Paaru: ಆಸ್ಪತ್ರೆಗೆ ಹಣವಿಲ್ಲದೇ ಪರದಾಡುತ್ತಿದ್ದ ಆದಿ ಸಹಾಯಕ್ಕೆ ಬಂದ ಸಾರಥಿ

By Poorva

ಅಖಿಲಾಂಡೇಶ್ವರಿ ಪಾರ್ವತಿ ಆರೋಗ್ಯದ ಬಗ್ಗೆ ಬಹಳ ತಲೆ ಕೆಡಿಸಿಕೊಂಡು ಇದ್ದಾಳೆ. ಆಕೆ ರಘು ಬಳಿ ನಾನು ಜನನಿಯ ಜತೆ ಆಸ್ಪತ್ರೆಗೆ ಹೋಗಬೇಕು ಆಕೆಗೆ ಉತ್ತಮ ಟ್ರೀಟ್ಮೆಂಟ್ ಕೊಡಬೇಕು ಎಂದೆಲ್ಲ ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ರಘು ಯೋಚನೆ ಮಾಡುತ್ತಾ ಇರುತ್ತಾನೆ.

ಪಾರ್ವತಿ ಆರೋಗ್ಯವನ್ನು ವಿಚಾರ ಮಾಡಬೇಕು ಆದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೊ ಇಲ್ಲವೋ ಎಂಬುವುದನ್ನು ಕೇಳಬೇಕು ಎಂದು ಯೋಚನೆ ಮಾಡುತ್ತಾ ಇರುವಾಗ ಅಖಿಲ ಮನದಲ್ಲಿ ರಘು ಇದೀಗ ಆಲೋಚನೆ ಮಾಡಲು ತೊಡಗಿದ್ದಾರೆ ಅನ್ನಿಸುತ್ತದೆ. ತನ್ನ ಸೊಸೆಯನ್ನು ಆಸ್ಪತ್ರಗೆ ಕರೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿರಬಹುದು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.

Kannada serial Paaru written update on 7th April

ಈ ವೇಳೆ ರಘು ಅಖಿಲ ನೀನು ಯಾವಾಗ ಜನನಿಯನ್ನು ಕರೆದುಕೊಂಡು ಹೋಗುತ್ತಿಯಾ ಎಂದಾಗ ಅಖಿಲಾಂಡೇಶ್ವರಿ ನನಗೆ ತುಂಬಾ ಕೆಲಸ ಇದೆ ನಾಳೆ ಹೋಗಲು ಆಗುವುದಿಲ್ಲ, ನಾಡಿದ್ದು ಹೋಗುತ್ತೇನೆ ಎಂದು ಹೇಳುತ್ತಾಳೆ. ಇನ್ನು ರಘು ಅಲ್ಲಿಂದ ಹೋಗುತ್ತಾನೆ. ಆದಿಗೆ ಕರೆ ಮಾಡಿ ಪಾರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೀಯಾ ಎಂದಾಗ ಆದಿ ತಡವರಿಸಿ ಒಂದು ಸಲ ಕರೆದುಕೊಂಡು ಹೋಗಿದ್ದೇನೆ ಇದೀಗ ಆಯುರ್ವೇದ ಮೆಡಿಸಿನ್ ಮಾಡುತ್ತಾ ಇದ್ದೇವೆ ಎಂದಾಗ ರಘು ಖಡಕ್ ಆಗಿ ಇಲ್ಲ ಆದಿ ನೀನು ನಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು ಉತ್ತಮ, ಯಾಕೆಂದರೆ ಅವರಿಗೆ ನಮ್ಮ ಆರೋಗ್ಯದ ಬಗ್ಗೆ ಎಲ್ಲಾ ತಿಳಿದಿರುತ್ತದೆ ಎಂದು ಹೇಳುತ್ತಾನೆ.

ಆದರೆ ಆದಿ ಆತನ ಬಳಿ ಅಷ್ಟು ಹಣ ಇಲ್ಲದ ಕಾರಣ ಏನು ಮಾಡುವುದು ಎಂದು ತಂದೆಯ ಬಳಿ ಹೇಳುತ್ತಾನೆ. ಆದರೆ ರಘು ನಾನು ಕೊಡುತ್ತೇನೆ ಎಂದು ಹೇಳಿದರೂ ಅದಕ್ಕೆ ಒಪ್ಪದೇ ಸರಿ ನಾನೇ ಅರೇಂಜ್ ಮಾಡುತ್ತೇನೆ ಎಂದು ಹೇಳುತ್ತಾನೆ. ಇನ್ನು ಪಾರು ಬಳಿ ಬಂದ ಆದಿ ನಾಳೆ ನಾವು ಡಾಕ್ಟರ್ ಬಳಿ ಹೋಗಿ ಚೆಕಪ್ ಮಾಡಿಸಿಕೊಂಡು ಬರೋಣ ಎಂದೆಲ್ಲ ಹೇಳಿದಾಗ ಪಾರು ಆಯುರ್ವೇದಿಕ್ ಮಾತ್ರೆ ಬಗ್ಗೆ ಮಾತನಾಡುತ್ತಾಳೆ. ಅದನ್ನು ಕೇಳಿಸಿಕೊಂಡ ಆದಿ ಮಾತ್ರ ಅದೆಲ್ಲ ಬೇಡ ನಾಳೆ ಹೊರಡು ಎಂದು ಹೇಳುತ್ತಾನೆ.

