Paaru: ಅನುಷ್ಕ ಕಪಿಮುಷ್ಟಿಯಲ್ಲಿ ದಾಮಿನಿ; ಪಾರು ಮಾತಿಗೆ ಶಾಕ್ ಆದ ಅಖಿಲಾಂಡೇಶ್ವರಿ
ಪಾರು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಪಾರು ರತ್ನವೇಣಿ ಮಾತಿಗೆ ತುಂಬಾ ಬೇಸರ ಮಾಡಿಕೊಂಡು ಇದ್ದಾಳೆ. ಪಾರು ಯಾವತ್ತೂ ಯಾರಿಗೂ ನೋವು ಕೊಟ್ಟವಳಲ್ಲ. ಆದರೆ ಇದೀಗ ತನ್ನ ಅತ್ತೆಗೆ ಮಗುವಿನ ವಿಚಾರದಲ್ಲಿ ಬಹಳ ನೋವು ಮೂಡಿಸುತ್ತಿದ್ದಾಳೆ.
ಯಾಕೆಂದರೆ ಅಖೀಲಾಂಡೇಶ್ವರಿ ಪಾರು ಮನೆಗೆ ಬಂದು ಮನೆಗೆ ಬಾ ಪಾರು ಎಂದೆಲ್ಲಾ ಅದೆಷ್ಟೇ ಕೋರಿಕೊಂಡರೂ ಪಾರು ಮಾತ್ರ ಮನೆಗೆ ಬರಲು ತಯಾರಿಲ್ಲ. ಅಖಿಲ ಬಳಿ ಪಾರು ಅತ್ತೆ ನೀವು ನನ್ನ ಮನಸಾರೆ ಒಪ್ಪಿಕೊಂಡೆ ಇಲ್ಲ, ನೀವು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಾಗಿ ನನ್ನ ಪ್ರೀತಿಯಿಂದ ನೋಡಿಕೊಂಡಿದ್ದೀರ, ಹಾಗೆಯೇ ನಿಮ್ಮ ಮಗನ ಹೆಂಡತಿ ಎನ್ನುವ ಕಾರಣಕ್ಕೆ ನನ್ನ ಮೇಲೆ ಪ್ರೀತಿ ಮೂಡುತ್ತಿದೆ, ಆದರೆ ನೀವು ನಿಜವಾಗಲೂ ನನ್ನ ಜೊತೆ ಪ್ರೀತಿಯ ಮಾತುಗಳನ್ನು ಎಂದಿಗೂ ಆಡಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅಖಿಲಗೆ ಬಹಳ ನೋವು ಆಗುತ್ತದೆ.

ಏನು ಮಾಡಬೇಕು ಎಂದು ತಿಳಿಯದೇ ಪಾರು ಮುಖ ನೋಡುತ್ತಲೇ ಇರುತ್ತಾಳೆ. ಪಾರು ಸ್ವಾಭಿಮಾನದ ಮಾತು ಕೇಳಿ ರತ್ನವೇಣಿಗೆ ಬಹಳ ಖುಷಿ ಆಗುತ್ತದೆ. ಇನ್ನು ಪಾರು ಅಖಿಲ ಬಳಿ ತನ್ನ ಮಗು ಎಲ್ಲಿ ಬೆಳೆಯಬೇಕು ಹೇಗೆ ಬೆಳೆಯಬೇಕು ಎಂಬುವುದು ನನಗೆ ಬಿಟ್ಟ ವಿಚಾರ ಬೇರೆಯವರು ನನ್ನ ಮಗುವನ್ನು ಎಲ್ಲಿ ಹೇಗೆ ಬೆಳೆಸಬೇಕು ಎಂಬುವುದನ್ನು ಯಾರು ಹೇಳಬೇಕಾಗಿಲ್ಲ ಎಂದು ಹೇಳುತ್ತಾಳೆ.
