Paaru: ಪಾರು ಗರ್ಭಿಣಿ ಎಂಬ ವಿಚಾರ ತಿಳಿದು ಮಾತನಾಡಿಸಲು ಓಡೋಡಿ ಬಂದ ಅಖಿಲಾಂಡೇಶ್ವರಿ!

By Poorva

ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಅಖಿಲಾಂಡೇಶ್ವರಿಗೆ ಪಾರು ಗರ್ಭಿಣಿ ಎನ್ನುವ ವಿಚಾರ ತಿಳಿದು ಹೋಗಿದೆ. ಪಾರು ಎಲ್ಲರ ಬಳಿಯೂ ತಾನು ಗರ್ಭಿಣಿ ಎನ್ನುವ ವಿಚಾರವನ್ನು ಮುಚ್ಚಿಟ್ಟು ಯಾರಿಗೂ ತಿಳಿಯಬಾರದು ಎಂದುಕೊಂಡಿರುತ್ತಾಳೆ. ಆದರೆ ಪಾರು ದೇವಾಲಯಕ್ಕೆ ಬಂದು ತೊಟ್ಟಿಲು ಕಟ್ಟುತ್ತಾ ಇರುವುದನ್ನು ಕಂಡ ಅಖಿಲಗೆ ಆಶ್ಚರ್ಯ ಹಾಗೂ ಬಹಳ ಖುಷಿ ಆಗುತ್ತದೆ.

ಆಕೆ ಅರ್ಚಕರ ಬಳಿ ಬಂದು ಯಾಕಾಗಿ ತೊಟ್ಟಿಲು ಕಟ್ಟುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಅರ್ಚಕರು ಅವರು ಗರ್ಭಿಣಿ ಆಗಿದ್ದರೆ ಮಾತ್ರ ಅಲ್ಲಿ ತೊಟ್ಟಿಲನ್ನು ಕಟ್ಟುತ್ತಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಖಿಲಾಂಡೇಶ್ವರಿ ಬಹಳ ಖುಷಿ ಪಡುತ್ತಾಳೆ. ತನ್ನ ಮೊದಲ ಸೊಸೆ ಕೂಡ ಗರ್ಭಿಣಿ ಎನ್ನುವ ವಿಚಾರ ತಿಳಿದು ಪಾರುವನ್ನು ಮಾತನಾಡಿಸಬೇಕು ಎಂದು ಓಡಿ ಬರುತ್ತಾಳೆ.

Kannada serial Paaru written update on 29th March

ಆದರೆ ಅಖಿಲಾಂಡೇಶ್ವರಿ ಬರುವಷ್ಟರಲ್ಲಿ ಪಾರು ಹೋಗಿರುತ್ತಾಳೆ. ಆದರೂ ಅದರ ಬಗ್ಗೆ ಏನು ಯೋಚನೆ ಮಾಡದೆ ಪಾರುವನ್ನು ಮನೆಯ ಬಳಿ ಆದರೂ ಮಾತನಡಿಸಬಹುದು ಎಂದು ತರಾತುರಿಯಲ್ಲಿ ಮನೆಗೆ ಬರುತ್ತಾಳೆ. ಇದನ್ನೆಲ್ಲ ಅನುಷ್ಕ ನೋಡುತ್ತಾ ಇರುತ್ತಾಳೆ. ಇನ್ನು ಆದಿ ಮನೆಗೆ ಬಂದ ಅಖಿಲಾಂಡೇಶ್ವರಿ ಮನೆಯ ಹೊರಗೆ ನಿಂತು ಒಳಗೆ ನೋಡುತ್ತಾಳೆ. ಅಷ್ಟರಲ್ಲಿ ಪಾರು ತಲೆ ಮೇಲೆ ಏನೋ ಬಿದ್ದ ಹಾಗೆ ಕುಳಿತು ಯೋಚನೆ ಮಾಡುತ್ತಾ ಇರುತ್ತಾಳೆ.

