿ ಭಾಗ ಕೇಳಲೇ ಬೇಕು ಇಲ್ಲ ಎಂದರೆ ಪ್ರೀತಮ್ ಜೀವನ ಹಾಳಾಗಿ ಹೋಗುತ್ತದೆ..
ಅಮ್ಮ ನಾನು ಜಗಳ ಆಡಿದರೆ ಒಂದಾಗುತ್ತವೆ, ಆದರೆ ಪ್ರೀತಮ್ ಹೀಗೆ ಪದೇ ಪದೆ ಜಗಳ ಆಡಿದರೆ ಒಂದಾಗಲು ಅಮ್ಮ ಒಪ್ಪಲ್ಲ ಅದಕ್ಕಾಗಿ ನಾವು ಆಸ್ತಿಯಲ್ಲಿ ಭಾಗ ಕೇಳಲೇ ಬೇಕಾಗಿದೆ ಎಂದು ಬಹಳ ಬೇಸರದಲ್ಲಿ ಪಾರು ಬಳಿ ಹೇಳಿಕೊಳ್ಳುತ್ತಾ ಇರುತ್ತಾನೆ. ಇತ್ತ ಅಖಿಲ ಬಹಳ ಬೇಸರದಲ್ಲಿ ಇರುತ್ತಾಳೆ. ಅರಸನ ಕೋಟೆಯ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡುತ್ತಾಳೆ ಬಳಿಕ ಗಂಡ ರಘು ಬಳಿ ಏನು ಮಾಡಿದರೆ ಇದೆಲ್ಲ ಸರಿ ಹೋಗುತ್ತದೆ ಎಂದಾಗ ಅಲ್ಲಿಗೆ ದಾಮಿನಿ ಓಡಿ ಬರುತ್ತಾಳೆ.

ದಾಮಿನಿ ವಿರುದ್ದ ಕಿರುಚಿದ ಅಖಿಲ
ನನ್ನ ಬಳಿ ಇದಕ್ಕೆಲ್ಲಾ ಉಪಯೋಗವಿದೆ ಎಂದು ಓಡಿ ಬರುವ ದಾಮಿನಿ ಅಕ್ಕ ನಿಮ್ಮ ಸಮಸ್ಯೆಗೆ ನನ್ನ ಬಳಿ ಪರಿಹಾರ ಇದೆ, ಆಸ್ತಿಯನ್ನು ಒಬ್ಬರು ಮಕ್ಕಳಿಗೆ ಕೂಡ ಭಾಗ ಮಾಡಿಬಿಡಿ, ಹುಟ್ಟಿದಾಗ ಅಣ್ಣ ತಮ್ಮಂದಿರು, ಬೆಳಿತಾ ಬೆಳೆಯುತ್ತಾ ದಾಯಾದಿಗಳು ಅದಕ್ಕಾಗಿ ಹೇಳಿದೆ ಎನ್ನುತ್ತಾಳೆ. ಇದನ್ನು ಕೇಳಿದ ಅಖಿಲ ಕೋಪದಿಂದ ದಾಮಿನಿ ಕೆನ್ನೆಗೆ ಹೊಡೆಯಲು ಬರುತ್ತಾಳೆ.

ಅಖಿಲ ಮಾತಿಗೆ ನಡುಗಿದ ದಾಮಿನಿ
ಇಷ್ಟೇನಾ ಇಷ್ಟೇನಾ ನೀನು ಆದಿ ಪ್ರೀತಮ್ ಬಗ್ಗೆ ತಿಳಿದುಕೊಂಡು ಇರುವುದು, ಆಸ್ತಿ ಭಾಗ ಮಾಡಿರುವ ವಿಚಾರವನ್ನು ಅವರಿಬ್ಬರೂ ಕನಸು ಮನಸಿನಲ್ಲೂ ಯೋಚನೆ ಮಾಡಿರಲು ಸಾಧ್ಯ ಇಲ್ಲ, ನನ್ನ ಮಕ್ಕಳು ಏನು ಎಂಬುವುದು ನನಗೆ ಗೊತ್ತು. ಇನ್ನೊಂದು ಬಾರಿ ಅವರಿಬ್ಬರ ಬಗ್ಗೆ ಮಾತನಾಡಿದರೆ ಮನೆಯಿಂದ ಆಚೆ ಹಾಕಬೇಕಾಗುತ್ತದೆ ಎಂದು ಕೋಪದಿಂದ ಹೇಳುತ್ತಾಳೆ. ಅರಸನ ಕೋಟೆಯಲ್ಲಿ ಯಾರು ಭಾಗ ಕೇಳಿಲ್ಲ ಕೇಳೋದು ಇಲ್ಲ ಎಂದು ಅಖಿಲ ಹೇಳಿದಾಗ ದಾಮಿನಿ ಅಲ್ಲಿಂದ ಹೋಗುತ್ತಾಳೆ. ಇನ್ನು ಪಾರು ಎಲ್ಲರಿಗೂ ಕಾಫಿ ಕೊಡುತ್ತಾ ಇರುವ ವೇಳೆ ಅಲ್ಲಿಗೆ ಜನನಿ ಬರುತ್ತಾಳೆ .

