ಆದಿ-ಪಾರುಗೆ ಸರ್ಪ್ರೈಸ್ ಪ್ಲ್ಯಾನ್ ಮಾಡಿದ ಅಖಿಲಾಂಡೇಶ್ವರಿ
ಅಖಿಲಾಂಡೇಶ್ವರಿಗೆ ತನ್ನ ಮಗ ಪ್ರೀತಮ್ ಮೇಲೆ ಅನುಮಾನ ಮೂಡಲು ಶುರು ಆಗಿದೆ ಯಾಕೆಂದರೆ ಫೋನ್ ರಿಸೀವ್ ಮಾಡದೇ ಫೋನ್ ಕಟ್ ಮಾಡಿ ಅಮ್ಮನ ಬಳಿ ಸುಳ್ಳು ಹೇಳುತ್ತಾನೆ ಇದನ್ನೆಲ್ಲ ನೋಡಿದ ಅಖಿಲಾಗೆ ಸಿಕ್ಕಾಪಟ್ಟೆ ಅನುಮಾನ ಮೂಡುತ್ತದೆ. ಇದನ್ನೆಲ್ಲ ಯೋಚನೆ ಮಾಡುತ್ತಾ ಇದ್ದಾಗ ಅಲ್ಲಿಗೆ ಬಂದ ಪಾರು ತನ್ನ ಅತ್ತೆಯ ಬಳಿ ಮಾತನಾಡುವಾಗ ಅಖಿಲಾ, ಪಾರು ಬಳಿ ಹೇಳುತ್ತಾಳೆ ಪ್ರೀತೂ ತಾನು ಎದುರಿಗೆ ಬಂದಾಗ ಕಾಲ್ ರಿಸೀವ್ ಮಾಡದೇ ಕಟ್ ಮಾಡಿದ ಯಾರು ಎಂದಾಗ ಮನೀಶ್ ಅನ್ನುತ್ತಾನೆ ಮತ್ತೊಮ್ಮೆ ಮೋನಿಷ್ ಎಂದು ಹೇಳುತ್ತಾನೆ. ಇದನ್ನೆಲ್ಲ ನೋಡಿ ಪಾರು ಬಳಿ ಅನುಮಾನ ವ್ಯಕ್ತಪಡಿಸುತ್ತಾಳೆ ಅಖಿಲಾ.
ಇದನ್ನು ಮರೆಯಿಂದ ಕೇಳಿದ ಆದಿ, ಅಮ್ಮನ ಬಳಿ ಬಂದು ಹೇಳುತ್ತಾನೆ ನಾನು ಕೂಡ ಅದೇ ಹುಡುಕಾಟದಲ್ಲಿ ಇದ್ದೇನೆ ಎಂದು ನಡೆದ ಎಲ್ಲ ಘಟನೆಗಳನ್ನು ಅಮ್ಮನ ಎದುರು ವಿವರಿಸುತ್ತಾನೆ. ಬಳಿಕ ತಾನು ಮಾಡಲು ಹೊರಟ ಕೆಲಸದ ಬಗ್ಗೆಯೂ ಹೇಳುತ್ತಾನೆ. ಇದನ್ನೆಲ್ಲ ಕೇಳಿದ ಅಖಿಲಾಗೆ ಸಂತಸ ಆಗುತ್ತದೆ. ತಾನು ಹೇಳಿದ ಮಾತನ್ನು ದಿಕ್ಕರಿಸದೆ ನಾನಿಲ್ಲದಿದ್ದರು ಪ್ರೀತಮ್‌ಗೆ ಯಾವುದೇ ರೀತಿಯ ಅಪಾಯ ಆಗದೆ ಇರುವುದನ್ನು ನೋಡಿ ಸಂತಸ ಪಡುತ್ತಾಳೆ. ತನ್ನ ನಂತರದ ಸ್ಥಾನವನ್ನು ಉತ್ತಮವಾಗಿ ನಿಭಾಯಿಸುತ್ತಿರುವುದು ನನಗೆ ಬಹಳ ಖುಷಿ ಆಯಿತು ಎಂದು ಹೇಳುತ್ತಾರೆ. ಇದನ್ನು ಕೇಳಿದ ಆದಿ ಅದು ತನ್ನ ಕರ್ತವ್ಯ ಎನ್ನುವಂತೆ ಸುಮ್ಮನಾಗುತ್ತಾರೆ.

