Paaru: ಆಡಿದವರ ಮಾತಿಗೆ ಬೀಗ ಜಡಿಯಲು ಹೊರಟ ಪಾರು.. ಮಾಡುತ್ತಿರುವ ಕೆಲಸ ಆದಿಗೆ ತಿಳಿದರೆ ಮುಂದೇನು?
'ಪಾರು' ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ವೀಕ್ಷಕರನ್ನು ಸೆಳೆಯುತ್ತಿದೆ. 'ಪಾರು' ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಾ ಇರುತ್ತಾಳೆ. ಜನನಿ ಚಿಕ್ಕಮ್ಮ ಆಡಿದ ಮಾತುಗಳನ್ನು ಕೇಳಿದ ಬಳಿಕ 'ಪಾರು' ಕೆಲಸಕ್ಕೆ ಹೊರಟಿದ್ದಾಳೆ.
ಆದರೆ ಈ ವಿಚಾರ ಯಾರಿಗೂ ಗೊತ್ತಿಲ್ಲ. ಇನ್ನು ಅಖೀಲಾಂಡೇಶ್ವರಿ ಮಾತ್ರ ತನ್ನ ಸೊಸೆಯ ಆಸೆ ಪೂರೈಸಬೇಕು ಎನ್ನುವ ದೃಷ್ಟಿಯಲ್ಲಿ ಸೊಸೆ ಇಷ್ಟ ಪಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ, ರಘು ಬಳಿ ಎಳೆನೀರು ತೆಗೆದುಕೊಂಡು ಹೋಗಲು ಹೇಳುತ್ತಾಳೆ.

ಅಖಿಲಮ್ಮನಿಗೆ ಸುಳ್ಳು ಹೇಳಿದ ವಾಚ್‌ಮ್ಯಾನ್
ಅವರಿಬ್ಬರೂ ಹೊರಗೆ ಬಂದ ವೇಳೆ 'ಪಾರು' ಚೂಡಿದಾರ ಹಾಕಿ ವಾಚ್‌ಮ್ಯಾನ್ ಬಳಿ ಮಾತನಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಅಖಿಲ ಗೇಟ್ ಬಳಿ ಒಂದು ಹುಡುಗಿ ನಿಂತಿರುವುದನ್ನು ಕಂಡು ವಾಚ್‌ಮ್ಯಾನ್ ಬಳಿ ಕೇಳುತ್ತಾರೆ. ಇದನ್ನು ಕೇಳಿ ಬೇರೆ ಹುಡುಗಿ ದಾರಿ ಗೊತ್ತಾಗದೆ ಬಂದಿದ್ದಾರೆ ಎಂದು ಹೇಳುತ್ತಾರೆ. ಆ ಬಳಿಕ ಅಖಿಲ ಅಲ್ಲಿಂದ ಹೋಗುತ್ತಾರೆ. ಅಖಿಲ ಹಾಗೂ ರಘು ಆದಿ ಮನೆಗೆ ಬಂದಾಗ, ಮನೆ ಬಾಗಿಲಿಗೆ ಬೀಗ ಜಡಿದು ಇರುವುದನ್ನು ನೋಡಿ ನಿರಾಶೆಗೊಂಡ ವಾಪಸ್ ಹೋಗುತ್ತಾರೆ.
ಇನ್ನು ಪಾರು, ಸಾವಿತ್ರಿ ಹೇಳಿದ ಮನೆಗೆ ಹೋಗುತ್ತಾರೆ. ಆಗ ಆ ಮನೆಯ ಯಜಮಾನಿ ದೇವರಲ್ಲಿ ಬೇಡಿಕೊಂಡು ಇರುತ್ತಾಳೆ. ನನ್ನ ಗಂಡ ಮನೆಯಲ್ಲಿ ಇರುವುದಿಲ್ಲ. ನನ್ನನ್ನು ನೋಡಿಕೊಳ್ಳಲು ಯಾರಾದರೂ ಒಳ್ಳೆಯ ಕೆಲಸದವರು ಬೇಕು ಎಂದು ಹೇಳುತ್ತಾರೆ.
ಯಜಮಾನಿಕೆ ಸಹಾಯ ಮಾಡಿದ ಪಾರು
ಅಲ್ಲಿದ್ದ ಪಾರು ಪಕ್ಕನೆ ಆಕೆಯನ್ನು ಹಿಡಿದುಕೊಂಡು ಸೋಫಾ ಮೇಲೆ ಕೂತುಕೊಳ್ಳಲು ಹೇಳುತ್ತಾರೆ. ಇನ್ನು ಸ್ವಲ್ಪ ಚೇತರಿಸಿಕೊಂಡ ಯಜಮಾನಿ ಮೆತ್ತಗೆ ಕೇಳುತ್ತಾಳೆ. ನೀವು ಯಾರು ಎಂದಾಗ, ಪಾರು "ಮನೆಗೆ ಕೆಲಸದವರು ಬೇಕೆಂದು ಹೇಳಿದ್ದರಂತೆ. ಅದಕ್ಕೆ ಬಂದೆ." ಎಂದು ಹೇಳುವಾಗ ಮನೆಯ ಯಜಮಾನಿ ಹತ್ತು ಸಲ ಯೋಚನೆ ಮಾಡುತ್ತಾರೆ.
ಇದನ್ನು ನೋಡಿದ ಪಾರು "ಸಾವಿತ್ರಕ್ಕ ನನ್ನ ಕಳುಹಿಸಿದ್ದು ಎಂದಾಗ ಆ ಮನೆಯ ಯಜಮಾನಿಗೆ ಕೊಂಚ ಭರವಸೆ ಬಂದಿತ್ತು. ಪಾರು ಆಕೆ ಪ್ರಜ್ಞೆ ತಪ್ಪಿ ಬೀಳುವ ವೇಳೆ ಆಕೆಯನ್ನು ಹಿಡಿದುಕೊಂಡಗಲೇ ತನ್ನನ್ನೂ ತನ್ನ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವೆಸೆ ಬರುತ್ತದೆ. ಆದರೂ ಆಕೆಯ ಐಡಿ ಕಾರ್ಡ್. ಗಂಡ ಏನು ಮಾಡುತ್ತಾನೆ. ಅದೆಲ್ಲವನ್ನೂ ಕೇಳುತ್ತಾಳೆ.

