ಪಾರುವನ್ನು ಅರಸನಕೋಟೆ ಹಿರಿ ಸೊಸೆ ಎಂದು ಒಪ್ಪಿಕೊಂಡ ಅಖಿಲ!

By ಪೂರ್ವ

'ಪಾರು' ಧಾರವಾಹಿಯ್ಲಿ ಇದೀಗ ಆದಿಗೆ ತನ್ನ ತಪ್ಪಿನ ಅರಿವಾಗಿ ಅಮ್ಮನ ಕಾಲು ಹಿಡಿದುಕೊಂಡು ಅಳುತ್ತಿದ್ದಾನೆ. ಇದನ್ನು ನೋಡಿದ ಅಖಿಲಾಂಡೇಶ್ವರಿ ತನ್ನ ಮಗ ತಪ್ಪೇ ಮಾಡಿಲ್ಲ ಎಂಬಂತೆ ಮಾತನಾಡಿ ಆದಿಗೆ ಸಮಾಧಾನ ಹೇಳುತ್ತಾಳೆ. ಅಮ್ಮನಿಗೆ ತಾನು ಹೇಳಿದ ಮಾತುಗಳು ಅದೆಷ್ಟು ನೋವನ್ನು ನೀಡಿದೆಯೋ ಎಂದು ಆದಿ ಮನದಲ್ಲಿ ಕೊರಗುತ್ತಾ ಇರುತ್ತಾನೆ. ಇನ್ನು ಅಮ್ಮನ ಪಾದ ಮುಟ್ಟಿ ಹೇಳುತ್ತಾನೆ ಅಮ್ಮ ನಾನು ತಪ್ಪು ಮಾಡಿಬಿಟ್ಟೆ. ಪಾರ್ವತಿ ನಿಮ್ಮನು ಅರ್ಥ ಮಾಡಿಕೊಂಡಳು ಆದರೆ ನನ್ನ ಅಮ್ಮನನ್ನು ನನಗೆ ಅರ್ಥ ಮಾಡಿಕೊಳ್ಳಲು ಆಗಲಿಲ್ಲ ಎನ್ನುತ್ತಾನೆ.

ನಿನ್ನ ಬಗ್ಗೆ ತಪ್ಪಾಗಿ ಪಾರು ಬಳಿ ಹೇಳಿದಾಗ ಇಲ್ಲ ನಾನು ಇದನ್ನು ನಂಬಲ್ಲ ಎಂದು ಪಾರು ಕಡ್ಡಿ ಮುರಿದ ಹಾಗೆ ಹೇಳಿದಳು, ಆದರೆ ನಾನು ಮಾತ್ರ ನಿಮ್ಮ ಮಗನಾಗಿ ನಿಮ್ಮ ಮೇಲೆಯೇ ಅನುಮಾನ ಪಟ್ಟುಬಿಟ್ಟೆ ಎಂದು ಬೇಸರವನ್ನು ತೋಡಿಕೊಳ್ಳುತ್ತಾನೆ. ನನಗೆ ವಿಚಾರ ಗೊತ್ತಾದ ಬಳಿಕ ನಾನು ನಿಮ್ಮ ಬಳಿ ಬಂದು ಈ ವಿಚಾರವನ್ನು ನಿಮ್ಮ ಬಳಿ ಹೇಳಬಹುದಿತ್ತು ಆದರೆ ನಾನು ಮಾತ್ರ ನಿಮ್ಮ ಬಳಿ ಏನೂ ಹೇಳಿಕೊಳ್ಳದೆ ಅನುಮಾನ ಪಟ್ಟುಬಿಟ್ಟೆ ನನ್ನನ್ನು ಕ್ಷಮಿಸಿ ಬಿಡು ಎಂದು ಜೋರಾಗಿ ಅಳುತ್ತಾನೆ ಇದನ್ನು ಕಂಡ ಅಖಿಲ ಮನಸ್ಸಿಗೆ ಬಹಳ ಬೇಸರ ಆಗುತ್ತದೆ.

ತನ್ನ ಮಗ ನನ್ನನ್ನು ಈಗಲಾದರೂ ಅರ್ಥ ಮಾಡಿಕೊಂಡನಲ್ಲ ಎಂಬ ಖುಷಿ ಒಂದು ಕಡೆ ಪಾರುವನ್ನೂ ಸೊಸೆ ಎಂದು ಒಪ್ಪಿಕೊಳ್ಳಬೇಕು ಎಂಬುವುದು ಕೂಡ ಅಖಿಲಗೆ ಖುಷಿ ವಿಚಾರವೇ. ಇನ್ನು ಕಾಲಿಗೆ ಬಿದ್ದ ಆದಿಯನ್ನು ಎಬ್ಬಿಸಿ ಅಖಿಲಾ, ಆದಿಯ ತಲೆ ನೇವರಿಸುತ್ತಾಳೆ. ಬಳಿಕ ಪಾರುವನ್ನು ನೋಡಿದ ಅಖಿಲಾ ಆಕೆಯ ಮುಖವನ್ನು ನೇವರಿಸುತ್ತಾ ಇನ್ನು ಮುಂದೆ ನಿನಗೆ ಕಷ್ಟ ಇರುವುದಿಲ್ಲ ಎನ್ನುತ್ತಾಳೆ. ಬಳಿಕ ಆದಿ ಮತ್ತು ಪಾರು ಅವರ ಕೈಹಿಡಿದು 'ನೀವಿಬ್ಬರೂ ಆರೋಗ್ಯವಂತರಾಗಿ ಒಟ್ಟಿಗೆ ನೂರು ಕಾಲ ಬಾಳಿ ಬದುಕಬೇಕು' ಎಂದು ಆಶೀರ್ವದಿಸುತ್ತಾಳೆ.

ಹಾರ ಬದಲಾಯಿಸಿಕೊಂಡ ಆದಿ ಪಾರು

ಹಾರ ಬದಲಾಯಿಸಿಕೊಂಡ ಆದಿ ಪಾರು

ಬಳಿಕ ಪಾರುವನ್ನು ಅರಸನ ಕೋಟೆಯ ಹಿರಿ ಸೊಸೆ ಎಂದು ಒಪ್ಪಿಕೊಳ್ಳುತ್ತಾರೆ ಅಖಿಲಾಂಡೇಶ್ವರಿ. ಇದನ್ನು ನೋಡಿದ ಮನೆಮಂದಿಗೆ ಪಾರುಗೆ ಆದಿಗೆ ಬಹಳ ಖುಷಿ ಆಗುತ್ತದೆ. ಇನ್ನು ಆದಿ ಹಾಗೂ ಪಾರು ಬಳಿ ಹಾರ ಬದಲಾಯಿಸಿಕೊಳ್ಳಲು ಹೇಳುತ್ತಾಳೆ ಅಖಿಲ, ಅಮ್ಮನ ಸೂಚನೆಯಂತೆ ಇಬ್ಬರು ಖುಷಿಯಿಂದ ಹಾರ ಬದಲಾಯಿಸುತ್ತಾರೆ. ಬಳಿಕ ಮನೆಯಿಂದ ಹೊರ ನಿಂತ ಬಳಿಕ ಆರತಿ ಬೆಳಗುತ್ತಾರೆ ಬಳಿಕ ಬಲ ಗಾಲಿನಲ್ಲಿ ಸೇರು ಒದ್ದು ಒಳಗೆ ಬರುತ್ತಾಳೆ ಪಾರು. ಇದನ್ನೆಲ್ಲ ನೋಡಿದ ರಾಣಾ ಅರುಂಧತಿ ಗೆ ಹೊಟ್ಟೆ ಉರಿದು ಹೋಗುತ್ತದೆ.

