ಆದಿಯನ್ನು ಭೇಟಿಯಾದ ಪ್ರೀತಮ್ ನಡೆಗೆ ಕೆರಳಿದ ಅಖಿಲಾಂಡೇಶ್ವರಿ?

By Poorva

ರಘುವನ್ನು ನೋಡಿದ ಆದಿ ಪಾರು ಬಹಳ ಖುಷಿ ಪಡುತ್ತಾರೆ. ಆದಿ ಅಪ್ಪನ ಬಳಿ ತಿಂಡಿ ತಿಂದ್ರ ಎಂದು ಕೇಳಿದರೆ ಪಾರು ಅತ್ತೆಯಮ್ಮ ಹೇಗಿದ್ದಾರೆ ಎಂದು ಕೇಳಿದಾಗ ರಘುಗೆ ಬಹಳ ಖುಷಿ ಆಗುತ್ತದೆ, ಬೇಸರವೂ ಆಗುತ್ತದೆ. ರಘು ಬಳಿ ಪಾರು ಹಾಗೂ ಹನುಮಂತು ಒಂದಾಗಿರುವ ವಿಚಾರವನ್ನು ಆದಿ ಹೇಳಿದಾಗ ರಘುಗೆ ಬಹಳ ಸಂತಸ ಆಗುತ್ತದೆ. ರಘು ತನ್ನ ಆಫೀಸ್ ನಲ್ಲಿ ಕೆಲಸವನ್ನು ಮಾಡಬೇಕು ಎಂದು ಹೇಳಿದರೂ ಆದಿ ಬೇಡ ಅಪ್ಪ ನಾನು ನನ್ನ ಸ್ವಂತ ಸಾಮರ್ಥ್ಯದಿಂದ ಕೆಲಸ ತೆಗೆದುಕೊಳ್ಳುತ್ತೇನೆ, ಇದು ನನ್ನ ಆಸೆ ಎಂದು ಹೇಳಿ ರಘು ಮಾತನ್ನು ತಿರಸ್ಕಾರ ಮಾಡುತ್ತಾನೆ.

ಇನ್ನು ಪ್ರೀತಮ್ ಜನನಿಯ ಬಳಿ ತನ್ನ ಅಳಲು ತೋಡಿಕೊಳ್ಳುತ್ತಾನೆ. ನನ್ನ ಅಣ್ಣ ಇದೆಲ್ಲ ಮಾಡಬೇಕಾಗಿತ್ತು, ಆದರೆ ನಾನು ಮಾಡುತ್ತಾ ಇದ್ದೇನೆ ಯಾಕೆ ಹೀಗೆ ಆಗುತ್ತಿದೆ ಎಂದು ಬೇಸರ ತೋಡಿಕೊಳ್ಳುತ್ತಾನೆ. ಬಳಿಕ ಆದಿಯನ್ನು ಭೇಟಿ ಆಗಲು ತಮ್ಮ ಪ್ರೀತಮ್ ಬರುತ್ತಾನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ದಾಮಿನಿ ಕೇಳಿಸಿಕೊಳ್ಳುತ್ತಾಳೆ.

ಪ್ರೀತಮ್ ನೋಡಿ ಆದಿಗೆ ಖುಷಿ ಆಗುತ್ತೆ. ಆದರೆ ಏನನ್ನು ತೋರಿಸಿಕೊಳ್ಳದೆ ಪ್ರೀತಮ್ ನತ್ತ ನೋಡುತ್ತಾನೆ ಆದಿ . ಪಾರ್ವತಿ ಕೂಡ ಹಾಗೆ ನಟಿಸುತ್ತಾಳೆ. ಆದಿ ಪ್ರೀತಮ್ ನನ್ನು ನೋಡಿ ಬಳಿಕ ಸುಮ್ಮನಾಗುತ್ತಾನೆ. ಅಣ್ಣನನ್ನು ನೋಡಿ ಪ್ರೀತಮ್ ನಾನು ಊರಲ್ಲಿ ಇರುವುದಿಲ್ಲ ನಾನು ದುಬೈಗೆ ಹೋಗುತ್ತಾ ಇದ್ದೇನೆ ಅಲ್ಲಿ ನನಗೆ ಮೀಟಿಂಗ್ ಇದೆ ಅದಕ್ಕೆ ಹೋಗಲೇಬೇಕು ಇವತ್ತು ಸಂಜೆ ಹೋಗುತ್ತೇನೆ ಎಂದು ಹೇಳಿದಾಗ ಇಬ್ಬರು ಮುಖ ಮುಖ ನೋಡುತ್ತಾರೆ.

ಆದಿ ಮಾತಿಗೆ ಬೇಸರ ಪಟ್ಟುಕೊಂಡ ಪ್ರೀತಮ್

ಆದಿ ಮಾತಿಗೆ ಬೇಸರ ಪಟ್ಟುಕೊಂಡ ಪ್ರೀತಮ್

ಇಲ್ಲಿ ಏನೇ ಆಗಿದ್ದರು ನಿನ್ನ ಕೇಳಿ ಮಾಡುತ್ತಾ ಇದ್ದೆ ಆದರೆ ಈಗ ಅಲ್ಲಿ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಪ್ರೀತಮ್ ಆದಿಯನ್ನು ನೋಡಿ ಹೇಳುತ್ತಾನೆ. ಬಳಿಕ ಜೋರಾಗಿ ಆದಿ ಎಲ್ಲರೂ ಹುಟ್ಟುತ್ತಲೇ ಕಲಿತುಕೊಂಡು ಬರುವುದಿಲ್ಲ, ಬೆಳೆಯುತ್ತಾ ಬೆಳೆಯುತ್ತಾ ಕಲಿಯಬೇಕು, ಆದುದರಿಂದ ಅನುಭವ ಆಗುತ್ತದೆ ಎಂದೆಲ್ಲ ಹೇಳುತ್ತಾನೆ.

