ರೊಮ್ಯಾಂಟಿಕ್ ಮೂಡ್‌ನಲ್ಲಿ ಆದಿ-ಪಾರು, ಪ್ರೀತುಗೆ ಮಾತ್ರ ಸಂಕಷ್ಟ

By ಪೂರ್ವ

ಪ್ರೀತಮ್, ಅರುಂಧತಿ ಕರೆ ಮಾಡಿದ್ದನ್ನು ನೋಡಿ ಭಯಗೊಳ್ಳುತ್ತಾನೆ ಕೈಯಲ್ಲಿ ಇದ್ದ ಸ್ಪೂನ್ ಕೆಳಗೆ ಬೀಳುತ್ತದೆ ಇದನ್ನು ನೋಡಿದ ಅಖಿಲಾಂಡೇಶ್ವರಿಗೆ ಸಹ ಶಾಕ್ ಆಗುತ್ತದೆ ಇದ್ದಕ್ಕಿದ್ದ ಹಾಗೆ ಪ್ರೀತೂಗೆ ಏನಾಯ್ತು ಯಾಕೆ ಕೈಯಲ್ಲಿ ಇದ್ದ ಸ್ಪೂನ್ ಕೆಳಗೆ ಬಿತ್ತು ಹಾಗಾದರೆ ಪ್ರೀತಮ್‌ಗೆ ಕರೆ ಮಾಡಿದವರು ಯಾರೂ ಎಂಬೆಲ್ಲ ಪ್ರಶ್ನೆ ಮೂಡುತ್ತದೆ. ಬಳಿಕ ಪ್ರೀತಮ್ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾಳೆ ಅಖಿಲಾ. ಆದರೆ ಪ್ರೀತಮ್ ಭಯಗೊಂಡಿದ್ದರು ಅಮ್ಮನ ಬಳಿ ಅದನ್ನು ತೋರ್ಪಡಿಸದೆ ಏನು ಆಗಿಲ್ಲ ಎಂಬಂತೆ ಇರುತ್ತಾನೆ.

ಬಳಿಕ ಅಮ್ಮ ಕೇಳಿದ ಪ್ರಶ್ನೆಗೆ ಏನೂ ಆಗಿಲ್ಲ ಎಂಬಂತೆ ಉತ್ತರ ನೀಡುತ್ತಾನೆ. ಇದನ್ನು ನೋಡಿದ ಅಖಿಲಾ ಇನ್ನೂ ಹೆಚ್ಚು ಪ್ರಶ್ನೆ ಇವನ ಬಳಿ ಕೇಳುವುದು ಬೇಡ ಆದಿ ಎಲ್ಲಾ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಇನ್ನೂ ನಾನು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದರೆ ಹೇಗೆ ಎಂದುಕೊಂಡು ಸುಮ್ಮನಾಗುತ್ತಾರೆ. ಬಳಿಕ ಅಡಿಗೆ ಟೇಸ್ಟ್ ಮಾಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಪಾರು ಅಮ್ಮ ನೀವು ಮಾಡಿದ ಅಡಿಗೆ ಬಹಳ ಪರ್ಫೆಕ್ಟ್ ಆಗಿ ಇರುತ್ತದೆ ಅದನ್ನು ಟೇಸ್ಟ್ ಮಾಡಬೇಕಾದ ಅವಶ್ಯಕತೆಯೇ ಇಲ್ಲ ಎಂದು ಹೇಳುತ್ತಾಳೆ.

