Paaru: ಪಾರು ನನ್ನ ಸೊಸೆ ಎಂದು ಜೋರಾಗಿ ಕೂಗಿದ ಅಖಿಲ; ಪಾರ್ವತಿ ಬಗ್ಗೆ ನಿಜ ತಿಳಿದ ಸಂಗೀತ ಶಾಕ್

By Poorva

ಪಾರು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಅರಸನ ಕೋಟೆಯ ಅಖಿಲಾಂಡೇಶ್ವರಿಗೆ ಪಾರು ಕೆಫೆಯಲ್ಲಿ ಕೆಲಸ ಮಾಡುತ್ತಾ ಇರುವುದು ತಿಳಿದು ಬಹಳ ಬೇಸರಗೊಂಡಿದ್ದಾಳೆ. ಜ್ಯೋತಿಷ್ಯರನ್ನು ಭೇಟಿ ಆಗಲು ಬಂದ ಅಖಿಲಗೆ ಕೆಫೆಯಲ್ಲಿ ಪಾರು ಕೆಲಸಕ್ಕೆ ಮಾಡಿಕೊಂಡಿರುತ್ತಾಳೆ, ಅತ್ತೆ ಬರುವುದನ್ನು ನೋಡಿ ಪಾರು ಅಡಗಿಕೊಳ್ಳುತ್ತಾಳೆ.

ಆ ಬಳಿಕ ಅಖಿಲ ಚಹಾ ಆರ್ಡರ್ ಮಾಡುತ್ತಾಳೆ. ಆಗ ಪಾರು ನಾನು ಮಾಡಿದ ಕಾಫಿ ಅತ್ತೆಗೆ ಬಹಳ ಇಷ್ಟ ನಾನೇ ಮಾಡಿಕೊಡುತ್ತೇನೆ ಎಂದು ಹೇಳುತ್ತಾಳೆ. ಆ ಬಳಿಕ ಚಹಾ ಮಾಡುತ್ತಾಳೆ. ಇದನ್ನು ಸವಿದ ಅಖಿಲಗೆ ಬಹಳ ಖುಷಿ ಆಗುತ್ತದೆ. ಸ್ವಾಮೀಜಿಗಳ ಬಳಿ ಮಾತನಾಡಿ ಹೊರ ಬರುತ್ತಾಳೆ ಅಖಿಲಾಂಡೇಶ್ವರಿ.

paaru

ಆಗ ಅಲ್ಲಿಗೆ ಬಂದ ಕೆಫೆ ಒನರ್ ಮೀಟಿಂಗ್ ಮುಗಿಯಿತ ಮೇಡಂ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಖಿಲ ಆಯಿತಪ್ಪ ಎಂದು ಹೇಳಿ ಕಾಫಿ ಬಹಳ ರುಚಿ ಆಗಿತ್ತು. ಯಾರು ಮಾಡಿರುವುದು ಎಂದು ಕೇಳಿದಾಗ ಕೆಫೆ ಓನರ್ ಪಾರ್ವತಿ ಎಂದು ಹೆಸರು ಬಹಳ ಒಳ್ಳೆಯ ಕಾಫಿ ಮಾಡುತ್ತಾರೆ ಎಂದಾಗ ಅಖಿಲಗೆ ಏನೋ ಒಂದು ಫ್ಲಾಶ್ ಆಗಿ ಯಾರು ಪಾರ್ವತಿ ಮಾಡಿದ್ದ ಎಂದು ಕೇಳುತ್ತಾಳೆ. ಬಳಿಕ ಜೋರಾಗಿ ಪಾರ್ವತಿ ಎಂದು ಕರೆಯುತ್ತಾಳೆ.