ಇದನ್ನು ನೋಡಿದ ಅಖಿಲ ಆಕೆಯ ಬಳಿ ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ಆದಿ ಯಾಕೆ ಇಷ್ಟು ಬೇಸರ ಮಾಡಿಕೊಂಡಿದ್ದೀಯಾ, ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ, ನೀನು ಗರ್ಭಿಣಿ ಎನ್ನುವ ವಿಚಾರ ಯಾರ ಬಳಿಯೂ ಹೇಳಬೇಡ, ಅಮ್ಮನಿಗೆ ಕೂಡ ಈ ವಿಚಾರ ತಿಳಿಯುವುದು ನನಗೆ ಇಷ್ಟ ಇಲ್ಲ ಎನ್ನುತ್ತಾನೆ .

Kannada serial Paaru written update on 29th March

ಬಳಿಕ ಮಾತು ಮುಂದುವರಿಸಿದ ಆದಿ ದಯವಿಟ್ಟು ಅಮ್ಮನಿಗೆ ವಿಚಾರ ತಿಳಿಸುವುದು ಬೇಡ ಎಂಬುವುದು ನನಗೆ ಮತ್ತು ನಿನಗೆ ಬಿಟ್ಟ ವಿಚಾರ ಎಂದೆಲ್ಲ ಹೇಳುತ್ತ ಇರುವುದನ್ನು ಕೇಳಿಸಿಕೊಂಡ ಅಖಿಲ ಏನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಆ ಬಳಿಕ ಆಕೆ ಮನೆ ಒಳಗೆ ಬಾರದೆ ಅರಸನ ಕೋಟೆಗೆ ಹೋಗುತ್ತಾಳೆ.

ಇನ್ನು ಜನನಿ ಹಾಗೂ ಪ್ರೀತಮ್ ಯೋಚನೆ ಮಾಡುತ್ತಾ ಇರುತ್ತಾರೆ. ಪ್ರೀತಮ್ ಇನ್ನು ನಾವು ಸುಮ್ಮನೆ ಇದ್ದರೆ ನಮ್ಮಿಂದ ಏನು ಮಾಡಲು ಸಾಧ್ಯ ಇಲ್ಲ. ಮನೆಯ ಹೊರಗೆ ಹೋಗಬೇಕಾದರೂ ಅಣ್ಣ ಅತ್ತಿಗೆ ನಮಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ ಆದುದರಿಂದ ಎಲ್ಲಾ ವಿಚಾರ ಅಮ್ಮನ ಬಳಿ ಹೇಳುತ್ತೇನೆ ಎಂದು ಪ್ರೀತಮ್ ಹೇಳಿದಾಗ ಜನನಿಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ.

ಆದರೂ ಸುಮ್ಮನೆ ಇರುತ್ತಾಳೆ. ಬಳಿಕ ಪ್ರೀತಮ್ ನೀನು ಈ ತರ ಮಾಡುತ್ತಾ ಇರುವುದು ಅತ್ತೆಗೆ ಗೊತ್ತಾದರೆ ಅವರಿಗೆ ನೋವು ಖಂಡಿತ ಅಲ್ವಾ, ಯಾಕೆ ಹೀಗೆ ಯೋಚನೆ ಎಂದೆಲ್ಲ ಹೇಳಿದರೂ ಪ್ರೀತಮ್.ಮಾತ್ರ ಜನನಿ.ಮಾತು ಕೇಳದೆ ನಾನು ಮಾತ್ರ ಅಮ್ಮನ ಬಳಿ ಎಲ್ಲಾ ಸತ್ಯ ಹೇಳುತ್ತೇನೆ ಎಂದು ನಿಜ ಹೇಳಲು ಹೋಗುತ್ತಾನೆ.

More from Filmibeat

English summary
Kannada serial paaru written updated on 29th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X