ಹೀಗೆ ಹೇಳಬೇಕಾದರೆ ಅಖಿಲಾ ಮನದಲ್ಲಿ ಯೋಚನೆ ಮಾಡುತ್ತಾಳೆ. ನನ್ನ ಅಡುಗೆ ಆದಿಗೆ ಬಹಳ ಇಷ್ಟ ಆಗುತ್ತದೆ ಪಾರ್ವತಿ ಟೇಸ್ಟ್ ಹೇಗೆ ಗೊತ್ತಿಲ್ವಲ್ಲ ಅವಳ ಬಳಿಯೇ ಟೇಸ್ಟ್ ನೋಡಲು ಹೇಳೋಣ ಎಂದುಕೊಂಡು ಪ್ರೀತಮ್ ಇನ್ನೂ ಮೇಲೆ ಟೇಸ್ಟ್ ಪಾರು ಮಾಡ್ತಾಳೆ ನೀನು ಹೋಗಿ ರೆಸ್ಟ್ ಮಾಡು ಎಂದು ಹೇಳುತ್ತಾಳೆ ಇದನ್ನು ಕೇಳಿ ಪ್ರೀತಮ್ ಅಲ್ಲಿಂದ ಹೋಗುತ್ತಾನೆ. ಈ ವೇಳೆ ಅಖಿಲಾ ಪಾರುವಿಗೆ ಶ್ಯಾವಿಗೆ ಪಾಯಸ ಟೇಸ್ಟ್ ಮಾಡಲು ನೀಡುತ್ತಾಳೆ. ಅದನ್ನು ಸವಿದ ಪಾರು, ದೇವರ ಪ್ರಸಾದದ ನೈವೇದ್ಯ ಹೇಗಿರುತ್ತದೋ ಹಾಗೆ ಇದೆ ಈ ಪಾಯಸ ಎಂದು ಹೇಳುತ್ತಾಳೆ.

ಮೋಹನ್‌ಗೆ ಕ್ಯಾಮರಾದ್ದೆ ಚಿಂತೆ

ಮೋಹನ್‌ಗೆ ಕ್ಯಾಮರಾದ್ದೆ ಚಿಂತೆ

ಇತ್ತ ಮೋಹನ್‌ಗೆ ಇರೋದು ಒಂದೇ ಚಿಂತೆ ಅದು ಯಾಮಿನಿ ಕೊರಳಲ್ಲಿ ತಾಯತದ ಜೊತೆ ಕ್ಯಾಮರಾ ಇದ್ದಿದ್ದು. ಅದರಿಂದ ಕೊಂಚ ಆತಂಕ ಗೊಂಡಿದ್ದ ಮೋಹನ್ ಆದಿ ಬಳಿ ಹೇಳಿಕೊಳ್ಳುತ್ತಾ ಇರುತ್ತಾನೆ. ಆದಿ ನಮ್ಮದೆಲ್ಲ ಸೀಕ್ರೆಟ್ಸ್ ಎಲ್ಲರಿಗೂ ತಿಳಿದಿರಬಹುದು. ಯಾಮಿನಿ ಕೊರಳಲ್ಲಿ ಕ್ಯಾಮೆರಾ ಇದ್ದ ಕಾರಣ ಎಲ್ಲರಿಗೂ ಈ ವಿಚಾರ ತಿಳಿದಿರುತ್ತದೆ ಎಂದು ಗೊಳಾಡುತ್ತಾನೆ.

ಮೋಹನ್ ಸ್ಥಿತಿ ಕಂಡು ಆದಿಗೆ ನಗು

ಮೋಹನ್ ಸ್ಥಿತಿ ಕಂಡು ಆದಿಗೆ ನಗು

ಇದನ್ನು ಕೇಳಿದ ಆದಿಗೆ ನಗು ಬರುತ್ತದೆ. ಇಲ್ಲ ಚಿಕ್ಕಪ್ಪ ಈಗಾಗಲೇ ನಾನು ಅದನ್ನು ಸೈಬರ್ ಕ್ರೈಮ್ ಅವರಿಗೆ ಕಂಪ್ಲೇಂಟ್ ಮಾಡಿದ್ದೇನೆ ಎಂದಾಗ ಇನ್ನೂ ಗಾಬರಿ ಬೀಳುತ್ತಾನೆ. ಬಳಿಕ ಆದಿ ಹೇಳುತ್ತಾನೆ ಎಲ್ಲಾ ವಿಡಿಯೋವನ್ನು ಬ್ಲಾಕ್ ಮಾಡಿಸಿದ್ದೇನೆ. ಯಾವ ವಿಡಿಯೋ ಕೂಡ ಲೀಕ್ ಆಗಲು ಚಾನ್ಸ್ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿ ಇನ್ನೂ ಖುಷಿ ಆಗುತ್ತದೆ ಮೋಹನ್‌ಗೆ. ಇತ್ತ ಆದಿ-ಪಾರು ತಯಾರಾಗಿ ಬರುತ್ತಾರೆ. ಆದಿ ಪಾರುಗಾಗಿ ಇಡೀ ಮನೆ ಮಂದಿಯೇ ಕಾದು ಕುಳಿತು ಇರುತ್ತಾರೆ.