ಮುನಿಸಿಕೊಂಡ ಅಣ್ಣನ ಮುಖ ನೋಡಿದ ಪ್ರೀತಮ್

ಮುನಿಸಿಕೊಂಡ ಅಣ್ಣನ ಮುಖ ನೋಡಿದ ಪ್ರೀತಮ್

ಇದನ್ನು ಕೇಳಿದ ಪ್ರೀತಮ್ ಅಣ್ಣನ ಬಗ್ಗೆ ಮುನಿಸಿಕೊಂಡು ಹೋಗಲಿಲ್ಲ. ಬದಲಿಗೆ ನಾನು ಎಲ್ಲವನ್ನೂ ನೋಡಿಕೊಂಡು ಹೋಗುತ್ತೇನೆ ಇದಕ್ಕೆ ನಿನ್ನ ಆಶಿರ್ವಾದ ಬೇಕು ಅಣ್ಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆದಿ ಮಾತನಾಡದೆ ಸುಮ್ಮನೆ ಇರುತ್ತಾನೆ. ಪ್ರೀತಮ್ ಅಣ್ಣನ ಕಾಲಿಗೆ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ ಆದಿ ಹಿಂದೆ ತಿರುಗಿ ಅಳುತ್ತಾ ನಿಲ್ಲುತ್ತಾನೆ.

ಪ್ರೀತಮ್ ಹೋದ ಬಳಿಕ ಅತ್ತ ಆದಿ

ಪ್ರೀತಮ್ ಹೋದ ಬಳಿಕ ಅತ್ತ ಆದಿ

ಅಣ್ಣನ ಈ ವರ್ತನೆಗೆ ಪ್ರೀತಮ್ ಗೆ ಬಹಳ ಬೇಸರ ಆಗುತ್ತದೆ. ಅಣ್ಣ ಯಾವತ್ತೂ ಹೀಗೆ ನಡೆದುಕೊಂಡವನಲ್ಲ. ಆದರೆ ಇವತ್ತು ಯಾಕೆ ಹೀಗೆ ಮಾಡುತ್ತಾ ಇದ್ದಾನೆ ಎಂದು ಪ್ರೀತಮ್ ಗೆ ನೋವು ಆಗುತ್ತದೆ. ಅಣ್ಣನ ಬಳಿ ಪ್ರೀತಮ್ ಅಣ್ಣ ನಾನಿನ್ನು ಬರುತ್ತೇನೆ, ಅತ್ತಿಗೆ ನಾನು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಪ್ರೀತಮ್ ಹೋಗುವವರೆಗೂ ಆದಿ ಪ್ರೀತಮ್ ನತ್ತ ಮುಖ ಮಾಡಿ ನಿಲ್ಲಲಿಲ್ಲ.

ಅಖಿಲ ಕಿವಿ ಊದಿದ ದಾಮಿನಿ

ಅಖಿಲ ಕಿವಿ ಊದಿದ ದಾಮಿನಿ

ಪ್ರೀತಮ್ ಹೋದ ಬಳಿಕ ಆತ ಹೋದ ದಾರಿಯನ್ನು ನೋಡಿದ ಆದಿ ಕಣ್ಣೀರು ಹಾಕುತ್ತಾನೆ. ಇದನ್ನು ನೋಡಿದ ಪಾರ್ವತಿಗೆ ಬಹಳ ದುಃಖ ಆಗುತ್ತದೆ. ಇನ್ನು ಪ್ರೀತಮ್ ಹಾಗೂ ಜನನಿ ಮಾತನಾಡುತ್ತಾ ಇರುವುದನ್ನು ಕದ್ದು ಕೇಳಿಸಿಕೊಂಡ ದಾಮಿನಿ ಅಕ್ಕನ ಬಳಿ ಹೇಳುತ್ತಾಳೆ. ಅಖೀಲಾಂಡೇಶ್ವರಿ ಆ ಮಾತುಗಳನ್ನು ಕೇಳಿ ಕೆರಳುತ್ತಾಳೆ. ಮನೆಯ ಎಲ್ಲಾ ಜನರು ಬಹಳ ಕೋಪದಿಂದ ಕುಳಿತಿರುವುದನ್ನು ನೋಡಿದ ಪ್ರೀತಮ್ ಸುಮ್ಮನೆ ಇರುತ್ತಾನೆ. ಜೋರಾಗಿ ಪ್ರೀತಮ್ ನನ್ನು ಕರೆದ ಅಖೀಲಾಂಡೇಶ್ವರಿ ನಾನು ಹೇಳಿದ್ದು ನಿನಗೆ ತಿಳಿಯಲೇ ಇಲ್ವಾ, ನಾನು ಹೇಳಿದ್ದೆ ತಾನೆ ಆದಿಯನ್ನು ಭೇಟಿ ಆಗಬಾರದು ಎಂದು ಹೇಳಿದ್ದೆ ತಾನೆ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಸುಮ್ಮನೆ ಇರುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written update on 30th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X