Paaru serial: ಅಮ್ಮನಿಂದ ದೂರ ಆದ ಆದಿಗೆ ಕೆಲಸ ಸಿಗುತ್ತಾ?

By Poorva

ಅಮ್ಮನಿಂದ ದೂರ ಆದ ಆದಿಗೆ ಅವಮಾನ ಆಗುವುದಂತು ಖಂಡಿತ. ಯಾರ ಹಂಗಿಲ್ಲದೆ ನಾನು ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವುದು ಆದಿ ಆಸೆ. ಅದೇ ಕಾರಣಕ್ಕೆ ಆಫೀಸ್ ಒಂದಕ್ಕೆ ಹೋಗುತ್ತಾನೆ. ಅಲ್ಲಿಗೆ ಹೋಗುತ್ತಲೇ ಆದಿಯನ್ನು ನೋಡಿ ಎಲ್ಲರೂ ನಿಂತುಕೊಳ್ಳುತ್ತಾರೆ. ಅವರೆಲ್ಲರನ್ನೂ ನೋಡಿ ಆದಿ ಶಾಕ್ ಆದರೂ ಸುಮ್ಮನೆ ಇರುತ್ತಾನೆ. ಅಲ್ಲಿರುವವರು ನೀವು ಇಲ್ಲಿಗೆ ಬಂದಿರಿ ಅಂದರೆ ನಮಗೆ ಕೆಲಸ ಇಲ್ಲ ಎಂದು ಲೆಕ್ಕ ನಾವು ಹೊರಡುತ್ತೇವೆ ಎಂದು ಎಲ್ಲರೂ ಹೊರಡಲು ಮುಂದಾಗ್ತಾರೆ.

ನಾನು ನಿಮ್ಮ ಹಾಗೆ ಇಲ್ಲಿ ಕೆಲಸ ಮಾಡಲು ಬಂದಿದ್ದೇನೆ ಅಷ್ಟೇ ಇಂಟರ್ ವ್ಯೂ ಆಗಲಿ ಆಮೇಲೆ ನೋಡೋಣ ಎಂದು ಆದಿ ಹೇಳುತ್ತಾನೆ. ಆ ವೇಳೆ ಅಲ್ಲಿಗೆ ಬಾಸ್ ಬರುತ್ತಾರೆ.. ಆತ ಆದಿಯನ್ನ ಕಂಡು ಒಳಗೆ ಕರೆಯುತ್ತಾನೆ. ಬಳಿಕ ಆಧಿಯನ್ನು ನೋಡಿ ಏನ್ ಸರ್ ಇದೆಲ್ಲ ನಾನು ನಿಮ್ಮ ತಾಯಿ ಅವರು ಪ್ರೆಸ್ ಮೀಟ್ ಕರೆದಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ, ಅವರು ಹಾಕಿದ ಬಿಕ್ಷೆ ಈ ಆಫೀಸ್ ಇದೀಗ ನೀವು ಇಲ್ಲಿಗೆ ಕೆಲಸಕ್ಕೆ ಬಂದಿರುವುದು ನನಗೆ ಸರಿ ಕಾಣಲಿಲ್ಲ ನಿಮ್ಮ ತಾಯಿಯವರು ನಿಮ್ಮ ಕೈ ಬಿಟ್ಟ ಬಳಿಕ ನಾವು ಅವರ ಹಂಗಲ್ಲಿ ಇರುವುದು ನಾವು ನಿಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡರೆ ಸರಿ ಆಗುವುದಿಲ್ಲ ಎಂದು ಹೇಳಿ ಕೆಲಸ ಕೊಡದೇ ಕಳುಹಿಸುತ್ತಾರೆ.

ಆದಿ ಬಹಳ ಬೇಸರದಿಂದ ರಸ್ತೆಯಲ್ಲಿ ನಡೆದುಕೊಂಡು ಮನೆಯ ದಾರಿ ಹಿಡಿಯುತ್ತಾನೆ. ಮನೆಯಲ್ಲಿ ಪಾರು ಆದಿ ದಾರಿ ಕಾಯುತ್ತ ಇರುತ್ತಾಳೆ. ಕೆಲಸ ಆಯಿತೋ ಏನೋ ಎಂದೆಲ್ಲ ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಕೆಲಸ ಆಗಿದ್ದರೆ ನಾನು ಪ್ರಗ್ನೆಂಟ್ ಎಂಬ ವಿಚಾರವನ್ನು ಹೇಳಬೇಕು ಎಂದುಕೊಳ್ಳುತ್ತಾಳೆ ಹಾಗೂ ತನಗೆ ಯಾಕೆ ನನ್ನ ಯಜಮಾನರು ಕರೆ ಮಾಡಲಿಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ.