ಪಾರು ಅಡುಗೆಯನ್ನು ಮೆಚ್ಚಿದ ಮನೆಯೊಡತಿ
ಆ ಮನೆಯ ಯಜಮಾನಿ ಮೆತ್ತಗೆ ಸಾವಿತ್ರಿಗೆ ಕರೆ ಮಾಡುತ್ತಾರೆ. ಆಗ ಸಾವಿತ್ರಿಗೆ ಫೋನ್ ಕನೆಕ್ಟ್ ಆಗುವುದು ಇಲ್ಲ. ಇದೆಲ್ಲವನ್ನೂ ನೋಡಿದ ಆ ಮನೆಯ ಯಜಮಾನಿ ಕೊನೆಗೂ ಪಾರುಗೆ ಕೆಲಸ ಕೊಡುತ್ತಾಳೆ. ಪಾರುಗೆ ಬಹಳ ಖುಷಿ ಆಗುತ್ತದೆ. ಇನ್ನು ಪಾರು ಮಾತ್ರ ತಾನು ಕೆಲಸ ಮಾಡಿದರೆ ನನ್ನ ತಂದೆ ಹಾಗೂ ಗಂಡನಿಗೆ ಸಹಾಯ ಆಗುತ್ತದೆ ಎಂದು ಯೋಚನೆ ಮಾಡಿ ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಹೇಳುತ್ತಾರೆ.
ಇನ್ನು ಪಾರು ಸ್ಯಾಂಪಲ್ ಅಡುಗೆ ಮಾಡಿ ಮನೆಯ ಯಜಮಾನಿ ಬಡಿಸುತ್ತಾರೆ. ಪಾರು ಮಾತ್ರ ಕೊಂಚ ಭಯದಿಂದಲೇ ನಾನು ಮಾಡಿದ ಅಡುಗೆ ಹೇಗೆ ಆಗುತ್ತದೋ ಗೊತ್ತಿಲ್ಲ ಎಂದೆಲ್ಲ ಮನಸ್ಸಿನಲ್ಲಿ ಅಂದುಕೊಂಡಿರುತ್ತಾಳೆ. ಆ ಬಳಿಕ ಅವರಿಗೆ ಆಕೆ ಮಾಡಿದ ಅಡುಗೆ ಬಹಳ ಇಷ್ಟ ಆಗುತ್ತದೆ. ನಾಳೆಯಿಂದ ತಪ್ಪದೆ ಬಾ ಎಂದು ಯಜಮಾನಿ ಹೇಳುತ್ತಾಳೆ. ಇದನ್ನು ಕೇಳಿದ ಪಾರು ಖುಷಿಯಿಂದ ಹೋಗುತ್ತಾಳೆ. ಈಗ ಪಾರು ಮಾಡುತ್ತಿರೋ ಕೆಲಸ ಆದಿಗೆ ಗೊತ್ತಾದರೆ ಮುಂದೆನಾಗುತ್ತೆ? ಅನ್ನೋದು ಮುಂದಿನ ಸಂಚಿಕೆಯ ಕುತೂಹಲ.


Click it and Unblock the Notifications











