Paaru: ಅತ್ತೆ ಮಾಡಿದ ಪಾಯಸ ತಿಂದ ಪಾರು ಮರೆಯಲ್ಲಿ ಖುಷಿ ಪಡುತ್ತಿರುವ ಅತ್ತೆಯನ್ನು ನೋಡ್ತಾಳಾ?
ಪಾರು ಧಾರಾವಾಹಿ ಇದೀಗ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಗೆದ್ದಿದೆ ಎಂದರೆ ತಪ್ಪಾಗದು. ಇದೀಗ ಪಾರ್ವತಿಗೆ ಅತ್ತೆ ಮಾಡಿದ ಪಾಯಸ ತಿನ್ನಬೇಕು ಎನ್ನುವ ಬಯಕೆ ಕೂಡ ಶುರುವಾಗಿ ಬಿಡುತ್ತದೆ. ಇದನ್ನು ಮಾವನ ಬಳಿ ಹೇಳುತ್ತಾಳೆ. ಆಗ ರಘು ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ .
ಹೇಗೆ ಅಖಿಲ ಬಳಿ ಪಾಯಸ ಮಾಡಿಸಿಕೊಂಡು ತರುವುದು ಎಂದು ಯೋಚನೆ ಮಾಡುತ್ತಾ ಮನೆಯತ್ತ ಸಾಗುತ್ತಾನೆ. ಆದರೆ ಪಾರ್ವತಿ ಗರ್ಭಿಣಿ ಆಗಿರುವ ವಿಚಾರ ಅಖೀಲಾಂಡೆಶ್ವರಿ ತಿಳಿದಿದೆ ಎಂಬ ವಿಚಾರ ರಘುಗೆ ತಿಳಿದಿರುವುದಿಲ್ಲ. ಆಕೆ ರಘು ಹಾಗೂ ಪಾರ್ವತಿ ಏನು ಮಾತನಾಡುತ್ತಾರೆ ಎಂಬುವುದನ್ನು ಕೇಳಿಸಿಕೊಂಡಾಗ ನಾನು ಮಾಡಿದ ಪಾಯಸ ಆಕೆಗೆ ಇಷ್ಟ ಎಂದು ಹೇಳಿದ್ದಳು ಅಲ್ವಾ ಅದನ್ನು ಹೇಗಾದರೂ ಆಕೆಗೆ ಮಾಡಿಕೊಡಬೇಕು ಎಂದು ಎಲ್ಲಾ ಸಿದ್ಧತೆ ಮಾಡಿಕೊಂಡಿರುತ್ತಾಳೆ.

ಇನ್ನು ಅಖಿಲ ಇವತ್ತು ರಾತ್ರಿ ಪಾಯಸ ಮಾಡಬೇಕು ಎಂದುಕೊಂಡಿದ್ದೇನೆ ನಿನಗೋಸ್ಕರ ಪಾಯಸ ಮಾಡುತ್ತಾ ಇರುವುದು ಎಂದಾಗ ಜನನಿ ಅತ್ತೆ ಪಾಯಸ ನಾಳೆ ಬೆಳಗ್ಗೆ ಮಾಡಿ ನನಗೆ ಈಗ ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಖೀಲಾಂಡೆಶ್ವರಿ ಸರಿ ಎಂದು ಒಲ್ಲದ ಮನದಲ್ಲಿ ಹೇಳುತ್ತಾಳೆ.
ಇನ್ನು ರಘು ಎಷ್ಟು ಹೊತ್ತಿಗೆ ಬೆಳಗಾಗುತ್ತದೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಪಾರುಗೆ ಎಷ್ಟು ಹೊತ್ತಿಗೆ ಪಾಯಸ ಕೊಡುತ್ತೇನೋ ಎನಿಸಿಬಿಡುತ್ತದೆ. ಅಖೀಲಾಂಡೆಶ್ವರಿ ಕೂಡ ಮನದಲ್ಲಿ ಪಾರ್ವತಿ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಅರಸನ ಕೋಟೆಯ ಕುಡಿ ಅದಕ್ಕೆ ಏನು ಕಮ್ಮಿ ಆಗಬಾರದು ಎಂದು ಅಂದುಕೊಳ್ಳುತ್ತಾ ಇರುತ್ತಾಳೆ.

