Paaru: ಜನನಿ - ಪ್ರೀತಮ್ ಮಹತ್ವದ ನಿರ್ಧಾರ; ಹೆತ್ತಮ್ಮನ ಕೈ ಸೇರಿದ ಮಗು
ಪಾರು ಮನೆಯಲ್ಲಿ ಇದೀಗ ಹಸುಗೂಸಿನ ಕೂಗು ಕೇಳಿಸಿದ. ಮಗು ಕೂಗುತ್ತಿರುವ ವಿಚಾರ ತಿಳಿದ ಮನೆ ಮಂದಿ ಇಲ್ಲಿ ಎಲ್ಲಾದರೂ ಮಗು ಅಳುತ್ತಿದೆಯ ಎಂದು ಎಲ್ಲಾ ಕಡೆ ನೋಡುತ್ತಾರೆ .. ಅಸ್ಟ್ರಲ್ಲಿ ಪಾರು ಕೂಡ ಓಡೋಡಿ ಬರುತ್ತಾಳೆ ತನ್ನ ಮಗು ಎಲ್ಲಿ ಅಳುತ್ತಿದೆ ಎಂದು ನೋಡಿದಾಗ ಹಾಲ್ ನಲ್ಲಿ ಮಗುವನ್ನು ಯಾರೋ ಮಲಗಿಸಿ ಹೋಗಿರುತ್ತಾರೆ. ಮಗು ಕಿಲ ಕಿಲ ಎನ್ನುವ ಧ್ವನಿ ಕೇಳಿಸಿಕೊಂಡ ಹನುಮಂತು ಆದಿ ಗೆ ಮಗುವನ್ನು ನೆಲದ ಮೇಲೆ ನೋಡಿ ಬಹಳ ಶಾಕ್ ಆಗುತ್ತದೆ. ಇನ್ನೂ ನಗುವಿನ ಬಳಿ ಓಡೋಡಿ ಬಂದು ಮಗುವನ್ನು ಗಟ್ಟಿ ಅಪ್ಪಿಕೊಂಡು ಮುದ್ದಾಡುತ್ತಾಳೆ.
ಆದರೆ ಮಗುವನ್ನು ಯಾರು ಬಿಟ್ಟು ಹೋಗಿರಬಹುದು ಎಂದು ಮನೆ ಮಂದಿ ಎಲ್ಲಾ ಆಲೋಚನೆ ಮಾಡುತ್ತಾ ಇರುತ್ತಾರೆ . ಇದೆಲ್ಲವನ್ನೂ ನೋಡಿದ ಪಾರು ಮಾತ್ರ ತನ್ನ ಮಗು ಜನನಿ ಕೈ ಯಲ್ಲಿ ಇರಬೇಕಿತ್ತು ಯಾಕೆ ಇಲ್ಲಿ ಮಲಗಿಸಿದ್ದಾರೆ ಎಂಬ ನೂರಾರು ಪ್ರಶ್ನೆ ಆಕೆಗೆ ಮೂಡುತ್ತದೆ. ಆ ಬಳಿಕ ಆದಿ ಕೂಡ ಮಗುವನ್ನು ಹಿಡಿದು ಮುದ್ದಾಡುತ್ತಾ ಅತ್ತ ಇತ್ತ ನೋಡುತ್ತಾನೆ.

ಆಗ ಪ್ರೀತಮ್ ಬರುತ್ತಾನೆ. ಮಗುವನ್ನು ಇಲ್ಲಿ ಮಲಗಿಸಿ ಹೋಗಿರುವ ಕೆಲಸ ಬೇರೆ ಯಾರದ್ದು ಅಲ್ಲ ಅದು ಪ್ರೀತಮ್ ದೇ ಎನ್ನುವ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಇನ್ನೂ ಪ್ರೀತಮ್ ಜೋರಾಗಿ ಹೇಳುತ್ತಾನೆ.. ಇನ್ನೂ ಮುಂದೆ ಈ ಮಗುವಿನ ಎಲ್ಲಾ ಜವಾಬ್ದಾರಿ ನಿಮ್ಮದೇ. ನಾನು ಈ ಮಗುವನ್ನು ಇಲ್ಲಿಯೇ ಬಿಟ್ಟು ಹೋಗುತ್ತೇನೆ ಎಂದು ಹೇಳಿದಾಗ ಎಲ್ಲರಿಗೂ ಶಾಕ್ ಆಗುತ್ತದೆ ಪಾರ್ವತಿ ಗೆ ಇನ್ನೂ ಮುಂದೆ ಮಕ್ಕಳು ಆಗುವುದೇ ಇಲ್ಲ ಎಂಬ ವಿಚಾರ ತಿಳಿದ ಜನನಿ ತನ್ನ ಮಗುವನ್ನು ಪಾರು ಗೆ ಕೊಡಲು ನಿರ್ಧಾರ ಮಾಡುತ್ತಾಳೆ ಇನ್ನೂ ಜನನಿ ಮಗು ಬಗ್ಗೆ ಪಾರು ಗೆ ಇರುವ ಕಾಳಜಿ ಬೇರೆ ಯಾರಿಗೂ ಬರುವುದು ಇಲ್ಲ ಎಂದು ಅನ್ನಿಸುತ್ತದೆ.
