Paaru: ಪಾರು ಜೊತೆ ವಾಕಿಂಗ್‌ಗೆ ಹೊರಟ ರಘು ಅಖಿಲಾಗೆ ಸಿಕ್ಕಿಹಾಕಿಕೊಳ್ತಾನಾ?

By Poorva

ಪಾರು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಹನುಮಂತು ಅಖಿಲಾಂಡೇಶ್ವರಿ ಬಳಿ ಬರುತ್ತಾನೆ. ಅಮ್ಮಾವರೇ ಎಂದು ಕರೆದಾಗ ಅಲ್ಲಿಗೆ ರಘು ಬರುತ್ತಾನೆ. ಹನುಮಂತು ಬಂದ ಕಾರಣ ಹೇಳುತ್ತಾನೆ. ಅದು ಬೇರೆ ಏನು ಇಲ್ಲ ಹತ್ತು ಸಾವಿರ ಸಂಬಳ ಹೆಚ್ಚು ಮಾಡಿದುದಕ್ಕೆ ಆತ ಮಾತನಾಡಲು ಬರುತ್ತಾನೆ.

ರಘು ನಾನೇ ಸಂಬಳ ಹೆಚ್ಚು ಮಾಡಲು ಹೇಳಿದೆ ಹನುಮಂತು ಆದಿ ಬೇರೆ ಕೆಲಸ ಮಾಡಲು ಹೋಗುತ್ತಿಲ್ಲ ಆ ಕಾರಣಕ್ಕೆ ಅಖಿಲ ಬಳಿ ಇದನ್ನು ಹೇಳದೆ ನಾನೇ ಸಂಬಳ ಹೆಚ್ಚು ಕೊಡುವಂತೆ ಹೇಳಿದೆ ಎಂದಾಗ ಹನುಮಂತು ಮುಖ ಇನ್ನೂ ಚಿಕ್ಕದಾಗುತ್ತದೆ. ಇದನ್ನೆಲ್ಲ ಮೇಲೆ ನಿಂತು ಅಖಿಲಾಂಡೇಶ್ವರಿ ನೋಡುತ್ತಾ ಇರುತ್ತಾಳೆ. ಹನುಮಂತು ಎಷ್ಟೇ ಹೇಳಿದರೂ ಆತ ಮಾತ್ರ ಆ ಹಣ ತೆಗೆದುಕೊಳ್ಳಲು ಒಪ್ಪಿಕೊಳ್ಳದೆ ಪುನಃ ಆ ಹಣವನ್ನು ಕಳುಹಿಸುತ್ತೇನೆ ಬರುವ ದಿನದಿಂದ ನನಗೆ ಸಂಬಳ ಜಾಸ್ತಿ ಬೇಡ ಎಂದು ಹೇಳುತ್ತಾನೆ.

Kannada serial Paaru written update on 28th February

ಇದನ್ನು ಕೇಳಿದ ಆತ ರಘುಗೆ ಬಹಳ ಬೇಸರ ಆಗುತ್ತದೆ. ಇನ್ನು ಹನುಮಂತು ಇಷ್ಟು ಹೇಳಿ ಅಲ್ಲಿಂದ ಹೊರ ಹೋಗಿ ಬಿಡುತ್ತಾನೆ. ರಘು ಹನುಮಂತುವನ್ನು ಎಷ್ಟೇ ಕರೆದರೂ ಆತ ಮಾತ್ರ ಹಿಂದಿರುಗಿ ನೋಡದೆ ಸೀದಾ ಹೋಗಿ ಬಿಡುತ್ತಾನೆ ರಘುಗೆ ತಳ ಮಳ ಆಗುತ್ತದೆ. ಆತ ಅತ್ತ ಇತ್ತ ನೋಡಬೇಕಾದರೆ ಮೇಲೆ ಅಖಿಲ ನಿಂತಿರುತ್ತಾಳೆ. ಅಖಿಲಳನ್ನು ನೋಡಿದ ಕೂಡಲೇ ಇನ್ನೂ ಶಾಕ್ ಆಗುತ್ತದೆ

ರಘು ಅದು ಇದು ಎಂದು ತೊದಲಿದಾಗ ಅಖಿಲ ಏನು ರಘು ಇನ್ನೇನು ಹೇಳುವುದು ಬೇಡ ನನಗೆ ಎಲ್ಲಾ ತಿಳಿದು ಹೋಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ರಘು ಸುಮ್ಮನೆ ಆಗುತ್ತಾನೆ. ಇನ್ನು ಅಖಿಲ ರಘುವನ್ನು ನೋಡಿ ಸುಮ್ಮನೆ ಆಗುತ್ತಾಳೆ. ಅಖಿಲ ಬಹಳ ಖುಷಿಯಿಂದ ಕೆಳಗಿಳಿದು ಬರುತ್ತಾಳೆ. ರಘು ಬಳಿ ಇವತ್ತು ನಾನು ಜನನಿಯನ್ನು ವಾಕಿಂಗ್ ಕರೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ, ನೀವು ಬರಬೇಕು ಎಂದೆಲ್ಲ ಹೇಳಿದಾಗ ಜನನಿ ಕೆಳಗೆ ಇಳಿದು ಬರುತ್ತಾಳೆ.