ಪಾರ್ವತಿಗೆ ಏನು ಮಾಡುವುದು ಎಂದು ತೋಚದೇ ಅತ್ತೆಯ ಎದುರು ಬಂದು ನಿಂತುಕೊಂಡಿರುತ್ತಾಳೆ. ಆ ಬಳಿಕ ಅಖಿಲಗೆ ಬಹಳ ನೋವು ಆಗುತ್ತದೆ. ಆಕೆ ಪಾರು ಮುಂದೆ ಅಳುತ್ತಾಳೆ. ಆ ಬಳಿಕ ಕೆಫೆ ಓನರ್ ಬಳಿ ಹೇಳುತ್ತಾಳೆ. ಇವಳು ಬೇರೆ ಯಾರು ಅಲ್ಲ ನನ್ನ ಸೊಸೆ ಪಾರ್ವತಿ ಎಂದು ಜೋರಾಗಿ ಹೇಳಿದಾಗ ಕೆಫೆ ಓನರ್ ಗೆ ಶಾಕ್ ಆಗುತ್ತದೆ.

ಅಖಿಲ ಪಾರುವಾನ್ನು ಎಷ್ಟೇ ಕರೆದರು ಆಕೆ ಮನೆಗೆ ಹೋಗಲು ಒಪ್ಪದೇ ಇದ್ದ ಕಾರಣ ಅಖಿಲ ಅಲ್ಲಿಂದ ಬಹಳ ಬೇಸರದಿಂದ ತೆರಳುತ್ತಾಳೆ. ಇನ್ನೂ ಅಖಿಲ ಹೋದ ಬಳಿಕ ಆದಿ ಹಾಗೂ ಸಂಗೀತ ಬರುತ್ತಾಳೆ. ಸಂಗೀತ ಗೆ ಬಹಳ ಶಾಕ್ ಆಗುತ್ತದೆ. ಅರಸನ ಕೋಟೆಯ ಸೊಸೆ. ನಮ್ಮ ಕೇಫೆಯಲ್ಲಿ ಮನೆಯಲ್ಲಿ ಕೆಲಸ ಮಾಡಿದ್ದ ಎಂದು ಬಹಳ ಶಾಕ್ ಆಗುತ್ತದೆ. ಸಂಗೀತ ಪಾರ್ವತಿ ಬಳಿ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ.

ಯಾಕೆ ಪಾರ್ವತಿ ಅವರೇ ಹೀಗೆ ಮಾಡಿದಿರಿ ನಿಮ್ಮನ್ನು ತುಂಬಾ ನಂಬಿದ್ದೆ ಆದರೆ ನೀವು ನನ್ನ ನಂಬಿಕೆ ಉಳಿಸಿಕೊಳ್ಳಲು ಇಲ್ಲ. ನೀವು ಗರ್ಭಿಣಿ ಇರುವ ವೇಳೆ ನಮ್ಮ ಮನೆಗೆ ಸುಳ್ಳು ಹೇಳಿಕೊಂಡು ಕೆಲಸಕ್ಕೆ ಸೇರಿದಿರಿ ಆದರೆ ಇದೀಗ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿ ಇಟ್ಟಿದ್ದಿರಿ ಯಾಕೆ ಹೀಗೆ ಮಾಡಿದಿರಿ ಎಂದು ಕೇಳುತ್ತಾ ಇರುತ್ತಾಳೆ. ಆದರೆ ಇದೆಲ್ಲವನ್ನೂ ಕೇಳಿದ ಆದಿ ನಿಜವನ್ನು ಹೇಳುತ್ತಾನೆ. ನಿಜ ವಿಚಾರ ತಿಳಿದ ಸಂಗೀತ ಮಾತ್ರ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ ನಮ್ಮ ಬಳಿ.ಇಷ್ಟೆಲ್ಲ ಸುಳ್ಳು ಹೇಳುವ ಅಗತ್ಯ ಇರಲಿಲ್ಲ ಎಂದು ಆಕೆ ಹೇಳುತ್ತಾಳೆ.

More from Filmibeat

English summary
Kannada serial Paaru written updated on 4th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X