ಇನ್ನು ಅಖೀಲಾಂಡೆಶ್ವರಿ ಎಲ್ಲರೂ ಏಳುವ ಮೊದಲು ಎದ್ದೇಳುತ್ತಾಳೆ. ಪಾರು ಕೇಳಿದ ಪಾಯಸ ರೆಡಿ ಮಾಡುತ್ತಾ ಇರುವಾಗ ಅಲ್ಲಿಗೆ ಬಂದ ದಾಮಿನಿ ಅಕ್ಕನಿಗೆ ಸಹಾಯ ಮಾಡಲು ಬರುತ್ತಾಳೆ. ಇನ್ನು ಪಾಯಸದ ವಾಸನೆಯಿಂದ ಮನೆ ಒಳಗೆ ಇದ್ದ ರಘು ಬರುತ್ತಾನೆ. ಇನ್ನು ಅಖಿಲ ಜನನಿಗೆ ಒಂದು ಲೋಟ ಪಾಯಸ ಹಾಕಿ ಕೊಡುತ್ತಾಳೆ. ರಘು ಜೋರಾಗಿ ನೀವು ಎಷ್ಟು ಬೇಕೋ ಅಷ್ಟು ಪಾಯಸ ಕುಡೀರಿ ಉಳಿದಿದ್ದೆಲ್ಲಾ ನನಗೆ ಎಂದು ಹೇಳುತ್ತಾನೆ ಹಾಗೂ ಇದಕ್ಕೆ ಅಖಿಲ ನಗುತ್ತಾಳೆ.
ಆದರೆ ದಾಮಿನಿ ಪಾಯಸ ಚೂರು ಪಾರ್ವತಿಗೆ ಕೊಡಲು ಇರಬಬಹುದು. ಆಕೆಗೆ ಅಕ್ಕ ಮಾಡಿದ ಅಡುಗೆ ಅಂದರೆ ಬಹಳ ಇಷ್ಟ, ಅದಕ್ಕೆ ಇವಾಗ ಅಕ್ಕ ಮಾಡಿದ ಅಡುಗೆ ಎಲ್ಲಾ ನನಗೆ ಬೇಕು ನೀವು ಎಷ್ಟು ಬೇಕು ಅಷ್ಟೂ ತೆಗೆದುಕೊಳ್ಳಿ ಎಂದು ಹೇಳುತ್ತ ಇರುವುದು, ಗ್ರಹಚಾರ ಕೆಟ್ಟ ಹುಡುಗಿಯ ಮೇಲೆ ಇಷ್ಟು ಅಕ್ಕರೆ ಯಾಕೆ ಎಂದಾಗ ಅಖಿಲ ದಾಮಿನಿ ಮೇಲೆ ಕೋಪಗೊಳ್ಳುತ್ತಾಳೆ.
ಇನ್ನು ರಘು ಕೂಡ ತನ್ನ ಸೊಸೆಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾ ಇರುವುದನ್ನು ನೋಡಿ ಕೋಪಗೊಳ್ಳುತ್ತನೆ. ಬಳಿಕ ದಾಮಿನಿ ಜೊತೆ ನನ್ನ ಸೊಸೆ ಎಂದಿಗೂ ಗ್ರಹಚಾರ ಕೆಟ್ವವಳು ಅಲ್ಲಾ ಎಂದೆಲ್ಲ ಜೋರಾಗಿ ಮಾತನಾಡುತ್ತಾನೆ. ಇದನ್ನ ಕೇಳಿಸಿಕೊಂಡ ಅಖಿಲ ಮಾತ್ರ ತನ್ನ ಸೊಸೆ ಎಂದರೆ ಎಷ್ಟು ಪ್ರೀತಿ ರಘುಗೆ ಎಂದು ಖುಷಿ ಪಡುತ್ತಾಳೆ. ಆ ಬಳಿಕ ಅಖಿಲ ಬುತ್ತಿಯಲ್ಲಿ ಹಾಕಿಕೊಟ್ಟ ಪಾಯಸವನ್ನು ಪಾರು ಬಳಿ ತೆಗೆದುಕೊಂಡು ಹೋಗುತ್ತಾನೆ. ಪಾರು ನೀನು ಕೇಳಿದ್ದೆಯಲ್ಲಾ ನನ್ನ ಜೊತೆ ಅದನ್ನು ತಂದಿದ್ದೇನೆ ಎಂದಾಗ ಪಾರುಗೆ ಬಹಳ ಖುಷಿ ಆಗುತ್ತದೆ. ಬಳಿಕ ಅತ್ತೆ ಮಾಡಿದ ಪಾಯಸವನ್ನು ಸವಿಯುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