Kannada serial Paaru written update on 28th February

ಆಗ ಅಖಿಲ ರಘು ಬಳಿ ಜನನಿ ನಮ್ಮ ಜತೆ ಪಾರ್ಕ್ ಸುತ್ತಿದರೆ ಆಕೆಗೂ ಕೂಡ ಆರಾಮ ಅನ್ನಿಸುತ್ತದೆ ಆಕೆಗೆ ಮನೆಯಲ್ಲಿ ಕುಳಿತು ಬೋರು ಹಿಡಿದಿರುತ್ತದೆ ಅದು ಅಲ್ಲದೆ ನಮ್ಮದೇ ಗಾರ್ಡನ್ ನಲ್ಲಿ ಸುತ್ತಿದರೆ ಆಕೆ ನನ್ನ ಮುಖ ನಾನು ಅವಳ ಮುಖ ನೋಡಬೇಕು ಅದಕ್ಕೆ ಬೇಗ ಹೋಗಿ ಬರೋಣ ಎಂದಾಗ ರಘುಗೆ ಪಾರ್ವತಿ ನೆನಪು ಆಗುತ್ತದೆ. ಪಾಪ ಪಾರ್ವತಿಗೆ ಯಾರು ಲಾಲನೆ ಪಾಲನೆ ಮಾಡುವವರು ಇಲ್ಲವಲ್ಲ ನಾನೇ ಯಾಕೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬಾರದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನು ಅಖಿಲ ಕರೆದಾಗ ನನಗೆ ಬೇರೆ ಗೆಳೆಯರನ್ನು ಭೇಟಿ ಆಗಲು ಇದೆ ಎಂದು ಹೇಳಿ ತೆರಳುತ್ತಾನೆ.. ಇನ್ನು ಆದಿ ಪಾರ್ವತಿ ಬಳಿ ಹೇಳಿ ಕೆಲಸ ಹುಡುಕಿಕೊಂಡು ಹೋಗಲು ತಯಾರು ಆಗುತ್ತಾನೆ. ಇದನ್ನು ನೋಡಿದ ಪಾರ್ವತಿ ಒಂದು ಡಬ್ಬಿಯಲ್ಲಿ ಊಟ ಕೊಟ್ಟು ಕಳುಹಿಸುತ್ತಾಳೆ. ಇದನ್ನು ನೋಡಿದ ಆದಿ ಡಬ್ಬಿ ಬೇಡ ನಾನು ಬೇರೆ ಎಲ್ಲಾದರೂ ಊಟ ಮಾಡುತ್ತೇನೆ ಎಂದು ಹೇಳುತ್ತಾನೆ. ಪಾರ್ವತಿ ಡಬ್ಬಿ ಹಿಡಿದುಕೊಳ್ಳಿ ಎಂದು ಹೇಳಿ ಡಬ್ಬಿ ಕೊಟ್ಟು ಕಳುಹಿಸುತ್ತಾಳೆ.

ಆ ಬಳಿಕ ಪಾರ್ವತಿಯನ್ನು ಕರೆದುಕೊಂಡು ರಘು ಬರುತ್ತಾನೆ. ಮಾವನನ್ನು ಕಂಡು ಏನು ಎತ್ತ ಎಂಬುವುದನ್ನು ವಿಚಾರಣೆ ಮಾಡುತ್ತಾಳೆ. ಆಗ ರಘು ಅಖಿಲ ಇವತ್ತು ಜನನಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದಾಳೆ. ಅದು ಇಲ್ಲಿ ಅಲ್ಲ ಬೇರೆ ಕಡೆಗೆ ಅಖಿಲ ತನ್ನ ಸೊಸೆಯನ್ನು ಜೋಪಾನವಾಗಿ ನೋಡಿಕೊಂಡು ಇದ್ದಾಳೆ. ಆದರೆ ಮಾವನಾಗಿ ನಾನು ಕೂಡ ನಿನಗೆ ಯಾವುದೇ ಕೊರತೆ ಬಾರದೆ ಇರುವ ಹಾಗೆ ನೋಡಿಕೊಳ್ಳಬೇಕು ಅಲ್ವಾ ಎಂದಾಗ ಪಾರುಗೆ ಬಹಳ ಖುಷಿ ಆಗುತ್ತದೆ. ಮಾವ ಮೊದಲು ಹೇಳಿದಾಗ ಏನು ಮಾವ ವಾಕಿಂಗ್ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಆ ಬಳಿಕ ಮಾವ ಹೇಳಿದ್ದೇ ಸರಿ ಎಂದು ವಾಕಿಂಗ್‌ಗೆ ಹೊರಡುತ್ತಾಳೆ.

More from Filmibeat

English summary
Kannada serial paaru written updated on 28th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X