Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru: ಅಖಿಲಾಂಡೇಶ್ವರಿ ಬಳಿ ಆಸ್ತಿಯಲ್ಲಿ ಭಾಗ ಕೇಳಿದ ಆದಿ?
ಅಖಿಲ ಬಳಿ ಬಂದ ರಘು ಆದಿ ಹಾಗೂ ಪಾರು ನಡೆಯಿಂದ ಬೇಸರ ಆಗಿದೆಯಾ, ಪಾರು ಹೆಸರಲ್ಲಿ ಆದಿ ಪ್ರಾಪರ್ಟಿ ಬೇರೆ ತೆಗೆದುಕೊಳ್ಳುತ್ತಾ ಇದ್ದಾರೆ ಅದರಿಂದ ಏನಾದರು ನಿಮಗೆ ಬೇಸರ ಆಯಿತಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ಅಖಿಲ ನನಗೆ ಅಂತಹ ಸಣ್ಣ ಮನಸ್ಸು ಇಲ್ಲ, ನಾನು ತುಂಬಾ ಖುಷಿ ಪಟ್ಟೆ ಯಾಕೆ ಎಂದರೆ ಆದಿ ತನಗಾಗಿ ಇದುವರೆಗೂ ಯೋಚನೆ ಮಾಡಿರಲಿಲ್ಲ, ಆದರೆ ಇದೀಗ ಯೋಚನೆ ಮಾಡುವ ಅನಿವಾರ್ಯತೆ ಬಂದು ಒದಗಿದೆ. ಅದರಿಂದ ಅವನ ಈ ಯೋಚನೆಗೆ ನನ್ನ ಬೆಂಬಲ ಇದ್ದೆ ಇದೆ ಎಂದು ಹೇಳುತ್ತಾಳೆ. ಬಳಿಕ ಕೆಲವೊಂದು ಬಾರಿ ಏನೋ ತಳಮಳ ಆತಂಕ ದುಗುಡ ಆಗುತ್ತದೆ, ಏನಾದರು ಆಪತ್ತು ಎದುರಾಗುತ್ತ ಎಂದು ಯೋಚನೆ ಮಾಡುತ್ತಾ ಇರುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಘು ಹಾಗೆಲ್ಲ ಯೋಚಿಸಬೇಡ ಎಂದು ಹೆಂಡತಿಯನ್ನು ಸಂತೈಸುತ್ತಾನೆ.
ಇನ್ನು ಅಖಿಲ ಇಪ್ಪತ್ತೈದನೆ ಸಲ ಧರ್ಮಾಧಿಕಾರಿ ಸ್ಥಾನವನ್ನು ಅಲಂಕರಿಸುವ ದಿನ ಬಂದೇ ಬಿಡುತ್ತದೆ. ಆದಿ ಹಾಗೂ ಪಾರು ಅದರ ಖುಷಿಯಲ್ಲಿ ಇರುತ್ತಾರೆ. ಆದರೆ ತಾಯಿಗೆ ಈ ಸಮಯದಲ್ಲಿ ನೋವು ನೀಡುತ್ತಾ ಇದ್ದೇವೆ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾರೆ.. ಬಳಿಕ ಅತ್ತೆಗೆ ಹೂವು ರೆಡಿ ಮಾಡುತ್ತಾ ಇರುವಾಗ ಪಾರುವನ್ನು ಆದಿ ತಡೆಯುತ್ತಾನೆ. ಏನು ಇದೆಲ್ಲ ನೀನು ಹೂ ಕಟ್ಟಿ ಅಮ್ಮನಿಗೆ ಕೊಡಬೇಡ ಎಂದು ಹೇಳುತ್ತಾನೆ. ಆದರೆ ಪಾರು ಮಾತ್ರ ನಾನು ಹೂವು ಕಟ್ಟಿ ಇಡುತ್ತೇನೆ, ಆದರೆ ಕೊಡುವುದಿಲ್ಲ ಎಂದು ಹೇಳುತ್ತಾಳೆ.
ಅಲ್ಲಿಗೆ ಆ ವೇಳೆ ಅಖಿಲ ಬರುತ್ತಾಳೆ, ದೇವರಿಗೆ ಪೂಜೆ ಮಾಡುವ ವೇಳೆ ಅಲ್ಲಿಗೆ ಅಣ್ಣ ತಮ್ಮಂದಿರು ಇಬ್ಬರು ಬರುತ್ತಾರೆ. ಪೂಜೆ ಮಾಡಿ ಹೊರ ಬಂದ ಅಖಿಲ ಆದಿ ಪ್ರೀತಮ್ ನೋಡಿ ಖುಷಿ ಪಡುತ್ತ ಇರುತ್ತಾಳೆ. ಬಳಿಕ ಆದಿ ಪ್ರೀತಂನನ್ನು ನೋಡಿ ಅವರ ಇಬ್ಬರ ಕೈಯನ್ನು ಹಿಡಿದುಕೊಂಡು ಆದಿ, ಪ್ರೀತಮ್ ನೀವು ಇಬ್ಬರು ನನ್ನ ಎರಡೂ ಕಣ್ಣುಗಳು ಇದ್ದ ಹಾಗೆ, ಹೇಗೆ ಕಣ್ಣುಗಳು ಎರಡು ಆದರೂ ದೃಷ್ಟಿ ಒಂದೇ ಆಗಿರುತ್ತೋ, ಹಾಗೆಯೇ ನೀವು ಇಬ್ಬರು ಒಗ್ಗಟ್ಟು ಹಾಗೂ ಪ್ರೀತಿಯಿಂದ ಇರಬೇಕು ಎಂದು ಹೇಳಿ ದೇವಾಲಯಕ್ಕೆ ಹೋಗುತ್ತಾರೆ.