ಪಾರು ಆಗಾಗ ತನ್ನ ಮಗು ಹೇಗಿದ್ದಾಳೆ.. ಎನು ಮಾಡುತ್ತಾ ಇದ್ದಾಳೆ ಎಂಬುವುದನ್ನು ನೋಡಲು ಆಗಾಗ ಅರಸನ ಕೋಟೆಗೆ ಹೋಗುತ್ತಾ ಇದ್ದಳು ಇದೆಲ್ಲವನ್ನೂ ನೋಡಿದ ಅಖಿಲ ಗೆ ಮಾತ್ರ ಬಹಳ ನೋವು ಆಗುತ್ತದೆ. ಜನನಿ ಗೆ ಮಗು ಇದೆ ಆದರೆ ಪಾರು ಮಗು ಸತ್ತೆ ಹೋಗಿ ಬಿಟ್ಟಿದೆ ಎಂದು ಮನದಲ್ಲಿ ಅಂದುಕೊಂಡು ಪಾರು ಬಗ್ಗೆ ಮರುಕ ಪಡುತ್ತಾಳೆ. ಜನನಿ ಕೈಯಲ್ಲಿ ಮಗು ಇದ್ದರೆ ಬಹಳ ಜೋರಾಗಿ ಅಳುತ್ತದೆ ಮಗು ಆಗ ಪಾರು ಗೆ ಏನೋ ಕಳವಳ ಯಾಕೆ ಮಗು ಅಳುತ್ತಿದೆ ಅದಕ್ಕೆ ಹಸಿವು ಆಗಿದೆಯೇನೋ ಎಂದು ಬಹಳ ಮನದಲ್ಲಿ ತೊಳಲಾಟ ಆಗುತ್ತದೆ. ಆದರೆ ಅದೆಲ್ಲವನ್ನೂ ಮುಚ್ಚಿಟ್ಟು ಇರುತ್ತಾಳೆ.
ಇನ್ನೂ ಪ್ರೀತಮ್ ಮಾತ್ರ ಮಗು ನಿಮ್ಮ ಜೊತೆ ಇರಲಿ ಎಂದು ಹೇಳಿ ಹೊರಟು ಹೋಗುತ್ತಾನೆ. ಇನ್ನೂ ಜನನಿ ಸೋಫಾದ ಮೇಲೆ ಕುಳಿತುಕೊಂಡು ಇರುತ್ತಾಳೆ. ಆಕೆಗೆ ಒಂದು ಕಡೆಯಲ್ಲಿ ಮಗುವನ್ನು ಅಕ್ಕ ನಿಗೆ ಕೊಟ್ಟೆ ಎಂಬ ಸಂತಾಸವಾದರೆ. ಇನ್ನೊಂದು ಕಡೆ ಬಹಳ ಬೇಸರ. ಸೋಫಾದಲ್ಲಿ ಕುಳಿತು ಆಲೋಚನೆ ಮಾಡಬೇಕಾದರೆ ರತ್ನ ವೇಣಿ ಬರುತ್ತಾಳೆ. ಆಕೆ ಜನನಿ ಬಳಿ ಮಗು ಬಗ್ಗೆ ಪ್ರಶ್ನೆ ಮಾಡುತ್ತಾಳೆ.
ಆದರೆ ಜನನಿ ಮಾತು ಕೇಳಿದ ರತ್ನ ವೇಣಿ ಗೆ ಬಹಳ ಶಾಕ್ ಆಗುತ್ತದೆ . ಮಗು ಅಕ್ಕನಿಗೆ ಕೊಟ್ಟು ಬಿಟ್ಟೆ ಎಂದಾಗ ರತ್ನ ವೇಣಿ ಗೆ ಕೋಪ ಬರುತ್ತದೆ..


Click it and Unblock the Notifications