ಅರಸನ ಕೋಟೆಯಲ್ಲಿ ಹಬ್ಬದ ವಾತಾವರಣ

ಅರಸನ ಕೋಟೆಯಲ್ಲಿ ಹಬ್ಬದ ವಾತಾವರಣ

ಈ ವೇಳೆ ರಾಣಾ, ಅರುಂಧತಿ ಬಳಿ ಇಷ್ಟು ಒಳ್ಳೆಯ ಕುಟುಂಬವನ್ನು ಕೆಡವಲು ಮನಸ್ಸೇ ಬರುವುದಿಲ್ಲ ಎಂದು ಇದನ್ನು ಕೇಳಿದ ಅರುಂಧತಿ ಪಿತ್ತ ನೆತ್ತಿಗೆ ಏರಿಬಿಡುತ್ತದೆ. ಪಾರು ಹಾಗೂ ಆದಿಯನ್ನು ನೋಡಿದ ಅಖಿಲಾ, 'ಪಾರು ನೀನು ಇನ್ನು ಮುಂದೆ ಮಹಾರಾಜ ಆದಿತ್ಯನ ಪಟ್ಟದ ರಾಣಿ ಎಂದು ಹೇಳುತ್ತಾರೆ. ಬಳಿಕ ಜನನಿ ಹಾಗೂ ಪಾರ್ವತಿಯನ್ನು ನೋಡಿ, 'ನೀವಿಬ್ಬರೂ ನಮ್ಮ ಕುಟುಂಬದ ಕಣ್ಣುಗಳು ಇದ್ದ ಹಾಗೆ ನಿಮ್ಮಿಬ್ಬರನ್ನು ಸೊಸೆಯಾಗಿ ಪಡೆದುಕೊಂಡ ಕುಟುಂಬ ನಿಜವಾಗಿಯೂ ಭಾಗ್ಯ ಶಾಲಿ ಎಂದು ಹೇಳಿ ನಮ್ಮ ಕುಟುಂಬ ಚೆನ್ನಾಗಿರಬೇಕು ಎಂದು ಆಶಿಸುತ್ತಾರೆ.

ಅರುಂಧತಿ ಮಾತಿಗೆ ಬಗ್ಗುತ್ತಾನ ಪ್ರೀತು

ಅರುಂಧತಿ ಮಾತಿಗೆ ಬಗ್ಗುತ್ತಾನ ಪ್ರೀತು

ಇನ್ನು ಪ್ರೀತುವನ್ನು ಈ ಸಂದರ್ಭದಲ್ಲಿ ಕರೆದ ರಾಣಾ ಬಳಿಕ ಹೇಳುತ್ತಾನೆ ಅರುಂಧತಿ ಏನು ಹೇಳುತ್ತಾಳೆ ಅದನ್ನು ಕೇಳಬೇಕು ಇಲ್ಲವಾದರೆ ನಿನ್ನ ವಿಡಿಯೋವನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಅರುಂಧತಿ ಹೇಳುತ್ತಾಳೆ ನಿನ್ನ ಅತ್ತಿಗೆ ಪಾರ್ವತಿಗೆ ಅವಮಾನ ಆಗುವ ರೀತಿ ಮಾತನಾಡಬೇಕು. ಬಳಿಕ ಮನೆಯಿಂದ ಹೊರಗಡೆ ಕಳಿಸಬೇಕು, ಎಂದಾಗ ಪ್ರೀತು ಹೇಳುತ್ತಾನೆ ದೇವರಂತಹ ಅತ್ತಿಗೆಯನ್ನು ನಾನು ಹೇಗೆ ಹೊರಗಡೆ ಹಾಕಲಿ ಎಂದಾಗ ಅರುಂಧತಿ ಮಾತ್ರ ಆಕೆ ಮೊಂಡು ಹಠ ಸಾಧಿಸುತ್ತಾ ಇದ್ದಾಳೆ. ಬಳಿಕ ಹೇಳುತ್ತಾನೆ ಅರಸನ ಕೋಟೆ ಮರ್ಯಾದೆಯನ್ನು ಅಥವಾ ನಿಮ್ಮ ಅತ್ತಿಗೆ ಮನೆ ಬಿಟ್ಟು ಹೋಗುವುದಾ ಎಂದಾಗ ಪ್ರೀತುಗೆ ಏನು ಮಾಡಬೇಕು ತಿಳಿಯದ ಹಾಗೆ ಆಗುತ್ತದೆ.

More from Filmibeat

English summary
Kannada serial Paaru written updated on 10th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X