ಪ್ರೀತಮ್ ಹಾಗೂ ಜನನಿಯನ್ನು ಬಿಟ್ಟು ಹೋದ ಆದಿ
ಇನ್ನು ಆದಿ ಮತ್ತು ಪಾರು ಪ್ರೀತಮ್ ಮತ್ತು ಜನನಿಯನ್ನು ಬಿಟ್ಟು ಹೋಗುತ್ತಾರೆ. ಪ್ರೀತಮ್ ಎಷ್ಟೇ ಕರೆದರೂ ಆದಿ ಕಾರು ನಿಲ್ಲಿಸದೆ ಹೋಗುತ್ತಾನೆ. ಜನನಿಯನ್ನು ಸಮಾಧಾನ ಮಾಡಿದ ಪ್ರೀತಮ್ ಬಾ ಜನನಿ ಬೇಸರ ಮಾಡಿಕೊಳ್ಳಬೇಡ ನಾವು ಬೈಕ್ ನಲ್ಲಿ ಹೋಗೋಣ ಎಂದು ಕರೆದುಕೊಂಡು ಹೋಗುತ್ತಾನೆ..

ಪ್ರೀತಮ್‌ಗೆ ಕಪಾಳಮೋಕ್ಷ ಮಾಡಿದ ಮೋನಿಕಾ ಗಂಡ
ರಸ್ತೆ ಮಧ್ಯ ಪ್ರೀತಮ್ ಬೈಕ್ ಗೆ ಕಾರು ಅಡ್ಡ ಬರುತ್ತದೆ. ಪ್ರೀತಮ್ ಬಳಿ ಬಂದ ಆ ವ್ಯಕ್ತಿ ಪ್ರೀತಮ್ ಕಪಾಳಕ್ಕೆ ಹೊಡೆಯುತ್ತಾನೆ.. ಇದನ್ನು ಕಂಡ ಜನನಿ. ಕಕ್ಕಾಬಿಕ್ಕಿ ಆಗುತ್ತಾಳೆ. ಆ ವ್ಯಕ್ತಿ ಪ್ರೀತಮ್ ಮೇಲೆ ಆರೋಪದ ಸುರಿಮಳೆ ಸುರಿಸಿದರೂ ಪ್ರೀತಮ್ ಮಾತ್ರ ತನಗೆ ಅರ್ಥ ಆಗದ ಹಾಗೆ ನಿಲ್ಲುತ್ತಾನೆ. ಬಳಿಕ ತಿಳಿಯುತ್ತದೆ ಅದು ಬೇರೆ ಯಾರೂ ಅಲ್ಲ ಮೋನಿಕಾ ಗಂಡ ಎಂದು. ಇದನ್ನು ದೂರದಿಂದ ಪಾರು ಆದಿ ನೋಡುತ್ತಾ ಇರುತ್ತಾರೆ.. ಬಳಿಕ ಆತನ ಬಳಿ ಏನೋ ಸಬೂಬು ಹೇಳಿ ದೇವಾಲಯದ ಬಳಿ ಬರುತ್ತಾರೆ.. ಈ ವೇಳೆ ಅಖಿಲ ಧರ್ಮಾಧಿಕಾರಿ ಎಂದು ಘೋಷಣೆ ಮಾಡುತ್ತಾ ಇರುವಾಗಲೇ ಆದಿ ಅಖಿಲ ಬಳಿ ಆಸ್ತಿಯಲ್ಲಿ ಭಾಗ ಕೇಳುತ್ತಾನೆ.

ಆದಿ ಮಾತಿಗೆ ಬೆಚ್ಚಿಬಿದ್ದ ಅಖಿಲ
ಇದನ್ನು ನೋಡಿದ ನೆರೆದವರಿಗೆ ಎಲ್ಲರಿಗೂ ಬಹಳ ಶಾಕ್ ಆಗುತ್ತದೆ. ಏನು ನಡೆಯುತ್ತಿದೆ ಎಲ್ಲಿ ಎಂದು ಜನರು ಕಕ್ಕಾಬಿಕ್ಕಿ ಆಗುತ್ತಾರೆ. ಪ್ರೀತಮ್ ಅಣ್ಣ ಆಸ್ತಿಯಲ್ಲಿ ಪಾಲು ಕೇಳಿದ್ದನ್ನು ನೋಡಿ ಶಾಕ್ ಆಗಿರುತ್ತಾನೆ. ಮುಂದೇನು ಕಾದು ನೋಡಬೇಕಿದೆ