ಜನನಿಗೆ ಕಾಫಿ ಕೊಡದ ಪಾರು
ಪಾರು ಜನನಿಗೆ ಕಾಫಿ ಕೊಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಆದಿ ಬರುತ್ತಾನೆ.. ಆದಿ ಜನನಿಗೆ ಕಾಫಿ ಕೊಡದಂತೆ ಸನ್ನೆ ಮಾಡುತ್ತಾನೆ. ಇದನ್ನು ನೋಡಿದ ಜನನಿ ಸೀದಾ ಹೋಗುತ್ತಾಳೆ ಬಳಿಕ ಜನನಿ ಹಿಂದೆ ತಿರುಗಿ ನೋಡಿದಾಗ ಆದಿ ನಿಂತಿರುತ್ತಾನೆ. ಇನ್ನು ಕಾಫಿ ಹಿಡಿದುಕೊಂಡು ಆದಿ ರೂಮಿಗೆ ಬರುವ ಪಾರು ಆದಿ ಬಳಿ ಯಾಕೆ ಯಜಮಾನರೆ ಜನನಿ ಅವರಿಗೆ ಕಾಫಿ ಕೊಡಬೇಡ ಅಂದಿರಿ ಎಂದಾಗ ಜನನಿ ಬರುತ್ತಾಳೆ. ಇದನ್ನು ಕಂಡ ಆದಿ ಜನನಿಗೆ ಕಾಫಿ ಕೊಡದೇ ಒಳ್ಳೆ ಕೆಲಸ ಮಾಡಿದೆ ಪಾರು. ಎಲ್ಲರಿಗೂ ಕಾಫಿ ಮಾಡಿ ಕೊಡಲು ನೀನೇನು ಈ ಮನೆ ಕೆಲಸದವಳ, ನೀನು ನನ್ನ ಹೆಂಡತಿ ಮೇಲಾಗಿ ಅರಸನ ಕೋಟೆಯ ಸೊಸೆ, ನೀನು ಈ ಮನೆಯ ಹಿರಿ ಸೊಸೆ. ನಿನಗೆ ಈ ಮನೆಯಲ್ಲಿ ಜನನಿಗಿಂತ ಹೆಚ್ಚು ಅಧಿಕಾರ ಇದೆ, ನೀನು ಈ ತರ ಮಾಡುತ್ತಾ ಇರುವುದು ನನಗೆ ಸರಿ ಕಾಣುತ್ತಾ ಇಲ್ಲ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಜನನಿ ಅಳುತ್ತಾ ಹೋಗುತ್ತಾಳೆ. ಬಳಿಕ ಜನನಿ ಪ್ರೀತಮ್ ಗೆ ಕಾಫಿ ಕೊಡಲು ಹೋಗುತ್ತಾಳೆ. ಆ ವೇಳೆ ಜನನಿ ಕಣ್ಣೀರು ನೋಡಿದ ಪ್ರೀತಮ್ ಏನಾಯಿತು ಜನನಿ ಯಾಕೆ ಕೋಪ ಮಾಡಿಕೊಂಡು ಇದ್ದೀಯಾ ಏನಾಯಿತು ಎಂದೆಲ್ಲ ಹೇಳಿದಾಗ ಆದಿ ಹೇಳಿರುವುದನ್ನೆಲ್ಲ ಜನನಿ ಪ್ರೀತಮ್ ಬಳಿ ಹೇಳುತ್ತಾಳೆ. ಪ್ರೀತಮ್ ಕೋಪಿಸಿಕೊಳ್ಳದೆ ಜನನಿಗೆ ಸಮಾಧಾನ ಮಾಡುತ್ತಾನೆ. ಆದರೆ ಆದಿಗೆ ಇದೆಲ್ಲವನ್ನೂ ಜನನಿಗೆ ಹೇಳಲು ಬಹಳ ಬೇಸರ ಆಗುತ್ತದೆ ಆದರೆ ಪ್ರೀತಮ್ ಗೆ ಒಳಿತು ಆಗುತ್ತದೆ ಎಂದು ಹೇಳಿ ಈ ರೀತಿಯ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ.