Don't Miss!
- Sports
Ranji Trophy: ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್ಗಳ ಭರ್ಜರಿ ಜಯ: ಸೆಮಿಫೈನಲ್ಗೆ ಕರ್ನಾಟಕ
- News
ಜಾರಕಿಹೊಳಿ ಸಿಡಿ ಹಗರಣ: ಸಿಬಿಐ ತನಿಖೆಗೆ ವಹಿಸಲು ಸರ್ಕಾರ ಸಿದ್ಧತೆ
- Technology
ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ! ವಿಶೇಷತೆ ಏನು?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Automobiles
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru Serial: ಪಾರು ಮೇಲೆ ಆರೋಪ ಹೊರಿಸಿದ ಮೋನಿಕಾ
ಪಾರು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೆಳೆಯುವ ಹಾಗೆ ಮಾಡುತ್ತಿದೆ. ಮೋನಿಕಾ ಹೇಗಾದರೂ ಮಾಡಿ ಪ್ರೀತಮ್ ಮಾನ ಕಳೆಯಬೇಕು ಎಂದುಕೊಂಡು ಪ್ರೀತಮ್ ಕೈ ಹಿಡಿದುಕೊಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಅಖಿಲಗೆ ಬಹಳ ಕೋಪಗೊಂಡು ಮೋನಿಕಾ ಎಂದು ಜೋರಾಗಿ ಕರೆಯುತ್ತಾಳೆ. ಇದನ್ನು ಕೇಳಿಸಿಕೊಂಡ ಮೋನಿಕಾ ಪ್ರೀತಮ್ ಬೆಚ್ಚಿ ಬೀಳುತ್ತಾರೆ. ಪ್ರೀತಮ್ ನ ಕೈ ಹೀಗೆ ಹಿಡಿದುಕೊಂಡಿದಿಯಾ ನಾಚಿಕೆ ಆಗಲ್ವಾ ನಿನಗೆ ಎಂದು ಕೇಳಿದಾಗ ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾಳೆ.
ರಘು ಮೋನಿಕಾ ಬಳಿ ನಿನಗೆ ಪ್ರೀತಮ್ ಮುಂಚೆನೇ ಪರಿಚಯ ಇತ್ತ ಎಂದು ಕೇಳಿದಾಗ ಮೋನಿಕಾ ಇಲ್ಲಾ ಎನ್ನುತ್ತಾಳೆ. ಹಾಗಾದರೆ ನೀನು ಹೇಗೆ ಪ್ರೀತು ಜೊತೆ ಇಷ್ಟು ಸಲಿಗೆಯಿಂದ ಇದ್ದೀಯಾ ಎಂದೆಲ್ಲ ಕೇಳುತ್ತಾನೆ. ಇದನ್ನು ಕೇಳಿದ ಪ್ರೀತಮ್ ಮಾತ್ರ ಮಾತನಾಡದೆ ಸುಮ್ಮನೆ ಇದ್ದರೂ ಮೋನಿಕಾ ಅದು ಪ್ರೀತಮ್ ಬಗ್ಗೆ ನನಗೆ ತಿಳಿದಿದೆ, ಮುಂಚೆ ಪಾರು ನನ್ನ ಬಳಿ ಹೇಳುತ್ತ ಇದ್ದಳು ದೊಡ್ಡ ಯಜಮಾನರನ್ನೂ ನಾನು ಪ್ರೀತಿ ಮಾಡುತ್ತೇನೆ ಚಿಕ್ಕ ಯಜಮಾನರನ್ನೂ ನೀನು ಪ್ರೀತಿ ಮಾಡು ಎಂದು ಹೇಳಿದ್ದಳು ಎನ್ನುತ್ತಾಳೆ. ಇದನ್ನು ಕೇಳಿದ ಅಖಿಲಗೆ ಶಾಕ್ ಆಗುತ್ತದೆ.
ಬಳಿಕ ಅಖಿಲ ಸುಳ್ಳು ಹೇಳಿದರೆ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ, ನಮ್ಮ ಪಾರ್ವತಿ ಆದಿ ಮದುವೆಗೆ ಮುಂಚೆನೇ ಪ್ರೀತಮ್ ಹಾಗೂ ಜನನಿ ಇಬ್ಬರು ಪ್ರೀತಿಸಿ ಮದುವೆ ಆಗಿದ್ದರು, ಇದಕ್ಕೆ ಪಾರು ಬೆಂಬಲ ಇತ್ತು, ಹಾಗಾದರೆ ಪ್ರೀತಮ್ ಬಗ್ಗೆ ಪಾರ್ವತಿ ನಿನ್ನ ಬಳಿ ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಮೋನಿಕಾ ಶಾಕ್ ಆಗುತ್ತಾಳೆ. ಇದನ್ನೆಲ್ಲ ಕೇಳಿಸಿಕೊಂಡ ರಘು ಪಾರ್ವತಿಯನ್ನು ಕರೆಯುತ್ತಾನೆ , ಈಗಲೇ ಇದಕ್ಕೊಂದು ಉತ್ತರ ಸಿಗಲಿ ಎಂದು ಪಾರುವನ್ನೂ ಹುಡುಕಿಕೊಂಡು ಹೋಗುತ್ತಾನೆ. ಇದನ್ನೆಲ್ಲ ನೋಡಿ ಮೋನಿಕಾ ಒಳಗೆ ನಗುತ್ತಾಳೆ.