ದುಬೈಗೆ ಹೊರಟ ಪ್ರೀತಮ್

ದುಬೈಗೆ ಹೊರಟ ಪ್ರೀತಮ್

ಅತ್ತ ಪ್ರೀತಮ್ ದುಬೈಗೆ ಹೊರಟಿದ್ದಾನೆ. ಅಲ್ಲಿನ ಊಟ ತಿಂಡಿ ಪ್ರೀತಮ್ ಗೆ ಒಗ್ಗಲ್ಲ ಎಂದು ಅಲ್ಲಿಯವರಿಗೆ ಹೇಳಿದ್ದೇನೆ ಅವರೆಲ್ಲ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖೀಲಾಂಡೇಶ್ವರಿ ಪ್ರೀತಮ್ ಬಳಿ ಅಲ್ಲಿಯ ಊಟ ಮೆಚ್ಚಲಿಲ್ಲ ಎಂದರೆ ಚಟ್ನಿ ಪುಡಿ ಹಾಗೂ ಮೊಸರು ಇದ್ದರೆ ಒಳ್ಳೆಯದಾಗುತ್ತದೆ ಅದಕ್ಕೆ ಅದನ್ನೇ ನಿನ್ನ ಬ್ಯಾಗ್ ನಲ್ಲಿ ಇಟ್ಟಿದ್ದೇನೆ ಅದರಲ್ಲಿ ಊಟ ಮಾಡು ಎಂದು ಹೇಳುತ್ತಾರೆ. ಬಳಿಕ ಅಖಿಲ ನಾನು ಹೋಗಬೇಡ ಎಂದು ಹೇಳಿದ್ದ ಕಡೆ ನೀನು ಹೋಗಿದ್ದಕ್ಕೆ ನಾನು ಬೈದೆ, ಅಮ್ಮನ ಮೇಲೆ ಬೇಜಾರ್ ಮಾಡಬೇಡ ಅದನ್ನೆಲ್ಲ ಮನದಲ್ಲಿ ಇಟ್ಟುಕೊಳ್ಳಬೇಡ ಎಂದು ಬುದ್ಧಿವಾದ ಹೇಳುತ್ತಾರೆ.

ಅಣ್ಣನ ಆಶಿರ್ವಾದ ಸಿಗದೇ ಒದ್ದಾಡಿದ ಪ್ರೀತಮ್

ಅಣ್ಣನ ಆಶಿರ್ವಾದ ಸಿಗದೇ ಒದ್ದಾಡಿದ ಪ್ರೀತಮ್

ಇನ್ನು ತನ್ನ ಕಡೆ ಮುಖ ಮಾಡಿ ಇರದುದ್ದನ್ನು ನೋಡಿದ ದಾಮಿನಿ ಏನಪ್ಪ ಪ್ರೀತಮ್ ನನ್ನ ಕಡೆ ನೋಡುವುದೇ ಇಲ್ಲ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಚಿಕ್ಕಮ್ಮನ ಬಳಿಯೂ ನಾನಿನ್ನು ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಾನೆ. ಇನ್ನು ಮನೆಯಿಂದ ಹೊರಬಂದ ಪ್ರೀತಮ್ ತನ್ನ ಹೆಂಡತಿ ಜನನಿ ಬಳಿ ಮಾತನಾಡುತ್ತಾನೆ.

ಹೆಂಡತಿ ಬಳಿ ಮನದ ಮಾತು ಹೇಳಿದ ಪ್ರೀತಮ್

ಹೆಂಡತಿ ಬಳಿ ಮನದ ಮಾತು ಹೇಳಿದ ಪ್ರೀತಮ್

ಅತ್ತಿಗೆ ಅಣ್ಣನ ಬಳಿ ಹೇಳದೇ ಹೋದರೆ ನನಗೆ ನೆಮ್ಮದಿ ಇರುವುದಿಲ್ಲ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಆದಿ ಬರುವುದು ಕಾಣುತ್ತದೆ. ಆದಿ ತನಗೆ ಕೆಲಸ ಸಿಗುತ್ತಿಲ್ಲ ಎಂದೆಲ್ಲ ತಲೆಬಿಸಿಯಲ್ಲಿ ಬರುತ್ತಾನೆ. ಆದರೆ ಪ್ರೀತಮ್ ನನ್ನು ಗಮನಿಸಿ ಕೊಂಕು ಮಾತುಗಳನ್ನು ಆಡಿ ನಿಂದಿಸುತ್ತಾನೆ. ಇತ್ತ ಪಾರು ಮಾತ್ರ ತನ್ನ ಗಂಡನಿಗೆ ಇವತ್ತು ನಾನು ತಾಯಿ ಆಗುತ್ತಿರುವ ವಿಚಾರವನ್ನು ಹೇಳಬೇಕು ನಮ್ಮ ಕಷ್ಟ ಇಂದಾದರೂ ಆ ದೇವರು ನಿವಾರಿಸುತ್ತಾನ ಎಂದು ಗಂಡನ ಬರುವಿಕೆಗಾಗಿ ಕಾದು ಕುಳಿತಿದ್ದಾಳೆ. ಮುಂದೇನು ಕಾದು ನೋಡ ಬೇಕಿದೆ..

More from Filmibeat

English summary
Kannada serial paaru written update on 31st January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X