ಈ ಮಾತು ಅಖೀಲಾಂಡೇಶ್ವರಿ ಮನಸ್ಸಿಗೆ ಬಹಳ ನೋವು ತಂದಿದೆ. ಸೊಸೆ ಮಾತು ಕೇಳಿ ಬಹಳ ಬೇಸರ ಆಗುತ್ತದೆ. ಮಾತು ಮುಂದುವರೆಸಿದ ಪಾರು ನಮ್ಮನ್ನು ಮನೆಯಿಂದ ಹೊರಗೆ ಕಳುಹಿಸಬೇಕಾದರೆ ನಿಮಗೆ ಏನು ಅನ್ನಿಸಲೇ ಇಲ್ಲ ಆದರೆ ಇದೀಗ ನಾನು ತಾಯಿ ಆಗುತ್ತಾ ಇದ್ದೇನೆ ಎಂದು ನನಗೆ ಇಷ್ಟೆಲ್ಲ ಆರೈಕೆ ಮಾಡುತ್ತಾ ಇದ್ದೀರಾ ಎಂದು ನೇರವಾಗಿ ಪ್ರಶ್ನೆ ಮಾಡುತ್ತಾಳೆ.
ಅಖಿಲಗೆ ಆ ಮಾತು ಬಹಳ ನೋವು ಆಗುತ್ತದೆ. ಆದರೆ ಆದಿ ಮಾತ್ರ ಅಮ್ಮನಿಗೆ ಇಷ್ಟೆಲ್ಲ ಪಾರು ಹೇಳುತ್ತ ಇದ್ದರೂ ಸುಮ್ಮನೆ ಇರುತ್ತಾನೆ. ಇನ್ನು ಅನುಷ್ಕಾ ಬದುಕಿದ್ದಾಳೆ ಎಂಬ ವಿಚಾರ ಧಾಮಿನಿಗೆ ತಿಳಿದು ಹೋಗಿದೆ. ಆಕೆ ಈಗ ಅನುಷ್ಕ ಕಪಿಮುಷ್ಟಿಯಲ್ಲಿ ಇದ್ದಾಳೆ.
ಅರಸನ ಕೋಟೆಯನ್ನು ನಿರ್ವಂಶ ಮಾಡಲು ಹೊರಟ ಈಕೆಗೆ ಇದೀಗ ದಾಮಿನಿ ಸಾಥ್ ನೀಡುತ್ತಿದ್ದಾರೆ. ನರ್ಸ್ ವೇಷದಲ್ಲಿ ಮನೆಗೆ ಬಂದ ವಿಚಾರ ಹಾಗೆಯೇ ಜನನಿಯನ್ನು ನೋಡಿಕೊಳ್ಳಲು ಅನುಷ್ಕ ಮನೆಯಲ್ಲಿ ಇದ್ದಾಳ ಎನ್ನುವ ವಿಚಾರವೂ ಆಕೆಗೆ ತಿಳಿದು ಹೋಗುತ್ತದೆ.
ಆಕೆ ಅಖಿಲಗೆ ಹೇಳಲು ಹೊರಟಾಗ ಅನುಷ್ಕ ಮಾತ್ರ ನಿರಾತಂಕವಾಗಿ ಹೇಳುತ್ತಾಳೆ. ಹೇಳಿ ಅಖಿಲಗೆ ಎಲ್ಲಾ ವಿಚಾರ ಹೇಳು ನನಗೆ ಏನು ಭಯ ಇಲ್ಲ, ಆದರೆ ನನಗೆ ಎಷ್ಟು ತೊಂದರೆ ಆಗುತ್ತದೋ ಅದರ ಹತ್ತರಷ್ಟು ತೊಂದರೆ ನಿಮಗೆ ಆಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ದಾಮಿನಿ ಭಯಬೀತಳಾಗುತ್ತಾಳೆ. ದಾಮಿನಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಯಾಕೆಂದರೆ ನರ್ಸ್ ಆಗಿ ಅನುಷ್ಕಳ ಮನೆಗೆ ಕರೆಸಿದ್ದು ದಾಮಿನಿ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