ಪಾರುವನ್ನು ಕರೆದ ಅಖಿಲ
ಪಾರುವನ್ನು ಕರೆಯುತ್ತಾ ಇದ್ದ ರಘುವನ್ನು ಅಖಿಲ ತಡೆಯುತ್ತಾಳೆ. ಪಾರ್ವತಿ ಮೇಲೆ ನಮಗಿಬ್ಬರಿಗೂ ನಂಬಿಕೆ ಇದೆ ಈ ವಿಚಾರವಾಗಿ ಮೋನಿಕಾ ಸುಳ್ಳು ಹೇಳಿದ್ದಾಳೆ ಎಂಬುವುದು ಗೊತ್ತು ಎಂದಾಗ ರಘು ಹಾಗಾದರೆ ಅಲ್ಲೇ ಹೇಳಬಹುದಿತ್ತಲ್ಲ ಎಂದಾಗ ಅಖಿಲ ಮೋನಿಕಾ ಪಾರ್ವತಿ ಕರೆದುಕೊಂಡು ಬಂದ ಹುಡುಗಿ ಅವಳಿಗೆ ಅವಮಾನ ಆದರೆ ಪಾರ್ವತಿಗೆ ಅವಮಾನ ಆದ ಹಾಗೆ ಆಮೇಲೆ ಆ ಹುಡುಗಿ ಊರಿಗೆ ಹೋಗಿ ಹನುಮಂತು ಪಾರ್ವತಿಯ ಮರ್ಯಾದೆ ಹರಾಜು ಹಾಕುತ್ತಾಳೆ ಎನ್ನುತ್ತಾಳೆ.

ದಿಗಿಲುಗೊಂಡ ರಘು
ಇದನ್ನು ಕೇಳಿದ ರಘು ಮಾತ್ರ ಹಾಗಾದರೆ ಜನನಿ ಸಂಸಾರ ಹಾಳು ಮಾಡಲು ನೋಡುತ್ತ ಇದ್ದಾಳೆ, ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ನಾನು, ಆ ಹುಡುಗಿಗೆ ಮನೆಯಲ್ಲಿ ಇರಲು ಅವಕಾಶ ಕೊಡಬಾರದಿತ್ತು ಎಂದು ಈಗಲಾದರೂ ನಿನಗೆ ಅನ್ನಿಸುತ್ತಾ ಇಲ್ವಾ ಎಂದು ಹೇಳುತ್ತಾನೆ. ಆದರೆ ಅಖಿಲ ಮಾತ್ರ ಪಾರು ಪರವಾಗಿಯೇ ಮಾತನಾಡುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಪಾರ್ವತಿ ಬರುತ್ತಾಳೆ. ಇನ್ನು ಆದಿ ಪಾರು ಮಾವನ ಬಳಿ ಖುದ್ದಾಗಿ ಮಾತನಾಡುತ್ತಾರೆ.

ಪಾರು ಬಳಿ ನಿಜ ವಿಚಾರ ಹೇಳಿದ ರಘು
ನೋಡಮ್ಮ ಪಾರು ಆ ಹುಡುಗಿ ಮೋನಿಕಾ ಯಾರು ಎಂದು ನನಗೆ ತಿಳಿದಿಲ್ಲ. ಆದರೆ ಆಕೆ ಮಾತ್ರ ಪ್ರೀತಮ್ ಜೀವನ ಹಾಳು ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆ ಹಾಗೆಯೇ ಅಖಿಲ ಬಳಿ ಇಲ್ಲಸಲ್ಲದನ್ನು ಹೇಳಿ ತಲೆ ಕೆಡಿಸುತ್ತ ಇದ್ದಾಳೆ ಎಂದು ಅಲ್ಲಿ ನಡೆದ ಎಲ್ಲಾ ಘಟನೆಯನ್ನು ಪಾರು ಆದಿ ಮುಂದೆ ಹೇಳುತ್ತಾನೆ. ಇದರಿಂದ ಪಾರುಗೆ ವಿಪರೀತ ಕೋಪ ಬರುತ್ತದೆ. ಪಾರು ನೇರವಾಗಿ ಮೋನಿಕಾ ಇರುವ ರೂಮಿಗೆ ಹೋಗುತ್ತಾಳೆ ಆಕೆ ಮಾತನಾಡುವ ಮುಂಚೆ ಆಕೆಯ ಕೆನ್ನೆಗೆ ಬಲವಾಗಿ ಹೊಡೆಯುತ್ತಾಳೆ. ಇದನ್ನು ನೋಡಿ ಮೋನಿಕಾ ಶಾಕ್ ಆಗುತ್ತಾಳೆ

ಮೋನಿಕಾ ಕೆನ್ನೆಗೆ ಹೊಡೆದ ಪಾರು
ಏನಾಯಿತು ಪಾರು ಅವರೇ ಎಂದೆಲ್ಲ ಹೇಳಿದಾಗ ಅತ್ತೆ ಮುಂದೆ ಇಂತಹ ಸುಳ್ಳು ಹೇಳಲು ಎಷ್ಟು ಧೈರ್ಯ ನಿನಗೆ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಮೋನಿಕಾ ಮಾತ್ರ ಸುಮ್ಮನೆ ಇರುತ್ತಾಳೆ. ಇನ್ನು ಮೋನಿಕಾ ಕತ್ತು ಹಿಡಿಯುವ ಪಾರು ನೀನು ಈ ಮನೆಯಲ್ಲಿ ಇರುವ ಅಗತ್ಯ ಇಲ್ಲ, ನೀನು ಈಗಲೇ ಮನೆ ಬಿಟ್ಟು ಹೊರಡು ಇಲ್ಲವೆಂದರೆ ನಾನು ಎನು ಮಾಡುತ್ತೇನೆ ಎಂಬುವುದು ನನಗೆ ತಿಳಿದಿಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಇನ್ನೂ ಮುಂದೇನು ಕಾದು ನೋಡಬೇಕಿದೆ