Kannada serial Paaru written update on 7th April

ಇನ್ನu ಹಣಕ್ಕಾಗಿ ರಾತ್ರಿ ಎಲ್ಲಾ ಆಟೋ ಓಡಿಸಿ ಬರುತ್ತೇನೆ ಎಂದು ಹೇಳಿದಾಗ ಪಾರು ಅದಕ್ಕೆ ಒಪ್ಪದೇ ಸುಮ್ಮನೆ ಇರುತ್ತಾಳೆ. ಇನ್ನು ಇದನ್ನೆಲ್ಲ ಕೇಳಿಸಿಕೊಂಡ ಹನುಮಂತು ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.‌ ಇನ್ನು ಪಾರು ಆತನಿಗೆ ಚಿನ್ನದ ಸರವನ್ನು ಕೊಟ್ಟು ಇದನ್ನು ಒತ್ತೆ ಇಡಿ ನಮಗೆ ಆದಾಗ ಇದನ್ನು ಬಿಡಿಸಿಕೊಂಡು ಬರೋಣ ಎಂದಾಗ ಅದಕ್ಕೆ ಮೊದಲು ಆದಿ ಒಪ್ಪದೇ ಇದ್ದರೂ ಆ ಬಳಿಕ ಒಪ್ಪಿಗೆ ನೀಡುತ್ತಾನೆ.

ಇದನ್ನು ನೋಡಿದ ಹನುಮಂತು ಆದಿ ಬಟ್ಟೆಯ ಒಳಗೆ ಹಣವನ್ನು ಇಡುತ್ತಾನೆ. ಇನ್ನು ಆದಿ ಮರುದಿನ ಶರ್ಟ್ ಅನ್ನು ನೋಡಿದಾಗ ಅದರಲ್ಲಿ ಹಣ ಇದ್ದಿದ್ದನ್ನು ಕಂಡು ಇದು ಮಾವ ಇಟ್ಟಿದ್ದು ಎಂದು ತಿಳಿಯುತ್ತದೆ. ಅಖಿಲಾಂಡೇಶ್ವರಿ ಜನನಿಯ ಜೊತೆ ಆಸ್ಪತ್ರೆಗೆ ಹೋಗೋಣ ಎಂದು ಹೇಳಲು ಆಕೆಯ ರೂಮ್ ಹತ್ತಿರ ಬರುತ್ತಾಳೆ. ಆದರೆ ಅಮ್ಮ ಬಂದಿರುವುದು ಪ್ರೀತಮ್ ಗೆ ತಿಳಿದು ಇರುವುದು ಇಲ್ಲ. ಪ್ರೀತಮ್ ಪಾರ್ವತಿ ಬಸಿರು ಆಗಿರುವ ವಿಚಾರ ಮಾತನಾಡುತ್ತಾ ಇರುತ್ತಾನೆ. ಇನ್ನು ಅಣ್ಣ ಅಮ್ಮನ ಬಳಿ ಈ ವಿಚಾರ ಹೇಳಬೇಡ ಎಂದು ಕೂಡ ಹೇಳಿರುವುದು ನೆನಪಾಗಿ ಹೆಂಡತಿ ಬಳಿ ಮಾತು ಆಡುತ್ತಾ ಇರುತ್ತಾನೆ.

ಆಗ ಅಲ್ಲಿ ಅಮ್ಮ ಇರುವುದನ್ನು ಕಂಡು ಪ್ರೀತಮ್ ಶಾಕ್ ಆಗುತ್ತಾನೆ. ಬಳಿಕ ಅಮ್ಮನ ಬಳಿ ಬಂದ ಕಾರಣ ತಿಳಿದುಕೊಂಡು ಅಲ್ಲಿಂದ ಹೋಗುತ್ತಾನೆ .ಇನ್ನು ಜನನಿಯನ್ನು ನಾಳೆ ನನ್ನ ಜೊತೆ ಬಾ ಜನನಿ ಎಂದು ಹೇಳಿ ಅಲ್ಲಿಂದ ಹೊರ ನಡೆಯುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial paaru written updated on 7th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X