Paaru: ಪಾರು ಮೇಲೆ ರತ್ನವೇಣಿಯ ಒತ್ತಡ; ಅಖಿಲಾಗೆ ಅನುಮಾನ ಹುಟ್ಟಿಸಿದ ಆದಿ-ಪಾರು ನಡೆ

By Poorva

ಪಾರು ಧಾರವಾಹಿ ನೋಡಲು ಜನ ಕಾತರದಿಂದ ಕಾಯುತ್ತಾ ಇರುವಷ್ಟು ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ರತ್ನವೇಣಿಯ ಕುತಂತ್ರ ಬಯಲಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಪಾರು ಮನಸಿಗೆ ಘಾಸಿ ನೀಡಿದ್ದು ಯಾರು ಎಂಬ ಪ್ರಶ್ನೆ ಕೂಡ ಮೂಡಿದೆ. ಪಾರು ತನ್ನ ಅತ್ತೆ ಅಖೀಲಾಂಡೇಶ್ವರಿ ಮನಸ್ಸಿಗೆ ಬಹಳ ಬೇಸರ ಮೂಡಿಸಿದ್ದಾಳೆ. ಅಖಿಲಗೆ ತನ್ನ ಸೊಸೆಯದ್ದೇ ಚಿಂತೆ.

ಆಕೆ ಯಾಕೆ ಹೀಗೆಲ್ಲ ಆಡುತ್ತಾ ಇದ್ದಾಳೆ ಏನಾಯಿತು, ಮನೆ ಒಳಗೆ ಬಂದ ಪಾರು ಬಹಳ ಖುಷಿಯಲ್ಲಿ ಇದ್ದಳು. ಆದರೆ ಸೀಮಂತ ಮಾಡಿಸಿಕೊಳ್ಳುವ ಹೊತ್ತಲ್ಲಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇದನ್ನ ಅಖಿಲ ಮನೆಯವರ ಎಲ್ಲರ ಬಳಿ ಹೇಳಿದಾಗ ಸಹಜವಾಗಿ ಪ್ರೀತಮ್ ಗೆ ಕೂಡ ಅನುಮಾನ ಮೂಡುತ್ತದೆ.

Kannada serial Paaru written update on 9th June

ಯಾಕೆ ಹೀಗೆ ಆಗುತ್ತಿದೆ. ಯಾರು ಇರಬಹುದು ಈ ರೀತಿ ನಡೆದುಕೊಂಡವರು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ತನಗೆ ಮೂಡಿದ ಅನುಮಾನವನ್ನು ತಾಯಿಯ ಬಳಿ ಹೇಳಿದಾಗ ಅಖೀಲಾಂಡೇಶ್ವರಿಗೆ ಅನುಮಾನ ಮೂಡುತ್ತದೆ .

ಇತ್ತ ರತ್ನ ವೇಣಿಗೆ ಬಹಳ ಆಘಾತ ಆಗುತ್ತದೆ. ಎಲ್ಲಾದರೂ ನಾನೇ ಆ ತರ ಮಾಡಿದೆ ಎಂದು ಗೊತ್ತಾದರೆ ಏನು ಗತಿ ಎಂದು ಶಾಕ್ ಆಗಿ ನಿಂತಿರುತ್ತಾಳೆ. ಇನ್ನು ಜನನಿ ತನ್ನ ಚಿಕ್ಕಮ್ಮನಿಂದಾಗಿ ಈ ರೀತಿ ತನ್ನ ಅಕ್ಕನಿಗೆ ನೋವು ಆಗಿದೆ ಎಂದು ತಿಳಿದರೆ ಆಕೆ ತನ್ನ ತಂದೆ ವೀರಣ್ಣನಿಗೆ ನಿಜ ವಿಚಾರ ಹೇಳುವುದು ಖಂಡಿತ ಆದರೆ ವೀರಣ್ಣನಿಗೆ ವಿಚಾರ ತಿಳಿದರೆ ಮಾತ್ರ ಬಹಳ ಕಷ್ಟ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಇನ್ನು ಪಾರು ಬಳಿ ಹನುಮಂತು ಪ್ರಶ್ನೆಯ ಮೇಲೆ ಪ್ರಶ್ನೆ ಹಾಕುತ್ತ ಇರುತ್ತಾನೆ. ಯಾಕಮ್ಮ ಅಮ್ಮನವರ ಮನಸಿಗೆ ನೋವು ನೀಡಿದೆ ಅವರು ಏನು ಮಾಡಿದರು ಎಂದೆಲ್ಲ ಕೇಳಿದಾಗ ಪಾರು ತನ್ನ ನೋವನ್ನು ತಂದೆಯ ಬಳಿ ಹೇಳಿಕೊಳ್ಳುತ್ತಾ ಇರುತ್ತಾಳೆ. ರತ್ನವೇಣಿ ಅವಮಾನ ಮಾಡಿದ್ದನ್ನು ಹೇಳುತ್ತಾಳೆ. ಆಗ ಹನುಮಂತುಗೆ ಬಹಳ ಬೇಸರ ಆಗುತ್ತದೆ .

ರತ್ನವೇಣಿ ಕೆಟ್ಟ ನಡವಳಿಕೆಯಿಂದ ತನ್ನ ಮಗಳು ಎಷ್ಟೆಲ್ಲ ಕಷ್ಟ ಪಡಬೇಕಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಪಾರು ನಾನು ಅರಸನ ಕೋಟೆಗೆ ಹೋದರೆ ಎಲ್ಲಿ ಜನನಿಗೆ ಅಪಾಯ ಆಗುತ್ತದೋ.. ರತ್ನವೇಣಿ ಏನು ಮಾಡುತ್ತಾರೋ ಎಂದು ಆಲೋಚಿಸುತ್ತಿರುತ್ತಾಳೆ.

ಇದರಿಂದ ರತ್ನವೇಣಿಗೆ ಇನ್ನೂ ಹೆಚ್ಚು ಕೋಪ ಬರುತ್ತದೆ. ಹೊಟ್ಟೆಉರಿ ಹೆಚ್ಚಾಗುತ್ತಾ ಹೋಗಿ ಅದು ದ್ವೇಷದ ರೀತಿ ಬದಲಾವಣೆ ಆಗುವ ಎಲ್ಲ ಲಕ್ಷಣ ಗೋಚರ ಆಗುತ್ತಿದೆ. ಆದ ಕಾರಣ ಅರಸನಕೋಟೆಯಿಂದಲೆ ದೂರ ಆದರೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಈ ರೀತಿ ಅತ್ತೆಗೆ ಜೋರಾಗಿ ಬೈದರೆ ಮತ್ತೆ ಅವರು ಹತ್ತಿರ ಬರುವುದಿಲ್ಲ ಅದಕ್ಕಾಗಿ ಅಖಿಲ ಮೇಲೆ ಕೊಂಚ ರೇಗಿಬಿಡುತ್ತಾಳೆ. ಈ ವಿಚಾರ ಹನುಮಂತುಗೆ ತಿಳಿದು ಬಹಳ ಬೇಸರ ಮಾಡಿಕೊಳ್ಳುತ್ತಾನೆ.

More from Filmibeat

English summary
Kannada serial paaruwritten updated on 9th June
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X