ಮಗ-ಸೊಸೆಗೆ ಸರ್ಪ್ರೈಸ್ ಕೊಟ್ಟ ಅಖಿಲ

ಮಗ-ಸೊಸೆಗೆ ಸರ್ಪ್ರೈಸ್ ಕೊಟ್ಟ ಅಖಿಲ

ಇಬ್ಬರಿಗೂ ಭೋಜನದ ವ್ಯವಸ್ಥೆ ಕೂಡ ಆಗಿದೆ. ಈ ವೇಳೆ ಆದಿ ಅಮ್ಮನ ಬಳಿ ಕೇಳುತ್ತಾನೆ. ಎಲ್ಲಿ ಅಮ್ಮ ಅತಿಥಿಗಳು ಇನ್ನೂ ಬಂದಿಲ್ಲ ಎಲ್ಲಿದ್ದಾರೆ ಎಂದು ಕೇಳುತ್ತಾನೆ ಇದನ್ನು ಕೇಳಿದ ಅಖಿಲ. ಅತಿಥಿಗಳು ಆಗಲೇ ಬಂದಿದ್ದಾರೆ ಎಂದುಕೊಂಡು ನಗುತ್ತಾ ಹೇಳುತ್ತಾರೆ. ಇದನ್ನು ಕೇಳಿದ ಆದಿಗೆ ಶಾಕ್ ಆಗುತ್ತದೆ. ಆ ಬಳಿಕ ತಿಳಿಯುತ್ತದೆ. ಆದಿ ಪಾರುಗೆ ಇವತ್ತಿನ ಅತಿಥಿಗಳು ನಾವೇ ಎಂದು. ಇನ್ನೂ ಮಾತು ಮುಂದುವರಿಸಿದ ಅಖಿಲ. ನಿಮಗೆ ಇಬ್ಬರಿಗೂ ನಾನು ಸರ್ಪ್ರೈಸ್ ನೀಡಿರಲಿಲ್ಲ ಅದಕ್ಕಾಗಿ ಇವತ್ತು ಸರ್ಪ್ರೈಸ್ ನೀಡುತ್ತಾ ಇದ್ದೇನೆ. ನೀವು ಮಹಡಿ ಮೇಲೆ ಹೋದಾಗ ತಿಳಿಯುತ್ತದೆ ನಿಮಗೆ ಈ ತಯಾರಿ ಎಲ್ಲಾ ಪ್ರೀತಮ್ ಮಾಡಿದ್ದು ಎಂದಾಗ ಆದಿಗೆ ಖುಷಿ ಆಗುತ್ತದೆ. ಆದರೆ ಯಾಮಿನಿಗೆ ಕೊಂಚ ಶಾಕ್ ಆಗುತ್ತದೆ.

ಅಕ್ಕನ ಪ್ಲಾನ್‌ಗೆ ಶಾಕ್ ಆದ ಯಾಮಿನಿ

ಅಕ್ಕನ ಪ್ಲಾನ್‌ಗೆ ಶಾಕ್ ಆದ ಯಾಮಿನಿ

ಇನ್ನೂ ಖುಷಿಯಲ್ಲಿ ಇರುವ ಗಂಡ ಹೆಂಡತಿಯನ್ನು ಅಖಿಲಾ ಮಹಡಿ ಮೇಲೆ ಕಳುಹಿಸಿ ಕೊಡುತ್ತಾರೆ. ಅರುಂಧತಿಗೆ ಕರೆ ಮಾಡಿದ ಪ್ರೀತಮ್ ಮನೆಯಲ್ಲಿ ನಡೆಯುತ್ತಿರುವ ವಿಚಾರವನ್ನು ತಿಳಿಸಿ ಈ ಕಾರಣದಿಂದ ನನಗೆ ಬರಲು ಸಾಧ್ಯವಾಗಿಲ್ಲ. ಹೊರತು ನಿಮ್ಮನ್ನು ಕಾಯಿಸುವ ಉದ್ದೇಶ ನನ್ನದಲ್ಲ ಎಂದು ಹೇಳುತ್ತಾನೆ. ಇನ್ನು ಕುತಂತ್ರಿ ಅರುಂಧತಿ ಕೈಗೆ ಸಿಲುಕಿದ ಪ್ರೀತಮ್‌ನನ್ನು ಅಪಾಯದಿಂದ ತಪ್ಪಿಸುತ್ತಾನಾ ಆದಿ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 10th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X