ದೂರ ಇರೋಣ ಎಂದುಕೊಂಡ ಆದಿ-ಪಾರು
ಇನ್ನೂ ಆದಿ ಮತ್ತು ಪಾರು ರೊಮ್ಯಾಂಟಿಕ್ ಆಗಿ ಮಾತನಾಡುತ್ತಾ ಇರುತ್ತಾರೆ ಇದನ್ನು ಕಂಡ ಪಾರು ಅತ್ತೆ ಹಾಗೂ ಪ್ರೀತಮ್ ಇವರೆಲ್ಲರೂ ಮನೆಯಲ್ಲಿ ನೋವು ತಿನ್ನಬೇಕಾದರೆ ನಾವು ಈ ರೀತಿ ಇರುವುದು ಸರಿಯಲ್ಲ. ನಾವು ಕೊಂಚ ದೂರ ದೂರ ಇರೋಣ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿಸಿಕೊಂಡ ಅಖಿಲಾ ನಮ್ಮಿಂದ ಯಾಕೆ ಮಕ್ಕಳು ಅವರ ಪ್ರೀತಿಯನ್ನು ಕಳೆದುಕೊಳ್ಳುವುದು ಎಂದುಕೊಂಡು ಜಯ ಎಂದು ಜೋರಾಗಿ ಕರೆಯುತ್ತಾಳೆ. ಜಯ ಅಖಿಲ ಬಳಿಗೆ ಬರುತ್ತಾಳೆ.

ಆದಿ-ಪಾರುಗಾಗಿ ವಿಶೇಷ ಡಿನ್ನರ್
ಅವರ ಬಳಿ ಅಖಿಲಾ ಹೇಳುತ್ತಾಳೆ ಇವತ್ತು ರಾತ್ರಿ ಸ್ಪೆಷಲ್ ಡಿನ್ನರ್ ಅರೇಂಜ್ಮೆಂಟ್ ಆಗಬೇಕು. ಏನೆಲ್ಲ ತಯಾರಿ ಬೇಕು ಅದನ್ನೆಲ್ಲ ಮಾಡಿಕೋ. ಇಬ್ಬರಿಗೆ ಮಾತ್ರ ಸ್ಪೆಷಲ್ ಡಿನ್ನರ್ ಅರೇಂಜ್ಮೆಂಟ್ ಮಾಡಿ ಎಂದು ಹೇಳಿದಾಗ ಜಯ ಮನದಲ್ಲಿ ಇಬ್ಬರಿಗಾ ಎಂದು ಯೋಚನೆ ಮಾಡುತ್ತಾಳೆ. ಬಳಿಕ ಆಯ್ತು ಮೇಡಂ ಅರೇಂಜ್ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಆ ವೇಳೆ ರಘು ಯೋಚನೆ ಮಾಡುತ್ತಾ ಸ್ಪೆಷಲ್ ಡಿನ್ನರ್ ಯಾರಿಗೆ ಎಂದು ಕೇಳುತ್ತಾನೆ. ಅದಕ್ಕೆ ಅಖಿಲಾ ನಾನು ಡಿನ್ನರ್ ಅರೇಂಜ್ ಮಾಡುತ್ತಿರುವುದು ಹೊರಗಿನವರಿಗೆ ಅಲ್ಲ. ಆದಿ ಹಾಗೂ ಪಾರುಗೆ ಎಂದು ಹೇಳುತ್ತಾಳೆ.

ಮಾಮೂಲಿನಂತಿರುವ ಅಖಿಲಾ
ಇದನ್ನು ಕೇಳಿ ರಘುಗೆ ಖುಷಿ ಆಗುತ್ತದೆ. ಆದರೂ, ಅಖಿಲಾ, ಈಗ ನೀನು ಇರುವ ಮನಸ್ಥಿತಿಯಲ್ಲಿ ಇದೆಲ್ಲ ಬೇಕಾ ಎಂದಾಗ ಅಖಿಲಾ ಮಾತ್ರ ಏನೂ ಆಗಿಲ್ಲ ಎಂಬಂತೆ ಇರುತ್ತಾಳೆ. ಇನ್ನು ಮೋಹನ್, ಯಾಮಿನಿಯಲ್ಲಿಗೆ ಬರುತ್ತಾನೆ. ಮೋಹನ್‌ಗೆ ಏನೆಲ್ಲ ಪ್ರಶ್ನೆ ಕೇಳಿ ಆತನ ತಲೆ ಕೆಡಿಸುತ್ತಾಳೆ ಯಾಮಿನಿ ಆದರೂ ಮೋಹನ್ ಮಾತ್ರ ಅದನ್ನೆಲ್ಲ ಘಣನೆಗೆ ತೆಗೆದುಕೊಳ್ಳದೆ ಬೇರೆಯವರ ಬಗ್ಗೆ ನಮಗೆ ಯಾಕೆ? ನಮಗೆ ಮಾಡಲು ಬೇಜಾನ್ ಕೆಲಸ ಇದೆ ಅಲ್ವಾ ಎಂದು ಯಾಮಿನಿ ಸೀರೆಯ ಸೆರಗು ಹಿಡಿದುಕೊಳ್ಳುತ್ತಾನೆ. ಇದನ್ನು ಕೇಳಿದ ಯಾಮಿನಿ ನಾನು ಮಾಡುವ ಕೆಲಸ ಏನು ಇಲ್ಲ. ನಿಮ್ಮ ಕೆಲಸವನ್ನು ನೀವು ಮಾಡಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಬಿಡಿ ಸೆರಗನ್ನು ಎಂದು ಜೋರಾಗಿ ಸೆರಗು ಎಳೆಯುತ್ತಾರೆ. ಬಳಿಕ ಇನ್ನೂ ಗಂಡನ ಜೊತೆ ಹೆಚ್ಚು ಕಾಲ ಕಳೆದರೆ ಆಗದು ಎಂದು ಅಲ್ಲಿಂದ ಓಡಿ ಹೋಗುತ್ತಾಳೆ.

ಪ್ರೀತೂವನ್ನು ಬ್ಲಾಕ್ ಮೇಲ್ ಮಾಡಿದ ಅರುಂಧತಿ
ಇನ್ನು ಪ್ರೀತಮ್‌ಗೆ ಅರುಂಧತಿ ಏನೆಲ್ಲಾ ಬ್ಲಾಕ್ ಮೇಲ್ ಮಾಡುತ್ತಾಳೆ ಎಂದರೆ ಪ್ರೀತೂ ಮಾತ್ರ ಬಳಲಿ ಬೆಂಡಾಗಿ ಹೋಗಿದ್ದಾನೆ ಅದೆಷ್ಟೇ ಕೆಲಸ ಇದ್ದರೂ ಬಾ ಅಂದರೆ ಬರಬೇಕು ಹೋಗು ಎಂದರೆ ಹೋಗಬೇಕು ಹೀಗೆ ನಾಯಿಯ ಹಾಗೆ ಅಲೆದಾಡಿಸುತ್ತಾರೆ. ಬೆಳಗ್ಗೆ ಬೇಗ ಬರುವಂತೆ ಅರುಂಧತಿ ಆಜ್ಞಾಪಿಸಿದರೆ ಇತ್ತ ಅಖಿಲ ಮನೆಯಿಂದ ಹೊರ ಹೋಗಬೇಡ ನಿನ್ನ ಅಗತ್ಯ ಇಲ್ಲಿ ತುಂಬಾ ಇದೆ ಎಂದು ಹೇಳುತ್ತಾಳೆ. ಇನ್ನು ಪ್ರೀತಮ್ ಏನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











